ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

India Pak Ceasefire: ಪಾಕ್‌ ವಿರುದ್ಧ ಭಾರತ ʼಬ್ರಹ್ಮೋಸ್‌ʼ ಪ್ರಯೋಗ ; ಕದನ ವಿರಾಮಕ್ಕೆ ಒತ್ತಾಯಿಸಲು ಅಸಲಿ ಕಾರಣವೇನು?

ಭಾರತ ಹಾಗೂ ಪಾಕಿಸ್ತಾನದ ನಡುವೆ ಸಂಘರ್ಷ ತಾರಕ್ಕೇರಿದೆ. ಈ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೇತೃತ್ವದಲ್ಲಿ ಶುಕ್ರವಾರ ಕದನ ವಿರಾಮ ಘೋಷಿಸಲಾಗಿದೆ. ಭಾರತದ ದಾಳಿಗೆ ಬೆಚ್ಚಿ ಬಿದ್ದ ಪಾಕಿಸ್ತಾನ ಅಮೆರಿಕದ ಮೊರೆ ಹೋಗಿತ್ತು. ಗುರುವಾರ ಸಿರ್ಸಾ ವಾಯುನೆಲೆ ಕಡೆಗೆ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಪಾಕಿಸ್ತಾನ ಹಾರಿಸಿತ್ತು.

ʼಬ್ರಹ್ಮೋಸ್‌ʼ ದಾಳಿಗೆ ಬೆದರಿದ  ಪಾಕಿಸ್ತಾನ

Profile Vishakha Bhat May 11, 2025 11:25 AM

ನವದೆಹಲಿ: ಭಾರತ ಹಾಗೂ ಪಾಕಿಸ್ತಾನದ ನಡುವೆ ಸಂಘರ್ಷ (India Pak Ceasefire) ತಾರಕ್ಕೇರಿದೆ. ಈ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೇತೃತ್ವದಲ್ಲಿ ಶುಕ್ರವಾರ ಕದನ ವಿರಾಮ ಘೋಷಿಸಲಾಗಿದೆ. ಭಾರತದ ದಾಳಿಗೆ ಬೆಚ್ಚಿ ಬಿದ್ದ ಪಾಕಿಸ್ತಾನ ಅಮೆರಿಕದ ಮೊರೆ ಹೋಗಿತ್ತು. ಗುರುವಾರ ಸಿರ್ಸಾ ವಾಯುನೆಲೆ ಕಡೆಗೆ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಪಾಕಿಸ್ತಾನ ಹಾರಿಸಿತ್ತು. ಇದರ ಪ್ರತೀಕಾರವಾಗೀ ಭಾರತ ಪಾಕಿಸ್ತಾನಕ್ಕೆ ಬಹು ದೊಡ್ಡ ಆಘಾತವನ್ನೇ ನೀಡಿದೆ. ಪಾಕಿಸ್ತಾನದ 10 ವಾಯುನೆಲೆಗಳ ಮೇಲೆ ಶುಕ್ರವಾರ ಭಾರತ ನಡೆಸಿದ ದಾಳಿಯು "ಮೇ 7 ರಂದು ನಡೆದ 'ಆಪರೇಷನ್ ಸಿಂದೂರ್' ಗಿಂತ ದೊಡ್ಡದಾಗಿದೆ" ಎಂದು ಭಾರತ ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ಪಿಂಡಿ ವಾಯು ನೆಲೆ ಸೇರಿದಂತೆ ಹಲವು ಕಡೆ ಭಾರತ ಅತೀ ದೊಡ್ಡ ದಾಳಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ದಾಳಿ ಮಾಡಲು ಬ್ರಹ್ಮೋಸ್‌ ಕ್ಷಿಪಣಿಗಳ ಬಳಕೆಯಾಗಿದೆ ಎಂದು ಭಾರತ ಹೇಳಿದೆ. 90 ನಿಮಿಷಗಳಲ್ಲಿ ಭಾರತವು ರಾವಲ್ಪಿಂಡಿಯ ನೂರ್ ಖಾನ್ ವಾಯುನೆಲೆ, ಶೋರ್ಕೋಟ್‌ನ ರಫೀಕಿ ವಾಯುನೆಲೆ, ಪಂಜಾಬ್‌ನ ಮುರಿಯದ್ ವಾಯುನೆಲೆ, ಸಿಂಧ್‌ನ ಸುಕ್ಕೂರ್ ವಾಯುನೆಲೆ, ಸಿಯಾಲ್‌ಕೋಟ್ ವಾಯುನೆಲೆ, ಪಸ್ರೂರ್ ವಾಯುನೆಲೆ, ಸರ್ಗೋಧಾ ವಾಯುನೆಲೆ, ಸ್ಕಾರ್ಡು ವಾಯುನೆಲೆ, ಕರಾಚಿ ಬಳಿಯ ಭೋಲಾರಿ ವಾಯುನೆಲೆ ಮತ್ತು ಜಕೋಬಾಬಾದ್ ವಾಯುನೆಲೆಯ ಮೇಲೆ ದಾಳಿ ಮಾಡಿತು. ಚುನಿಯನ್ ರಾಡಾರ್ ಸ್ಥಾಪನೆಯನ್ನು ಸಹ ಧ್ವಂಸ ಮಾಡಲಾಗಿದೆ.

ನೂರ್ ಖಾನ್ ಮತ್ತು ರಫೀಕಿ ವಾಯುನೆಲೆಗಳ ಮೇಲಿನ ದಾಳಿಯು ನಿರ್ಣಾಯಕವಾಗಿತ್ತು ಏಕೆಂದರೆ ಇದು ಪಾಕಿಸ್ತಾನದ ವಾಯು ಲಾಜಿಸ್ಟಿಕ್ಸ್ ಹೊಂದಿದೆ. ನೂರ್ ಖಾನ್ ನೆಲೆಯು ಇಸ್ಲಾಮಾಬಾದ್‌ಗೆ ಹತ್ತಿರದಲ್ಲಿದೆ, ಇದನ್ನು ಹೆಚ್ಚಾಗಿ ವಿಐಪಿ ಸಾಗಣೆ ಮತ್ತು ಮಿಲಿಟರಿ ಲಾಜಿಸ್ಟಿಕ್ಸ್‌ಗಾಗಿ ಬಳಸಲಾಗುತ್ತದೆ, ಇದನ್ನು ತಟಸ್ಥಗೊಳಿಸುವುದರಿಂದ ಸಂಘರ್ಷದ ಸಮಯದಲ್ಲಿ ಪಾಕಿಸ್ತಾನ ವಾಯುಪಡೆ (ಪಿಎಎಫ್) ನಾಯಕತ್ವ ಮತ್ತು ಅದರ ಕಾರ್ಯಾಚರಣೆಯ ಘಟಕಗಳ ನಡುವಿನ ನಿರ್ಣಾಯಕ ಸಂಪರ್ಕವನ್ನು ಕಡಿದುಹಾಕಿತು ಎಂದು ಮೂಲಗಳು ಹೇಳುತ್ತವೆ. ಯುದ್ಧ ಸ್ಕ್ವಾಡ್ರನ್‌ಗಳನ್ನು ಹೊಂದಿರುವ ಪ್ರಮುಖ ಯುದ್ಧ ವಿಮಾನ ನೆಲೆ ರಫೀಕಿಯನ್ನು ಧ್ವಂಸಗೊಳಿಸಲಾಯಿತು.

ಈ ಸುದ್ದಿಯನ್ನೂ ಓದಿ: India-Pakistan Conflict: ಪಾಕಿಸ್ತಾನ ಹೇಳಿರುವ ಏಳು ದೊಡ್ಡ ಸುಳ್ಳು ಸುದ್ದಿಗಳಿಗೆ ಸಾಕ್ಷಿ ನೀಡಿದ ಭಾರತ

ಭಾರತದ ಉಗ್ರ ರೂಪವನ್ನು ಕಂಡ ಪಾಕಿಸ್ತಾನ ಬೆಚ್ಚಿ ಬಿದ್ದಿದೆ. ಅಷ್ಟೇ ಅಲ್ಲದೆ ಇದು ಪರಮಾಣು ಸಂಘರ್ಷಕ್ಕೆ ಕಾರಣವಾಗಬಹುದು ಎಂದು ಅಮೆರಿಕ ಮಧ್ಯವಸ್ಥಿಕೆ ವಹಿಸಲು ಮುಂದಾಗಿದೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಅಸಿಮ್ ಮುನೀರ್ ಅವರಿಗೆ ಕರೆ ಮಾಡಿ ಕದನ ವಿರಾಮ ಸೂಚಿಸುವಂತೆ ಘೋಷಿಸಲಾಗಿದೆ.