Pahalgam Terror Attack: ಬಿಹಾರ ಚುನಾವಣೆಗೋಸ್ಕರ ಪಹಲ್ಗಾಮ್‌ನಲ್ಲಿ ದಾಳಿ; ಮೋದಿ ಕುರಿತು ಟೀಕಿಸಿದ್ದ ಗಾಯಕಿ ಮೇಲೆ ಬಿತ್ತು ದೇಶದ್ರೋಹಿ ಕೇಸ್
ಏ. 22 ರಂದು ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯನ್ನು ಆಡಳಿತ ಪಕ್ಷ ಹಾಗೂ ಗುಪ್ತಚರ ಇಲಾಖೆ ಮತ್ತು ಭದ್ರತಾಪಡೆಗಳ ವೈಫಲ್ಯ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಭೋಜ್‌ಪುರಿ ಗಾಯಕಿ ನೇಹಾ ಸಿಂಗ್ ರಾಥೋಡ್ (Neha Singh Rathore) ವಿರುದ್ಧ ದೇಶದ್ರೋಹ ಕೇಸ್ ಹಾಕಲಾಗಿದೆ ಎಂದು ತಿಳಿದು ಬಂದಿದೆ.


ಪಟನಾ: ಏ. 22 ರಂದು ಪಹಲ್ಗಾಮ್‌ನಲ್ಲಿ (Pahalgam Terror Attack) ನಡೆದ ಉಗ್ರರ ದಾಳಿಯನ್ನು ಆಡಳಿತ ಪಕ್ಷ ಹಾಗೂ ಗುಪ್ತಚರ ಇಲಾಖೆ ಮತ್ತು ಭದ್ರತಾಪಡೆಗಳ ವೈಫಲ್ಯ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಭೋಜ್‌ಪುರಿ ಗಾಯಕಿ ನೇಹಾ ಸಿಂಗ್ ರಾಥೋಡ್ ವಿರುದ್ಧ ದೇಶದ್ರೋಹ ಕೇಸ್ ಹಾಕಲಾಗಿದೆ ಎಂದು ತಿಳಿದು ಬಂದಿದೆ. ಗಾಯಕಿ ಅವರು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. 2019 ರ ಪುಲ್ವಾಮಾ ಭಯೋತ್ಪಾದಕ ದಾಳಿಯ ನಂತರ 40 ಸಿಆರ್‌ಪಿಎಫ್ ಸಿಬ್ಬಂದಿ ಸಾವನ್ನಪ್ಪಿದ ನಂತರ, ಪ್ರಧಾನಿ ಮೋದಿ ಈಗ ಬಿಹಾರದಲ್ಲಿ ಪಹಲ್ಗಾಮ್ ದಾಳಿಯ ಹೆಸರಿನಲ್ಲಿ ಮತ ಯಾಚಿಸುತ್ತಾರೆ ಎಂಬ ಪೋಸ್ಟ್‌ನನ್ನು ಇವರು ಹಂಚಿಕೊಂಡಿದ್ದರು.
ಪಾಕಿಸ್ತಾನಿ ಪತ್ರಕರ್ತರ ಗುಂಪಿನಿಂದ ನಡೆಸಲ್ಪಡುವ ಎಕ್ಸ್ ಹ್ಯಾಂಡಲ್‌ನಿಂದ ಈ ವಿಡಿಯೋವನ್ನು ಮೊದಲು ಪೋಸ್ಟ್ ಮಾಡಲಾಗಿತ್ತು. ಇದೀಗ ನೇಹಾ ಅದನ್ನು ಮರುಪೋಸ್ಟ್ ಮಾಡಿದ್ದರು. ದೇಶದ್ರೋಹದ ಆರೋಪದ ಮೇಲೆ ಲಕ್ನೋದ ಹಜರತ್‌ಗಂಜ್‌ನಲ್ಲಿ ನೇಹಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಗಾಯಕಿ ಈ ಹಿಂದೆ ಇದೇ ರೀತಿಯ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗಾಗಿ ವಿವಾದಗಳಿಗೆ ಸಿಲುಕಿದ್ದರು. ನೇಹಾ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಪ್ರಕಾರ, ಅವರ ಎಕ್ಸ್ ಪೋಸ್ಟ್ ರಾಷ್ಟ್ರೀಯ ಸಮಗ್ರತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ, ಧರ್ಮ ಮತ್ತು ಜಾತಿಯ ಆಧಾರದ ಮೇಲೆ ಪರಸ್ಪರ ಅಪರಾಧಗಳನ್ನು ಮಾಡಲು ಜನರನ್ನು ಪ್ರಚೋದಿಸುತ್ತದೆ.
An FIR has been registered against Bhojpuri singer Neha Singh Rathore (@nehafolksinger ) by the Lucknow Police after the singer allegedly criticised the Narendra Modi government. In a viral video, the singer was heard stating that the Pahalgam attack, which claimed 26 lives, was… pic.twitter.com/6Z4imUAN3g
— Outlook India (@Outlookindia) April 28, 2025
ನೇಹಾ ಸಿಂಗ್ ರಾಥೋಡ್ ಅವರ "ದೇಶ ವಿರೋಧಿ" ಹೇಳಿಕೆಗಳು ಪಾಕಿಸ್ತಾನದಲ್ಲಿ ವೈರಲ್ ಆಗುತ್ತಿವೆ. "ನೇಹಾ ಸಿಂಗ್ ರಾಥೋಡ್ ಅವರ ಈ ಎಲ್ಲಾ ದೇಶ ವಿರೋಧಿ ಹೇಳಿಕೆಗಳನ್ನು ಪಾಕಿಸ್ತಾನಿ ಮಾಧ್ಯಮಗಳು ಭಾರತದ ವಿರುದ್ಧ ಬಳಸುತ್ತಿವೆ. ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಏಪ್ರಿಲ್ 25 ರಂದು ಪೋಸ್ಟ್ ಮಾಡಿದ ತನ್ನ ವೀಡಿಯೊದಲ್ಲಿ, ನೇಹಾ ಸಿಂಗ್ ರಾಥೋಡ್ ಪ್ರಧಾನಿ ನರೇಂದ್ರ ಮೋದಿಯವರು ಒಂದೇ ಒಂದು ಫೋನ್ ಕರೆ ಮಾಡಿ ಯುದ್ಧವನ್ನು ನಿಲ್ಲಿಸುವ ಶಕ್ತಿಯನ್ನು ಹೊಂದಿದ್ದಾರೆ ಎಂದು ಹೇಳಲಾಗುತ್ತದೆ. ಆದರೆ ಆ ವ್ಯಕ್ತಿಗೆ ತನ್ನದೇ ಆದ ದೇಶದಲ್ಲಿ ಭಯೋತ್ಪಾದಕ ದಾಳಿಯನ್ನು ತಪ್ಪಿಸಲು ಸಾಧ್ಯವಾಗಲಿಲ್ಲ. ನಾನು ಸರ್ಕಾರವನ್ನು ಯಾವುದರ ಬಗ್ಗೆ ಪ್ರಶ್ನಿಸಬೇಕು? ಶಿಕ್ಷಣ ಮತ್ತು ಆರೋಗ್ಯದ ವಿಷಯಗಳು ಇನ್ನು ಮುಂದೆ ಪ್ರಸ್ತುತವಾಗಿಲ್ಲ. ರಾಷ್ಟ್ರೀಯತೆಯ ರಾಜಕೀಯ ಮತ್ತು ದೇಶದಲ್ಲಿ ಹಿಂದೂ-ಮುಸ್ಲಿಂ ಸಂಘರ್ಷ ಉತ್ತುಂಗದಲ್ಲಿದ್ದರೂ ಜನರು ಕೊಲ್ಲಲ್ಪಡುತ್ತಿದ್ದಾರೆ ಎಂದು ನೇಹಾ ಹೇಳಿದ್ದರು.
ಈ ಸುದ್ದಿಯನ್ನೂ ಓದಿ: Assam MLA: ಪುಲ್ವಾಮಾ, ಪಹಲ್ಗಾಮ್ ದಾಳಿ, "ಸರ್ಕಾರದ ಪಿತೂರಿ" ; ವಿವಾದಾತ್ಮಕ ಹೇಳಿಕೆ ನೀಡಿದ ಅಸ್ಸಾಂ ಶಾಸಕನ ಬಂಧನ
ಪುಲ್ವಾಮಾ ದಾಳಿಯ ನಂತರದಂತೆ" ಪ್ರಧಾನಿ ಮೋದಿ ಪಹಲ್ಗಾಮ್ ದಾಳಿಯ ಸಂತ್ರಸ್ತರ ಹೆಸರಿನಲ್ಲಿ ಮತ ಕೇಳುತ್ತಾರೆ ಎಂದು ನೇಹಾ ಆರೋಪಿಸಿದ್ದರು. 2023 ರಲ್ಲಿ, ಕಾನ್ಪುರ ದೇಹತ್‌ನಲ್ಲಿ ನಡೆದ ತೆರವು ಕಾರ್ಯಾಚರಣೆಯ ಸಂದರ್ಭದಲ್ಲಿ ತಾಯಿ-ಮಗಳ ಜೋಡಿಯ ಸಾವಿನ ಬಗ್ಗೆ ಬಿಜೆಪಿ ನೇತೃತ್ವದ ಉತ್ತರ ಪ್ರದೇಶ ಸರ್ಕಾರವನ್ನು ಟೀಕಿಸಿದ್ದರು.