ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪೂಂಚ್‌ನಲ್ಲಿ ಒಳನುಸುಳಲು ಯತ್ನಸಿದ ಭಯೋತ್ಪಾದಕರನ್ನು ತಡೆದ ಭಾರತೀಯ ಸೇನೆ; ಓರ್ವ ಬಲಿ

ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ಭಾಗದಲ್ಲಿ ಭಾರತದೊಳಗೆ ಒಳನುಸುಳಲು ಯತ್ನಿಸಿದ ಭಯೋತ್ಪಾದಕರ ದೊಡ್ಡ ಗುಂಪನ್ನು ಭಾರತೀಯ ಸೇನೆ ತಡೆದಿದೆ. ಮಂಗಳವಾರ ಸಂಜೆ ವೇಳೆಗೆ ಅನುಮಾನಾಸ್ಪದ ಚಲನವಲನಗಳು ಕಂಡು ಬಂದಿದ್ದರಿಂದ ಕೂಡಲೇ ಕಾರ್ಯಪ್ರವೃತ್ತವಾದ ಭಾರತೀಯ ಸೇನೆಯು ಭಯೋತ್ಪಾದಕರ ಒಳನುಸುಳುವಿಕೆಯನ್ನು ತಡೆಯುವಲ್ಲಿ ಯಶಸ್ವಿಯಾಗಿದೆ.

ಪೂಂಚ್‌ನಲ್ಲಿ ಒಳನುಸುಳಲು ಯತ್ನಸಿದ ಭಯೋತ್ಪಾದಕರು

ಸಂಗ್ರಹ ಚಿತ್ರ -

ಜಮ್ಮು: ಭಯೋತ್ಪಾದಕರ ಗುಂಪೊಂದು (terror group) ಜಮ್ಮು ಮತ್ತು ಕಾಶ್ಮೀರದ (Jammu and kashmir) ಪೂಂಚ್ ಜಿಲ್ಲೆಯ (Poonch) ಗಡಿ ಭಾಗದಲ್ಲಿ ಭಾರತದೊಳಗೆ ಒಳನುಸುಳಲು ಪ್ರಯತ್ನಿಸಿದೆ. ಮಂಗಳವಾರ ಸಂಜೆ ವೇಳೆಗೆ ಭಾರತದೊಳಗೆ ನುಸುಳಲು ಪ್ರಯತ್ನಿಸಿದ ದೊಡ್ಡ ಗುಂಪನ್ನು ಹಿಮ್ಮೆಟ್ಟಿಸುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ. ಪೂಂಚ್‌ನ (Poonch) ಕೃಷ್ಣ ಘಾಟಿ ಸೆಕ್ಟರ್‌ನ (Krishna Ghati Sector) ಸಾಮಾನ್ಯ ಪ್ರದೇಶದ ಸುಮಾರು 300 ಮೀಟರ್ ಒಳಗೆ ಅನುಮಾನಾಸ್ಪದ ಚಲನವಲನಗಳು ಕಂಡು ಬಂದಿದ್ದಾಗಿ ಸಾಮಾಜಿಕ ಮಾಧ್ಯಮದ ಎಕ್ಸ್ ಖಾತೆಯಲ್ಲಿ ವೈಟ್ ನೈಟ್ ಕಾರ್ಪ್ಸ್ ತಿಳಿಸಿದೆ.

ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ನಿಯಂತ್ರಣ ರೇಖೆಯ (ಎಲ್‌ಒಸಿ) ಉದ್ದಕ್ಕೂ ಭಯೋತ್ಪಾದಕರ ಒಳನುಸುಳುವಿಕೆ ಪ್ರಯತ್ನವನ್ನು ಮಂಗಳವಾರ ಭಾರತೀಯ ಸೇನೆ ವಿಫಲಗೊಳಿಸಿದೆ. ಒಳನುಗ್ಗಲು ಪ್ರಯತ್ನಿಸಿದವರನ್ನು ನಿರ್ಮೂಲನೆ ಮಾಡುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪೈಕಿ ನುಸುಳುಕೋರನೊಬ್ಬ ಬಲಿಯಾಗಿದ್ದಾನೆ.

ʼಜಿರಳೆ ಮೀಸೆ ತಂತ್ರಗಾರಿಕೆʼ ಬಳಸದೆ ಬಿಜೆಪಿ ಗೆದ್ದಿದ್ದು ಬಂಗಾಳದಲ್ಲಿ ಮಾತ್ರ!

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ (ಪಿಒಕೆ) ಕೃಷ್ಣ ಘಾಟಿ ಮುಂಭಾಗದ ಪ್ರದೇಶದ ಗಂಡು ನಿಯಂತ್ರಣ ರೇಖೆಯ ಉದ್ದಕ್ಕೂ ಭಾರತದೊಳಗೆ ನುಸುಳಲು ಯತ್ನಿಸಿದ ಭಯೋತ್ಪಾದಕರ ಗುಂಪಿನ ಮೇಲೆ ಈ ಭಾಗದಲ್ಲಿ ನಿರಂತರ ಕಣ್ಗಾವಲಿನ ಮೇಲೆ ಕಾರ್ಯನಿರ್ವಹಿಸುತ್ತಿದ್ದ ಭಾರತೀಯ ಸೇನೆಯು ಗುಂಡಿನ ದಾಳಿ ನಡೆಸಿತು. ಲಷ್ಕರ್-ಎ-ತೈಬಾ ಜೊತೆ ಸಂಪರ್ಕ ಹೊಂದಿರುವ ಶಂಕಿತರು ಮಂಕೋಟೆಯ ಬಿಚೋ ಪೋಸ್ಟ್ ಬಳಿ ಗಡಿಯ ಭಾಗದಲ್ಲಿ ಭಾರತದೊಳಗೆ ನುಸುಳಲು ಪ್ರಯತ್ನಿಸಿತ್ತು ಎನ್ನಲಾಗಿದೆ.

ವಿಜಯ್‌ ಗೆಲುವಿನ ಭವಿಷ್ಯ ನುಡಿದ ಜ್ಯೋತಿಷಿ ವೆಟ್ರಿವೇಲ್ ಈಗ ಸಿಎಂ ವಿಶೇಷ ಕರ್ತವ್ಯಾಧಿಕಾರಿ

ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ನೀಡಿರುವ ವೈಟ್ ನೈಟ್ ಕಾರ್ಪ್ಸ್, ಮಂಗಳವಾರ ಸಂಜೆ 4 ಗಂಟೆ ಸುಮಾರಿಗೆ ಪೂಂಚ್‌ನ ಕೃಷ್ಣ ಘಾಟಿ ಸೆಕ್ಟರ್‌ನ ಸಾಮಾನ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ವೈಟ್ ನೈಟ್ ಕಾರ್ಪ್ಸ್ ಪಡೆಗಳು ತ್ವರಿತವಾಗಿ ಪ್ರತಿಕ್ರಿಯಿಸಿ ಒಳನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಿದವು. ಯಾರೊಬ್ಬರೂ ಕೂಡ ಒಳ ನುಸುಳದಂತೆ ತಡೆಯಲಾಗಿದೆ. ಈ ಪ್ರದೇಶದಲ್ಲಿ ಹೆಚ್ಚಿನ ಕಾರ್ಯಾಚರಣೆ ನಡೆಸಲು ಭಾರತೀಯ ಸೇನೆ ಮುಂದಾಗಿರುವುದಾಗಿ ವೈಟ್ ನೈಟ್ ಕಾರ್ಪ್ಸ್ ತಿಳಿಸಿದೆ.