ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Uttarakhand Avalanche: ಬದರಿನಾಥದಲ್ಲಿ ಭಾರೀ ದುರಂತ; ಹಿಮಕುಸಿದು 40ಕ್ಕೂ ಅಧಿಕ ಕಾರ್ಮಿಕರು ಟ್ರ್ಯಾಪ್‌!

ಉತ್ತರಾಖಂಡದ ಬದರಿನಾಥ ಧಾಮದಲ್ಲಿ ಭಾರೀ ಹಿಮಪಾತ ಸಂಭವಿಸಿದ್ದು, 40ಕ್ಕೂ ಹೆಚ್ಚು ಕಾರ್ಮಿಕರು ಹಿಮದಡಿಯಲ್ಲಿ ಸಿಲುಕಿದ್ದಾರೆ. ಸ್ಥಳದಲ್ಲಿ ರಕ್ಷಣಾ ಕಾರ್ಯಚರಣೆ ನಡೆಯುತ್ತಿದೆ. ಮಾನಾದ ಗಡಿ ಪ್ರದೇಶದ ಗಡಿ ರಸ್ತೆಗಳ ಸಂಸ್ಥೆ (ಬಿಆರ್‌ಒ) ಶಿಬಿರದ ಬಳಿ ಈ ದುರಂತ ಸಂಭವಿಸಿದೆ. ಕಳೆದ 48 ಗಂಟೆಗಳಲ್ಲಿ ಈ ಪ್ರದೇಶದಲ್ಲಿ ಭಾರೀ ಹಿಮಪಾತ ಸಂಭವಿಸಿ ನಂತರ ಹಿಮನದಿ ಕುಸಿದಿದೆ.

ಭಾರೀ ಹಿಮಪಾತ;  40ಕ್ಕೂ ಅಧಿಕ ಕಾರ್ಮಿಕರು ಟ್ರ್ಯಾಪ್‌

Profile Rakshita Karkera Feb 28, 2025 2:44 PM

ಡೆಹ್ರಾಡೂನ್‌: ಉತ್ತರಾಖಂಡದ ಬದರಿನಾಥ ಧಾಮದಲ್ಲಿ ಭಾರೀ ಹಿಮಪಾತ(Uttarakhand Avalanche)ಸಂಭವಿಸಿದ್ದು, 40ಕ್ಕೂ ಹೆಚ್ಚು ಕಾರ್ಮಿಕರು ಹಿಮದಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ರಾಜ್ಯದ ಮಾನಾವನ್ನು ಘಸ್ಟೋಲಿಯಿಂದ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಮಾನಾದ ಗಡಿ ಪ್ರದೇಶದ ಗಡಿ ರಸ್ತೆಗಳ ಸಂಸ್ಥೆ (ಬಿಆರ್‌ಒ) ಶಿಬಿರದ ಬಳಿ ಈ ದುರಂತ ಸಂಭವಿಸಿದೆ. ಕಳೆದ 48 ಗಂಟೆಗಳಲ್ಲಿ ಈ ಪ್ರದೇಶದಲ್ಲಿ ಭಾರೀ ಹಿಮಪಾತ ಸಂಭವಿಸಿ ನಂತರ ಹಿಮ ನದಿಗೆ ಕುಸಿದಿದೆ. ರಸ್ತೆ ನಿರ್ಮಾಣಕ್ಕಾಗಿ ಖಾಸಗಿ ಗುತ್ತಿಗೆದಾರ ನೇಮಿಸಿಕೊಂಡಿದ್ದ ಕಾರ್ಮಿಕರು ಹಿಮದಡಿಯಲ್ಲಿ ಸಿಲುಕಿದ್ದಾರೆ. ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ.



ವಿಪತ್ತು ನಿರ್ವಹಣಾ ಕಾರ್ಯದರ್ಶಿ ವಿನೋದ್ ಸುಮನ್ ಮಾಹಿತಿ ನೀಡಿದ್ದು, ಭಾರೀ ಹಿಮಪಾತದಿಂದಾಗಿ 57 ಕಾರ್ಮಿಕರು ಹಿಮದ ಅಡಿಯಲ್ಲಿ ಸಿಲುಕಿಕೊಂಡಿದ್ದರು. ಆಡಳಿತ ಮತ್ತು ಬಿಆರ್‌ಒ ತಂಡಗಳು ರಕ್ಷಣಾ ಕಾರ್ಯಾಚರಣೆ ನಡೆಸಲು ಸ್ಥಳಕ್ಕೆ ಧಾವಿಸಿ 16 ಕಾರ್ಮಿಕರನ್ನು ಯಶಸ್ವಿಯಾಗಿ ರಕ್ಷಿಸಿವೆ. ಇತರ 41 ಜನರಿಗಾಗಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.