ತಿರುಪತಿ: ವಿಶ್ವದ ಪ್ರಸಿದ್ಧ ಯಾತ್ರಾ ಸ್ಥಳವಾಗಿರುವ (Pilgrimage place) ತಿರುಮಲ ಶ್ರೀ ವೆಂಕಟೇಶ್ವರ ದೇವಾಲಯದಲ್ಲಿ (Tirumala Sri Venkateswara Temple) ಈಗ ಆಧ್ಯಾತ್ಮಿಕತೆ ಅನುಭವ ಪಡೆಯುವುದರೊಂದಿಗೆ ಜೀವ ಉಳಿಸುವ ಸೇವೆಯನ್ನು ಮಾಡಬಹುದು. ಯಾಕೆಂದರೆ ತಿರುಮಲ ತಿರುಪತಿ ದೇವಸ್ಥಾನಗಳು (Tirumala Tirupati Devasthanams) ಸುಮಾರು ದಶಕಗಳಷ್ಟು ಹಳೆಯದಾದ ಯೋಜನೆಯೊಂದಕ್ಕೆ ಮರುಜೀವ ನೀಡುವ ಪ್ರಯತ್ನ ಮಾಡುತ್ತಿವೆ. ಇನ್ನು ಮುಂದೆ ದೇವಾಲಯಕ್ಕೆ ಬರುವ ಭಕ್ತರು ರಕ್ತದಾನ (Blood Donation Scheme Awareness) ಮಾಡಬಹುದು. ಇದರಿಂದ ಸಾಕಷ್ಟು ಮಂದಿಯ ಜೀವ ಉಳಿಸಬಹುದಾಗಿದೆ.
1984ರಿಂದ ತಿರುಮಲಕ್ಕೆ ಭೇಟಿ ನೀಡುವ ಯಾತ್ರಿಕರು ಟಿಟಿಡಿ ನಡೆಸುವ ಅಶ್ವಿನಿ ಆಸ್ಪತ್ರೆಯಲ್ಲಿ ರಕ್ತದಾನ ಮಾಡುವ ಅವಕಾಶವನ್ನು ನೀಡಲಾಗಿತ್ತು. ಇದರಿಂದ ಪ್ರತಿವರ್ಷ ಸಾವಿರಾರು ರೋಗಿಗಳಿಗೆ ಸಹಾಯವಾಗುತ್ತಿತ್ತು. ಇದನ್ನು ಈಗ ಮತ್ತಷ್ಟು ಹೆಚ್ಚಿಸಲು ಟಿಟಿಡಿ ಯೋಜನೆ ಹಾಕಿಕೊಂಡಿದೆ.
ವಿಶೇಷ ಪ್ರವೇಶ ದರ್ಶನ ಯಾತ್ರಿಕರಿಗೆ ಜೀವಗಳನ್ನು ಉಳಿಸಲು ಸಹಾಯ ಮಾಡುವ ಅವಕಾಶ ನೀಡಲಾಗುತ್ತದೆ. ಇದಕ್ಕಾಗಿ ನಾಲ್ಕು ದಶಕಗಳಿಂದ ಟಿಟಿಡಿ ನಡೆಸುವ ಈ ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ನಡೆಸಲಾಗುತ್ತಿದೆ. ಈ ಬಗ್ಗೆ ಭಕ್ತರಿಗೆ ತಿಳಿಸಲು ಟಿಟಿಡಿ ವಿವಿಧ ರೀತಿಯ ಪ್ರಯತ್ನಗಳನ್ನು ನಡೆಸುತ್ತಿದೆ.
1984ರಲ್ಲಿ ರಕ್ತದಾನ ಯೋಜನೆ ಪ್ರಾರಂಭಿಸಿದಾಗ ಯಾತ್ರಿಕರಲ್ಲಿ ಸಾಮಾಜಿಕ ಜವಾಬ್ದಾರಿ ಮತ್ತು ಭಕ್ತಿ ಎರಡನ್ನೂ ಪ್ರೋತ್ಸಾಹಿಸುವ ಒಂದು ಮಾರ್ಗವಾಗಿ ಟಿಟಿಡಿ ಇದನ್ನು ಪರಿಚಯಿಸಿತು. ಆರಂಭಿಕ ವರ್ಷಗಳಲ್ಲಿ ದಾನಿಗಳಿಗೆ "ಬ್ರೇಕ್ ದರ್ಶನ" ಪಾಸ್‌ಗಳನ್ನು ನೀಡಲಾಗುತ್ತಿತ್ತು. ಈ ವ್ಯವಸ್ಥೆಯು ಈಗ ವಿಶೇಷ ಪ್ರವೇಶ ದರ್ಶನಕ್ಕೆ ಬದಲಾಗಿದ್ದರೂ ಇದರೊಂದಿಗೆ ಭಕ್ತರಿಗೆ ಮೆಚ್ಚುಗೆಯ ಪ್ರಮಾಣಪತ್ರ ಮತ್ತು ಆಶೀರ್ವಾದದ ಸಂಕೇತವಾಗಿ ಲಡ್ಡುವನ್ನು ಪಡೆಯಲಿದ್ದಾರೆ. ಇದು ಸಾವಿರಾರು ಭಕ್ತರಿಗೆ ತಮ್ಮ ಭೇಟಿಯ ಸಮಯದಲ್ಲಿ ಒಂದು ವಿಶೇಷ ಸೇವೆ ನೀಡಲು ಅವಕಾಶ ಮಾಡಿಕೊಟ್ಟಂತಾಗುತ್ತದೆ.
ಸೀಮಿತ ಪ್ರಚಾರದಿಂದ ಹೆಚ್ಚು ಜನರು ಪಾಲ್ಗೊಳ್ಳುತ್ತಿಲ್ಲ
ನಾಲ್ಕು ದಶಕಗಳಿಂದ ಈ ಯೋಜನೆ ಇದ್ದರೂ ತಿರುಮಲಕ್ಕೆ ಭೇಟಿ ನೀಡುವ ಅನೇಕ ಭಕ್ತರಿಗೆ ಇದರ ಬಗ್ಗೆ ತಿಳಿದಿಲ್ಲ. ಕಾರಣ ಪ್ರಚಾರದ ಕೊರತೆ ಎನ್ನುತ್ತಾರೆ ಟಿಟಿಡಿ ಅಧಿಕಾರಿಗಳು. ಇದೀಗ ಇದಕ್ಕಾಗಿ ವಿವಿಧ ರೀತಿಯ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಆನ್‌ಲೈನ್ ಪೋರ್ಟಲ್‌ಗಳು, ದೇವಾಲಯದ ಪ್ರಕಟಣೆಗಳು ಮತ್ತು ಮಾಧ್ಯಮ ಅಭಿಯಾನಗಳ ಮೂಲಕ ಯೋಜನೆಯ ಪ್ರಚಾರ ನಡೆಸಲಾಗುತ್ತಿದೆ.
ಪ್ರಯೋಜನಗಳು
ರಕ್ತದಾನ ಮಾಡುವ ಯಾತ್ರಿಕರು ಉಚಿತ ವಿಶೇಷ ಪ್ರವೇಶ ದರ್ಶನವನ್ನು ಪಡೆಯುವುದು ಮಾತ್ರವಲ್ಲದೆ ಒಂದು ಜೀವವನ್ನು ಕೂಡ ಉಳಿಸಬಹುದು. ರಕ್ತದಾನವು ಧರ್ಮ ಮತ್ತು ಪ್ರದೇಶವನ್ನು ಮೀರಿದೆ ಎನ್ನುತ್ತಾರೆ ಟಿಟಿಡಿ ಅಧಿಕಾರಿಗಳು.
ಇಲ್ಲಿ ಸಂಗ್ರಹಿಸಿದ ರಕ್ತವು ಶಸ್ತ್ರಚಿಕಿತ್ಸೆಗಳು, ಅಪಘಾತಗೊಂಡವರಿಗೆ, ತಿರುಪತಿಯ ಬಿಐರ್‌ಆರ್‌ಡಿ ಆಸ್ಪತ್ರೆ ಮತ್ತು ಇತರ ಸೌಲಭ್ಯಗಳಲ್ಲಿ ರಕ್ತ ವರ್ಗಾವಣೆ ಅಗತ್ಯವಿರುವ ರೋಗಿಗಳ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡುತ್ತದೆ. ನೈಸರ್ಗಿಕ ವಿಕೋಪಗಳು ಅಥವಾ ತುರ್ತು ಪರಿಸ್ಥಿತಿಗಳಂತಹ ಬಿಕ್ಕಟ್ಟಿನ ಸಮಯದಲ್ಲಿ ಇದು ಅತೀ ಅವಶ್ಯಕವಾಗಿದೆ.
ಇದನ್ನೂ ಓದಿ: Dharmasthala Chalo: ಧರ್ಮಸ್ಥಳ ವಿರುದ್ಧ ಪಿತೂರಿ ಕುರಿತು ಎನ್‌ಐಎ ತನಿಖೆಯಾಗಲಿ: ಬಿ.ವೈ. ವಿಜಯೇಂದ್ರ ಒತ್ತಾಯ
ಜಾಗೃತಿ ಅಭಿಯಾನ
ತಿರುಮಲಕ್ಕೆ ಭೇಟಿ ನೀಡುವ ಪ್ರತಿಯೊಬ್ಬ ಭಕ್ತನಿಗೆ ಈ ಅವಕಾಶದ ಬಗ್ಗೆ ತಿಳಿಸಲು ಟಿಟಿಡಿ ಈಗ ಜಾಗೃತಿ ಅಭಿಯಾನಗಳನ್ನು ಪ್ರಾರಂಭಿಸಿದೆ. ಗರಿಷ್ಠ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ಡಿಜಿಟಲ್ ಪ್ರದರ್ಶನಗಳು ಮತ್ತು ಬಹು ಭಾಷೆಗಳಲ್ಲಿ ಪ್ರಕಟಣೆಗಳನ್ನು ಹೊರಡಿಸಲು ಯೋಜನೆ ರೂಪಿಸಲಾಗುತ್ತಿದೆ.