ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕೇರಳಂ ಮಾಜಿ ಸಿಎಂ ಪಿಣರಾಯಿ ವಿಜಯನ್ ಬೆಂಬಲಿಗರಿಂದ ಇಡಿ ಅಧಿಕಾರಿಗಳ ಕಾರಿನ ಮೇಲೆ ದಾಳಿ: ವಿಡಿಯೊ ಇಲ್ಲಿದೆ

Attack on ED officials: ಕೇರಳಂ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮನೆಯನ್ನು ಶೋಧಿಸಲು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬಂದ ಸಂದರ್ಭದಲ್ಲಿ ಹೈಡ್ರಾಮವೇ ನಡೆದಿದೆ. ಪಿಣರಾಯಿ ಅವರ ಬೆಂಬಲಿಗರು ದಾಳಿ ನಡೆಸಿದ್ದು,ಓರ್ವ ಪೊಲೀಸ್ ಅಧಿಕಾರಿ ಗಾಯಗೊಂಡಿದ್ದಾರೆ. ಜನಸಮೂಹವು ತನಿಖಾ ಸಂಸ್ಥೆಯ ಬಿಳಿ ಎಸ್‌ಯುವಿ ಕಾರನ್ನು ಸುತ್ತುವರೆದು ಅದರ ವಿಂಡ್ ಷೀಲ್ಡ್ ಅನ್ನು ಪುಡಿ ಮಾಡಿದೆ.

ತಿರುವನಂತಪುರಂನಲ್ಲಿ ಪಿಣರಾಯಿ ವಿಜಯನ್ ಬೆಂಬಲಿಗರಿಂದ ಇಡಿ ಅಧಿಕಾರಿಗಳ ಕಾರಿನ ಮೇಲೆ ದಾಳಿ

ತಿರುವನಂತಪುರಂ, ಮೇ 27: ಕೇರಳಂನ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Keralam Former CM Pinarayi Vijayan) ಅವರ ಮನೆಯನ್ನು ಶೋಧಿಸಲು ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಬಂದ ಸಂದರ್ಭದಲ್ಲಿ ಅವರ ಬೆಂಬಲಿಗರು ನಡೆಸಿದ ದಾಳಿಯಲ್ಲಿ ಒಬ್ಬ ಪೊಲೀಸ್ ಅಧಿಕಾರಿ ಗಾಯಗೊಂಡಿದ್ದಾರೆ. ಕೇಂದ್ರ ಪೊಲೀಸ್ ಪಡೆಯ ಸಿಬ್ಬಂದಿಗೂ ಚಪ್ಪಲಿಗಳಿಂದ ಹಲ್ಲೆ ನಡೆಸಲಾಗಿದೆ. ಕ್ಯಾಮರಾದಲ್ಲಿ ಘರ್ಷಣೆಯ ವಿಡಿಯೊ ಸೆರೆಯಾಗಿದ್ದು, ಬೃಹತ್ ಜನಸಮೂಹವು ತನಿಖಾ ಸಂಸ್ಥೆಯ ಬಿಳಿ ಎಸ್‌ಯುವಿ ಕಾರನ್ನು ಸುತ್ತುವರೆದು ಅದರ ವಿಂಡ್ ಷೀಲ್ಡ್ ಅನ್ನು ಪುಡಿ ಮಾಡಿರುವುದು ಕಂಡು ಬಂದಿದೆ.

ದೃಶ್ಯಗಳಲ್ಲಿ, ವಿಜಯನ್ ಅವರ ಮನೆಯ ಹೊರಭಾಗದಲ್ಲಿ ಜಮಾಯಿಸಿದ್ದ ಮತ್ತೊಂದು ಗುಂಪು, ಭದ್ರತಾ ರಕ್ಷಣೆಗಾಗಿ ಇಡಿ (ED) ಅಧಿಕಾರಿಗಳೊಂದಿಗೆ ಬಂದಿದ್ದ ಕೇಂದ್ರ ರಿಸರ್ವ್ ಪೊಲೀಸ್ ಪಡೆ (CRPF) ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸುತ್ತಿರುವುದು ಕಾಣಿಸಿಸುತ್ತಿದೆ. ಕೆಲ ಪೊಲೀಸರು ಗಾಯಗೊಂಡಿದ್ದ ತಮ್ಮ ಸಹೋದ್ಯೋಗಿಯನ್ನು ಸುತ್ತುವರಿದು, ಅವರ ಕೈಗೆ ಬಟ್ಟೆ ಕಟ್ಟಲು ಸಹಾಯ ಮಾಡಿದರು.

ಇಲ್ಲಿದೆ ವಿಡಿಯೊ:





ಕೇರಳಂನಲ್ಲಿ ಕರ್ತವ್ಯದಲ್ಲಿದ್ದಾಗ ತಮ್ಮ ತಂಡದ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸುವುದಾಗಿ ಇಡಿ ಮೂಲಗಳು ತಿಳಿಸಿವೆ. ದಾಳಿಯಲ್ಲಿ ಕೇಂದ್ರ ತನಿಖಾ ಸಂಸ್ಥೆಯ ವಾಹನಗಳು ಹಾನಿಗೊಳಗಾಗಿವೆ ಎಂದು ಅವರು ಹೇಳಿದೆ. ʼʼಕೇರಳಂನಲ್ಲಿ ಕರ್ತವ್ಯದಲ್ಲಿದ್ದಾಗ ನಮ್ಮ ತಂಡದ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ಪೊಲೀಸ್ ಪ್ರಕರಣ ದಾಖಲಿಸುತ್ತೇವೆʼʼ ಎಂದು ಇಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ʼʼದಾಳಿಯಲ್ಲಿ ಕೇಂದ್ರ ತನಿಖಾ ಸಂಸ್ಥೆಯ ವಾಹನಗಳು ಹಾನಿಗೊಳಗಾಗಿವೆʼʼ ಎಂದು ಅವರು ಹೇಳಿದ್ದಾರೆ.

ವಿವಾದದ ಕಿಡಿ ಹೊತ್ತಿಸಿದ ಕೇರಳಂ ಸಿಎಂ ಗುರುವಾಯೂರು ದೇವಸ್ಥಾನ ಭೇಟಿ: ಹೈಕೋರ್ಟ್ ಆದೇಶ ಉಲ್ಲಂಘನೆ ಎಂದ ಬಿಜೆಪಿ

ಯಾವುದೇ ಇಡಿ ಅಧಿಕಾರಿ ಗಾಯಗೊಂಡಿಲ್ಲ ಎಂದು ಮೂಲಗಳು ತಿಳಿಸಿವೆ. ಪಿಣರಾಯಿ ವಿಜಯನ್‌ ಅವರ ಪುತ್ರಿ ವೀಣಾ ವಿಜಯನ್ ಅವರಿಗೆ ಸೇರಿದ ಸಂಸ್ಥೆ ಎಕ್ಸಾಲಾಜಿಕ್ಸ್‌ ಮತ್ತು ಸಿಎಂಆರ್‌ಎಲ್‌ ಪ್ರಕರಣದ ಇಡಿ ತನಿಖೆಗೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್ ನೀಡಿದ್ದ ತಡೆ ಆದೇಶವನ್ನು ಹಿಂಪಡೆಯುತ್ತಿದ್ದಂತೆಯೇ ಇಡಿ ಈ ಕ್ರಮ ಕೈಗೊಂಡಿದೆ. ಬುಧವಾರ ಇಡಿ ಅಧಿಕಾರಿಗಳು ಕನಿಷ್ಠ ಏಳು ಗಂಟೆಗಳ ಕಾಲ ತಿರುವನಂತಪುರಂನಲ್ಲಿರುವ ವಿಜಯನ್ ಅವರ ಬಾಡಿಗೆ ಮನೆ, ಕಣ್ಣೂರಿನ ಮನೆ ಹಾಗೂ ವೀಣಾ ವಿಜಯನ್ ಅವರ ಪತಿ ಮತ್ತು ಬೇಪೂರ್ ಶಾಸಕ, ಮಾಜಿ ಸಚಿವ ಪಿ.ಎ. ಮೊಹಮ್ಮದ್ ರಿಯಾಸ್ ಅವರ ಕೋಝಿಕ್ಕೋಡ್ ಮನೆಯನ್ನು ಪರಿಶೀಲಿಸಿದರು.

ಸಿಪಿಐ(ಎಂ) ಕಾರ್ಯಕರ್ತರ ಗುಂಡಾಗಿರಿ

ಕೋಝಿಕ್ಕೋಡ್‌ನಲ್ಲೂ, ಪ್ರತಿಭಟನೆಗಳ ನಡುವೆ ರಿಯಾಸ್ ಮನೆಯಿಂದ ಇಡಿ ಅಧಿಕಾರಿಗಳನ್ನು ಸುರಕ್ಷಿತವಾಗಿ ಕರೆದೊಯ್ಯಲು ಪೊಲೀಸ್ ಅಧಿಕಾರಿಗಳು ಹೆಣಗಾಡಿದರು. ತಿರುವನಂತಪುರಂನಲ್ಲಿ ನಡೆದ ದಾಳಿಯ ಸಮಯದಲ್ಲಿ ಸಿಪಿಐ(ಎಂ)ನ ಕೆಲವು ಕಾರ್ಯಕರ್ತರು ಸಿಆರ್‌ಪಿಎಫ್ ಸಿಬ್ಬಂದಿಯ ಮೇಲೆ ಖಾಲಿ ಬಾಟಲಿಗಳನ್ನು ಎಸೆದ ನಂತರ ಘರ್ಷಣೆ ಉಲ್ಬಣಗೊಂಡಿತು. ಕೆಲವೇ ಕ್ಷಣಗಳಲ್ಲಿ ಅವರು ಇಡಿ ವಾಹನದ ವಿಂಡ್ ಶೀಲ್ಡ್ ಅನ್ನು ಪುಡಿಪುಡಿ ಮಾಡಿದರು.

ರಾಜಕೀಯ ವಿರೋಧಿಗಳನ್ನು ಗುರಿಯಾಗಿಸಲು ಕೇಂದ್ರವು ತನಿಖಾ ಸಂಸ್ಥೆಯನ್ನು ಬಳಸುತ್ತಿದೆ ಎಂದು ವಿಜಯನ್ ಆರೋಪಿಸಿದರು. “ಬಿಜೆಪಿ ಸರ್ಕಾರ ಯಾವಾಗಲೂ ರಾಜಕೀಯ ವಿರೋಧಿಗಳನ್ನು ಗುರಿಯಾಗಿಸಿಕೊಂಡಿದೆ. ಕಾಂಗ್ರೆಸ್ ಕೂಡ ತಮ್ಮ ನಾಯಕರಲ್ಲದಿದ್ದರೆ ಯಾವುದೇ ಸಮಸ್ಯೆ ಇಲ್ಲ ಎಂಬ ನಿಲುವನ್ನು ತೆಗೆದುಕೊಂಡಿದೆ. ಆದರೆ ನಾವು ಭಯಭೀತರಾಗುವುದಿಲ್ಲ” ಎಂದು ಅವರು ಹೇಳಿದರು.