ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

"ರಾಹುಲ್‌ ಗಾಂಧಿ ಸುಳ್ಳುಕೋರ"; ಜನರಲ್‌ ನರವಾಣೆ ಸ್ಪಷ್ಟೀಕರಣದ ಬಳಿಕ ಬಿಜೆಪಿ ವಾಗ್ದಾಳಿ

General Naravane statement: ಲೋಕಸಭೆಯ ಪ್ರತಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. ಚೀನಾಕ್ಕೆ ಒಂದು ಇಂಚು ಭೂಮಿಯನ್ನು ಸಹ ನೀಡಿಲ್ಲ ಎಂದು ನರವಾಣೆ ಹೇಳಿದ್ದಾರೆ. ರಾಹುಲ್ ಗಾಂಧಿ ಗೊಂದಲ ಸೃಷ್ಟಿಸಿದರು. ಆದರೆ ಈಗ ನರವಾಣೆ ಮೌನ ಮುರಿದು ರಾಹುಲ್ ಗಾಂಧಿಯವರ ಸುಳ್ಳುಗಳನ್ನು ಬಹಿರಂಗಪಡಿಸಿದ್ದಾರೆ ಎಂದು ಬಿಜೆಪಿ ಹೇಳಿದೆ.

ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ವಾಗ್ದಾಳಿ

ನವದೆಹಲಿ, ಏ.24: ಲೋಕಸಭೆಯ ಪ್ರತಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯನ್ನು (Rahul Gandhi) ಬಿಜೆಪಿ ತೀವ್ರವಾಗಿ ಟೀಕಿಸಿದೆ. ರಾಹುಲ್‌, ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಖುಂದ್ ನರಾವಣೆ ಅವರ ಪುಸ್ತಕದಲ್ಲಿನ ವಿಷಯದ ಕುರಿತು ಮಾತನಾಡಿದ್ದರು. ಇದೀಗ ಭಾರತವು ಚೀನಾದಿಂದಾಗಿ ಭೂಮಿ ಕಳೆದುಕೊಂಡಿಲ್ಲ ಎಂದು ಮಾಜಿ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಖುಂದ್ ನರಾವಣೆ (General Manoj Mukund Naravane) ಅವರು ಸ್ಪಷ್ಟೀಕರಣ ನೀಡಿದ್ದಾರೆ. ಹೀಗಾಗಿ ಭಾರತೀಯ ಜನತಾ ಪಕ್ಷ (BJP) ರಾಹುಲ್ ಗಾಂಧಿ ವಿರುದ್ಧ ವಾಕ್ಪ್ರಹಾರ ನಡೆಸಿದೆ.

ಫೆಬ್ರವರಿಯಲ್ಲಿ ನಡೆದ ಸಂಸತ್ತಿನ ಬಜೆಟ್ ಅಧಿವೇಶನದ ವೇಳೆ, ರಾಹುಲ್ ಗಾಂಧಿ ಅವರು ಭಾರತ-ಚೀನಾ ಗಡಿ ವಿವಾದದ ಬಗ್ಗೆ ಮಾತನಾಡುತ್ತಿದ್ದರು. ಈ ವೇಳೆ ಅವರು ಮಾಜಿ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಖುಂದ್ ನರಾವಣೆ ಅವರು ಬರೆದ ಆತ್ಮಕಥೆಯ (ಇನ್ನೂ ಪ್ರಕಟವಾಗದ ಪುಸ್ತಕ) ಬಗ್ಗೆ ಮಾತನಾಡಿದ್ದರು. ಆ ಪುಸ್ತಕದಲ್ಲಿ ಭಾರತದ ಕೆಲವು ಪ್ರದೇಶಗಳನ್ನು ಚೀನಾ ವಶಪಡಿಸಿಕೊಂಡಿದೆ ಎಂಬ ಅರ್ಥ ಬರುವಂತಹ ಉಲ್ಲೇಖಗಳಿವೆ ಎಂದು ಹೇಳಿದ್ದರು. ಆದರೆ, ನರವಾಣೆ ಅವರು ಚೀನಾಕ್ಕೆ ಭೂಮಿ ನೀಡಲಾಗಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಬಿಜೆಪಿಯು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಚೀನಾಕ್ಕೆ ಒಂದು ಇಂಚು ಭೂಮಿಯನ್ನು ಸಹ ನೀಡಿಲ್ಲ ಎಂದು ನರವಾಣೆ ಹೇಳಿದ್ದಾರೆ. ರಾಹುಲ್ ಗಾಂಧಿ ಗೊಂದಲ ಸೃಷ್ಟಿಸಿದರು. ಆದರೆ ಈಗ ನರವಾಣೆ ಮೌನ ಮುರಿದು ರಾಹುಲ್ ಗಾಂಧಿಯವರ ಸುಳ್ಳುಗಳನ್ನು ಬಹಿರಂಗಪಡಿಸಿದ್ದಾರೆ ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲ್ಲಾ ಹೇಳಿದ್ದಾರೆ. ಜನರಲ್ ನರವಾಣೆ ಅವರನ್ನು ಉಲ್ಲೇಖಿಸಿ, ಬಿಜೆಪಿ ನಾಯಕರು 2020ರ ಚೀನಾದೊಂದಿಗಿನ ಬಿಕ್ಕಟ್ಟಿನ ಸಂದರ್ಭದಲ್ಲಿ ಸೇನೆಗೆ ರಾಜಕೀಯ ಬೆಂಬಲವಿತ್ತು ಎಂದು ಒತ್ತಿ ಹೇಳಿದರು.

ತೈಲ ಖರೀದಿ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲಾಗಿದೆ: ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಇನ್ನೂ ಪ್ರಕಟವಾಗದ ಪುಸ್ತಕವನ್ನು ಬಳಸಿಕೊಂಡು ತನ್ನನ್ನು ಮತ್ತು ಸೈನ್ಯವನ್ನು ರಾಜಕೀಯ ಎಳೆದು ತರುವುದು ಸರಿಯಲ್ಲ, ಇದು ಅನ್ಯಾಯ ಎಂದು ನರವಾಣೆ ಅವರು ಹೇಳಿದ್ದಾರೆ. ಚೀನಾದೊಂದಿಗಿನ ಗಡಿ ಸಂಘರ್ಷದ ಬಗ್ಗೆ ನರವಾಣೆಯವರನ್ನು ಮಾಧ್ಯಮವೊಂದು ಪ್ರಶ್ನಿಸಿದಾಗ, ಅನುಮಾನಗಳು ನಿವಾರಣೆಯಾಗಬೇಕೆಂದರೆ ಈ ಬಗ್ಗೆ ಚೀನಾದವರನ್ನೇ ಕೇಳಿ ಎಂದು ಉತ್ತರಿಸಿದ್ದಾರೆ. ಭಾರತದ ಭೂಭಾಗಗಳನ್ನು ಒಳಗೆ ಹಾಕಿಕೊಂಡಿದ್ದೀರಾ ಎಂದು ಚೀನೀಯರನ್ನೇ ಕೇಳಿ ಎಂದು ಹೇಳಿದ್ದಾರೆ.

ಫೆಬ್ರವರಿಯಲ್ಲಿ ಈ ವಿಷಯ ದೊಡ್ಡ ರಾಜಕೀಯ ಚರ್ಚೆಗೆ ಕಾರಣವಾಯಿತು. ಮಾಜಿ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಖುಂದ್ ನರಾವಣೆ ಅವರ ಇನ್ನೂ ಪ್ರಕಟವಾಗದ ಆತ್ಮಕಥೆ ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ (Four Stars of Destiny) ದೇಶದ ರಾಜಕೀಯ ವಲಯದಲ್ಲಿ ವಿವಾದದ ಕೇಂದ್ರಬಿಂದುವಾಯಿತು. ರಾಹುಲ್ ಗಾಂಧಿ ಅವರು ಆ ಪುಸ್ತಕದ ಕೆಲವು ಭಾಗಗಳನ್ನು ಸಂಸತ್ತಿನಲ್ಲಿ ಉಲ್ಲೇಖಿಸಲು ಪ್ರಯತ್ನಿಸಿದ್ದರು. ಇದು ಭಾರಿ ಕೋಲಾಹಲಕ್ಕೆ ಕಾರಣವಾಗಿತ್ತು.

ಚೀನಾ-ಭಾರತ ಗಡಿ ಪರಿಸ್ಥಿತಿಯನ್ನು ಚರ್ಚಿಸುವ ವೇಳೆ, ಈ ಪುಸ್ತಕದಿಂದ ಕೆಲವು ಅಂಶಗಳನ್ನು ಹೇಳಲು ರಾಹುಲ್ ಗಾಂಧಿ ಪ್ರಯತ್ನಿಸಿದರು. ಆದರೆ, ಆ ವೇಳೆ ಪುಸ್ತಕ ಇನ್ನೂ ಪ್ರಕಟಗೊಂಡಿರಲಿಲ್ಲ. ಲೋಕಸಭೆಯಲ್ಲಿ ಯಾವುದೇ ಪುಸ್ತಕ ಅಥವಾ ದಾಖಲೆ ಉಲ್ಲೇಖಿಸಲು ಅದು ಅಧಿಕೃತವಾಗಿ ಪ್ರಕಟವಾಗಿರಬೇಕು. ಆದರೆ ಆ ಪುಸ್ತಕ ಇನ್ನೂ ಪ್ರಕಟವಾಗಿರಲಿಲ್ಲ. ಆದ್ದರಿಂದ ಸ್ಪೀಕರ್ ಅವರು ರಾಹುಲ್ ಗಾಂಧಿ ಅವರನ್ನು ತಡೆದಿದ್ದರು. ಆದರೆ, ಸಂಸತ್ತಿನಿಂದಾಚೆ ಈ ವಿಚಾರ ಭಾರಿ ಕೋಲಾಹಲಕ್ಕೆ ಕಾರಣವಾಯಿತು.

"ನೀವು ಆ ಸ್ಥಾನಕ್ಕೆ ಅರ್ಹರಲ್ಲ": ರಾಹುಲ್ ಗಾಂಧಿ ವಿರುದ್ಧ ನವಜೋತ್ ಕೌರ್ ಸಿಧು ಆಕ್ರೋಶ

ಈ ವಿವಾದದ ಮತ್ತೊಂದು ಪ್ರಮುಖ ಅಂಶವೆಂದರೆ, ಚೀನಾದ ಟ್ಯಾಂಕ್‌ಗಳು ಭಾರತದ ಗಡಿಯ ಕಡೆಗೆ ಬರುತ್ತಿರುವ ಬಗ್ಗೆ ಜನರಲ್ ನರಾವಣೆಯವರು ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ. ವಿಶೇಷವಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಈ ವಿಷಯ ತಿಳಿಸಲಾಗಿತ್ತು. ಸರ್ಕಾರದಿಂದ ಬಹುಕಾಲ ಯಾವುದೇ ನೇರ ಪ್ರತಿಕ್ರಿಯೆ ಬಂದಿಲ್ಲ ಎಂದು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ ಎಂದು ರಾಹುಲ್ ಗಾಂಧಿ ತಿಳಿಸಿದ್ದರು. ಇದು ಭಾರಿ ವಿವಾದಕ್ಕೆ ಕಾರಣವಾಯಿತು.

ಈ ಆತ್ಮಚರಿತ್ರೆಯು 2024 ರಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ, ಇದು ಪ್ರಸ್ತುತ ರಕ್ಷಣಾ ಸಚಿವಾಲಯದ ಅನುಮೋದನೆಗಾಗಿ ಬಾಕಿ ಇದೆ. ಹಿರಿಯ ಸೇನಾ ಅಧಿಕಾರಿಗಳು ತಮ್ಮ ಸೇವಾ ಅನುಭವಗಳನ್ನು ಬರೆಯುವಾಗ, ಅದರಲ್ಲಿರುವ ಮಾಹಿತಿಗಳು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿರಬಹುದು. ಹೀಗಾಗಿ ಅನುಮತಿಯ ಅಗತ್ಯವಿರುತ್ತದೆ.