Viral News: ಇಡೀ ಊರು ನಾಪತ್ತೆ, ನಮ್ಮ ಶಿಬಿರವೂ ನಾಶ... ಮೇಘಸ್ಪೋಟದ ಕುರಿತು ಸೇನಾಧಿಕಾರಿ ಹೇಳಿದ್ದ ಸಂದೇಶ ವೈರಲ್
14 ನೇ ರಜಪೂತ ರೈಫಲ್ಸ್‌ನ ಕಮಾಂಡಿಂಗ್ ಆಫೀಸರ್ ಕರ್ನಲ್ ಹರ್ಷವರ್ಧನ್, ಮಂಗಳವಾರ ಮಧ್ಯಾಹ್ನ ಭೀಕರ ಮೇಘಸ್ಫೋಟದಿಂದ ಉಂಟಾದ ವಿನಾಶಕಾರಿ ಭೂಕುಸಿತ ಮತ್ತು ಹಠಾತ್ ಪ್ರವಾಹದ ನಂತರ ಧರಾಲಿ ಗ್ರಾಮದಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಯ ತೀವ್ರತೆಯ ಬಗ್ಗೆ ಭಾರತೀಯ ಸೇನಾ ಪ್ರಧಾನ ಕಚೇರಿಗೆ ಸಂದೇಶ ಕಳುಹಿಸಿದ್ದರು.


ಡೆಹ್ರಾಡೂನ್: ಉತ್ತರಾಖಂಡದ ಉತ್ತರಕಾಶಿಯ ಧರಾಲಿ ಗ್ರಾಮದಲ್ಲಿ ಭೀಕರ ಮೇಘಸ್ಫೋಟ ಸಂಭವಿಸಿದ್ದು, ಗ್ರಾಮದ ಅರ್ಧದಷ್ಟು ಪ್ರದೇಶವೇ ನಾಶವಾಗಿ ಹೋಗಿದೆ. ಈಗಾಗಲೇ ಐವರು ಮೃತಪಟ್ಟಿರುವುದು ತಿಳಿದು ಬಂದಿದೆ. ಸುಮಾರು 70 ಕ್ಕೂ ಅಧಿಕ ಜನರು ನಾಪತ್ತೆಯಾಗಿದ್ದಾರೆ. ಭಾರತೀಯ ಸೇನೆ ಸೇರಿದಂತೆ ಇತರೆ ರಕ್ಷಣಾ ತಂಡಗಳು ಶೋಧ ಕಾರ್ಯಾಚರಣೆ ಪುನರಾರಂಭಿಸಿದ್ದು, ಅವಶೇಷಗಳ ನಡುವೆ ಸಿಲುಕಿಕೊಂಡವರಿಗೆ ಹುಡುಕಾಟ ನಡೆಸುತ್ತಿದ್ದಾರೆ. ಮೇಘಸ್ಫೋಟ ಸಂಭವಿಸಿದ ಕೂಡಲೇ ಹಿರಿಯ ಸೇನಾಧಿಕಾರಿಯೊಬ್ಬರು ಕಳುಹಿಸಿದ (Viral News,) ರೆಡಿಯೋ ಸಂದೇಶ ಇದೀಗ ವೈರಲ್ ಆಗಿದ್ದು, ಅಲ್ಲಿನ ಭೀಕರತೆ ಎಷ್ಟಿತ್ತು ಎಂಬುದು ತಿಳಿದು ಬಂದಿದೆ.
14 ನೇ ರಜಪೂತ ರೈಫಲ್ಸ್‌ನ ಕಮಾಂಡಿಂಗ್ ಆಫೀಸರ್ ಕರ್ನಲ್ ಹರ್ಷವರ್ಧನ್, ಮಂಗಳವಾರ ಮಧ್ಯಾಹ್ನ ಭೀಕರ ಮೇಘಸ್ಫೋಟದಿಂದ ಉಂಟಾದ ವಿನಾಶಕಾರಿ ಭೂಕುಸಿತ ಮತ್ತು ಹಠಾತ್ ಪ್ರವಾಹದ ನಂತರ ಧರಾಲಿ ಗ್ರಾಮದಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಯ ತೀವ್ರತೆಯ ಬಗ್ಗೆ ಭಾರತೀಯ ಸೇನಾ ಪ್ರಧಾನ ಕಚೇರಿಗೆ ಸಂದೇಶ ಕಳುಹಿಸಿದ್ದರು. ನಾನು ಕರ್ನಲ್ ಹರ್ಷವರ್ಧನ್, ಧರಾಲಿ ಗ್ರಾಮವು ಭಾರಿ ಭೂಕುಸಿತಕ್ಕೆ ಒಳಗಾದ ನಂತರ ರಕ್ಷಣಾ ಪಡೆಯನ್ನು ಮುನ್ನಡೆಸುತ್ತಿದ್ದೇನೆ . ಇಲ್ಲಿ ನಮ್ಮ ಬಳಿ ಸುಮಾರು 150 ಸೈನಿಕರಿದ್ದಾರೆ ಮತ್ತು ನಿನ್ನೆಯಿಂದ ನಾವು ಗ್ರಾಮಸ್ಥರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುತ್ತಿದ್ದೇವೆ" ಎಂದು ಕರ್ನಲ್ ರೇಡಿಯೋ ಸಂದೇಶದಲ್ಲಿ ಹೇಳಿದ್ದಾರೆ.
AUDIO | Uttarkashi Flash Floods: Colonel Harshvardhan, Commanding Officer of 14 RAJRIF, is personally leading 150 personnel in critical rescue and relief operations since August 5 afternoon. Inputs from Colonel Harshvardhan have been received reassuring the citizens of Army’s… pic.twitter.com/m4jpsFSxtU
— Press Trust of India (@PTI_News) August 6, 2025
ಕಾಣೆಯಾದವರ ಸಂಖ್ಯೆ ಇನ್ನೂ ತಿಳಿದಿಲ್ಲ. ಆದಾಗ್ಯೂ, ಪರಿಹಾರ ಕಾರ್ಯಗಳು ರಾತ್ರಿಯಿಡೀ ಮುಂದುವರೆದಿವೆ. ಸೇನಾ ಶಿಬಿರವು ನಿನ್ನೆ ಭಾರಿ ಭೂಕುಸಿತ ಮತ್ತು ಹಠಾತ್ ಪ್ರವಾಹಕ್ಕೆ ತುತ್ತಾಗಿದೆ. ನಾವು ಸಂಪರ್ಕವನ್ನು ಸ್ಥಾಪಿಸಲು ಮತ್ತು ರಕ್ಷಣಾ ಪ್ರಯತ್ನಗಳನ್ನು ಮುಂದುವರಿಸಲು ಪ್ರಯತ್ನಿಸುತ್ತಿದ್ದೇವೆ" ಎಂದು ಅವರು ಹೇಳಿದರು. ಇಡೀ ಊರಿಗೆ ಊರೇ ಕೊಚ್ಚಿ ಹೋಗುತ್ತಿದೆ. ಆದಷ್ಟು ಬೇಗ ಸಹಾಯ ಒದಗಿಸಬೇಕು. ಜನರು ಮುಳುಗಿತ್ತಿದ್ದಾರೆ ಎಂದು ಅವರು ಅಸಹಾಯಕ ಧ್ವನಿಯಲ್ಲಿ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: ಉತ್ತರಕಾಶಿಯಲ್ಲಿ ಮೇಘಸ್ಫೋಟ: ಭೂಕುಸಿತದ ಅವಶೇಷಗಳಿಂದ ತೆವಳುತ್ತಾ ಹೊರಬಂದ ವ್ಯಕ್ತಿ, ಇಲ್ಲಿದೆ ಮೈಜುಮ್ಮೆನಿಸುವ ವಿಡಿಯೊ
ನಿನ್ನೆ ಮಧ್ಯಾಹ್ನ 1.30 ರ ಸುಮಾರಿಗೆ ಈ ವಿಪತ್ತು ಸಂಭವಿಸಿದೆ. 150 ಸೈನಿಕರ ತುಕಡಿ ಧಾರಾಲಿ ಗ್ರಾಮವನ್ನು 15 ನಿಮಿಷಗಳಲ್ಲಿ ತಲುಪಿತು ಮತ್ತು ಗ್ರಾಮಸ್ಥರನ್ನು ರಕ್ಷಿಸಿ ಎತ್ತರದ ಪ್ರದೇಶಗಳಿಗೆ ಕಳುಹಿಸಲಾಯಿತು. ಸದ್ಯ ಕಾರ್ಯಾಚರಣೆಯಲ್ಲಿ ಸೇನೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಮತ್ತು ಜಿಲ್ಲಾಡಳಿತವು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.