Avneet Kaur: ಆತ ನನ್ನ ಆ ಭಾಗಕ್ಕೆ...... ಹೋಳಿ ಹಬ್ಬದಂದು ನಟಿ ನಡೆದ ಘಟನೆ ನೆನಪಿಸಿಕೊಂಡ ಅವನೀತ್ ಕೌರ್ !
ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಲಿಟಲ್ ಮಾಸ್ಟರ್ಸ್ ಹಾಗೂ ರಾಣಿ ಮುಖರ್ಜಿ ಅವರ ಮರ್ದಾನಿ ಚಿತ್ರದಲ್ಲಿ ನಟಿಸಿದ್ದ ನಟಿ ಅವನೀತ್ ಕೌರ್ ಅವರು ಇತ್ತೀಚೆಗೆ ಹೋಳಿಯಂದು ನಡೆದ ಆಘಾತಕಾರಿ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ತನ್ನ ಮೇಲಾದ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಅವನೀತ್ ಕೌರ್

ಮುಂಬೈ: ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಲಿಟಲ್ ಮಾಸ್ಟರ್ಸ್ ಹಾಗೂ ರಾಣಿ ಮುಖರ್ಜಿ ಅವರ ಮರ್ದಾನಿ ಚಿತ್ರದಲ್ಲಿ ನಟಿಸಿದ್ದ ನಟಿ ಅವನೀತ್ ಕೌರ್ (Avneet Kaur) ಅವರು ಇತ್ತೀಚೆಗೆ ಹೋಳಿಯಂದು ನಡೆದ ಆಘಾತಕಾರಿ (Physical Abuse) ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಅಲ್ಲಿ ಒಬ್ಬ ತನ್ನ ಜೊತೆ ಅನುಚಿತವಾಗಿ ನಡೆದುಕೊಂಡಿದ್ದನು. ಅದಕ್ಕಾಗಿ ತಾನು ಬ್ಯಾಟ್‌ನಿಂದ ಆತನಿಗೆ ಹೊಡೆದಿರುವುದಾಗಿ ಅವರು ಹೇಳಿದ್ದಾರೆ. ಖಾಸಗಿ ಸಂದರ್ಶನವೊಂದರಲ್ಲಿ ಅವನೀತ್ ಕೌರ್ ಈ ಬಗ್ಗೆ ಮಾತನಾಡಿದ್ದಾರೆ. ಸದ್ಯ ಅವರು ಮಾತನಾಡಿದ ಈ ವಿಡಿಯೋ ಎಲ್ಲಡೆ ವೈರಲ್ ಆಗಿದೆ.
ಹೋಳಿ ದಿನದಂದು ನಾವು ಬಣ್ಣಗಳನ್ನು ಹಚ್ಚಿ ಹೋಳಿ ಆಚರಿಸುತ್ತಿದ್ದೆವು. ಕೆಲ ಹುಡುಗರ ಗುಂಪು ಬಲೂಲಿನಲ್ಲಿ ನೀರು ತುಂಬಿಸಿ ಎಲ್ಲರಿಗೂ ಹೊಡೆಯುತ್ತಿದ್ದರು. ಅವರು ನಮ್ಮ ನಮಗೂ ಬಲೂನಿನಲ್ಲಿ ಹೊಡೆಯಲು ಬಂದಿದ್ದರು. ಆದರೆ ನಾವು ಎಚ್ಚರಿಕೆ ನೀಡಿದ್ದೆವು. ಆದರೂ ನಮ್ಮ ಮಾತನ್ನು ಕೇಳದ ಒಬ್ಬ ನನ್ನ ಹಿಂಬಂಧಿ ಭಾಗಕ್ಕೆ ಬಲೂನಿನಿಂದ ಹೊಡೆದು ಅಸಹ್ಯಕರ ಚಿನ್ಹೆಯನ್ನು ಮಾಡಿದ್ದಾನೆ ಎಂದು ಅವರು ಹೇಳಿದ್ದಾರೆ. ನನಗೆ ಒಂದು ಕ್ಷಣ ಮುಜುಗರ ಎಂದು ಅನ್ನಿಸತು. ನಂತರ ನಾನು ಆತನಿಗೆ ತಕ್ಕ ಶಾಸ್ತಿ ಮಾಡಬೇಕೆಂದು ಬ್ಯಾಟ್ ಹಿಡಿದು ಚೆನ್ನಾಗಿ ಥಳಿಸಿದೆ ಎಂದು ಅವರು ಎಂದು ಹೇಳಿದ್ದಾರೆ.
ಘಟನೆ ನಡೆದ ನಂತರ ಆ ಹುಡುಗನ ತಾಯಿ ನಮ್ಮ ಮನೆಗೆ ಬಂದು ನಿಮ್ಮ ಹುಡುಗಿ ನನ್ನ ಮಗನಿಗೆ ಚೆನ್ನಾಗಿ ಥಳಿಸಿದ್ದಾಳೆ ಎಂದು ಆರೋಪಿಸಿದ್ದರು. ಆದರೆ ನನ್ನ ತಾಯಿ ನನಗೆ ಬೆಂಬಲವನ್ನು ಸೂಚಿಸುತ್ತಾ, ನನ್ನ ಮಗಳು ಬ್ಯಾಟ್‌ನಿಂದ ಹೊಡೆಯುವಂತ ಕೆಲಸ ನಿಮ್ಮ ಮಗ ಏನು ಮಾಡಿದ್ದಾನೆ ಎಂದು ಕೇಳಿದ್ದಾರೆ ಎಂದು ಹೇಳಿದ್ದಾರೆ. ನನ್ನ ಶಾಲಾ ದಿನಗಳಿಂದಲೇ ನಾನು ಜಾಹೀರಾತುಗಳಲ್ಲಿ ನಟಿಸುತ್ತಿದೆ. ಆಗ ಶಾಲೆಯಲ್ಲಿ ನನಗೆ ಛೇಡಿಸುತ್ತಿದ್ದರು, ಕಾರಿಡಾರ್ ಮೇಲೆ ನಡೆದು ಹೋಗುತ್ತಿರುವಾಗ ಬಂಟಿ ನಿಮ್ಮ ಸೋಪ್ ಸ್ಲೋ ನಾ ಎಂದು ಕೇಳುತ್ತಿದ್ದರು. ಆಗ ನಾನು ತುಂಬಾ ಬೇಜಾರು ಪಡುತ್ತಿದ್ದೆ ಎಂದು ಅವರು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Physical Abuse: ಹೋಳಿ ಹಬ್ಬದ ಪಾರ್ಟಿಯಲ್ಲಿ ಸೀರಿಯಲ್ ನಟಿಗೆ ಲೈಂಗಿಕ ಕಿರುಕುಳ; ಸಹ ನಟನ ಮೇಲೆ ದೂರು
ಮತ್ತೊಂದು ಪ್ರಕರಣದಲ್ಲಿ ಮಂಗಳವಾರ ನಡೆದ ಹೋಳಿ ಪಾರ್ಟಿಯಲ್ಲಿ ತನ್ನ ಸಹನಟ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಕಿರುತರೆ ನಟಿಯೊಬ್ಬರು ಆರೋಪಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪ್ರಸ್ತುತ ಮನರಂಜನಾ ಚಾನೆಲ್‌ನಲ್ಲಿ ಕೆಲಸ ಮಾಡುತ್ತಿರುವ 29 ವರ್ಷದ ನಟಿ, ತನ್ನ ಸಹೋದ್ಯೋಗಿ ಕುಡಿದಿದ್ದು, ಬಲವಂತವಾಗಿ ಬಣ್ಣ ಬಳಿದಿದ್ದಾರೆ ಎಂದು ದೂರಿನಲ್ಲಿ ಹೇಳಿಕೊಂಡಿದ್ದಾರೆ. ತಮ್ಮ ಚಾನೆಲ್ ಅವರು ಆಯೋಜಿಸಿದ್ದ ಪಾರ್ಟಿಯಲ್ಲಿ ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ. ಆರೋಪಿ ನಟ ಆಕೆಯ ಪದೇ ಪದೇ ಆಕ್ಷೇಪ ವ್ಯಕ್ತಪಡಿಸಿದರೂ ಸಹ ಬಲವಂತವಾಗಿ ಬಣ್ಣ ಬಳಿದಿದ್ದಾನೆ ಎಂದು ಆರೋಪಿಸಲಾಗಿದೆ.