Ashwini Vaishnaw: ವಿಶ್ವದ ದೊಡ್ಡಣ್ಣನಿಗೆ ಶಾಕ್; ಎಐ ಕಣಕ್ಕೆ ಇಳಿದ ಭಾರತ: ಅಶ್ವಿನ್ ವೈಷ್ಣವ್ ಮಹತ್ವದ ಘೋಷಣೆ
ಕೇಂದ್ರ ಸಚಿವ ಅಶ್ಚಿನಿ ವೈಷ್ಣವ್ ಅವರು ಭಾರತವು ತನ್ನದೇ ಆದ AI ಮಾದರಿಯನ್ನು 6-8 ತಿಂಗಳಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಅಮೆರಿಕ ಚೀನಾ ನಡುವೆ ಎಐ ಭಾರೀ ಪೈಪೋಟಿ ನಡೆದಿರುವ ಬೆನ್ನಲ್ಲೇ ಇದೀಗ ಭಾರತವು ಸಹ ಎಐ ರೇಸ್‌ನಲ್ಲಿ ಸೇರಲು ತಯಾರಿ ನಡೆಸಿದೆ.

Ashwini Vaishnaw

ನವದೆಹಲಿ: ಕೇಂದ್ರ ಸಚಿವ ಅಶ್ಚಿನಿ ವೈಷ್ಣವ್(Ashwini Vaishnaw) ಅವರು ಭಾರತವು ತನ್ನದೇ ಆದ ಎಐ (Artificial Intelligence) ಮಾದರಿಯನ್ನು 6-8 ತಿಂಗಳಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಅಮೆರಿಕ(America) ಮತ್ತು ಚೀನಾ(China) ನಡುವೆ ಎಐ ವಿಚಾರದಲ್ಲಿ ಭಾರೀ ಪೈಪೋಟಿ ನಡೆದಿರುವ ಬೆನ್ನಲ್ಲೇ ಇದೀಗ ಭಾರತವು ಸಹ ಎಐ ರೇಸ್‌ನಲ್ಲಿ ಸೇರಲು ಸಾಕಷ್ಟು ತಯಾರಿ ನಡೆಸಿದೆ ಎಂದು ವೈಷ್ಣವ್ ಹೇಳಿದ್ದಾರೆ.
ಒಡಿಶಾದ ಕಾರ್ಯಕ್ರಮವೊಂದರಲ್ಲಿ ಈ ವಿಚಾರವಾಗಿ ಮಾತನಾಡಿರುವ ಕೇಂದ್ರ ಸಚಿವ ಅಶ್ಚಿನಿ ವೈಷ್ಣವ್ ಅವರು, ಭಾರತ ತನ್ನದೇ ಆದ ಎಐ ಮಾದರಿಯನ್ನು ಈ ವರ್ಷವೇ ಬಿಡುಗಡೆ ಮಾಡಲಿದೆ. ಭಾರತದಲ್ಲಿ ಆರು ಮಂದಿ ಬಹುದೊಡ್ಡ ಡೆವಲಪರ್‌ಗಳಿದ್ದಾರೆ. ಅವರು 6-8 ತಿಂಗಳಲ್ಲಿ AI ಮಾದರಿಗಳನ್ನು ರಚಿಸಬಹುದು. ಪರಿಸರ ವ್ಯವಸ್ಥೆಯನ್ನು ರಚಿಸಲು, ಸಾಮಾನ್ಯ ಕಂಪ್ಯೂಟ್ ಸೌಲಭ್ಯಕ್ಕಾಗಿ ನಮ್ಮದೇ ಪ್ರಬಲವಾದ AI ಮಾದರಿ ಅಭಿವೃದ್ಧಿಪಡಿಸುವುದು ಅತ್ಯಂತ ಮುಖ್ಯವಾಗಿದೆ ಎಂದಿದ್ದಾರೆ.
🇮🇳 Union IT Minister Ashwini Vaishnaw announced that India will develop its own foundational AI model !
— Ajay Kashyap (@EverythingAjay) January 30, 2025
🇮🇳 India will launch its own GenAI model in the next 6-8 months as Indian Govt. has secured over 12,000 Nvidia H100 GPUs, the most powerful chips, for the AI Compute Facility pic.twitter.com/oZdyCA9ixg
ಭಾರತದ AI ಮಿಷನ್ ಅನ್ನು ಗಮನದಲ್ಲಿಟ್ಟುಕೊಂಡು, ಹಂಚಿಕೆಯ ಕಂಪ್ಯೂಟಿಂಗ್ ಸಂಪನ್ಮೂಲಗಳನ್ನು ಸ್ಥಾಪಿಸಲು ಸರ್ಕಾರವು ಆದ್ಯತೆ ನೀಡಿದೆ. ಭಾರತ ಎಐ ಕಂಪ್ಯೂಟ್ ಸೌಲಭ್ಯವು ನಿರೀಕ್ಷೆಗಳನ್ನು ಮೀರಿದೆ ಮತ್ತು ಸುಮಾರು 19,000 ಜಿಪಿಯುಗಳನ್ನು ಪಡೆದುಕೊಂಡಿದೆ. ಇವುಗಳಲ್ಲಿ 12,896 Nvidia H100 GPU ಮತ್ತು 1,480 Nvidia H200 GPU ಇವೆ. ಅವುಗಳ ಪೈಕಿ 10,000 ಜಿಪಿಯುಗಳು ಈಗ ಬಳಕೆಗೆ ಸಿದ್ಧವಾಗಿವೆ. ಈ ಸೌಲಭ್ಯವು ಎಲ್ಲರಿಗೂ ಮುಕ್ತವಾಗಲಿದ್ದು, ಮುಂದಿನ ದಿನಗಳಲ್ಲಿ ಇದರ ಕಾರ್ಯಾಚರಣೆ ಆರಂಭವಾಗಲಿದೆ ಎಂದು ಹೇಳಿದ್ದಾರೆ.
ಭಾರತವು ತನ್ನದೇ ಆದ ಫೌಂಡೇಶನ್ ಎಐ(AI foundation) ಮಾದರಿಯನ್ನು ಸಿದ್ಧಪಡಿಸುತ್ತದೆ. ಈ ಮಾದರಿಯು 6-8 ತಿಂಗಳಲ್ಲಿ ಸಿದ್ಧವಾಗಲಿದೆ. ಭಾರತದ ಭಾಷಾ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಅದರ ಡೇಟಾಸೆಟ್ ಅನ್ನು ಸಿದ್ಧಪಡಿಸಲಾಗುತ್ತದೆ. AI ಮಾದರಿಗಳನ್ನು ರಚಿಸಲು ಆಸಕ್ತಿ ಹೊಂದಿರುವ ಡೆವಲಪರ್‌ಗಳು ತಮ್ಮ ಪ್ರಸ್ತಾವನೆಗಳನ್ನು ಸಲ್ಲಿಸಲು ಅವಕಾಶವಿದೆ ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ:2036ರ ಒಲಿಂಪಿಕ್ಸ್ ಆತಿಥ್ಯಕ್ಕೆ ಭಾರತದಿಂದ ಎಲ್ಲಾ ಪ್ರಯತ್ನ: ಪ್ರಧಾನಿ ಮೋದಿ
2023ರ ಕೊನೆಯಲ್ಲಿOpenAI, ChatGPT ಅನ್ನು ಪ್ರಾರಂಭಿಸುವ ಮೂಲಕ AI ಯುಗ ಪ್ರಾರಂಭವಾಯಿತು. ಈ ರೇಸ್‌ನಲ್ಲಿ ಇದೀಗ ಚೀನಾದ ಸ್ಟಾರ್ಟ್‌ಅಪ್ DeepSeek ಸೇರಿದೆ. ಚೀನಾವು ಅಮೆರಿಕನ್ ಕಂಪನಿಗಳಿಗಿಂತ ಕಡಿಮೆ ವೆಚ್ಚದಲ್ಲಿ AI ಮಾದರಿಗಳನ್ನು ಅಭಿವೃದ್ಧಿಪಡಿಸುವ ಮೂಲಕ ವಿಶ್ವದ ದೊಡ್ಡಣ್ಣ ಅಮೆರಿಕಗೆ ಬಿಗ್ ಶಾಕ್ ನೀಡಿದೆ. ಸದ್ಯ ಅಮೆರಿಕ-ಚೀನಾ ನಡುವೆ ಎಐ ರೇಸ್‌ನಲ್ಲಿ ತೀವ್ರ ಪೈಪೋಟಿ ನಡೆದಿರುವ ಬೆನ್ನಲ್ಲೇ ಇದೀಗ ಭಾರತವೂ ಸಹ ಎಐ ರೇಸ್‌ಗೆ ಸಜ್ಜಾಗಿದೆ.