Cuttack Violence: ಕಟಕ್ ನಗರದಲ್ಲಿ ಕರ್ಫ್ಯೂ: ಹಿಂಸಾಚಾರದ ಬಳಿಕ ಇಂಟರ್‌ನೆಟ್ ಕಡಿತ
ಒಡಿಶಾದ ಕಟಕ್ ನಗರದ ದರ್ಘಾ ಬಜಾರ್‌ನಲ್ಲಿ ದುರ್ಗಾ ವಿಗ್ರಹ ವಿಸರ್ಜನೆ ಸಂದರ್ಭದಲ್ಲಿ ಉಂಟಾದ ಗುಂಪು ಘರ್ಷಣೆಯಿಂದ ಎಂಟು ಮಂದಿ ಗಾಯಗೊಂಡ ಬಳಿಕ ಪರಿಸ್ಥಿತಿಯನ್ನು ನಿಯಂತ್ರಿಸಲು ಕರ್ಫ್ಯೂ ವಿಧಿಸಲಾಗಿದ್ದು, 36 ಗಂಟೆಗಳ ಕಾಲ ಇಂಟರ್‌ನೆಟ್ ಸ್ಥಗಿತಗೊಳಿಸಲಾಗಿದೆ. ಪರಿಸರದಲ್ಲಿ ಶಾಂತಿ ಕಾಪಾಡುವಂತೆ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಮನವಿ ಮಾಡಿದ್ದಾರೆ.

ಭುವನೇಶ್ವರ: ಕಟಕ್ ನಗರದ (Cuttack city) ದರ್ಘಾ ಬಜಾರ್‌ನಲ್ಲಿ ಭಾನುವಾರ ದುರ್ಗಾ ವಿಗ್ರಹ ವಿಸರ್ಜನೆ (durga puja) ಸಂದರ್ಭದಲ್ಲಿ ಉಂಟಾದ ಗುಂಪು ಘರ್ಷಣೆಯಲ್ಲಿ (Cuttack violence) ಎಂಟು ಮಂದಿ ಗಾಯಗೊಂಡಿದ್ದಾರೆ. ಕಟಕ್ ಡಿಸಿಪಿ ರಿಷಿಕೇಶ್ ಖಿಲಾರಿ (Cuttack DCP Rishikesh Khilari) ಅವರಿಗೂ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಿಂಸಾಚಾರದ ಬಳಿಕ ಕಟಕ್ ನಗರದಲ್ಲಿ ಕರ್ಫ್ಯೂ (curfew in cuttack) ವಿಧಿಸಲಾಗಿದ್ದು, 36 ಗಂಟೆಗಳ ಕಾಲ ಇಂಟರ್‌ನೆಟ್ ಸ್ಥಗಿತಗೊಳಿಸಲಾಗಿದೆ. ಶಾಂತಿ ಕಾಪಾಡುವಂತೆ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ (Chief Minister Mohan Charan) ನಗರದ ಜನರಲ್ಲಿ ಮನವಿ ಮಾಡಿದ್ದಾರೆ.
ಕಟಕ್‌ನಲ್ಲಿ ಶಾಂತಿಗೆ ಭಂಗ ತಂದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿರುವ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ, ನಗರದ ಜನತೆ ಶಾಂತಿಯಿಂದ ಇರುವಂತೆ ಮನವಿ ಮಾಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್ ಆಯುಕ್ತ ಎಸ್. ದೇವ್ ದತ್ತ ಸಿಂಗ್, ಕಟಕ್ ನಗರದ 13 ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿಯಿಂದ ಕರ್ಫ್ಯೂ ವಿಧಿಸಲಾಗಿದೆ. ಭಾನುವಾರ ಸಂಜೆ 7 ಗಂಟೆಯಿಂದ 36 ಗಂಟೆಗಳ ಕಾಲ ಇಂಟರ್‌ನೆಟ್ ಮತ್ತು ಸಾಮಾಜಿಕ ಮಾಧ್ಯಮ ಸೇವೆಗಳ ಮೇಲೆ ನಿಷೇಧ ಹೇರಲಾಗಿದೆ ಎಂದು ತಿಳಿಸಿದ್ದಾರೆ.
ಕಟಕ್ ಹಿಂಸಾಚಾರದ ಕುರಿತು ಮಾಹಿತಿ ನೀಡಿದ ಪೊಲೀಸ್ ಕಮಿಷನರ್ ಸುರೇಶ್ ದೇಬದತ್ತ:
Cuttack Police Commissioner Suresh Debadutta Singh has shared crucial details:
— Bhakta Charan Das (@BhaktaCharanDas) October 6, 2025
False rumors were deliberately spread claiming a death during the violence which was completely untrue.
VHP organised a bike rally without police permission and when stopped, its members pelted… pic.twitter.com/b2icfOiKFt

Cuttack Police Commissioner Suresh Debadutta Singh has shared crucial details:

False rumors were deliberately spread claiming a death during the violence which was completely untrue.

VHP organised a bike rally without police permission and when stopped, its members pelted… pic.twitter.com/b2icfOiKFt
— Bhakta Charan Das (@BhaktaCharanDas) October 6, 2025

ಒಂದು ಸಂಘಟನೆಗೆ ಅನುಮತಿ ನಿರಾಕರಿಸಿದರೂ ಭಾನುವಾರ ಸಂಜೆ ಬೈಕ್ ರಾಲಿ ನಡೆಸಿದ್ದು, ಇದನ್ನು ಪೊಲೀಸರು ತಡೆದಾಗ ಅವರ ಮೇಲೆಯೇ ಕಲ್ಲು ತೂರಾಟ ನಡೆಸಲಾಯಿತು. ಇದರಿಂದ 8 ಮಂದಿ ಪೊಲೀಸ್ ಸಿಬ್ಬಂದಿ ಸೇರಿದಂತೆ 25 ಜನರು ಗಂಭೀರವಾಗಿ ಗಾಯಗೊಂಡಿದ್ದರು. ಘರ್ಷಣೆ ಮತ್ತಷ್ಟು ಹೆಚ್ಚಾಗದಂತೆ ತಡೆಯಲು ಭಾರಿ ಪೊಲೀಸ್ ನಿಯೋಜಿಸಲಾಗಿದೆ. ಈ ಕುರಿತು ಸಾಮಾಜಿಕ ಮಾಧ್ಯಮದಗಳ ದುರ್ಬಳಕೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ಅವರು ಎಚ್ಚರಿಸಿದರು.
ಘಟನೆಯ ಕುರಿತು ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಮಾಝಿ, ಸಾವಿರ ವರ್ಷಗಳ ಶ್ರೀಮಂತ ಇತಿಹಾಸ ಹೊಂದಿರುವ ಕಟಕ್, ಏಕತೆ ಮತ್ತು ಸಹೋದರತ್ವಕ್ಕೆ ಸಾಕ್ಷಿಯಾಗಿದೆ. ಕೆಲವು ದುಷ್ಕರ್ಮಿಗಳಿಂದ ನಗರದಲ್ಲಿ ಶಾಂತಿ ಭಂಗಗೊಂಡಿದೆ. ಇದು ಸಾಮಾನ್ಯ ಜನರ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಇಂತವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: Viral News: ಮ್ಯಾಗಿ ಖರೀದಿಸಲು ಸಹೋದರಿಯ ನಿಶ್ಚಿತಾರ್ಥದ ಉಂಗುರವನ್ನೇ ಮಾರಲು ಹೊರಟ 13ರ ಪೋರ; ತಾಯಿ ಕಣ್ಣೀರು
ಕಟಕ್ ಪರಿಸ್ಥಿತಿ ಉಲ್ಬಣಗೊಳ್ಳದಂತೆ ಅಲ್ಲಿಯೇ ಬೀಡು ಬಿಡುವಂತೆ ಡಿಜಿಪಿ ವೈ.ಬಿ.ಖುರಾನಿಯಾ ಅವರಿಗೆ ಮಾಝಿ ಆದೇಶಿಸಿದ್ದಾರೆ. ಹಿಂಸಾಚಾರದ ನಡುವೆಯೇ ವಿಶ್ವ ಹಿಂದೂ ಪರಿಷತ್ ಸೋಮವಾರ ಕಟಕ್‌ನಲ್ಲಿ 12 ಗಂಟೆಗಳ ಬಂದ್‌ಗೆ ಕರೆ ನೀಡಿತ್ತು. ಹಿಂಸಾಚಾರಕ್ಕೆ ಸಂಬಂಧಿಸಿ ಆರು ಜನರನ್ನು ಬಂಧಿಸಲಾಗಿದೆ.