ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: "ಅಮ್ಮಾ ಪ್ಲೀಸ್‌ ಹೊಡಿಬೇಡಾ..."; ಚಿಕನ್‌ ಕೇಳಿದ್ದ ಮಗನನ್ನು ಲಟ್ಟಣಿಗೆಯಿಂದ ಹೊಡೆದು ಕೊಂದ ಪಾಪಿ ತಾಯಿ

ಚಿಕನ್‌ ಬೇಕೆಂದು ಹಠ ಮಾಡಿದ್ದ ತನ್ನ ಮಕ್ಕಳಿಗೆ ತಾಯಿ ಲಟ್ಟಣಿಗೆಯಿಂದ ಹೊಡೆದ ಪರಿಣಾಮ ಬಾಲಕನೊಬ್ಬ ಮೃತಪಟ್ಟ ಘಟನೆ ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ಭಾನುವಾರ ನಡೆದಿದೆ. ಮೃತ ಬಾಲಕನನ್ನು ಚಿನ್ಮಯ್ ಧುಮ್ಡೆ ಎಂದು ಗುರುತಿಸಲಾಗಿದ್ದು, ಅವನು ತನ್ನ ತಾಯಿ ಪಲ್ಲವಿ ಧುಮ್ಡೆಗೆ ಚಿಕನ್‌ ಬೇಕೆಂದು ಕೇಳಿದ್ದಾನೆ.

ಚಿಕನ್‌ ಕೇಳಿದ್ದ ಮಗನನ್ನು ಲಟ್ಟಣಿಗೆಯಿಂದ ಹೊಡೆದು ಕೊಂದ ಪಾಪಿ ತಾಯಿ

-

Vishakha Bhat Vishakha Bhat Sep 29, 2025 1:19 PM

ಮುಂಬೈ: ಚಿಕನ್‌ ಬೇಕೆಂದು ಹಠ ಮಾಡಿದ್ದ ತನ್ನ ಮಕ್ಕಳಿಗೆ ತಾಯಿ ಲಟ್ಟಣಿಗೆಯಿಂದ ಹೊಡೆದ ಪರಿಣಾಮ ಬಾಲಕನೊಬ್ಬ ಮೃತಪಟ್ಟ ಘಟನೆ ಮಹಾರಾಷ್ಟ್ರದ (Maharashtra) ಪಾಲ್ಘರ್‌ನಲ್ಲಿ ಭಾನುವಾರ ನಡೆದಿದೆ. ಮೃತ ಬಾಲಕನನ್ನು ಚಿನ್ಮಯ್ ಧುಮ್ಡೆ ಎಂದು ಗುರುತಿಸಲಾಗಿದ್ದು, ಅವನು ತನ್ನ ತಾಯಿ ಪಲ್ಲವಿ ಧುಮ್ಡೆಗೆ ಚಿಕನ್‌ ಬೇಕೆಂದು ಕೇಳಿದ್ದಾನೆ. ಇದರಿಂದ ಕೋಪಗೊಂಡ ಆಕೆ ಆತನನ್ನು (Viral News) ಲಟ್ಟಣಿಗೆಯಿಂದ ಹೊಡೆದಿದ್ದಾಳೆ. ಹೊಡೆತಕ್ಕೆ ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಅಷ್ಟಕ್ಕೆ ಸುಮ್ಮನಾಗದ ಆಕೆ ತನ್ನ 10 ವರ್ಷದ ಮಗಳಿಗೂ ಸರಿಯಾಗಿ ಥಳಿಸಿದ್ದಾಳೆ. ಬಾಲಕಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ.

ಮಕ್ಕಳ ಕೂಗು ಕೇಳಿ ಆತಂಕಗೊಂಡ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದರು. ಕೂಡಲೇ ಸ್ಥಳೀಯ ಪೊಲೀಸ್ ಠಾಣೆ, ಸ್ಥಳೀಯ ಅಪರಾಧ ವಿಭಾಗ ಮತ್ತು ಉಪವಿಭಾಗೀಯ ಕಚೇರಿಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ನಂತರ, ಆರೋಪಿ ತಾಯಿಯನ್ನು ವಶಕ್ಕೆ ಪಡೆಯಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ದೇಶಮುಖ್ ಮಾತನಾಡಿ, ಪಲ್ಲವಿ ಘುಮ್ಡೆ (40) ತನ್ನ ಕುಟುಂಬದೊಂದಿಗೆ ಕಾಶಿಪಾದ ಪ್ರದೇಶದ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದರು. ಅವರ ಮಗ ಚಿನ್ಮಯ್ ಗಣೇಶ್ ಘುಮ್ಡೆ (7) ಎಂಬ ಬಾಲಕನನ್ನು ಆಕೆ ಥಳಿಸಿದ್ದಳೆ. ಪರಿಣಾಮ, ಆತ ಮೃತ ಪಟ್ಟಿದ್ದಾನೆ. ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಹೇಳಿದರು. ಪಾಲ್ಘರ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

ಪ್ರತ್ಯೇಕ ಘಟನೆಯಲ್ಲಿ, ವ್ಯಕ್ತಿಯೊಬ್ಬ ತನ್ನ ಪತ್ನಿಯ ಶೀಲ ಶಂಕಿಸಿ ಇಬ್ಬರು ಮಕ್ಕಳನ್ನು ಕುಡುಗೋಲಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಅಮಾನವೀಯ ಘಟನೆ ಯಾದಗಿರಿ ತಾಲೂಕಿನ ದುಗನೂರು ಕ್ಯಾಂಪ್ ನಲ್ಲಿ ನಡೆದಿದೆ. ಆರೋಪಿ ಶರಣಪ್ಪ, ತನ್ನ ಪತ್ನಿ ಹಾಗೂ ತಾಯಿ ಬಹಿರ್ದೆಸೆಗೆ ಹೋದ ವೇಳೆ ಮನೆಯಲ್ಲಿದ್ದ ಮೂರು ವರ್ಷ ಮಗ ಭಾರ್ಗವ್ ಮತ್ತು ಐದು ವರ್ಷದ ಸಾನ್ವಿಯನ್ನು ಕುಡುಗೋಲುನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಮತ್ತೋರ್ವ ಮಗ ಹೇಮಂತ್(8) ಮೇಲೂ ದಾಳಿ ಮಾಡಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ.

ಈ ಸುದ್ದಿಯನ್ನೂ ಓದಿ: International Yoga Day:‌ ಸಿಕ್ಕಾಪಟ್ಟೆ ವೈರಲ್‌ ಆಯ್ತು ಶ್ವಾನದ ಈ ಯೋಗಾಸನ; ವಿಡಿಯೊ ವೈರಲ್!

ಆರೋಪಿ ಶರಣಪ್ಪ 10 ವರ್ಷಗಳ ಹಿಂದೆ ಜಯಮ್ಮಳ ಜೊತೆ ಮದುವೆ ಆಗಿದ್ದು, ಆರಂಭದ ವರ್ಷಗಳಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಇಬ್ಬರ ದಾಂಪತ್ಯಕ್ಕೆ ಸಾಕ್ಷಿಯೆಂಬಂತೆ ಮೂರು ಜನ ಮುದ್ದಾದ ಮಕ್ಕಳೂ ಇದ್ದರು. ಆದರೆ ಕಳೆದ ಎರಡು ವರ್ಷಗಳಿಂದ ವಿಪರೀತವಾಗಿ ಪತ್ನಿಯ ಶೀಲ ಶಂಕಿಸುತ್ತಿದ್ದ ಶರಣಪ್ಪ, ಜಯಮ್ಮ ಯಾರ ಜೊತೆಗೆ ಮಾತಾಡಿದ್ರೂ ಅನುಮಾನ ಪಡುತ್ತಿದ್ದ. ಇರುವ ಮೂವರು ಮಕ್ಕಳು ತನಗೆ ಹುಟ್ಟಿಲ್ಲ ಎನ್ನುತ್ತಿದ್ದ. ಇದೇ ಕಾರಣಕ್ಕೆ ಜೀವ ಭಯದಿಂದ ಎರಡು ವರ್ಷಗಳ ಹಿಂದೆ ಮಕ್ಕಳ ಜೊತೆ ಜಯಮ್ಮ ತವರು ಸೇರಿದ್ದರು. ಶರಣಪ್ಪನೇ ಕೊಲೆ ಮಾಡಿ ಓಡಿ ಹೋಗಿದ್ದಾನೆ. ಘಟನಾ ಸ್ಥಳಕ್ಕೆ ಯಾದಗಿರಿ ಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.