Viral Video: ಮಹಾ ಕುಂಭಮೇಳದಲ್ಲಿ ವೃದ್ಧ ದಂಪತಿ ಫುಲ್ ಎಂಜಾಯ್! ಇವರ ಜೋಶ್‌ಗೆ ನೋಡುಗರು ಫಿದಾ
ಮಹಾಕುಂಭಮೇಳಕ್ಕೆ ಆಗಮಿಸಿದ ವೃದ್ಧ ದಂಪತಿ ತ್ರಿವೇಣಿ ಸಂಗಮದಲ್ಲಿ ಅಮೃತ ಸ್ನಾನ ಮಾಡಿದ ಬಳಿಕ ಖುಷಿಯಿಂದ ನೃತ್ಯ ಮಾಡಿದ್ದಾರೆ. ದಂಪತಿ ಭಕ್ತಿಯಿಂದ ಕುಣಿದ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral Video) ಆಗಿದೆ. ನೆಟ್ಟಿಗರು ದಂಪತಿಯನ್ನು ಕೃಷ್ಣ-ರುಕ್ಮಿಣಿಗೆ ಹೋಲಿಸಿದ್ದಾರೆ.

ಕುಂಭಮೇಳದಲ್ಲಿ ಮನಸೆಳೆದ ʼಕೃಷ್ಣ ರುಕ್ಮಿಣಿʼ ನೃತ್ಯ

ಲಖನೌ: ಉತ್ತರಪ್ರದೇಶದ ಪ್ರಯಾಗ್‍ರಾಜ್‍ನಲ್ಲಿ ಮಹಾಕುಂಭ ಮೇಳದಲ್ಲಿ ನಡೆದ ಹಲವು ಘಟನೆಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಹರಿದಾಡುತ್ತಿರುತ್ತದೆ. ಇದೀಗ ತ್ರಿವೇಣಿ ಸಂಗಮದಲ್ಲಿ ವೃದ್ಧ ದಂಪತಿ ಸಂತೋಷ ಮತ್ತು ಭಕ್ತಿಯಿಂದ ನೃತ್ಯ ಮಾಡಿದ್ದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಇನ್‌ಸ್ಟಾಗ್ರಾಂನಲ್ಲಿ ವೈರಲ್ ವಿಡಿಯೊದಲ್ಲಿ ದಂಪತಿ ಇಬ್ಬರು ಕೈಕೈ ಹಿಡಿದುಕೊಂಡು ಸಂತೋಷದಿಂದ ಕುಣಿಯುವುದನ್ನು ಸೆರೆಹಿಡಿಯಲಾಗಿದೆ. ಈ ರೀಲ್ ಜನರ ಮುಖದಲ್ಲಿ ನಗುವನ್ನು ಮೂಡಿಸಿದೆ ಮತ್ತು ಅವರಿಗೆ “ಕೃಷ್ಣ ರುಕ್ಮಿಣಿ"ಯನ್ನು ನೋಡಿದಷ್ಟೇ ಸಂತೋಷವಾಗಿದೆ ಎನ್ನಲಾಗಿದೆ. ಸಾಂಪ್ರದಾಯಿಕ ಮಹಾರಾಷ್ಟ್ರದ ಉಡುಪನ್ನು ಧರಿಸಿದ ವೃದ್ಧ ದಂಪತಿ ಮಹಾ ಕುಂಭಮೇಳಕ್ಕೆ ಭೇಟಿ ನೀಡಿದಾಗ ಉತ್ಸಾಹದಿಂದ ಕುಣಿದು ಕುಪ್ಪಳಿಸಿದ್ದಾರೆ ಎನ್ನಲಾಗಿದೆ.
ವೈರಲ್ ವಿಡಿಯೊದಲ್ಲಿ ದಂಪತಿ 'ಫುಗ್ಡಿ' ನೃತ್ಯ ಪ್ರದರ್ಶಿಸಿದ್ದಾರೆ. ನೃತ್ಯ ಮಾಡುವಾಗ ಹೆಜ್ಜೆಯನ್ನು ಹಾಕಲು ಹೆಂಡತಿ ತನ್ನ ಗಂಡನ ಕೈಗಳನ್ನು ಹಿಡಿದಿದ್ದಾಳೆ. ಮಹಾರಾಷ್ಟ್ರ ಮತ್ತು ಗೋವಾದ ವಿಶಿಷ್ಟ ಶೈಲಿಯ ನೃತ್ಯಕ್ಕೆ ದಂಪತಿ ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ. ನೃತ್ಯದ ಕೊನೆಯಲ್ಲಿ, ಹೆಂಡತಿ ತನ್ನ ಗಂಡನ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದಿದ್ದಾಳೆ.
ವೃದ್ಧ ದಂಪತಿ ಪ್ರಯಾಗ್‍ರಾಜ್‍ನಲ್ಲಿ ನೃತ್ಯ ಮಾಡುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ಅನೇಕ ಜನರು ಇದನ್ನು ಶೇರ್ ಮಾಡಿದ್ದಾರೆ. ಈ ವೈರಲ್ ಡ್ಯಾನ್ಸ್‌ಗೆ ಸಿಕ್ಕಾಪಟ್ಟೆ ಜನ ಕಾಮೆಂಟ್ ಮಾಡಿದ್ದಾರೆ. "ಮುಗ್ಧ ಪ್ರೀತಿ. ಅವರು ಮೋಕ್ಷವನ್ನು ಪಡೆಯಲಿ" ಎಂದು ಒಬ್ಬರು ಬರೆದಿದ್ದಾರೆ. "ತುಂಬಾ ಅದ್ಭುತ" ಎಂದು ಇನ್ನೊಬ್ಬರು ಕರೆದಿದ್ದಾರೆ ಮತ್ತು ಅವರು ದಂಪತಿ ಒಟ್ಟಿಗೆ ಕೈ ಕೈ ಹಿಡಿದು ಕುಣಿಯುವುದನ್ನು ಕಂಡು ಭಗವಾನ್ ವಿಠ್ಠಲ ಮತ್ತು ಅವರ ದೈವಿಕ ಪತ್ನಿ ರುಕ್ಮಿಣಿಯನ್ನು ನೆನಪಿಸಿಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ: Viral Video: ನಾ ನಿನ್ನ ಬಿಡಲಾರೆ... ಕುಂಭಮೇಳದಲ್ಲಿ ಗಮನ ಸೆಳೆದ ದಂಪತಿ- ವಿಡಿಯೊ ನೋಡಿ
ಉತ್ತರ ಪ್ರದೇಶದ ಪ್ರಯಾಗ್‍ರಾಜ್‍ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳ ನೋಡಲು ಲಕ್ಷಾಂತರ ಭಕ್ತರು ಸೇರುತ್ತಾರೆ. ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳು ಸೇರುವ ಪವಿತ್ರ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿ ಪುನೀತರಾಗಲು ವಿಶ್ವದಾದ್ಯಂತ ಲಕ್ಷಾಂತರ ಜನರು ಆಗಮಿಸುತ್ತಿದ್ದಾರೆ. ಈ ಜನಸಂದಣಿಯಲ್ಲಿ ನಮ್ಮವರನ್ನು ಹುಡುಕುವುದು ಬಹಳ ಕಷ್ಟದ ಕೆಲಸ. ಅದಕ್ಕಾಗಿ ಮಹಾಕುಂಭಮೇಳಕ್ಕೆ ಬಂದ ದಂಪತಿ ಬೇರೆ ಬೇರೆಯಾಗುವುದನ್ನು ತಡೆಯಲು ಒಂದು ಸೂಪರಾದ ಟ್ರಿಕ್ಸ್ ಫಾಲೋ ಮಾಡಿದ್ದಾರೆ. ಅದರ ವಿಡಿಯೊ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral Video) ಆಗಿದೆ.
ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾದ ಈ ಹೃದಯಸ್ಪರ್ಶಿ ರೀಲ್‍ನಲ್ಲಿ ಮಹಾಕುಂಭದಲ್ಲಿ ದಂಪತಿ ಒಗ್ಗಟ್ಟಿನ ಸಾರವನ್ನು ಸೆರೆಹಿಡಿಯಲಾಗಿದೆ. ದಟ್ಟವಾದ ಜನಸಮೂಹದಲ್ಲಿ ಬೇರ್ಪಡುವ ಭಯದಿಂದ ದಂಪತಿ ಒಂದು ವಿಶಿಷ್ಟ ಉಪಾಯವನ್ನು ಮಾಡಿದ್ದಾರೆ. ಅದೇನೆಂದರೆ ಅವರು ತಮ್ಮನ್ನು ಹಗ್ಗದಿಂದ ಕಟ್ಟಿಕೊಂಡಿದ್ದಾರೆ. ಹಗ್ಗದ ಒಂದು ತುದಿಯನ್ನು ಪತಿ ಸೊಂಟಕ್ಕೆ ಕಟ್ಟಿಕೊಂಡರೆ ಇನ್ನೊಂದು ತುದಿಯನ್ನು ಪತ್ನಿ ಸೊಂಟಕ್ಕೆ ಕಟ್ಟಿಕೊಂಡಿದ್ದಾಳೆ. ಅಲ್ಲದೇ ಈ ವಿಡಿಯೊದಲ್ಲಿ ದಂಪತಿ ಕೈ ಕೈ ಹಿಡಿದು ನಡೆದಿದ್ದು ಸೆರೆಯಾಗಿದೆ. ಅವರು ಪವಿತ್ರ ಸ್ನಾನ ಮಾಡುವಾಗ ಕೂಡ ಈ ಹಗ್ಗವನ್ನು ಕಟ್ಟಿಕೊಂಡಿದ್ದರು ಎನ್ನಲಾಗಿದೆ. ಮಹಾಕುಂಭದಲ್ಲಿ ಭಾಗವಹಿಸಿದ ಈ ದಂಪತಿಯ ಈ ವಿಶಿಷ್ಟ ಕ್ರಮ ಅವರ ನಡುವಿನ ಪ್ರೀತಿ, ಕಾಳಜಿಯನ್ನು ವ್ಯಕ್ತಪಡಿಸುತ್ತದೆ. ಹಾಗಾಗಿ ಇದು ಎಲ್ಲರ ಗಮನವನ್ನು ಸೆಳೆದಿದೆ.