ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಆನೇಕಲ್‌ನಲ್ಲಿ ಅಮಾನವೀಯ ಕೃತ್ಯ; ವರದಕ್ಷಿಣೆಗಾಗಿ ಮಹಿಳೆಯ ಕೂದಲು ಹಿಡಿದು, ಒದ್ದು ಮನಸೋ ಇಚ್ಛೆ ಹಲ್ಲೆ!

Assault Case: ವರದಕ್ಷಿಣೆಗಾಗಿ ಮಹಿಳೆಗೆ ಕಿರುಕುಳ ನೀಡಿರುವ ಗಂಡನ ಮನೆಯರು, ಆಕೆಯ ಕೂದಲು ಹಿಡಿದು ಎಳೆದಾಡಿ ಕಾಲಿನಿಂದ ಒದ್ದು ಭೀಕರವಾಗಿ ಹಲ್ಲೆ ಮಾಡಿದ್ದಾರೆ. ಆನೇಕಲ್‌ನ ನಾರಾಯಣಪುರದಲ್ಲಿ ಈ ಘಟನೆ ನಡೆದಿದೆ. ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಕ್ಷಿಣೆಗಾಗಿ ಪತ್ನಿ ಕೂದಲು ಹಿಡಿದು ಹಿಗ್ಗಾಮುಗ್ಗಾ ಹಲ್ಲೆ ಮಾಡಿದ ಪತಿ!

-

Prabhakara R Prabhakara R Sep 29, 2025 2:39 PM

ಬೆಂಗಳೂರು: ರಾಜ್ಯದಲ್ಲಿ ಅಮಾನವೀಯ ಘಟನೆಯೊಂದು (Assault Case) ನಡೆದಿದೆ. ವರದಕ್ಷಿಣೆಗಾಗಿ ಮಹಿಳೆಗೆ ಕಿರುಕುಳ ನೀಡಿರುವ ಗಂಡನ ಮನೆಯರು, ಆಕೆಯ ಕೂದಲು ಹಿಡಿದು ಎಳೆದಾಡಿ ಕಾಲಿನಿಂದ ಒದ್ದು ಭೀಕರವಾಗಿ ಹಲ್ಲೆ ಮಾಡಿದ್ದಾರೆ. ಆನೇಕಲ್‌ನ ನಾರಾಯಣಪುರದಲ್ಲಿ ಈ ನಡೆದಿದೆ. ಆನೇಕಲ್ ಪಟ್ಟಣದ ನಾರಾಯಣಪುರದಲ್ಲಿ ಪತಿ ಅರುಣ್, ಅತ್ತೆ ಪ್ರಭಾವತಿ, ಮಾವ ಚೌಡಪ್ಪ ಮೂವರು ಸೇರಿಕೊಂಡು ಮಹಿಳೆಯ ಮೇಲೆ ಹಲ್ಲೆ ಮಾಡಿದ್ದಾರೆ.

ಅರುಣ್ ಪತ್ನಿ ಶ್ರೀಲಜಾ ಮೇಲೆ ಗಜೇಂದ್ರ, ನರಸಿಂಹಮೂರ್ತಿ, ಲಕ್ಷ್ಮಿ, ಚೌಡಪ್ಪ ಅವರು ಹಲ್ಲೆ ಮಾಡಿ ಕಾಲಿನಿಂದ ಒದ್ದು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. 5 ವರ್ಷಗಳ ಹಿಂದೆ ಅರುಣ್ ಜತೆ ಶ್ರೀಲಜಾ ಮದುವೆಯಾಗಿದ್ದರು. ದಂಪತಿಗೆ ನಾಲ್ಕು ವರ್ಷದ ಹೆಣ್ಣು ಮಗು ಕೂಡ ಇದೆ.

ಮದುವೆಯಾದ ಮೇಲೂ ಪತಿ ಹಾಗೂ ಪತಿಯ ಮನೆಯವರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು. ಅಲ್ಲದೆ ಗಂಡ ಶ್ರೀಲಜಾ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದ. ಈ ವೇಳೆ ಹಿರಿಯರ ಸಮ್ಮುಖದಲ್ಲಿ ರಾಜಿ ಪಂಚಾಯಿತಿ ಕೂಡ ನಡೆದಿತ್ತು. ಕಳೆದ ಒಂದು ವಾರದ ಹಿಂದೆ ಶ್ರೀಲಜಾ ತವರು ಮನೆಗೆ ತೆರಳಿದ್ದರು. ಇದೀಗ ಮನೆಗೆ ಬಂದ ವೇಳೆ ಮನೆಗೆ ಸೇರಿಸಿದೆ ರಸ್ತೆ ಮೇಲು ಕೂದಲು ಹಿಡಿದು ಎಳೆದಾಡಿ, ಕಾಲಿನಿಂದ ಒದ್ದು ಭೀಕರವಾಗಿ ಹಲ್ಲೆ ಮಾಡಿದ್ದಾರೆ. ಈ ಕುರಿತು ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರಿನಲ್ಲಿ ಘೋರ ದುರಂತ, ಕೆರೆಯಲ್ಲಿ ಮುಳುಗಿ ಇಬ್ಬರ ಸಾವು

ಬೆಂಗಳೂರು : ಬೆಂಗಳೂರಿನಲ್ಲಿ (Bengaluru) ನಿನ್ನೆ ಘೋರವಾದ ದುರಂತ ಒಂದು ಸಂಭವಿಸಿದ್ದು, ಮೀನಿಗೆ ಬಲೆ ಹಾಕಲು ಹೋಗಿ ಕೆರೆಯಲ್ಲಿ (lake) ಮುಳುಗಿ (Drowned) ಇಬ್ಬರು ಸಾವನಪ್ಪಿದ್ದಾರೆ. ಬೆಂಗಳೂರು ಹೊರವಲಯದ ಹೆಸರಘಟ್ಟದ ಕೆರೆಯಲ್ಲಿ ಈ ಘಟನೆ ನಡೆದಿದೆ. ಕೆರೆಯಲ್ಲಿ ಮುಳುಗಿ ಮೃತಪಟ್ಟವರನ್ನು ಆನಂದ (32) ಹಾಗೂ ಅನಂತ (27) ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: Yedamuri Falls: ಎಡಮುರಿ ಫಾಲ್ಸ್‌ನಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳ ಸಾವು

ಮೀನಿಗೆ ಬಲೆ ಹಾಕಲು ಇಬ್ಬರು ತೆಪ್ಪದಲ್ಲಿ ಕೆರೆಯ ಮಧ್ಯೆ ತೆರಳಿದ್ದಾರೆ. ಕೆರೆಯ ಮಧ್ಯದಲ್ಲಿ ತೆಪ್ಪದ ಹುಟ್ಟು ಕೈ ತಪ್ಪಿ ಕೆರೆಗೆ ಬಿದ್ದಿತ್ತು. ಈ ವೇಳೆ ಆನಂದ ನೀರಿಗೆ ಧುಮುಕಿ ತೆಪ್ಪವನ್ನು ಹಿಡಿದುಕೊಂಡಿದ್ದ. ಆನಂದನನ್ನು ಮೇಲೆ ಎತ್ತಲು ಅನಂತ ಸಹ ನೀರಿಗೆ ಧುಮುಕಿದ್ದಾನೆ. ಈ ವೇಳೆ ಆನಂದ್ ಮತ್ತು ಅನಂತ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಸೋಲದೇವನಹಳ್ಳಿ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.