ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ವೇಳೆ ದುರಂತ: ಕಂದಕಕ್ಕೆ ಬಿದ್ದು ಸೇನಾ ಅಧಿಕಾರಿ ಹುತಾತ್ಮ

Army Officer death: ಪರ್ವತ ಪ್ರದೇಶದಲ್ಲಿ ಜಾರಿ ಬಿದ್ದು ಸೇನಾ ಅಧಿಕಾರಿಯೊಬ್ಬರು ಮೃತಪಟ್ಟ ಘಟನೆ ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ನಡೆದಿದೆ. ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದೆ. ರಜೌರಿ ಜಿಲ್ಲೆಯ ಕಾಡುಗಳಲ್ಲಿ ಅಡಗಿಕೊಂಡಿರುವ ಪಾಕ್ ಉಗ್ರರ ವಿರುದ್ಧದ ಕಾರ್ಯಾಚರಣೆ ವೇಳೆ ಈ ದುರಂತ ನಡೆದಿದೆ.

ಹುತಾತ್ಮ ಲೆಫ್ಟಿನೆಂಟ್ ಬೀರೇಶ್ವರ್ ಗೋಸ್ವಾಮಿ (ಸಂಗ್ರಹ ಚಿತ್ರ)

ಶ್ರೀನಗರ, ಜೂ. 7: ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯ (Anti-terror operation) ಸಮಯದಲ್ಲಿ ಪರ್ವತ ಪ್ರದೇಶದಲ್ಲಿ ಜಾರಿ ಬಿದ್ದು ಸೇನಾ ಅಧಿಕಾರಿಯೊಬ್ಬರು ಮೃತಪಟ್ಟ ಘಟನೆ ಜಮ್ಮು ಮತ್ತು ಕಾಶ್ಮೀರದ (Jammu and Kashmir) ರಜೌರಿ ಜಿಲ್ಲೆಯಲ್ಲಿ ಶನಿವಾರ (ಜೂನ್‌ 6) ಸಂಜೆ ನಡೆದಿದೆ. ಲೆಫ್ಟಿನೆಂಟ್ ಆಗಿದ್ದ ಅಧಿಕಾರಿ, 15ನೇ ದಿನಕ್ಕೆ ಕಾಲಿಟ್ಟ ಭದ್ರತಾ ಸಿಬ್ಬಂದಿಯೊಂದಿಗಿನ ಆಪರೇಷನ್ ಶೇರುವಾಲಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದರು. ಹುತಾತ್ಮರನ್ನು ಬೀರೇಶ್ವರ್ ಗೋಸ್ವಾಮಿ ಎಂದು ಗುರುತಿಸಲಾಗಿದೆ.

ರಜೌರಿ ಜಿಲ್ಲೆಯ ಕಾಡುಗಳಲ್ಲಿ ಅಡಗಿಕೊಂಡಿರುವ ಪಾಕಿಸ್ತಾನಿ ಭಯೋತ್ಪಾದಕರನ್ನು ಪತ್ತೆಹಚ್ಚಲು ಡೋರಿಮಾಲ್ ಮತ್ತು ಗಂಭೀರ್ ಮೊಘಲನ್ ಬೆಲ್ಟ್‌ನಲ್ಲಿ ಆಪರೇಷನ್ ಶೇರುವಾಲಿ ನಡೆಯುತ್ತಿದೆ. ಶೋಧ ಕಾರ್ಯಾಚರಣೆಯ ಸಮಯದಲ್ಲಿ, ಲೆಫ್ಟಿನೆಂಟ್ ಬೀರೇಶ್ವರ್ ಗೋಸ್ವಾಮಿ ಜಾರಿ ಡೋರಿಮಾಲ್ ಪ್ರದೇಶದಲ್ಲಿ 30 ಮೀಟರ್ ಆಳದ ಕಂದಕಕ್ಕೆ ಬಿದ್ದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೂಡಲೇ ಅವರನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಾಯಿಸಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಹೇಳಿದರು.

ವೈಟ್ ನೈಟ್ ಕಾರ್ಪ್ಸ್ ಎಕ್ಸ್‌ ಪೋಸ್ಟ್‌:



ಗುಪ್ತಚರ ಮಾಹಿತಿಯ ಆಧಾರದ ಮೇಲೆ ಸೇನೆ, ಜಮ್ಮು ಕಾಶ್ಮೀರ ಪೊಲೀಸ್ ಮತ್ತು ಅರೆಸೈನಿಕ ಪಡೆಗಳು ಜಂಟಿಯಾಗಿ ಈ ಮಹತ್ವದ ಕಾರ್ಯಾಚರಣೆ ನಡೆಯುತ್ತಿದೆ. ಅಧಿಕಾರಿಯ ತ್ಯಾಗವನ್ನು ವ್ಯರ್ಥವಾಗಲು ಬಿಡದ ಭಾರತೀಯ ಸಶಸ್ತ್ರ ಪಡೆಗಳು, ರಜೌರಿ ಪ್ರದೇಶವನ್ನು ಭಯೋತ್ಪಾದಕರಿಂದ ಸಂಪೂರ್ಣವಾಗಿ ಮುಕ್ತಗೊಳಿಸಲು ತನ್ನ ಶೋಧ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರುದ್ರ ಪ್ರಯಾಗ ಅಪಘಾತ

ಭಾನುವಾರ (ಜೂನ್‌ 7) ಬೆಳಗ್ಗೆ ರುದ್ರಪ್ರಯಾಗದಲ್ಲಿ ಚಾರ್‌ಧಾಮ್ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಕಾರು ಅಪಘಾತಕ್ಕೀಡಾಯಿತು. ಕಾರು ನಿಯಂತ್ರಣ ತಪ್ಪಿ ತಿಲ್ವಾರಾ ಬಳಿ ನದಿಗೆ ಬಿದ್ದಿತು. ಬಂಗಾಳದ ಐದು ಪ್ರಯಾಣಿಕರು ಕಾರಿನಲ್ಲಿದ್ದರು. ಪ್ರಯಾಣಿಕರನ್ನು ಎಸ್‌ಡಿಆರ್‌ಎಫ್ ಕಂದಕದಿಂದ ರಕ್ಷಿಸಿದೆ.

ಪೂಂಚ್‌ನಲ್ಲಿ ಒಳನುಸುಳಲು ಯತ್ನಸಿದ ಭಯೋತ್ಪಾದಕರನ್ನು ತಡೆದ ಭಾರತೀಯ ಸೇನೆ

ರಸ್ತೆಯಿಂದ ಸುಮಾರು 50 ಮೀಟರ್ ಕೆಳಗೆ, ವಾಹನವೊಂದು ನಿಯಂತ್ರಣ ತಪ್ಪಿ ನದಿಗೆ ಬಿದ್ದಿದೆ ಎಂದು ಜಿಲ್ಲಾ ನಿಯಂತ್ರಣ ಕೊಠಡಿಗೆ ಮಾಹಿತಿ ಬಂದಿತ್ತು. ಮಾಹಿತಿ ಪಡೆದ ತಿಲ್ವಾರ ಹೊರಠಾಣೆ ಮತ್ತು ಅಗಸ್ತ್ಯಮುನಿ ಪೊಲೀಸ್ ಠಾಣೆಯ ಪೊಲೀಸರು ಅಗತ್ಯ ವಿಪತ್ತು ಪರಿಹಾರ ಸಾಧನಗಳೊಂದಿಗೆ ತಕ್ಷಣ ಸ್ಥಳಕ್ಕೆ ಆಗಮಿಸಿದರು. ಎಸ್‌ಡಿಆರ್‌ಎಫ್, ಡಿಡಿಆರ್‌ಎಫ್ ಮತ್ತು 108 ತುರ್ತು ಸೇವೆಗಳನ್ನು ಸಹ ಘಟನಾ ಸ್ಥಳಕ್ಕೆ ರವಾನಿಸಲಾಯಿತು.

ಅಪಘಾತದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇಬ್ಬರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದು, ಅವರ ಕೈ ಮತ್ತು ಕಾಲುಗಳಿಗೆ ಮುರಿತ ಮತ್ತು ಇತರ ಗಾಯಗಳಾಗಿವೆ. ಚಾಲಕ ಸೇರಿದಂತೆ ಮೂವರು ಪುರುಷರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಎಲ್ಲಾ ಗಾಯಾಳುಗಳನ್ನು ಕಂದಕದಿಂದ ಹೊರತೆಗೆದು ತಕ್ಷಣವೇ 108 ಆಂಬ್ಯುಲೆನ್ಸ್ ಮೂಲಕ ರುದ್ರಪ್ರಯಾಗದ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.