ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಗ್ರಾಹಕರಿಗೆ ಮತ್ತೊಂದು ಶಾಕ್‌; ಹಾಲಿನ ಬೆಲೆ ಹೆಚ್ಚಿಸಿದ ಅಮೂಲ್‌

ಅಮೂಲ್‌ ಹಾಲಿನ ಬೆಲೆ ಹೆಚ್ಚಿಸಿದ್ದು, ಪರಿಷ್ಕೃತ ದರ ನವೆಂಬರ್‌ 12ರಿಂದಲೇ ಜಾರಿಗೆ ಬರಲಿದೆ. ಅಂದರೆ ನಾಳೆಯಿಂದ ಅಮೂಲ್‌ ಹಾಲಿನ ಬೆಲೆ ಲೀಟರ್‌ಗೆ 2-4 ರೂಪಾಯಿ ಹೆಚ್ಚಾಗಲಿದೆ.

ಗ್ರಾಹಕರಿಗೆ ಮತ್ತೊಂದು ಶಾಕ್‌; ಹಾಲಿನ ಬೆಲೆ ಹೆಚ್ಚಿಸಿದ ಅಮೂಲ್‌

-

Ramesh Ballamoole
Ramesh Ballamoole Nov 11, 2026 7:11 PM

ದೆಹಲಿ, ನ. 11: ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಅಮೂಲ್‌ ಮತ್ತೊಂದು ಹೊಡೆತ ನೀಡಿದೆ. ಹಾಲಿನ ಬೆಲೆ ಹೆಚ್ಚಿಸಿದ್ದು, ಪರಿಷ್ಕೃತ ದರ ನವೆಂಬರ್‌ 12ರಿಂದಲೇ ಜಾರಿಗೆ ಬರಲಿದೆ. ಶೇಕಡಾ 4–5ರಷ್ಟು ಬೆಲೆ ಹೆಚ್ಚಿಸಲಾಗಿದೆ ಎಂದು ಅಮೂಲ್‌ ತಿಳಿಸಿದೆ. ಆ ಮೂಲಕ ಲೀಟರ್‌ ಹಾಲು 2-4 ರೂಪಾಯಿ ದುಬಾರಿಯಾಗಲಿದೆ. ಈಗಾಗಲೇ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಬೆಲೆ ಏರಿಕೆಯಿಂದ ಗ್ರಾಹಕರು ಕಂಗಾಲಾಗಿರುವ ಮಧ್ಯೆ ಈ ನಿರ್ಧಾರ ಹೊರ ಬಿದ್ದಿದೆ.