Mohan Vishwa Column: ಸುತ್ತಲ ಶತ್ರುತ್ವದಿಂದ ಬೆಳೆದ ಪುಟ್ಟ ದೇಶ ಇಸ್ರೇಲ್
ಬೇರೆ ದೇಶದವರ ಜತೆಗಿನ ವ್ಯಾಪಾರ ಸ್ತಬ್ಧವಾಗಿದ್ದ ಕಾರಣ ಇಸ್ರೇಲಿಗಳಿಗೆ ವಸ್ತುಗಳ ಮಾರಾಟ ಮರೀಚಿಕೆಯಾಗಿತ್ತು. ವಿಽಯಿಲ್ಲದೆ ಇಸ್ರೇಲ್ ಕುಳಿತಲ್ಲಿ ಏನಾದರೊಂದು ಕೆಲಸ ಮಾಡಬೇಕೆಂಬ ಅನಿವಾರ್ಯ ಪರಿಸ್ಥಿತಿ ಎದುರಾಗಿತ್ತು. ಅಂದಿನ ಅನಿವಾರ್ಯತೆ ಇಂದು ಇಸ್ರೇಲ್ ದೇಶ ಜಗತ್ತಿನಲ್ಲಿ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಯಿತು.
-
ವೀಕೆಂಡ್ ವಿತ್ ಮೋಹನ್
ತನ್ನ ಸುತ್ತಲೂ ಇರುವ ಮುಸ್ಲಿಂ ರಾಷ್ಟ್ರಗಳ ಮನಸ್ಥಿತಿಯನ್ನು ಸರಿಯಾಗಿ ಅರ್ಥಮಾಡಿಕೊಂಡಿರುವ ಇಸ್ರೇಲ್, ಒಂದು ಸಣ್ಣ ತಪ್ಪನ್ನೂ ಗಂಭೀರವಾಗಿ ನೋಡುತ್ತದೆ. ಜಗತ್ತಿನ ಯಾವ ದೇಶವೂ ತನ್ನ ಪ್ರಜೆಗಳ ಭದ್ರತೆಗಾಗಿ ಇಷ್ಟೊಂದು ಯುದ್ದಗಳನ್ನು ಮಾಡಿಲ್ಲ, ಕಾರ್ಯಾಚರಣೆಗಳನ್ನು ನಡೆಸಿಲ್ಲ. ಸುತ್ತಲಿನ ಮುಸ್ಲಿಂ ರಾಷ್ಟ್ರಗಳಿಂದ ತನ್ನ ಮೇಲಾಗುವ ದಾಳಿಗಳನ್ನು, ಒಂದು ಪುಟ್ಟ ರಾಷ್ಟ್ರವಾಗಿ ಹೇಗೆ ನಿಭಾಯಿಸಬೇಕು ಎಂಬುದನ್ನು ಇಸ್ರೇಲ್ ಇಡೀ ಜಗತ್ತಿಗೆ ಆಗಾಗ ತೋರಿಸಿ ಕೊಡುತ್ತದೆ.
ಇಸ್ರೇಲ್ 1948ರಲ್ಲಿ ಸ್ವತಂತ್ರಗೊಂಡಾಗ, ಅದರ ಬಳಿ ಒಂದೂ ಯುದ್ಧ ವಿಮಾನ ಇರಲಿಲ್ಲ. ಜಗತ್ತಿನ ಯುದ್ಧಭೂಮಿಗಳಲ್ಲಿ ಎರಡನೇ ಮಹಾಯುದ್ಧದ ಪರಿಣಾಮವಾಗಿ ಅಲ್ಲಲ್ಲಿ ಬಿದ್ದಿದ್ದ ಯುದ್ಧ ವಿಮಾನಗಳ ಅವಶೇಷಗಳನ್ನು ತನ್ನ ದೇಶಕ್ಕೆ ತಂದು, ಇಸ್ರೇಲ್ ಮೊಟ್ಟ ಮೊದಲ ಯುದ್ಧವಿಮಾನವನ್ನು ನಿರ್ಮಿಸಿಕೊಂಡಿತ್ತು. ಇಷ್ಟು ಕಷ್ಟ ಪಟ್ಟು ತನ್ನ ನೆಲೆ ಯನ್ನು ಗಟ್ಟಿಯಾಗಿ ಜಗತ್ತಿನ ಮುಂದೆ ಕಟ್ಟಿಕೊಂಡ ದೇಶ ಇಸ್ರೇಲ್.
ಜಗತ್ತಿನಲ್ಲಿ ಯಹೂದಿಗಳ ಮಾರಣಹೋಮ ನಡೆಯುತ್ತಿರುವಾಗ, ಯಹೂದಿಗಳ ದೇಶ ವಾಗಿ ಇಸ್ರೇಲ್ ಹೊರಹೊಮ್ಮಿತ್ತು. ತನ್ನ ಸುತ್ತಲೂ ಮುಸ್ಲಿಂ ರಾಷ್ಟ್ರಗಳ ಶತ್ರುತ್ವ ವನ್ನಿಟ್ಟುಕೊಂಡು ಇಡೀ ಜಗತ್ತೇ ತನ್ನೆಡೆಗೆ ನೋಡುವಂತೆ ಬೆಳೆದದ್ದು ಇಸ್ರೇಲ್ ದೇಶದ ದೊಡ್ಡ ಸಾಧನೆ.
ಯಹೂದಿಗಳ ಬುದ್ಧಿವಂತಿಕೆಯನ್ನು ತಿಳಿದಿದ್ದ ಅಕ್ಕಪಕ್ಕದ ಇಸ್ಲಾಮಿಕ್ ರಾಷ್ಟ್ರಗಳು, ಇಸ್ರೇಲಿಗರಿಗೆ ಹೊರ ಜಗತ್ತಿನೊಂದಿಗೆ ನಿರ್ಬಂಧದ ಬೇಲಿ ಹಾಕಿದ್ದರು. ಇಸ್ರೇಲಿಗಳೊಂದಿಗೆ ಪಶ್ಚಿಮ ದೇಶಗಳ ಸಂಪರ್ಕ ಇಲ್ಲದಂತೆ ಮಾಡಿದ್ದರು. ಇಸ್ರೇಲಿಗಳೊಂದಿಗೆ ಯಾರೊಬ್ಬ ರನ್ನೂ ವ್ಯವಹಾರ ಮಾಡಲು ಬಿಡುತ್ತಿರಲಿಲ್ಲ.
ಇವರೊಂದಿಗೆ ವ್ಯವಹಾರ ಮಾಡಲು ಮುಂದೆ ಬಂದವರಿಗೆ ಒಂದಲ್ಲ ಒಂದು ರೀತಿಯಲ್ಲಿ ಕಿರುಕುಳ ನೀಡಲಾಗುತ್ತಿತ್ತು. ಹೊರ ದೇಶದ ವ್ಯಾಪಾರಿಗಳು ಇಸ್ರೇಲಿಗಳೊಂದಿಗೆ ವ್ಯಾಪಾರ ಮಾಡಲು ಹೆದರುತ್ತಿದ್ದರು. ತನ್ನ ಪಕ್ಕವಿರುವ ಮುಸ್ಲಿಂ ರಾಷ್ಟ್ರಗಳ ಕಿರುಕುಳದಿಂದ ಬೇಸತ್ತಿದ್ದ ಯಹೂದಿಗಳಿಗೆ ದಿಕ್ಕೇ ತೋಚದಂತಾಗಿತ್ತು.
ಅತಿ ಪುಟ್ಟ ದೇಶವಾಗಿದ್ದ ಇಸ್ರೇಲ್ ತಾನೇ ದುಡಿದು ತನ್ನವರಿಗೆ ಹಂಚಿ ದೇಶವನ್ನು ನಡೆಸುವುದು ಕಷ್ಟವಾಗಿತ್ತು. ಹೊರ ಜಗತ್ತಿನ ಸಂಪರ್ಕವೇ ಇಲ್ಲದ ಕಾರಣ ಬೇರೆ ದೇಶಗಳಲ್ಲಿ ಏನಾಗುತ್ತಿದೆಯೆಂಬ ಮಾಹಿತಿ ಅವರಿಗೆ ಸರಿಯಾಗಿ ತಿಳಿಯುತ್ತಿರಲಿಲ್ಲ.
ಬೇರೆ ದೇಶದವರ ಜತೆಗಿನ ವ್ಯಾಪಾರ ಸ್ತಬ್ಧವಾಗಿದ್ದ ಕಾರಣ ಇಸ್ರೇಲಿಗಳಿಗೆ ವಸ್ತುಗಳ ಮಾರಾಟ ಮರೀಚಿಕೆಯಾಗಿತ್ತು. ವಿಧಿಯಿಲ್ಲದೆ ಇಸ್ರೇಲ್ ಕುಳಿತಲ್ಲಿ ಏನಾದರೊಂದು ಕೆಲಸ ಮಾಡಬೇಕೆಂಬ ಅನಿವಾರ್ಯ ಪರಿಸ್ಥಿತಿ ಎದುರಾಗಿತ್ತು. ಅಂದಿನ ಅನಿವಾರ್ಯತೆ ಇಂದು ಇಸ್ರೇಲ್ ದೇಶ ಜಗತ್ತಿನಲ್ಲಿ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಯಿತು.
ಮನೆಗಳಲ್ಲಿ, ಆಫೀಸ್‌ಗಳಲ್ಲಿ ಸಣ್ಣ ಸಣ್ಣ ಆವಿಷ್ಕಾರಗಳು ಪ್ರಾರಂಭವಾದವು. ಅವರ ನೂತನ ಆವಿಷ್ಕಾರಗಳನ್ನು ಹುಡುಕಿಕೊಂಡು ಹೊರಜಗತ್ತು ಅವರ ಬಳಿ ಬಂದಿತು. ಅವರ ಆವಿಷ್ಕಾರಗಳ ನಡುವೆ ಅಕ್ಕ ಪಕ್ಕದ ಮುಸ್ಲಿಂ ರಾಷ್ಟ್ರಗಳ ದಾಳಿ ಇಸ್ರೇಲಿನ ಮೇಲೆ ನಿರಂತರವಾಗಿ ನಡೆಯುತ್ತಿತ್ತು. ಪಕ್ಕದ ಶತ್ರುರಾಷ್ಟ್ರಗಳ ನಿರಂತರ ದಾಳಿಗಳಿಂದ ರಕ್ಷಿಸಿ ಕೊಳ್ಳಲು ಇಸ್ರೇಲ್ ಅತ್ಯಂತ ವೇಗವಾಗಿ ತನ್ನ ಸೈನ್ಯವನ್ನು ಬಲಪಡಿಸಬೇಕಾಯಿತು.
‘ಆರು ದಿನಗಳ ಯುದ್ಧ’ ಎಂದೇ ಖ್ಯಾತಿ ಪಡೆದಿರುವ ಇಸ್ರೇಲ್ ಹಾಗೂ ಅರಬ್ ದೇಶಗಳ ನಡುವಣ ಹಣಾಹಣಿಯು, ಇಸ್ರೇಲಿನ ಶೌರ್ಯಕ್ಕೆ ಸಾಕ್ಷಿಯಾಗಿತ್ತು. 1967ರಲ್ಲಿ ನಡೆದ ಈ ಯುದ್ಧದಲ್ಲಿ, ಮುಸ್ಲಿಂ ರಾಷ್ಟ್ರಗಳಾದ ಈಜಿ, ಸಿರಿಯಾ ಹಾಗೂ ಜೋರ್ಡನ್ ಇಸ್ರೇಲಿನ ವಿರುದ್ಧ ಯುದ್ಧಕ್ಕೆ ಬಂದವು.
ಮೂರು ದಿಕ್ಕುಗಳಿಂದ ಇಸ್ರೇಲಿನ ಮೇಲೆ ಆಕ್ರಮಣ ಮಾಡಿ, ಆ ದೇಶವನ್ನು ಅಂದು ಜಗತ್ತಿನ ಭೂಪಟದಿಂದ ತೆಗೆದು ಹಾಕಿಬಿಡಬೇಕೆಂದು ಅವು ಪಣ ತೊಟ್ಟಿದ್ದವು. ಆದರೆ ಪುಟ್ಟ ದೇಶ ಇಸ್ರೇಲ್ ಅವರ ಆಕ್ರಮಣಕ್ಕೆ ಹೆದರಲಿಲ್ಲ.
ಪ್ರತಿಯಾಗಿ ತಾನೂ ಆಕ್ರಮಣಕ್ಕೆ ನಿಂತಿತು. ಮೂರು ದೇಶಗಳು ಒಟ್ಟುಗೂಡಿದರೂ ಇಸ್ರೇಲನ್ನು ಸೋಲಿಸಲು ಸಾಧ್ಯವಾಗಲಿಲ್ಲ. ಇಸ್ರೇಲ್ ಅಂದಿನ ಕಾಲದಲ್ಲಿ ತನ್ನಲ್ಲಿದ್ದ ಅತ್ಯಾಧುನಿಕ ಯುದ್ಧವಿಮಾನಗಳಿಂದ ಮೂರೂ ದೇಶದ ಸೈನಿಕರ ಮೇಲೆ ದಾಳಿ ನಡೆಸಿತು.
ಇಸ್ರೇಲಿನ ಸೈನ್ಯದ ಸಾಮರ್ಥ್ಯದ ಅರಿವಿಲ್ಲದ ಅಕ್ಕಪಕ್ಕದ ಮುಸ್ಲಿಂ ರಾಷ್ಟ್ರಗಳು ನೋಡ ನೋಡುತ್ತಿದ್ದಂತೆ, ಯುದ್ಧ ಮಾಡಲಾಗದೆ ಓಡಿಹೋದವು. ದೊಡ್ಡದೊಂದು ಯುದ್ಧ ಆರು ದಿನದಲ್ಲಿ ಮುಗಿದು ಹೋಯಿತು. ಅಂದಿನ ಕಾಲದಲ್ಲಿ ಇಸ್ರೇಲ್ ಇಡೀ ಕೊಲ್ಲಿ ರಾಷ್ಟ್ರಗಳಿಗೆ ದೊಡ್ಡ ಸಂದೇಶವನ್ನು ರವಾನಿಸಿತ್ತು.
ಇಸ್ರೇಲಿನ ಮೇಲಿನ ದಾಳಿಗಳು ಇಷ್ಟಕ್ಕೇ ನಿಲ್ಲಲಿಲ್ಲ, ಅಂದಿನಿಂದ ಇಂದಿನವರೆಗೂ ನಿರಂತರವಾಗಿ ನಡೆಯುತ್ತಲೇ ಇವೆ. ಜಗತ್ತಿನಾದ್ಯಂತ ತನ್ನ ಮೇಲೆ ಆಗುವ ದಾಳಿಗಳನ್ನು ತಡೆಯುವ ಸಲುವಾಗಿ ಇಸ್ರೇಲ್ ‘ಮೊಸಾದ್’ ಬೇಹುಗಾರಿಕಾ ಸಂಸ್ಥೆಯನ್ನು ಹುಟ್ಟು ಹಾಕಿತು. ಇದು ಈಗ ಜಗತ್ತಿನ ಅತ್ಯಂತ ಪ್ರಬಲ ಬೇಹುಗಾರಿಕೆ ಸಂಸ್ಥೆಯಾಗಿದೆ.
ಮೊಸಾದ್ ಇಲ್ಲದೆ ಹೋಗಿದ್ದರೆ ಇಷ್ಟು ಹೊತ್ತಿಗೆ ಇರಾನ್ ಬಳಿ ಅಣ್ವಸ್ತ್ರವಿರುತ್ತಿತ್ತು. ದಶಕಗಳ ಕಾಲ ಇಸ್ರೇಲ್ ತನ್ನ ಬೇಹುಗಾರಿಕೆ ಮೂಲಕ ಇರಾನ್ ದೇಶದಅಣ್ವಸ್ತ್ರ ಯೋಜನೆಯನ್ನು ನಾಶಗೊಳಿಸಿದೆ. ತನ್ನ ಬೇಹುಗಾರಿಕೆಯ ನೆರವಿನಿಂದ ಇರಾನ್ ದೇಶದ ಅಣ್ವಸ್ತ್ರ ವಿಜ್ಞಾನಿಗಳನ್ನು ಕೊಲ್ಲಿಸಿದೆ.
ಅಣ್ವಸ್ತ್ರ ತಯಾರಿಕಾ ಘಟಕಗಳಿಗೆ ಕಳಪೆ ಸಾಮಗ್ರಿಗಳನ್ನು ಪೂರೈಕೆ ಮಾಡಿಸಿ ಇರಾನ್ ದೇಶದ ಅಣ್ವಸ್ತ್ರ ಅಭಿವೃದ್ಧಿಯನ್ನು ನಾಶಗೊಳಿಸಿದೆ. ಪಾಕಿಸ್ತಾನದ ವಿಜ್ಞಾನಿ ಇರಾನ್ ದೇಶಕ್ಕೆ ಸಹಾಯ ಮಾಡುತ್ತಿದ್ದ ವಿಷಯವನ್ನು ಬಹಿರಂಗಪಡಿಸಿದ್ದು ಇಸ್ರೇಲಿನ ಮೊಸಾದ್. ಪ್ರತಿನಿತ್ಯವೂ ತನ್ನ ಮಗ್ಗುಲುಮುಳ್ಳಾಗಿರುವ ಗಾಜಾಪಟ್ಟಿ ಹಾಗೂ ಪ್ಯಾಲೆಸ್ತೀನಿನ ಹಮಾಸ್ ಉಗ್ರರ ಜತೆ ಹೊಡೆದಾಡಿ, ಅಲ್ಲಿರುವ ಭಯೋತ್ಪಾದಕರ ಹುಟ್ಟಡಗಿಸುವ ಕೆಲಸವನ್ನು ಇಸ್ರೇಲ್ ಮಾಡುತ್ತಲಿರುತ್ತದೆ.
ಸುತ್ತಲೂ ಇರುವ ಮುಸ್ಲಿಂ ರಾಷ್ಟ್ರಗಳ ಬೆಂಬಲ ಪ್ಯಾಲೆಸ್ತೀನಿಗಳಿಗೆ ಇದ್ದರೂ ಇಸ್ರೇಲಿಗಳನ್ನು ಏನೂ ಮಾಡಲಾಗುತ್ತಿಲ್ಲ. ಇಸ್ರೇಲಿನ ಹಲವು ಸ್ಥಳಗಳ ಮೇಲೆ ದಾಳಿ ನಡೆಸುವ ಸಂಚನ್ನು ಪ್ಯಾಲೆಸ್ತೀನಿಗಳು ಪ್ರತಿನಿತ್ಯವೂ ಮಾಡುತ್ತಿರುತ್ತಾರೆ.
ಇಸ್ರೇಲಿನ ಸೈನಿಕರು ಪ್ಯಾಲೆಸ್ತೀನಿಗಳ ಜಾಗಗಳಿಗೆ ನುಗ್ಗಿ ಹಲವು ಭಯೋತ್ಪಾದಕರನ್ನು ಹುಡುಕಿ ಕೊಲ್ಲುತ್ತಾರೆ. ಇಸ್ರೇಲಿ ಸೈನಿಕರು ಯಾವ ಮಟ್ಟದ ತರಬೇತಿ ಪಡೆದಿರುತ್ತಾರೆಂದರೆ, ಪ್ಯಾಲೆಸ್ತೀನಿಗಳ ಜತೆಯಲ್ಲಿ ತಿಂಗಳುಗಳ ಕಾಲ ಶಿಬಿರ ಹೂಡಿ ಅಲ್ಲಿನ ಅರಬ್ ಭಾಷೆ, ಆಚಾರ-ವಿಚಾರಗಳನ್ನು ತಿಳಿದುಕೊಂಡು ಅವರ ಜತೆಯಲ್ಲಿದ್ದುಕೊಂಡು ಸರಿಯಾದ ಸಮಯಕ್ಕೆ ಕಾಯ್ದು ಭಯೋತ್ಪಾದಕರನ್ನು ಕೊಲ್ಲುತ್ತಾರೆ.
ಇಸ್ರೇಲ್ ಸೈನ್ಯದ ಡ್ರೋನ್ʼಗಳು ಸದಾ ಗಾಜಾಪಟ್ಟಿಯ ರಸ್ತೆಗಳ ಮೇಲೆ ನಿಗವಿಟ್ಟಿತ್ತಿರುತ್ತವೆ. ಒಂದೊಂದು ಕಾರ್ಯಾಚರಣೆಯನ್ನು ಮಾಡಬೇಕಾದರೂ ಡ್ರೋನ್‌ಗಳು ಶತ್ರುವನ್ನು ಸುತ್ತುತ್ತಿರುತ್ತವೆ. ಕಾರ್ಯಾಚರಣೆಯ ಸಂದರ್ಭದಲ್ಲಿ ತನ್ನ ಸೈನ್ಯದಲ್ಲಿ ಒಬ್ಬ ಸೈನಿಕ ಸತ್ತನೆಂದರೆ ಅದರ ಸೇಡು ತೀರಿಸಿಕೊಳ್ಳುವವರೆಗೂ ಇಸ್ರೇಲ್ ಬಿಡುವುದಿಲ್ಲ.
ಇಸ್ರೇಲ್ ದೇಶದಲ್ಲಿ ಹುಟ್ಟುವ ಪ್ರತಿಯೊಂದು ಮಗುವಿಗೂ, ಕೆಲವೇ ವರ್ಷಗಳಲ್ಲಿ ಗೊತ್ತಾಗುವ ವಿಷಯವೆಂದರೆ ತನ್ನ ಸುತ್ತಲೂ ಇರುವ ಶತ್ರುಗಳ ವಿರುದ್ಧ ಸಾಯುವವರೆಗೂ ಹೋರಾಡಲು ಸಿದ್ಧವಿರಲೇಬೇಕು ಎಂಬುದು. ಆ ಹೋರಾಟವು ಸೈನ್ಯದ ಹೋರಾಟ ವಾಗಿರಬಹುದು ಅಥವಾ ತಾನು ಸಂಶೋಧನೆಗಳನ್ನು ಮಾಡಿ ತನ್ನ ದೇಶವನ್ನು ರಕ್ಷಿಸಿಕೊಳ್ಳುವಲ್ಲಿ ಭಾಗವಹಿಸುವ ಹೋರಾಟವಿರಬಹುದು.
ಪುಟ್ಟ ರಾಷ್ಟ್ರವಾಗಿರುವ ಇಸ್ರೇಲ್ ಎಂದೂ ತನ್ನನ್ನು ಚಿಕ್ಕವನೆಂದುಕೊಳ್ಳಲಿಲ್ಲ. ತನ್ನನ್ನು ತುಳಿಯಲು ಪ್ರಯತ್ನಿಸಿದ ಮುಸ್ಲಿಂ ರಾಷ್ಟ್ರಗಳ ವಿರುದ್ಧ ಸೆಟೆದು ನಿಂತು ಹೋರಾಡಿತು. ಸುತ್ತಲೂ ಇರುವ ಶತ್ರುಗಳನ್ನು ಎದುರು ಹಾಕಿಕೊಂಡು ಬದುಕಬೇಕೆಂದರೆ, ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕೆಂಬ ವಿಷಯವನ್ನು ಇಸ್ರೇಲಿನ ಪಿತಾಮಹ ಬೆನ್ ಗುರಿಯನ್ 1948ರಲ್ಲಿ ಅರ್ಥ ಮಾಡಿಕೊಂಡಿದ್ದರು.
ಜಗತ್ತಿನಾದ್ಯಂತ ಇದ್ದ ಯಹೂದಿಗಳನ್ನು ಒಂದೆಡೆ ಸೇರಿಸಿ ಅವರು ಇಸ್ರೇಲ್ ದೇಶವನ್ನು ಕಟ್ಟಿದರು. ಅವರು ಹಾಕಿಕೊಟ್ಟ ಅಡಿಪಾಯವನ್ನು ಅವರ ಉತ್ತರಾಧಿಕಾರಿಗಳು ಚೆನ್ನಾಗಿ ನಡೆಸಿಕೊಂಡು ಬಂದಿದ್ದಾರೆ. ವಾಸ್ತವವಾಗಿ ಬೆನ್ ಗುರಿಯನ್ ಅಧಿಕಾರ ಹಸ್ತಾಂತರವಾದ ಮೇಲೆ ಇಸ್ರೇಲ್, ಅರಬ್ ರಾಷ್ಟ್ರಗಳಿಂದ ಹೆಚ್ಚಿನ ತೊಂದರೆಯನ್ನು ಅನುಭವಿಸಿತ್ತು.
ಮುಸ್ಲಿಂ ರಾಷ್ಟ್ರಗಳ ಮೇಲೆ ನಡೆದ ಆರು ದಿನಗಳ ಯುದ್ಧವಾಗಿರಬಹುದು ಅಥವಾ ಎಂಟೆಬ್ಬೆಯಲ್ಲಿ ನಡೆದ ಸೈನ್ಯದ ಕಾರ್ಯಾಚರಣೆಯಾಗಿರಬಹುದು ಅಥವಾ ಜರ್ಮನ್ ಒಲಿಂಪಿಕ್ಸ್ʼನಲ್ಲಿ ನಡೆದ ದುರಂತವಾಗಿರಬಹುದು, ಈ ಎಲ್ಲವೂ 1965ರ ನಂತರ ನಡೆದ ಕಾರ್ಯಾಚರಣೆಗಳು.
ಹಮಾಸ್ ಸಂಘಟನೆಯ ಒಬ್ಬ ಭಯಯೋತ್ಪಾದಕನನ್ನು ಇಸ್ರೇಲಿ ಸೈನಿಕರು ಹೊಡೆದು ರುಳಿಸಿದರೆ, ಮತ್ತೊಬ್ಬನು ರಕ್ತಬೀಜಾಸುರನಂತೆ ಹುಟ್ಟುತ್ತಾರೆ. ಇವರೆಲ್ಲರ ಉದ್ದೇಶ ಒಂದೇ- ಹೇಗಾದರೂ ಮಾಡಿ ಯಹೂದಿಗಳನ್ನು ಜಗತ್ತಿನಲ್ಲಿ ಸಂಪೂರ್ಣವಾಗಿ ಇಲ್ಲದಂತೆ ಮಾಡುವುದು.ಯಹೂದಿಗಳ ಬುದ್ಧಿವಂತಿಕೆಯ ಬಗ್ಗೆ ತಿಳಿದಿರುವ ಅಮೆರಿಕ, ಇಸ್ರೇಲ್ ದೇಶದ ಪರವಾಗಿ ಸದಾ ನಿಲ್ಲುತ್ತದೆ.
ಯಹೂದಿಗಳು ಅಮೆರಿಕದಲ್ಲಿ ನಡೆದಿರುವ ಸಾವಿರಾರು ಸಂಶೋಧನೆಗಳಿಗೆ ಕಾರಣರಾಗಿzರೆ. ಅಮೆರಿಕದ ದೊಡ್ಡ ದೊಡ್ಡ ಕಂಪನಿಗಳು ತಮ್ಮ ನೂತನ ಆವಿಷ್ಕಾರಗಳನ್ನು ಯಹೂದಿ ಗಳಿಂದಲೇ ಮಾಡಿಸುತ್ತವೆ. ಪ್ರತಿ ವರ್ಷ ಬಿಲಿಯನ್‌ಗಟ್ಟಲೆ ಹಣವನ್ನು ಇದಕ್ಕಾಗಿ ಸುರಿಯಲಾಗುತ್ತದೆ.
ಇಸ್ರೇಲ್, ಮಧ್ಯಪ್ರಾಚ್ಯದಲ್ಲಿನ ಅಮೆರಿಕದ ಒಂದು ‘ಸ್ಟಾರ್ಟ್ ಅಪ್’ ಎಂದರೆ ತಪ್ಪಾಗ ಲಾರದು. ಪಕ್ಕದ ಮುಸ್ಲಿಂ ದೇಶಗಳಿಗೆ ಇದರ ಅರಿವಿಲ್ಲ. ನೂರಾರು ವರ್ಷದಷ್ಟು ಹಳೆಯ ವಿಚಾರಗಳನ್ನು ಈಗಲೂ ಪಾಲಿಸುವ ಸಲುವಾಗಿ ಅವು ಇಸ್ರೇಲಿಗಳ ಮೇಲೆ ಸದಾ ಹಗೆ ಸಾಽಸುತ್ತಲೇ ಇರುತ್ತವೆ.
ಸರ್ವಾಧಿಕಾರಿ ಹಿಟ್ಲರ್ ಯಹೂದಿಗಳ ಬುದ್ಧಿವಂತಿಕೆಯ ಅರಿವಿಲ್ಲದೆ ಅವರನ್ನು ಕೊಲ್ಲಿಸಿದ. ಆತನಿಂದ ಅಳಿದುಳಿದ ಯಹೂದಿಗಳ ದೇಶವಾಗಿ ಹೊರಹೊಮ್ಮಿದ ಇಸ್ರೇಲ್ ದೇಶವನ್ನು ಪಕ್ಕದ ಶತ್ರುದೇಶಗಳು ಸರ್ವನಾಶ ಮಾಡಲು ಹಪಹಪಿಸುತ್ತಿರುತ್ತವೆ.
ಸಾವಿರಾರು ಕಿ.ಮೀ. ದೂರದ ಅಮೆರಿಕದ ಮೇಲೆ ದಾಳಿ ಮಾಡಿದ ಭಯೋತ್ಪಾದಕರಿಗೆ ತಮ್ಮ ಪಕ್ಕದಲ್ಲಿರುವ ಇಸ್ರೇಲ್ ದೇಶವನ್ನು ಮುಟ್ಟಲು ಸಾಧ್ಯವಾಗುತ್ತಿಲ್ಲವೆಂದರೆ ಇಸ್ರೇಲ್ ಎಷ್ಟರ ಮಟ್ಟಿಗೆ ತನ್ನ ಮೇಲಿನ ದಾಳಿಗಳನ್ನು ಎದುರಿಸಲು ಸದಾ ಸಿದ್ಧವಾಗಿರುತ್ತದೆ ಎಂಬುದನ್ನು ನೀವು ಊಹಿಸಬಹುದು.
ತನ್ನ ಸುತ್ತಲೂ ಇರುವ ಮುಸ್ಲಿಂ ರಾಷ್ಟ್ರಗಳ ಮನಸ್ಥಿತಿಯನ್ನು ಸರಿಯಾಗಿ ಅರ್ಥ ಮಾಡಿಕೊಂಡಿರುವ ಇಸ್ರೇಲ್, ಒಂದು ಸಣ್ಣ ತಪ್ಪನ್ನೂ ಗಂಭೀರವಾಗಿ ನೋಡುತ್ತದೆ. ತನ್ನ ದೇಶದ ಪ್ರತಿಯೊಬ್ಬ ಯಹೂದಿ ಪ್ರಜೆಯನ್ನು ಕಾಪಾಡುವ ನಿಟ್ಟಿನಲ್ಲಿ ಇಸ್ರೇಲ್ ಯಾವ ಮಟ್ಟಕ್ಕೆ ಬೇಕಾದರೂ ಹೋರಾಡುತ್ತದೆ.
ಇಸ್ರೇಲಿನಲ್ಲಿ ಯಹೂದಿಯಾಗಿ ಹುಟ್ಟಿದವನಿಗೆ ಅವನ ತಲೆ ಮೇಲೆ ಪಕ್ಕದ ಇಸ್ಲಾಮಿಕ್ ದೇಶಗಳ ಸಾವಿನ ಕತ್ತಿ ಸದಾ ತೂಗಾಡುತ್ತಲೇ ಇರುತ್ತದೆ. ಜಗತ್ತಿನ ಯಾವ ದೇಶವೂ ತನ್ನ ಪ್ರಜೆಗಳ ಭದ್ರತೆಗಾಗಿ ಇಷ್ಟೊಂದು ಯುದ್ದಗಳನ್ನು ಮಾಡಿಲ್ಲ, ಇಷ್ಟೊಂದು ಕಾರ್ಯಾಚರಣೆಗಳನ್ನು ನಡೆಸಿಲ್ಲ.
ತನ್ನ ಸುತ್ತಲೂ ಇರುವ ಮುಸ್ಲಿಂ ರಾಷ್ಟ್ರಗಳಿಂದ ತನ್ನ ಮೇಲಾಗುವ ದಾಳಿಗಳನ್ನು, ಒಂದು ಪುಟ್ಟ ರಾಷ್ಟ್ರವಾಗಿ ಹೇಗೆ ನಿಭಾಯಿಸಬೇಕು ಎಂಬುದನ್ನು ಇಸ್ರೇಲ್ ಇಡೀ ಜಗತ್ತಿಗೆ ಆಗಾಗ ತೋರಿಸಿಕೊಡುತ್ತದೆ.