ವಿಜಯವಾಡ: ಮಕ್ಕಳ ಮುಂದೆ ಅಶ್ಲೀಲ ದೃಶ್ಯಗಳನ್ನು ಪ್ರದರ್ಶನ ಮಾಡುವುದು ಕಾನೂನು ನಿಯಮ ಬಾಹಿರವಾಗಿದೆ. ಸಿನಿಮಾ, ಸಾರ್ವಜನಿಕ ಕಾರ್ಯಕ್ರಮದಲ್ಲಿ ಕೂಡ ಈ ನಿಯಮ ಅನ್ವಯವಾಗಲಿದೆ. ವಿದ್ಯಾಭ್ಯಾಸದ ಅವಧಿಯಲ್ಲಿ ಮಕ್ಕಳ ಮನಸ್ಸಿಗೆ ಇಂತಹ ವಿಚಾರಗಳು ಪರಿಣಾಮ ಬೀರಬಾರದು ಎಂಬ ಉದ್ದೇಶದಿಂದ ಕಠಿಣ ನಿಯಮಗಳು ಜಾರಿಯಾಗಿವೆ. ಹಾಗಿದ್ದರೂ ಈ ನಿಯಮ ಆಗಾಗ ಉಲ್ಲಂಘನೆ ಆಗುತ್ತಲೇ ಇರುತ್ತದೆ. ಅಂತೆಯೇ ಗೃಹರಕ್ಷಕ ದಳದ ಸಿಬ್ಬಂದಿಯೊಬ್ಬ ಮಹಿಳೆಯ ಜೊತೆಗೆ ಮಕ್ಕಳ ಮುಂದೆ ಅಶ್ಲೀಲ ನೃತ್ಯ ಮಾಡಿರುವ ಘಟನೆ ಆಂಧ್ರ ಪ್ರದೇಶದ ವಿಜಯವಾಡದಲ್ಲಿ ನಡೆದಿದೆ.
ಅಶ್ಲೀಲ ನೃತ್ಯ ಮಾಡಿದ್ದ ಸಿಬಂದಿಯನ್ನು ವಜಾಗೊಳಿಸುವಂತೆ ಇಲ್ಲಿನ ಸ್ಥಳೀಯ ಪೊಲೀಸರಿಗೆ ಕೃಷ್ಣ ಜಿಲ್ಲೆಯ ಎಸ್. ಪಿ. ವಿದ್ಯಾಸಾಗರ ನಾಯ್ಡು ಅವರು ಆದೇಶ ಹೊರಡಿಸಿದ್ದಾರೆ. ಸಿಬಂದಿಯನ್ನು ಸಮಗ್ರ ತನಿಖೆ ನಡೆಸಿ ಈ ಬಗ್ಗೆ ವರದಿ ಸಲ್ಲಿಸುವಂತೆ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಸದ್ಯ ಈ ಕುರಿತಾದ ವಿಡಿಯೋ ಹರಿದಾಡಿದ್ದು(Viral Video) ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಉಂಟುಮಾಡಿದೆ.
ವಿಜಯವಾಡದಲ್ಲಿ ಗೃಹರಕ್ಷಕದಳದ ಜೀಪ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಅಜಯ್ ಕುಮಾರ್ (Ajay Kumar) ಅವರು ಮಕ್ಕಳ ಮುಂದೆ ಮಹಿಳೆ ಜೊತೆ ಅಸಭ್ಯವಾಗಿ ಅಶ್ಲೀಲ ನೃತ್ಯ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಇದು ಪೊಲೀಸ್ ಇಲಾಖೆಯ ವರ್ಚಸ್ಸಿಗೆ ಧಕ್ಕೆ ತರುವ ನಡವಳಿಕೆಯಾಗಿದೆ ಈ ಬಗ್ಗೆ ಕೂಡಲೇ ಶಿಸ್ತು ಕ್ರಮ ಕೈಗೊಳ್ಳುವಂತೆ ಆರೋಪಿಸಿ, ಜಿಲ್ಲಾ ಎಸ್ಪಿ ವಿ. ವಿದ್ಯಾಸಾಗರ್ ನಾಯ್ಡು ಅವರು ಸಿಬಂದಿಯನ್ನು ಮಂಗಳವಾರ ಅಮಾನತುಗೊಳಿಸಿದ್ದಾರೆ.
ವಿಡಿಯೊ ಇಲ್ಲಿದೆ:
ಅಜಯ್ ಕುಮಾರ್ ಅವರು ಜೀಪ್ ಚಾಲಕನಾಗಿದ್ದರೂ ಕೂಡ ಸಾರ್ವಜನಿಕ ಸುವ್ಯವಸ್ಥೆ ಕಾಪಾ ಡುವ ಕರ್ತವ್ಯ ಅವರಲ್ಲಿಯೂ ಇರಬೇಕಿತ್ತು, ಆದರೆ ಸ್ಥಳೀಯರ ಜೊತೆ ಸೇರಿಕೊಂಡು ಮಹಿಳೆ ಯೊಂದಿಗೆ ಆಕ್ಷೇಪಾರ್ಹ ರೀತಿಯಲ್ಲಿ ನೃತ್ಯ ಮಾಡಿದ್ದು ತಿಳಿದು ಬಂದಿದೆ. ಆನ್‌ಲೈನ್‌ನಲ್ಲಿ ಈ ವಿಚಾರ ವ್ಯಾಪಕವಾಗಿ ಪ್ರಸಾರವಾಗಿ ಇಲಾಖೆಯ ಗೌರವಕ್ಕೆ ಧಕ್ಕೆಯಾಗಿದೆ. ಹೀಗಾಗಿ ಈ ಘಟನೆ ಮರುಕಳಿಸದಂತೆ ಸಿಬಂದಿ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲು ಮುಂದಾಗಿರುವುದಾಗಿ ಎಸ್ಪಿ ಅವರು ಹೇಳಿಕೆ ನೀಡಿದ್ದಾರೆ.
Viral Video: ಕಾಳಿ ಮಾತೆಯ ವಿಗ್ರಹಕ್ಕೆ ಮದರ್ ಮೇರಿಯ ಅಲಂಕಾರ
ವೈರಲ್ ಆದ ಮೊಬೈಲ್ ಕ್ಯಾಮರಾ ದೃಶ್ಯಾವಳಿಗಳ ಆಧಾರದ ಮೇಲೆ ಎಸ್ಪಿ ಸಮಗ್ರ ತನಿಖೆಗೆ ಆದೇಶಿಸಿದರು. ಸಂಬಂಧಪಟ್ಟ ಅಧಿಕಾರಿಗಳಿಂದ ಕೃತ್ಯ ಎಸಗಿದ್ದ ಕಾರಣ , ಇತರ ವಿವರವಾದ ವರದಿಯನ್ನು ಕೋಡುವಂತೆ ಸಹ ಹೇಳಿದ್ದಾರೆ. ಈ ಬಗ್ಗೆ ಪರಿಶೀಲನೆ ಮಾಡಿ ದೃಶ್ಯಗಳ ಸತ್ಯಾ ಸತ್ಯತೆಯನ್ನು ದೃಢಪಡಿಸಿದ ಅನಂತರ, ಜಿಲ್ಲಾ ಪೊಲೀಸ್ ಕಚೇರಿಯಿಂದ ಸಿಬಂದಿಯನ್ನು ಅಮಾನತುಗೊಳಿಸುವ ಆದೇಶಗಳನ್ನು ಹೊರಡಿಸಲಾಗಿದೆ.
ವುಯ್ಯೂರು ಮಂಡಲದ ಗಂಡಿಕುಂಟ ಗ್ರಾಮದ ಮೂಲದ ಅಜಯ್ ಕುಮಾರ್ ಅವರು ಗ್ರಾಮದಲ್ಲಿ ನಡೆಯುವ ವಾರ್ಷಿಕ ಜಾನಪದ ರಂಗ ನಾಟಕದಲ್ಲಿ ಅಭಿನಯಿಸಲು ಭಾಗವಹಿಸಿದ್ದಾಗಿ ತಿಳಿಸಿ ದ್ದಾರೆ. ಇದಕ್ಕಾಗಿ ಮನೆಯೊಂದರಲ್ಲಿ ಅಭ್ಯಾಸ ಮಾಡುತ್ತಿದ್ದೆವು ಆಗ ಗ್ರಾಮಸ್ಥರು ಮತ್ತು ಮಕ್ಕಳು ಹಾಜರಿದ್ದರು. ಇದು ಉದ್ದೇಶ ಪೂರ್ವಕವಾಗಿ ಮಾಡಿದ್ದ ಕೃತ್ಯವಲ್ಲ ಹೀಗಾಗಿ ಕ್ಷಮೆ ಕೋರಿ ಕಂಕಿಪಡು ಸಿಐ ಅವರಿಗೆ ಅಜಯ್ ಹೇಳಿದ್ದಾರೆ. ಆದರೆ ಬೇಜವಾಬ್ದಾರಿ ವರ್ತನೆಗೆ ಬಂದಾಗ ಯಾವುದೇ ದಯೆ ಇರುವುದಿಲ್ಲ ಎಸ್ಪಿ ಅವರು ಹೇಳಿದ್ದಾರೆ.