ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bahubali Rocket Launch: ಅತ್ಯಂತ ಭಾರದ ಬಾಹುಬಲಿ ರಾಕೆಟ್ ಉಡಾವಣೆಗೆ ಇಸ್ರೋ ಸಜ್ಜು

ಅತ್ಯಂತ ಭಾರದ ಉಪಗ್ರಹ ಉಡಾವಣೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಜ್ಜಾಗಿದೆ. ಬೃಹತ್ 'ಬಾಹುಬಲಿ' (Bahubali Rocket Launch) ರಾಕೆಟ್ ಲಾಂಚ್ ವೆಹಿಕಲ್ ಮಾರ್ಕ್-3 (LVM-3) ಭಾನುವಾರ (ನವೆಂಬರ್‌ 1) ಸಂಜೆ 5.26ಕ್ಕೆ ಆಂಧ್ರ ಪ್ರದೇಶದ ಶ್ರೀ ಹರಿಕೋಟಾದಲ್ಲಿರುವ ಭಾರತದ ಬಾಹ್ಯಾಕಾಶ ಬಂದರಿನಿಂದ ನಭಕ್ಕೆ ಜಿಗಿಯಲಿದೆ. ಭಾರತೀಯ ನೌಕಾಪಡೆಯು ಸಂವಹನ ನಡೆಸಲು ಮತ್ತು ದೇಶವನ್ನು ರಕ್ಷಿಸಲು ಸಹಾಯ ಮಾಡಲು ಮೀಸಲಾಗಿರುವ ಉಪಗ್ರಹವನ್ನು ಹೊತ್ತೊಯ್ಯಲಿರುವ 'ಬಾಹುಬಲಿ' ರಾಕೆಟ್ ಲಾಂಚ್ ವೆಹಿಕಲ್ ಮಾರ್ಕ್-3 (LVM-3) ವಿಶೇಷತೆ ಏನು, ಇದು ಹೇಗೆ ಕಾರ್ಯ ನಿರ್ವಹಿಸಲಿದೆ ಎಂಬುದರ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಬಾಹುಬಲಿ ರಾಕೆಟ್ ಉಡಾವಣೆಗೆ ಇಸ್ರೋ ಸಜ್ಜು

-

ಬೆಂಗಳೂರು: ಭಾರತೀಯ ನೌಕಾಪಡೆಗೆ ಸಹಾಯಕವಾಗುವ ಮತ್ತು ದೇಶದ ರಕ್ಷಣೆಗೆ ಮೀಸಲಾಗಿರುವ ಉಪಗ್ರಹವನ್ನು ಹೊತ್ತು ಬೃಹತ್ ಬಾಹುಬಲಿ (Bahubali Rocket Launch) ರಾಕೆಟ್ ಲಾಂಚ್ ವೆಹಿಕಲ್ ಮಾರ್ಕ್- 3 (Launch Vehicle Mark-3) ಅನ್ನು ಉಡಾವಣೆ ಮಾಡಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ಇಸ್ರೋ (Indian Space Research Organisation) ಸಜ್ಜಾಗಿದೆ. ಅತ್ಯಂತ ಭಾರದ ಈ ರಾಕೆಟ್ ಭಾನುವಾರ (ನವೆಂಬರ್‌ 2) ಸಂಜೆ 5.26ಕ್ಕೆ ಆಂಧ್ರ ಪ್ರದೇಶದ (Andrapradesh) ಶ್ರೀ ಹರಿಕೋಟಾದಲ್ಲಿರುವ (Sriharikota) ಭಾರತದ ಬಾಹ್ಯಾಕಾಶ ಬಂದರಿನಿಂದ ಆಕಾಶಕ್ಕೆ ಜಿಗಿಯಲಿದೆ. ಈ ರಾಕೆಟ್ ಕುರಿತಾದ ಹತ್ತು ವಿಶೇಷ ಮಾಹಿತಿಗಳು ಇಲ್ಲಿವೆ.



  • ಭಾರತದ ಬಾಹ್ಯಾಕಾಶ ಬಂದರು ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಗಲಿರುವ ಎಂಟನೇ ರಾಕೆಟ್ ಆಗಿರುವ ಬಾಹುಬಲಿ ಅನ್ನು ಭಾನುವಾರ ಸಂಜೆ 5.26ಕ್ಕೆ ಉಡಾವಣೆ ಮಾಡಲಾಗುತ್ತದೆ.
  • ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಈವರೆಗೆ ಉಡಾವಣೆಯಾಗಿರುವ ಎಲ್ಲ ಉಡಾವಣೆಗಳು ಶೇ. 100ರಷ್ಟು ಯಶಸ್ವಿಯಾಗಿದೆ. ಎಂಟನೇ ರಾಕೆಟ್ ಬೃಹತ್ 'ಬಾಹುಬಲಿ' ಅನ್ನು ತಾಂತ್ರಿಕವಾಗಿ ಲಾಂಚ್ ವೆಹಿಕಲ್ ಮಾರ್ಕ್-3 (LVM-3) ಎಂದು ಕರೆಯಲಾಗುತ್ತಿದೆ.
  • ಕೊನೆಯ ಬಾರಿಗೆ 2023ರಲ್ಲಿ ಎಲ್ ವಿಎಂ-3 ಭಾರತದ ಚಂದ್ರಯಾನ-3 ಅನ್ನು ಉಡಾವಣೆ ಮಾಡಲಾಗಿತ್ತು. ಇದು ಐತಿಹಾಸಿಕ ದಾಖಲೆಯಾಗಿದ್ದು, ಸ್ವದೇಶಿ ಹೆವಿ ಲಿಫ್ಟ್ ಲಾಂಚರ್ 43.5 ಮೀಟರ್ ಎತ್ತರವಾಗಿದ್ದು, 15 ಅಂತಸ್ತಿನ ಕಟ್ಟಡಕ್ಕೆ ಸಮನಾಗಿರುತ್ತದೆ.
  • ಹೆವಿ ಲಿಫ್ಟ್ ಲಾಂಚರ್ ಉಡಾವಣೆಯಲ್ಲಿ 642 ಟನ್ ಭಾರ ಹೊಂದಿದ್ದು, ಇದು 150 ಆನೆಗಳ ಭಾರಕ್ಕೆ ಸಮಾನವಾಗಿದೆ.

ಇದನ್ನೂ ಓದಿ: Bangalore News: ಅಪೋಲೊ ಕ್ಯಾನ್ಸರ್ ಸೆಂಟರ್‌ಗಳ ಹೊಸ ಕ್ಯಾಂಪೇನ್ ‘ಚೆಕ್-ಒಲೇಟ್’ ಸಿಹಿಯಾದ ಚಾಕೊಲೇಟ್‌ನಲ್ಲಿ ಆರೋಗ್ಯದ ಸಂದೇಶ

  • ಭಾರತೀಯ ನೌಕಾಪಡೆಯ ಸಮುದ್ರ ರಕ್ಷಣಾ ಸಂವಹನಕ್ಕಾಗಿ ಬಳಸಲಾಗುವ ಉಪಗ್ರಹವನ್ನು ಸಿಎಂಎಸ್ -03 ಎಂದು ಕರೆಯಲಾಗುತ್ತದೆ.
  • ಸಿಎಂಎಸ್ -03ಯು 4,400 ಕೆ.ಜಿ. ಭಾರ ಹೊಂದಿದ್ದು, ಇದನ್ನು ಭಾರತದಿಂದ ಜಿಯೋಸಿಂಕ್ರೋನಸ್ ವರ್ಗಾವಣೆ ಕಕ್ಷೆಗೆ ಉಡಾಯಿಸಲಾಗುವ ಅತ್ಯಂತ ಭಾರವಾದ ಸಂವಹನ ಉಪಗ್ರಹವಾಗಿದೆ.
  • 2013ರಿಂದ ಭಾರತೀಯ ನೌಕಾಪಡೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಗೂ ಆಪರೇಷನ್ ಸಿಂದೂರ್ ಸಮಯದಲ್ಲಿ ಪಾಕಿಸ್ತಾನದ ನೌಕಾಪಡೆಯನ್ನು ದೂರವಿಡಲು ಸಹಾಯ ಮಾಡಿದ್ದ ಜಿಸ್ಯಾಟ್-7 ಅಥವಾ ರುಕ್ಮಿಣಿ ಉಪಗ್ರಹವನ್ನು ಸಿಎಂಎಸ್ -03 ಉಪಗ್ರಹವು ಬದಲಾಯಿಸಲಿದೆ.
  • ಹೊಸ ಉಪಗ್ರಹವು ಅನೇಕ ಬ್ಯಾಂಡ್‌ಗಳಲ್ಲಿ ಸಂವಹನ ನಡೆಸಬಲ್ಲದು. ಭಾರತದ ಕರಾವಳಿಯಿಂದ 2,000 ಕಿಮೀ ಒಳಗೆ ಸುರಕ್ಷಿತ ಸಂವಹನ ನಡೆಸಲು ಭಾರತೀಯ ನೌಕಾಪಡೆಗಳಿಗೆ ಸಹಾಯ ಮಾಡುತ್ತದೆ.
  • ಪ್ರತಿ ಎಲ್ ವಿಎಂ-3 ರಾಕೆಟ್‌ಗೆ ಸುಮಾರು 500 ಕೋಟಿ ರೂ. ವೆಚ್ಚವಾಗಲಿದ್ದು , ಇದರ 16 ನಿಮಿಷಗಳ ಹಾರಾಟಕ್ಕೆ ಸ್ವದೇಶಿ ಕ್ರಯೋಜೆನಿಕ್ ಎಂಜಿನ್ ಅನ್ನು ಬಳಸಲಾಗುತ್ತದೆ.
  • ಭಾರತದ ಸಿಬ್ಬಂದಿ ಬಾಹ್ಯಾಕಾಶ ಹಾರಾಟ ಅಥವಾ ಗಗನ್ ಯಾನ್ ಮಿಷನ್‌ಗೆ ಎಲ್ ವಿಎಂ-3 ‘ಬಾಹುಬಲಿ’ ರಾಕೆಟ್‌ ಶಕ್ತಿ ತುಂಬಲಿದೆ.