ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bihar Assembly Election: ಬಿಹಾರದಲ್ಲಿ ಎರಡು ಹಂತದಲ್ಲಿ ಮತದಾನ; ದಿನಾಂಕ ಘೋಷಿಸಿದ ಚುನಾವಣಾ ಆಯೋಗ

ದೇಶಾದ್ಯಂತ ಕುತೂಹಲ ಮೂಡಿಸಿದ್ದ ಬಿಹಾರ ಚುನಾವಣೆ (Bihar Election) ದಿನಾಂಕ ಇಂದು ಘೋಷಣೆಯಾಗಿದೆ. ಚುನಾವಣೆ ನಡೆಯಲಿದೆ. ಬಿಹಾರದ 243 ಸ್ಥಾನಗಳಿಗೆ ಚುನಾವಣೆ ನವೆಂಬರ್ 22 ರ ಮೊದಲು ಪೂರ್ಣಗೊಳ್ಳಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಈ ಹಿಂದೆ ಹೇಳಿದ್ದರು.

ಬಿಹಾರದಲ್ಲಿ ಎರಡು ಹಂತದಲ್ಲಿ ಮತದಾನ

-

Vishakha Bhat Vishakha Bhat Oct 6, 2025 4:39 PM

ನವದೆಹಲಿ: ದೇಶಾದ್ಯಂತ ಕುತೂಹಲ ಮೂಡಿಸಿದ್ದ ಬಿಹಾರ ಚುನಾವಣೆ ( Bihar Assembly Election) ದಿನಾಂಕ ಇಂದು ಘೋಷಣೆಯಾಗಿದೆ. 2 ಹಂತದಲ್ಲಿ ಮತದಾನ ನಡೆಯಲಿದ್ದು, ಮೊದಲ ಹಂತ ನವೆಂಬರ್‌ 6 ನೇ ತಾರೀಖಿನಂದು ನಡೆದರೆ ಎರಡನೇ ಹಂತದ ಚುನಾವಣೆ ನ. 11 ರಂದು ನಡೆಯಲಿದೆ. 14 ರಂದು ಫಲಿತಾಂಶ ಹೊರಬೀಳಲಿದೆ. ಬಿಹಾರದ 243 ಸ್ಥಾನಗಳಿಗೆ ಚುನಾವಣೆ ನವೆಂಬರ್ 22 ರ ಮೊದಲು ಪೂರ್ಣಗೊಳ್ಳಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಈ ಹಿಂದೆ ಹೇಳಿದ್ದರು. ಇದೀಗ ಇಂದು ಚುನಾವಣಾ ದಿನಾಂಕ ಘೋಷಿಸಲಾಗಿದೆ. ರಾಜ್ಯದಲ್ಲಿ ಚುನಾವಣೆಗೆ ಮುಂಚಿತವಾಗಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ ಭಾರತೀಯ ಚುನಾವಣಾ ಆಯೋಗ (ECI) ಬಿಹಾರದ ಅಂತಿಮ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿತು.

ಜನವರಿ 1, 2025 ರಂದು 7.8 ಕೋಟಿ ಇದ್ದ ಒಟ್ಟು ಮತದಾರರು ಅಂತಿಮ ಪಟ್ಟಿಯಲ್ಲಿ ಸುಮಾರು 38 ಲಕ್ಷದಷ್ಟು ಕಡಿಮೆಯಾಗಿ 7.4 ಕೋಟಿಗೆ ತಲುಪಿದ್ದಾರೆ. ಪುರುಷ ಮತದಾರರು ಶೇ. 3.8 ರಷ್ಟು (15.5 ಲಕ್ಷ) ಕಡಿಮೆಯಾದರೆ, ಮಹಿಳಾ ಮತದಾರರು ಶೇ. 6.1 ರಷ್ಟು (22.7 ಲಕ್ಷ) ತೀವ್ರ ಕುಸಿತವನ್ನು ಕಂಡು ಬಂದಿದೆ. ಅಕ್ಟೋಬರ್ ಅಂತ್ಯದಲ್ಲಿ ಆಚರಿಸಲಾಗುವ 'ಛಠ್ ಪೂಜೆ' ಹಬ್ಬದ ನಂತರ ತಕ್ಷಣವೇ ಚುನಾವಣೆ ನಡೆಸುವಂತೆ ಹಲವು ರಾಜಕೀಯ ಪಕ್ಷಗಳು ಚುನಾವಣಾ ಸಂಸ್ಥೆಯನ್ನು ಒತ್ತಾಯಿಸಿವೆ. ಇತರ ರಾಜ್ಯಗಳಲ್ಲಿ ಉದ್ಯೋಗದಲ್ಲಿರುವ ಹೆಚ್ಚಿನ ಸಂಖ್ಯೆಯ ಜನರು ಹಬ್ಬಕ್ಕಾಗಿ ಮನೆಗೆ ಮರಳುವುದರಿಂದ ಹೆಚ್ಚಿನ ಮತದಾರರು ಪಾಲ್ಗೊಳುತ್ತಾರೆ ಎಂಬುದು ರಾಜಕೀಯ ಪಕ್ಷಗಳ ಲೆಕ್ಕಾಚಾರವಾಗಿದೆ.

ಬಿಹಾರ ಚುನಾವಣೆಯ ಸಿದ್ಧತೆಗಳ ಕುರಿತು ಪತ್ರಿಕಾಗೋಷ್ಠಿಯಲ್ಲಿ ಭೋಜ್‌ಪುರಿಯಲ್ಲಿ ಭಾಗಶಃ ಮಾತನಾಡಿದ ಜ್ಞಾನೇಶ್ ಕುಮಾರ್, "ಭಾರತದ ಮತದಾರರನ್ನು ನಾವು ಅಭಿನಂದಿಸುತ್ತೇವೆ. ಯಶಸ್ವಿ ಎಸ್‌ಐಆರ್ ಪ್ರಕ್ರಿಯೆಗಾಗಿ ಎಲ್ಲರಿಗೂ ಧನ್ಯವಾದಗಳು. ಪ್ರತಿ ಮತಗಟ್ಟೆಯಲ್ಲಿ ಮತದಾರರ ಸಂಖ್ಯೆಯನ್ನು 1,200 ಕ್ಕೆ ಮಿತಿಗೊಳಿಸಲಾಗಿದೆ ಮತ್ತು ಕಪ್ಪು ಮತ್ತು ಬಿಳಿ ಬಣ್ಣದಲ್ಲಿದ್ದ ಸೀರಿಯಲ್ ನಂಬರ್ ಫಾಂಟ್ ಮತ್ತು ಅಭ್ಯರ್ಥಿಯ ಫೋಟೋಗಳು ಈಗ ಬಣ್ಣದಲ್ಲಿ ಇರುತ್ತವೆ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Bihar assembly elections: ಬಿಹಾರ ಚುನಾವಣೆ: ಬುರ್ಖಾ ಧರಿಸುವವರನ್ನು ಸರಿಯಾಗಿ ಪರಿಶೀಲಿಸಿ ಎಂದ ಬಿಜೆಪಿ; ಆರ್‌ಜೆಡಿ ಕಿಡಿ

ಬಿಹಾರದ ಚುನಾವಣಾ ಕದನದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಮತ್ತು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನೇತೃತ್ವದ 'ಮಹಾಘಟಬಂಧನ್' ನಡುವೆ ನೇರ ಸ್ಪರ್ಧೆ ನಡೆಯಲಿದೆ. ಎನ್‌ಡಿಎ ಪ್ರಸ್ತುತ 131 ಸ್ಥಾನಗಳನ್ನು ಹೊಂದಿದೆ - ಬಿಜೆಪಿ 80, ಜೆಡಿ (ಯು) 45, ಎಚ್‌ಎಎಂ (ಎಸ್) 4 ಮತ್ತು ಇಬ್ಬರು ಸ್ವತಂತ್ರರು. ವಿರೋಧ ಪಕ್ಷವು 111 ಸ್ಥಾನಗಳನ್ನು ಹೊಂದಿದೆ - ಆರ್‌ಜೆಡಿ 77, ಕಾಂಗ್ರೆಸ್ 19, ಸಿಪಿಐ (ಎಂಎಲ್) 11, ಸಿಪಿಐ (ಎಂ) 2 ಮತ್ತು ಸಿಪಿಐ 2