ಲಖನೌ: ಉತ್ತರಪ್ರದೇಶದ(Uttar Pradesh) ಪ್ರಯಾಗ್‌ರಾಜ್‌ನಲ್ಲಿ(Prayagraj) ಜಗತ್ತಿನ ಅತಿದೊಡ್ಡ ಧಾರ್ಮಿಕ ಉತ್ಸವವಾದ ಕುಂಭಮೇಳ(Mahakumbh 2025) ನಡೆಯುತ್ತಿದ್ದು,ಕೋಟ್ಯಂತರ ಭಕ್ತರು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡುತ್ತಿದ್ದಾರೆ. ಬಳಿಕ ಭಕ್ತರು ನೇರವಾಗಿ ಅಯೋಧ್ಯೆಗೆ ಬರುತ್ತಿದ್ದು, ಅಲ್ಲಿ ಶ್ರೀರಾಮ ಮತ್ತು ಹನುಮಂತನ ದರ್ಶನ ಪಡೆಯುತ್ತಿದ್ದಾರೆ. ಕುಂಭಮೇಳದಿಂದಾಗಿ ಕಳೆದ ಒಂದು ತಿಂಗಳಿನಿಂದ ಅಯೋಧ್ಯೆಯಲ್ಲಿ ಭಕ್ತರ ಸಂಖ್ಯೆ ಏರಿದ್ದು,ಇದೀಗ ದರ್ಶನಕ್ಕಾಗಿ ಅಯೋಧ್ಯೆ ನಗರವನ್ನು ಆರು ಜೋನ್‌ಗಳಾಗಿ ವಿಂಗಡಿಸಲಾಗಿದೆ. ಹೆಚ್ಚು ಭಕ್ತರು ಬರುತ್ತಿರುವುದರಿಂದ ಜನಸಂದಣಿಯನ್ನು ನಿಯಂತ್ರಿಸಲು ಅಯೋಧ್ಯೆಯಲ್ಲಿ ಭದ್ರತೆಯನ್ನು ಕೂಡ ಹೆಚ್ಚಿಸಲಾಗಿದೆ.
ಅಯೋಧ್ಯೆಯು ಮಹಾ ಕುಂಭಮೇಳದಿಂದ 160 ಕಿಲೋ ಮೀಟರ್ ದೂರದಲ್ಲಿದೆ. ಅಯೋಧ್ಯೆ ನಗರಕ್ಕೆ ಸಹಸ್ರಾರು ಭಕ್ತರು ಬರುತ್ತಿರುವುದರಿಂದ ಜನಸಂದಣಿಯನ್ನು ನಿಯಂತ್ರಿಸಲು ಅಯೋಧ್ಯೆಯಲ್ಲಿ ಬಿಗಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಉತ್ತಮ ಕಾರ್ಯ ನಿರ್ವಹಣೆಗಾಗಿ ಅಯೋಧ್ಯಾ ನಗರವನ್ನು ಆರು ವಲಯಗಳಾಗಿ ವಿಂಗಡಿಸಲಾಗಿದೆ ಎಂದು ಅಯೋಧ್ಯಾ ಪೊಲೀಸ್ ವರಿಷ್ಠಾಧಿಕಾರಿ ಮಧುವನ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಅಯೋಧ್ಯೆಯಲ್ಲಿ ಭದ್ರತಾ ವ್ಯವಸ್ಥೆಗಳು
ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಮಹಾ ಕುಂಭಮೇಳ ಆರಂಭವಾದಾಗಿನಿಂದ, ಕುಂಭಮೇಳದಲ್ಲಿ ಸ್ನಾನ ಮಾಡಲು ಹೋಗುವ ಜನರು ಅಯೋಧ್ಯಾ ಧಾಮದಲ್ಲಿ ಭಗವಾನ್ ಶ್ರೀರಾಮ ಮತ್ತು ಹನುಮಾನ್ ದರ್ಶನ ಪಡೆಯಲು ಇಲ್ಲಿಗೆ ಬಂದಿದ್ದಾರೆ. ಬೆಳಗ್ಗೆಯಿಂದಲೇ ಲಕ್ಷಾಂತರ ಭಕ್ತರು ಸರಯೂ ನದಿಯಲ್ಲಿ ದರ್ಶನ ಪಡೆಯಲು ಮತ್ತು ಸ್ನಾನ ಮಾಡಲು ಇಲ್ಲಿಗೆ ಬರುತ್ತಿದ್ದಾರೆ ಎಂದು ಮಧುವನ್ ಕುಮಾರ್ ಸಿಂಗ್ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಮಹಾ ಕುಂಭಮೇಳದಲ್ಲಿ ವೃದ್ಧ ದಂಪತಿ ಫುಲ್ ಎಂಜಾಯ್! ಇವರ ಜೋಶ್‌ಗೆ ನೋಡುಗರು ಫಿದಾ
ಭಕ್ತರಿಗೆ ಯಾವುದೇ ತೊಂದರೆಗಳು ಎದುರಾಗದಂತೆ ನೋಡಿಕೊಳ್ಳಲು ಕೈಗೊಳ್ಳಲಾದ ಭದ್ರತಾ ಕ್ರಮಗಳ ಬಗ್ಗೆ ಹೇಳಿದ ಮಧುವನ್ ಕುಮಾರ್ ಸಿಂಗ್, ವಿವಿಧ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಭಕ್ತರಿಗಾಗಿ ವಿಶೇಷವಾಗಿ ಮಾರ್ಗವನ್ನು ರಚಿಸಲಾಗಿದೆ ಎಂದರು. ಭದ್ರತೆಯ ದೃಷ್ಟಿಯಿಂದ, ಇಡೀ ಅಯೋಧ್ಯಾ ಧಾಮವನ್ನು ಆರು ವಲಯಗಳಾಗಿ ವಿಂಗಡಿಸಲಾಗಿದೆ. ಅಲ್ಲಿ ಇನ್ಸ್‌ಪೆಕ್ಟರ್, ಡೆಪ್ಯೂಟಿ ಇನ್ಸ್‌ಪೆಕ್ಟರ್, ಕಾನ್‌ಸ್ಟೆಬಲ್ ಮತ್ತು ಮಹಿಳಾ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.