ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

"ನೀವು ಆ ಸ್ಥಾನಕ್ಕೆ ಅರ್ಹರಲ್ಲ": ರಾಹುಲ್ ಗಾಂಧಿ ವಿರುದ್ಧ ನವಜೋತ್ ಕೌರ್ ಸಿಧು ಆಕ್ರೋಶ

ಕೊಯಮತ್ತೂರಿನಲ್ಲಿ ಮಾತನಾಡಿದ ಕಾಂಗ್ರೆಸ್ ಮಾಜಿ ನಾಯಕಿ ನವಜೋತ್ ಕೌರ್ ಸಿಧು, ಪಂಜಾಬ್ ಕಾಂಗ್ರೆಸ್ ಘಟಕದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಆರೋಪಿಸಿದರು. ಮುಂದಿನ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲಲಿದೆ ಎಂದು ಅವರು ಭವಿಷ್ಯ ನುಡಿದರು. ರಾಹುಲ್ ಗಾಂಧಿಗೆ ತಳಮಟ್ಟದ ವಾಸ್ತವ ಸ್ಥಿತಿ ಅರಿವಿಲ್ಲ ಎಂದು ಕೂಡ ಅವರು ಟೀಕಿಸಿದರು.

ರಾಹುಲ್ ಗಾಂಧಿ ವಿರುದ್ದ  ನವಜೋತ್ ಕೌರ್ ಸಿಧು ಕಿಡಿ

ರಾಹುಲ್ ಗಾಂಧಿ-ನವಜೋತ್ ಕೌರ್ ಸಿಧು (ಸಂಗ್ರಹ ಚಿತ್ರ) -

Profile
Sushmitha Jain Feb 17, 2026 4:27 PM

ಕೊಯಮತ್ತೂರು, ಫೆ. 17: ಕೊಯಮತ್ತೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕಾಂಗ್ರೆಸ್‌ನ ಮಾಜಿ ನಾಯಕಿ ನವಜೋತ್ ಕೌರ್ ಸಿಧು (Navjot Kaur Sidhu) ಪಂಜಾಬ್ ಕಾಂಗ್ರೆಸ್ (Congress) ಘಟಕದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಮುಂದಿನ ವರ್ಷ ನಡೆಯಲಿರುವ ಪಂಜಾಬ್ (Punjab) ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲಲಿದೆ ಎಂದು ಅವರು ಭವಿಷ್ಯ ನುಡಿದರು.

ಮಾಜಿ ಕ್ರಿಕೆಟಿಗ ಹಾಗೂ ಪಂಜಾಬ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು (Navjot Singh Sidhu) ಪತ್ನಿ ನವಜೋತ್ ಕೌರ್ ಇದೇ ವೇಳೆ ರಾಹುಲ್‌ ಗಾಂಧಿ ವಿರುದ್ಧವೂ ವಾಗ್ದಾಳಿ ನಡೆಸಿದರು. "ರಾಹುಲ್ ಗಾಂಧಿ (Rahul Gandhi) ಎಂದಿಗೂ ತಳಮಟ್ಟದಲ್ಲಿ ಕೆಲಸ ಮಾಡಿಲ್ಲ. ಕೆಳಮಟ್ಟದಲ್ಲಿ ಏನಾಗುತ್ತಿದೆ ಎಂಬುದು ಅವರಿಗೆ ತಿಳಿದಿಲ್ಲ. ವಾಸ್ತವದೊಂದಿಗೆ ಸಂಪರ್ಕದಲ್ಲಿರುವುದು ಬಹಳ ಮುಖ್ಯ, ನೀವು ಬರೀ ಕನಸಿನ ಲೋಕದಲ್ಲಿ ಬದುಕಲು ಸಾಧ್ಯವಿಲ್ಲ" ಎಂದರು. ಇದೇ ವೇಳೆ ಪ್ರಧಾನಿ ಮೋದಿ ಅವರನ್ನು ಶ್ಲಾಘಿಸಿದ ಅವರು, "ಮೋದಿ ಅವರ ಮೇಲೆ ಯಾವುದೇ ಭ್ರಷ್ಟಾಚಾರದ ಕಪ್ಪು ಚುಕ್ಕೆ ಇಲ್ಲ, ಅವರಿಗೆ ಯಾವುದೇ ಆಸ್ತಿ ಇಲ್ಲ. ಆದರೆ ರಾಹುಲ್ ಗಾಂಧಿ ಮಾತುಗಳು ಸರಿ ಎನಿಸಿದರೂ, ಅವರ ಕೃತ್ಯಗಳು ವಿಭಿನ್ನವಾಗಿರುತ್ತವೆ" ಎಂದು ಟೀಕಿಸಿದರು.

12 ವರ್ಷ ಕಿರಿಯ ಸಹೋದ್ಯೋಗಿಯನ್ನು ಮದುವೆಯಾಗಲು, ಆತನ ಪತ್ನಿಗೆ ಒಂದೂವರೆ ಕೋಟಿ ರುಪಾಯಿ ಪರಿಹಾರ ನೀಡಿದ ಮಹಿಳೆ

ಅಪಾಯಿಂಟ್‌ಮೆಂಟ್ ಸಿಗಲಿಲ್ಲ

ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರು ಮಾಡುತ್ತಿರುವ ಅನ್ಯಾಯ ಮತ್ತು ಪಕ್ಷದ ಅವನತಿಯ ಬಗ್ಗೆ ವಿವರಿಸಲು ತಾವು ಎಂಟು ತಿಂಗಳಿಂದ ರಾಹುಲ್ ಗಾಂಧಿ ಅವರ ಭೇಟಿಗೆ ಪ್ರಯತ್ನಿಸಿದರೂ ಸಮಯ ಸಿಗಲಿಲ್ಲ ಎಂದು ಅವರು ದೂರಿದರು. "ನಿಮ್ಮ ಪಕ್ಷವು ಪಂಜಾಬ್‌ನಲ್ಲಿ ನಾಶವಾಗುತ್ತಿದೆ ಎಂದು ಹೇಳಲು ನಾನು ನಿಮ್ಮ ಭೇಟಿ ಕೇಳಿದ್ದೆ. ಈಗಾಗಲೇ ಚುನಾವಣಾ ಟಿಕೆಟ್‌ಗಳನ್ನು ಮಾರಾಟ ಮಾಡಲಾಗಿದೆ. ನಿಮ್ಮ ಕೆಳಗಿರುವವರು ಏನು ಮಾಡುತ್ತಿದ್ದಾರೆ ಎಂಬ ಅರಿವು ನಿಮಗಿಲ್ಲದಿದ್ದರೆ, ನೀವು ಆ ಕುರ್ಚಿಯಲ್ಲಿ ಕುಳಿತುಕೊಳ್ಳಲು ಅರ್ಹರಲ್ಲ" ಎಂದು ನೇರವಾಗಿ ವಾಗ್ದಾಳಿ ನಡೆಸಿದರು.

ಕೊಟ್ಟ ಮಾತು ತಪ್ಪಿದ ಕಾಂಗ್ರೆಸ್

"ನಾವು ಪಂಜಾಬ್‌ಗಾಗಿ ಎಲ್ಲವನ್ನೂ ತ್ಯಾಗ ಮಾಡಿದೆವು...ನಮಗೆ ಏಳು ಇಲಾಖೆಗಳೊಂದಿಗೆ ಉಪಮುಖ್ಯಮಂತ್ರಿ ಹುದ್ದೆ ಮತ್ತು ನನಗೆ ಸಂಸದ ಸ್ಥಾನದ ಭರವಸೆ ನೀಡಲಾಗಿತ್ತು. ಆದರೆ ನೀವು ಯಾವುದನ್ನೂ ನೀಡಲಿಲ್ಲ. ನಿಮ್ಮ ಸುತ್ತಲೂ ಭ್ರಷ್ಟರೇ ತುಂಬಿರುವಾಗ ನೀವು ಭ್ರಷ್ಟಾಚಾರದ ವಿರುದ್ಧ ಹೇಗೆ ಮಾತನಾಡುತ್ತೀರಿ? ಪ್ರಾಮಾಣಿಕವಾಗಿ ಆದ ತಪ್ಪುಗಳನ್ನು ಹೇಳಲು ಬರುವವರಿಗೆ ನಿಮ್ಮ ಬಳಿ ಸಮಯವಿಲ್ಲ" ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ. ಇತ್ತೀಚೆಗೆ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಸಿಎಂ ಹುದ್ದೆಗಾಗಿ 500 ಕೋಟಿ ರುಪಾಯಿ ಬೇಡಿಕೆಯಿಟ್ಟಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಕ್ಕಾಗಿ ನವಜೋತ್ ಕೌರ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಿ, ನಂತರ ಉಚ್ಚಾಟಿಸಲಾಗಿದೆ.