ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

CNG Price Hiked: ಪೆಟ್ರೋಲ್, ಡೀಸೆಲ್ ಬೆನ್ನಲ್ಲೇ CNG ದರವೂ ಏರಿಕೆ; ಇಂದಿನಿಂದಲೇ ಪರಿಷ್ಕೃತ ದರ ಜಾರಿ

ಪಶ್ಚಿಮ ಏಷ್ಯಾದಲ್ಲಿ ಸಂಘರ್ಷದ ಬಗ್ಗೆ ಮಾತನಾಡಿದ್ದ ಮೋದಿ, ಇದನ್ನು ಹೇಗೆ ನಿಭಾಯಿಸಬೇಕು, ಯಾವ ಪರ್ಯಾಯ ಮಾರ್ಗಗಳಿಂದ ತೈಲ ತರಿಸಿಕೊಳ್ಳಬೇಕು ಎಂಬ ಬಗ್ಗೆ ಸಮಾಲೋಚನೆ ನಡೆಸಿ ಯುದ್ಧದ ಪರಿಣಾಮ ಜನರ ಮೇಲೆ ಹೆಚ್ಚು ಆಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದ್ದರು.

ಪೆಟ್ರೋಲ್, ಡೀಸೆಲ್ ಬೆನ್ನಲ್ಲೇ CNG ದರವೂ ಏರಿಕೆ; ಕೆ.ಜಿಗೆ ₹1 ಹೆಚ್ಚಳ

cng rate -

Abhilash BC
Abhilash BC May 23, 2026 10:25 AM

ನವದೆಹಲಿ, ಮೇ 23: ಶನಿವಾರ ಬೆಳಗ್ಗೆ ಪ್ರತಿ ಲೀಟರ್‌ ಪೆಟ್ರೋಲ್‌ ದರ 87 ಪೈಸೆ ಮತ್ತು ಡೀಸೆಲ್ ದರ 91 ಪೈಸೆ ಮತ್ತೆ ಏರಿಕೆಯಾದ ಕಲವೇ ಕ್ಷಣದಲ್ಲಿ ಸಾಂದ್ರೀಕೃತ ನೈಸರ್ಗಿಕ ಅನಿಲದ (ಸಿಎನ್‌ಜಿ) ದರವನ್ನು(CNG Price Hiked) ಪ್ರತಿ ಕೆ.ಜಿಗೆ ಮತ್ತೆ ₹1ರಷ್ಟು ಹೆಚ್ಚಿಸಲಾಗಿದೆ. ಪರಿಷ್ಕೃತ ದರವು ಕೂಡ ತಕ್ಷಣದಿಂದಲೇ ಜಾರಿಗೆ ಬಂದಿದೆ. ಇದು ಪಶ್ಚಿಮ ಏಷ್ಯಾ ಸಂಘರ್ಷ ಮತ್ತು ಹಾರ್ಮುಜ್ ಜಲಸಂಧಿಯ ಸುತ್ತಲಿನ ಅಡೆತಡೆಗಳಿಗೆ ಸಂಬಂಧಿಸಿದ ಜಾಗತಿಕ ಇಂಧನ ಬೆಲೆಗಳ ಏರಿಕೆಯ ಮಧ್ಯೆ 10 ದಿನಗಳ ಅಂತರದಲ್ಲಿ ಮೂರನೇ ಹೆಚ್ಚಳವಾಗಿದೆ. ಕಳೆದ ವಾರವಷ್ಟೇ ಬೆಲೆಯನ್ನು ಕೆ.ಜಿಗೆ ₹3ರಷ್ಟು ಹೆಚ್ಚಿಸಲಾಗಿತ್ತು.

ಪರಿಷ್ಕರಣೆ ತಕ್ಷಣ ಜಾರಿಗೆ ಬರುತ್ತಿದ್ದಂತೆ, ದೆಹಲಿಯಲ್ಲಿ CNG ಈಗ ಪ್ರತಿ ಕೆಜಿಗೆ 81.09 ರೂ. ನೋಯ್ಡಾ, ಗ್ರೇಟರ್ ನೋಯ್ಡಾ ಮತ್ತು ಗಾಜಿಯಾಬಾದ್‌ನಲ್ಲಿ ಬೆಲೆಗಳು ಪ್ರತಿ ಕೆಜಿಗೆ 89.70 ರೂ.ಗೆ ಏರಿದ್ದರೆ, ಗುರುಗ್ರಾಮ್‌ನಲ್ಲಿ CNG ಬೆಲೆ ಪ್ರತಿ ಕೆಜಿಗೆ 86.12 ರೂ. ಆಗಿದೆ.

ಗುರುವಾರ 5 ದೇಶಗಳ ಪ್ರವಾಸ ಮುಗಿಸಿ ಬಂದ ಬೆನ್ನಲ್ಲೇ ಸಂಜೆ 5 ಗಂಟೆಯಿಂದ 4.5 ಗಂಟೆ ಕಾಲ ಸೇವಾ ತೀರ್ಥದಲ್ಲಿ ತಮ್ಮ ಮಂತ್ರಿಮಂಡಲದ ಎಲ್ಲ ಸಚಿವರ ಸಭೆ ನಡೆಸಿ್ದ್ದ ಮೋದಿ ಮಧ್ಯಪ್ರಾಚ್ಯ ಬಿಕ್ಕಟ್ಟು, ಅದರಿಂದ ಆಗುತ್ತಿರುವ ಸಂಭಾವ್ಯ ಪರಿಣಾಮ, ವಿಕಸಿತ ಭಾರತ ನಿರ್ಮಾಣಕ್ಕೆ ಇರುವ ಸವಾಲು ಸೇರಿ ಹತ್ತು ಹಲವಾರು ವಿಷಯಗಳ ಬಗ್ಗೆ ಸಮಾಲೋಚನೆ ನಡೆಸಿದ್ದರು.

ಪೆಟ್ರೋಲ್-ಡೀಸೆಲ್ ಬೆಲೆ ಮತ್ತೆ ಹೆಚ್ಚಳ; 10 ದಿನಗಳಲ್ಲಿ 3ನೇ ಬಾರಿ ತೈಲ ದರ ಏರಿಕೆ

ಪಶ್ಚಿಮ ಏಷ್ಯಾದಲ್ಲಿ ಸಂಘರ್ಷದ ಬಗ್ಗೆ ಮಾತನಾಡಿದ್ದ ಮೋದಿ, ಇದನ್ನು ಹೇಗೆ ನಿಭಾಯಿಸಬೇಕು, ಯಾವ ಪರ್ಯಾಯ ಮಾರ್ಗಗಳಿಂದ ತೈಲ ತರಿಸಿಕೊಳ್ಳಬೇಕು ಎಂಬ ಬಗ್ಗೆ ಸಮಾಲೋಚನೆ ನಡೆಸಿ ಯುದ್ಧದ ಪರಿಣಾಮ ಜನರ ಮೇಲೆ ಹೆಚ್ಚು ಆಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದ್ದರು.

ಹೆಚ್ಚುತ್ತಿರುವ ಸಂಘರ್ಷದಿಂದಾಗಿ ಜಾಗತಿಕ ಆರ್ಥಿಕ ಕಳವಳಗಳು ಹೆಚ್ಚುತ್ತಿರುವ ನಡುವೆ ಈ ಸಭೆ ಮಹತ್ವದ್ದಾಗಿದೆ. ಯುದ್ಧವು ಜಾಗತಿಕ ಕಚ್ಚಾ ತೈಲ ಬೆಲೆಗಳನ್ನು ಬ್ಯಾರೆಲ್‌ಗೆ 100 ಡಾಲರ್‌ಗಿಂತ ಹೆಚ್ಚಿಸಿದೆ, ಇದು ಭಾರತದಲ್ಲಿ ಹಣದುಬ್ಬರದ ಮೇಲೆ ಒತ್ತಡ ಸೃಷ್ಟಿಸಿದೆ. ಹೀಗಾಗಿ ಇಂಧನ ಬಳಕೆ, ಚಿನ್ನದ ಖರೀದಿ ಮತ್ತು ವಿದೇಶ ಪ್ರಯಾಣವನ್ನು ಕಡಿಮೆ ಮಾಡುವಂತೆ ಪ್ರಧಾನಿ ಇತ್ತೀಚೆಗೆ ಜನರಿಗೆ ಮನವಿ ಮಾಡಿದ್ದರು.