ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Operation Sindoor: ಕಾರ್ಯಾಚರಣೆ ವೇಳೆ ಪಾಕಿಸ್ತಾನದ 40 ಯೋಧರ ಸಾವು; ಡಿಜಿಎಂಒ ರಾಜೀವ್‌ ಘಾಯ್‌

ಆಪರೇಷನ್‌ ಸಿಂದೂರ್‌ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕ (DGMO), ಲೆಫ್ಟಿನೆಂಟ್‌ ಜನರಲ್‌ ರಾಜೀವ್‌ ಘಾಯ್‌ ಭಾರತ ಯಾವುದೇ ಕಾರಣಕ್ಕೂ ಭಯೋತ್ಪಾದನೆಯನ್ನು ಸಹಿಸುವುದಿಲ್ಲ ಎಂದು ತಿಳಿಸಿದರು. ʼʼಮೇ 7ರ ಮುಂಜಾನೆ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ಕ್ಕೆ ನುಗ್ಗಿ 9 ಪ್ರಮುಖ ಭಯೋತ್ಪಾದಕ ಉಡಾವಣಾ ಪ್ಯಾಡ್‌ಗಳ ಮೇಲೆ ನಡೆಸಿದ ನಿಖರ ದಾಳಿದಲ್ಲಿ 100ಕ್ಕೂ ಹೆಚ್ಚು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆʼʼ ಎಂದು ದೃಢಪಡಿಸಿದರು.

ಪಾಕಿಸ್ತಾನದ 40 ಯೋಧರು ಮೃತಪಟ್ಟಿದ್ದಾರೆ: ಡಿಜಿಎಂಒ

ಸಾಂದರ್ಭಿಕ ಚಿತ್ರ.

Profile Ramesh B May 11, 2025 7:11 PM

ಹೊಸದಿಲ್ಲಿ: ಆಪರೇಷನ್‌ ಸಿಂದೂರ್‌ (Operation Sindoor) ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕ (DGMO), ಲೆಫ್ಟಿನೆಂಟ್‌ ಜನರಲ್‌ ರಾಜೀವ್‌ ಘಾಯ್‌ ಭಾರತ ಯಾವುದೇ ಕಾರಣಕ್ಕೂ ಭಯೋತ್ಪಾದನೆಯನ್ನು ಸಹಿಸುವುದಿಲ್ಲ ಎಂದು ತಿಳಿಸಿದರು. ಭಾನುವಾರ ಮಾತನಾಡಿದ ಅವರು, ʼʼಮೇ 7ರ ಮುಂಜಾನೆ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ಕ್ಕೆ ನುಗ್ಗಿ 9 ಪ್ರಮುಖ ಭಯೋತ್ಪಾದಕ ಉಡಾವಣಾ ಪ್ಯಾಡ್‌ಗಳ ಮೇಲೆ ನಡೆಸಿದ ನಿಖರ ದಾಳಿದಲ್ಲಿ 100ಕ್ಕೂ ಹೆಚ್ಚು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆʼʼ ಎಂದು ದೃಢಪಡಿಸಿದರು.

ʼʼಮೇ 7ರ ಸಂಜೆ ಪಾಕಿಸ್ತಾನ ಹಾರಿಸಿದ ಡ್ರೋನ್‌ಗಳಿಂದ ಭಾರತೀಯ ಪಡೆಗಳು ಸುತ್ತುವರಿಯಲ್ಪಟ್ಟಿದ್ದವು. ರಾತ್ರಿ 8ರಿಂದ 9ರ ಹೊತ್ತಿಗೆ, ಕ್ವಾಡ್‌ಕಾಪ್ಟರ್‌ಗಳನ್ನು ಸಾರ್ವಜನಿಕರಿಗೆ ಕಿರುಕುಳ ನೀಡಲು ಬಳಸಲಾಯಿತುʼʼ ಎಂದು ತಿಳಿಸಿದರು. ಜತೆಗೆ ನಾಶವಾದ ಉಗ್ರರ ನೆಲೆಯ ಚಿತ್ರಗಳನ್ನು ಪ್ರದರ್ಶಿಸಲಾಯಿತು.



ʼʼಇದುವರೆಗೆ ಪಾಕಿಸ್ತಾನ 700 ಡ್ರೋನ್‌ಗಳನ್ನು ಹೊಡೆದುರಯುಳಿಸಿದ್ದೇವೆ. ಕಾರ್ಯಾಚರಣೆ ವೇಳೆ ಮೇ 7ರಿಂದ 10ರ ತನಕ ಪಾಕಿಸ್ತಾನದ ಸುಮಾರು 35-40 ಸೈನಿಕರು ಮೃತಪಟ್ಟಿದ್ದಾರೆ. ಭಾರತದ ದಾಳಿಯಿಂದ ಪಾಕ್‌ನ 1 ವಿಮಾನಕ್ಕೂ ಹಾನಿಯಾಗಿಲ್ಲ, ಯಾವ ನಾಗರಿಕನೂ ಗಾಯಗೊಂಡಿಲ್ಲ. ಪಾಕ್‌ನ ರಾಡಾರ್‌ ಕೇಂದ್ರ, ಏರ್‌ಬೇಸ್‌ ಧ್ವಂಸಗೊಳಿಸಲಾಗಿದೆʼʼ ಎಂದು ಹೇಳಿದರು.

ಐವರು ಭಾರತೀಯ ಸೈನಿಕರು ಹುತಾತ್ಮ

ʼʼಆಪರೇಷನ್‌ ಸಿಂದೂರ್‌ ವೇಳೆ ಭಾರತದ ಐವರು ಸೈನಿಕರು ಹುತಾತ್ಮರಾಗಿದ್ದು, ಅವರ ತ್ಯಾಗಕ್ಕೆ ವ್ಯರ್ಥವಾಗಲು ಬಿಡುವುದಿಲ್ಲʼʼ ಎಂದು ತಿಳಿಸಿದರು. ಏರ್ ಮಾರ್ಷಲ್ ಎ.ಕೆ. ಭಾರ್ತಿ ಮಾತನಾಡಿ, ಭಾರತದ ಮಿಲಿಟರಿ ಕ್ರಮಗಳು ಪಾಕಿಸ್ತಾನಿ ಮಿಲಿಟರಿ ಅಥವಾ ಗಡಿಯಾಚೆಗಿನ ಯಾವುದೇ ಇತರ ಸಿಬ್ಬಂದಿಯ ಮೇಲೆ ಅಲ್ಲ, ಭಯೋತ್ಪಾದಕ ಗುಂಪುಗಳು ಮಾತ್ರ ಗುರಿಯಾಗಿದ್ದವು ಎಂದು ಹೇಳಿದರು. “ನಮ್ಮ ಹೋರಾಟ ಪಾಕಿಸ್ತಾನಿ ಮಿಲಿಟರಿಯೊಂದಿಗೆ ಅಥವಾ ನಾಗರಿಕರೊಂದಿಗೆ ಅಲ್ಲ. ನಮ್ಮ ಹೋರಾಟ ಭಯೋತ್ಪಾದಕರ ವಿರುದ್ಧ. ನಾವು ಅಂದುಕೊಂಡ ಹಾಗೆ ಭಯೋತ್ಪಾದಕರನ್ನು ಹತ್ಯೆ ಮಾಡಿದ್ದೇವೆ” ಎಂದು ಅವರು ಹೇಳಿದರು.

ಭಾರತದ ರಫೇಲ್ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿರುವುದಾಗಿ ಹೇಳಿದ ಪಾಕಿಸ್ತಾನದ ಸುಳ್ಳು ಸುದ್ದಿಯನ್ನು ನಿರಾಕರಿಸಿದ ಅವರು, ಎಲ್ಲ ವಾಯುಪಡೆಯ ಪೈಲಟ್‌ಗಳು ಸುರಕ್ಷಿತವಾಗಿ ಮನೆಗೆ ಮರಳಿದ್ದಾರೆ ಎಂದು ತಿಳಿಸಿದರು.