ಇನ್‌ಸ್ಟಾಗ್ರಾಮ್‌ನಲ್ಲಿ ಮಕ್ಕಳ ಮೇಲಿನ ದೌರ್ಜನ್ಯದ ಜಾಹೀರಾತು; ಮೆಟಾಗೆ ಕೇಂದ್ರದಿಂದ ಸಮನ್ಸ್ ಜಾರಿ
Centre Summons Meta: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವನ್ನು ಉತ್ತೇಜಿಸುವ ಇನ್‌ಸ್ಟಾಗ್ರಾಮ್ ಹೋಸ್ಟ್ ಮಾಡಿದ ಜಾಹೀರಾತುಗಳಿಗೆ ಸಂಬಂಧಿಸಿದಂತೆ ಅಮೆರಿಕದ ಸಾಮಾಜಿಕ ಮಾಧ್ಯಮ ದೈತ್ಯ ಮೆಟಾದ ಅಧಿಕಾರಿಗಳಿಗೆ ಸಮನ್ಸ್ ಜಾರಿ ಮಾಡುವಂತೆ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವೆ ಅಶ್ವಿನಿ ವೈಷ್ಣವ್ ಸಚಿವಾಲಯಕ್ಕೆ ನಿರ್ದೇಶನ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಂಗ್ರಹ ಚಿತ್ರ -
ನವದೆಹಲಿ: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವನ್ನು ಉತ್ತೇಜಿಸುವ ಇನ್‌ಸ್ಟಾಗ್ರಾಮ್ (Instagram) ಹೋಸ್ಟ್ ಮಾಡಿದ ಜಾಹೀರಾತುಗಳಿಗೆ ಸಂಬಂಧಿಸಿದಂತೆ ಅಮೆರಿಕದ ಸಾಮಾಜಿಕ (Centre Summons Meta) ಮಾಧ್ಯಮ ದೈತ್ಯ ಮೆಟಾದ ಅಧಿಕಾರಿಗಳಿಗೆ ಸಮನ್ಸ್ ಜಾರಿ ಮಾಡುವಂತೆ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವೆ ಅಶ್ವಿನಿ ವೈಷ್ಣವ್ ಸಚಿವಾಲಯಕ್ಕೆ ನಿರ್ದೇಶನ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜಾಹೀರಾತುಗಳ ಕುರಿತು ವಾಟ್ಸಾಪ್, ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಮಾಲೀಕತ್ವ ಹೊಂದಿರುವ ಕಂಪನಿಯಿಂದ ಸಚಿವಾಲಯ ವಿವರಣೆಯನ್ನು ಕೇಳಲಿದೆ ಎಂದು ಮೂಲಗಳು ತಿಳಿಸಿವೆ.
ಇಂದು ಮುಂಜಾನೆ, ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ (ಬಿಬಿಸಿ) ಭಾರತದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವಿಷಯವನ್ನು ಉತ್ತೇಜಿಸುವ ಜಾಹೀರಾತುಗಳನ್ನು ಇನ್‌ಸ್ಟಾಗ್ರಾಮ್ ಪ್ರಸಾರ ಮಾಡುತ್ತಿದೆ ಎಂದು ವರದಿ ಮಾಡಿದೆ. ತನಿಖಾ ವರದಿಯಲ್ಲಿ, "ರೇಪ್ ವಿಡಿಯೋ" ಮತ್ತು "ಚೈಲ್ಡ್ ವಿಡಿಯೋ" ಸೇರಿದಂತೆ ಹೆಚ್ಚು ಆಕ್ಷೇಪಾರ್ಹ ಶೀರ್ಷಿಕೆಗಳನ್ನು ಬಳಸುವ ಜಾಹೀರಾತುಗಳನ್ನು ನೋಡಿರುವುದಾಗಿ ಬಿಬಿಸಿ ತಿಳಿಸಿದೆ.
ಇನ್ನು ವಾಟ್ಸ್ಆಪ್‌ಗೆ ಯೂಸರ್‌ನೇಮ್ ವೈಶಿಷ್ಟ್ಯದ ಕುರಿತು ನೋಟಿಸ್ ನೀಡಿದ ಬೆನ್ನಲ್ಲೇ, ಕೇಂದ್ರ ಸರ್ಕಾರ ಇದೀಗ ಟೆಲಿಗ್ರಾಂ ಹಾಗೂ ಸಿಗ್ನಲ್ ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ಗಳಿಗೂ ನೋಟಿಸ್ ಜಾರಿ ಮಾಡಿದೆ. ಯೂಸರ್‌ನೇಮ್ ಆಧಾರಿತ ಖಾತೆ ವ್ಯವಸ್ಥೆ ಕುರಿತು ಸಂಪೂರ್ಣ ಮಾಹಿತಿ, ಅದರ ಭದ್ರತಾ ಕ್ರಮಗಳು ಹಾಗೂ ದುರುಪಯೋಗವನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಕುರಿತು ವಿವರವಾದ ವರದಿಯನ್ನು ಸಲ್ಲಿಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.
ಟೆಲಿಗ್ರಾಂನಲ್ಲಿ ಈಗಾಗಲೇ ಯೂಸರ್‌ನೇಮ್ ಸೌಲಭ್ಯ ಲಭ್ಯವಿದ್ದು, ಸಿಗ್ನಲ್‌ನಲ್ಲಿ ಈ ವೈಶಿಷ್ಟ್ಯ ಐಚ್ಛಿಕ (Optional) ರೂಪದಲ್ಲಿ ಬಳಕೆಯಲ್ಲಿದೆ. ಇನ್ನು ವಾಟ್ಸ್ಆಪ್‌ನಲ್ಲಿ ಈ ವೈಶಿಷ್ಟ್ಯವನ್ನು ಇನ್ನೂ ಅಧಿಕೃತವಾಗಿ ಜಾರಿಗೊಳಿಸಲಾಗಿಲ್ಲ. ಸರ್ಕಾರದ ಸೂಚನೆಯಂತೆ, ಭದ್ರತಾ ಪರಿಶೀಲನೆ ಪೂರ್ಣಗೊಳ್ಳುವವರೆಗೆ ಈ ವೈಶಿಷ್ಟ್ಯವನ್ನು ಜಾರಿಗೊಳಿಸದಂತೆ ವಾಟ್ಸ್ಆಪ್‌ಗೆ ಸೂಚಿಸಲಾಗಿದೆ. ಇನ್ನೊಂದೆಡೆ, ವಾಟ್ಸ್ಆಪ್ ತನ್ನ ಪ್ರತಿಕ್ರಿಯೆಯಲ್ಲಿ ಭದ್ರತೆಗೆ ಹಲವು ಹಂತಗಳ ವ್ಯವಸ್ಥೆ ರೂಪಿಸಲಾಗಿದೆ ಎಂದು ತಿಳಿಸಿದೆ. ಪ್ರಮುಖ ಸಾರ್ವಜನಿಕ ವ್ಯಕ್ತಿಗಳು, ಸರ್ಕಾರಿ ಸಂಸ್ಥೆಗಳು ಹಾಗೂ ಗಣ್ಯರ ಹೆಸರನ್ನು ದುರುಪಯೋಗವಾಗದಂತೆ ಕಾಯ್ದಿರಿಸಲಾಗಿದೆ ಎಂದು ತನ್ನ ಹೇಳಿಕೆಯಲ್ಲಿ ಹೇಳಿದೆ.