ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಯು ಫೆಬ್ರವರಿ 5ರಂದು ನಡೆಯಲಿದ್ದು. ಚುನಾವಣೆ ಫಲಿತಾಂಶವು ಫೆಬ್ರವರಿ 8ಕ್ಕೆ ಪ್ರಕಟವಾಗಲಿದೆ. ಈ ಬಾರಿಯ ದೆಹಲಿ ಚುನಾವಣೆ ಕಣದಲ್ಲಿ ಭಾರೀ ಪೈಪೋಟಿಯಿದೆ. ಎಎಪಿ ಮೂರನೇ ಅವಧಿಗೆ ಗದ್ದುಗೆ ಏರಲು ಕಸರತ್ತು ನಡೆಸುತ್ತಿದೆ. ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್(Arvind Kejriwal) ಚುನಾವಣಾ ಪ್ರಚಾರದಲ್ಲಿ ತೊಡಗಿದ್ದು,ನಿನ್ನೆ(ಜ.19) ಬೀದಿ ಬದಿಯ ಅಂಗಡಿಯೊಂದರಲ್ಲಿ ವೆಜಿಟೇಬಲ್ ಮೊಮೊ ಸೇವಿಸಿದ್ದಾರೆ. ಇದೀಗ ಆ ಪೋಸ್ಟ್ ಸಾಕಷ್ಟು ವೈರಲ್ ಆಗಿದೆ.
ಎಎಪಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ವಿಡಿಯೊ ಹಂಚಿಕೊಂಡಿದ್ದು, ಅರವಿಂದ್ ಕೇಜ್ರಿವಾಲ್ ರಸ್ತೆ ಬದಿಯ ಅಂಗಡಿಯಲ್ಲಿ ಮೊಮೊ ಸೇವಿಸಿದರು ಎಂದು ಬರೆಯಲಾಗಿದೆ.
ವಿಡಿಯೊದಲ್ಲಿ, ಕೇಜ್ರಿವಾಲ್ ಮಾರಾಟಗಾರನಲ್ಲಿ ಒಂದು ತುಂಡು ಮೊಮೊ ಕೇಳುವುದನ್ನು ನೋಡಬಹುದು. ನಂತರ ತಟ್ಟೆಯಿಂದ ಮೊಮೊ ಆರಿಸಿಕೊಂಡು ಉಳಿದದ್ದನ್ನು ತನ್ನೊಂದಿಗಿದ್ದವರೊಂದಿಗೆ ಹಂಚಿಕೊಂಡಿದ್ದಾರೆ. ಹಲವರು ಕೇಜ್ರಿವಾಲ್ ಅವರನ್ನು ಕೊಂಡಾಡಿದ್ದು,ಸರಳತೆಯ ವ್ಯಕ್ತಿ ಎಂದು ಕಾಮೆಂಟ್ ಮಾಡಿದ್ದಾರೆ.
ಕೇಜ್ರಿವಾಲ್ ವಿರುದ್ಧ ಹೆಚ್ಚು ಅಭ್ಯರ್ಥಿಗಳು!
ದೆಹಲಿ ವಿಧಾನಸಭೆ ಚುನಾವಣೆಯು ಸಾಕಷ್ಟು ಕುತೂಹಲ ಮೂಡಿಸಿದೆ. 70 ಸದಸ್ಯ ಬಲದ ವಿಧಾನಸಭೆಗೆ ಫೆಬ್ರವರಿ 5ರಂದು ಮತದಾನ ನಡೆಯಲಿದೆ. ಚುನಾವಣಾ ಫಲಿತಾಂಶ ಫೆಬ್ರವರಿ 8ರಂದು ಪ್ರಕಟವಾಗಲಿದೆ. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು 36 ಸ್ಥಾನಗಳನ್ನು ಪಕ್ಷ ಗೆಲ್ಲಬೇಕಾಗುತ್ತದೆ.
ಎಎಪಿ ಮುಖ್ಯಸ್ಥ, ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧ ಅತಿ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನವದೆಹಲಿ ಕ್ಷೇತ್ರದಿಂದ ಕೇಜ್ರಿವಾಲ್ ಸ್ಪರ್ಧೆ ಮಾಡುತ್ತಿದ್ದು, ಅವರ ವಿರುದ್ಧ 23 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ:Kumbh Mela: ಕರ್ನಾಟಕದಲ್ಲೂ ಮುಂದಿನ ತಿಂಗಳು ಕುಂಭಮೇಳ, ದಿನಾಂಕ ಫಿಕ್ಸ್
ಅಚ್ಚರಿ ಎಂಬಂತೆ ಇಬ್ಬರು ಮಾಜಿ ಮುಖ್ಯಮಂತ್ರಿಗಳ ಮಕ್ಕಳು ಅರವಿಂದ ಕೇಜ್ರಿವಾಲ್ ವಿರುದ್ಧ ನವದೆಹಲಿ ಕ್ಷೇತ್ರದಲ್ಲಿ ಎದುರಾಳಿಗಳು. ಬಿಜೆಪಿಯಿಂದ ಪರ್ವೇಶ್ ವರ್ಮಾ ಅಭ್ಯರ್ಥಿ ಇವರು ಮಾಜಿ ಸಿಎಂ ಸಾಹಿಬ್ ಸಿಂಗ್ ವರ್ಮಾ ಪುತ್ರ. ಕಾಂಗ್ರೆಸ್‌ನಿಂದ ಮಾಜಿ ಸಿಎಂ ಶೀಲಾ ದೀಕ್ಷಿತ್ ಪುತ್ರ ಸಂದೀಪ್ ದೀಕ್ಷಿತ್ ಅಭ್ಯರ್ಥಿ.