Chinese Grenades: ಜಮ್ಮು ಮತ್ತು ಕಾಶ್ಮೀರದಲ್ಲಿ ಚೀನಾ ನಿರ್ಮಿತ ಸ್ಫೋಟಕ ವಸ್ತುಗಳು ಪತ್ತೆ; ಹೈ ಅಲರ್ಟ್!
ಜಮ್ಮು-ಕಾಶ್ಮೀರದ ಪೂಂಚ್ ಸೆಕ್ಟರ್ ನಲ್ಲಿ ನಿಯಂತ್ರಣ ರೇಖೆಯ ಉದ್ದಕ್ಕೂ ಉಗ್ರಗಾಮಿಗಳ ಒಳನುಸುಳುವಿಕೆ ಪ್ರಯತ್ನವನ್ನು ಭದ್ರತಾ ಪಡೆಗಳು ವಿಫಲಗೊಳಿಸಿದ್ದು, ಚೀನಾದ ಹ್ಯಾಂಡ್ ಗ್ರೆನೇಡ್‌ಗಳು ಸೇರಿದಂತೆ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳು ಹಾಗೂ ಸಿಡಿಮದ್ದುಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಗ್ರರ ಒಳನುಸುಳುವಿಕೆ ಹಾಗೂ ಶಸ್ತ್ರಾಸ್ತ್ರ ಸಾಗಾಣಿಕೆ ಬಗ್ಗೆ ಜಮ್ಮು -ಕಾಶ್ಮೀರ ಪೊಲೀಸರು ನೀಡಿದ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಕಾರ್ಯಾಚಾರಣೆ ನಡೆಸಿದೆ

ಸೇನೆ ವಶಪಡಿಸಿಕೊಂಡ ಶಸ್ತ್ರಾಸ್ತ್ರ -

ಶ್ರೀನಗರ: ಆಪರೇಷನ್ ಸಿಂಧೂರದ(Operation Sindoor) ಬಳಿಕ ಭಾರತೀಯ ಸೇನೆ(Indian Army) ಉಗ್ರರನ್ನು(Terrorists) ಸದೆಬಡಿಯಲು ಟೊಂಕ ಕಟ್ಟಿ ನಿಂತಿದ್ದು, ಜಮ್ಮು-ಕಾಶ್ಮೀರ(Jammu Kashmir)ದ ಪ್ರಾಂತ್ಯದಲ್ಲಿ ಅವಿತಿರುವ ಉಗ್ರರ ಹೆಡೆಮುರಿ ಕಟ್ಟಲು ಆಪರೇಷನ್‌ಗಳ ಸರಮಾಲೆಯನ್ನೇ ಸೇನೆ ಆರಂಭಿಸಿದೆ. ಸದ್ಯ ಉಗ್ರರ ಪಾಲಿಗೆ ಭಾರತೀಯ ಸೈನಿಕರು ಸಿಂಹಸ್ವಪ್ನವಾಗಿ ಕಾಡುತ್ತಿದ್ದು, ಕಳೆದ ಒಂದೆರೆಡು ತಿಂಗಳಿಂದ ಉಗ್ರರ ವಿರುದ್ಧ ಹೋರಾಟವನ್ನು ತೀವ್ರಗೊಳಿಸಿರುವ ಸೇನೆ 15ಕ್ಕೂ ಹೆಚ್ಚು ಉಗ್ರರನ್ನು ಹೊಸಕಿಹಾಕಿದೆ. ಈಗ ಮತ್ತೆ ಯಶಸ್ವಿ ಕಾರ್ಯಾಚಾರಣೆ ನಡೆಸಿದ ಭದ್ರತಾ ಸಿಬ್ಬಂದಿಗಳು ಭಾರೀ ಪ್ರಮಾಣ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದೆ.
ಜಮ್ಮು-ಕಾಶ್ಮೀರದ ಪೂಂಚ್ ಸೆಕ್ಟರ್( Poonch Sector)ನಲ್ಲಿ ನಿಯಂತ್ರಣ ರೇಖೆಯ ಉದ್ದಕ್ಕೂ ಉಗ್ರಗಾಮಿಗಳ ಒಳನುಸುಳುವಿಕೆ ಪ್ರಯತ್ನವನ್ನು ಭದ್ರತಾ ಪಡೆಗಳು ವಿಫಲಗೊಳಿಸಿದ್ದು, ಚೀನಾದ ಹ್ಯಾಂಡ್ ಗ್ರೆನೇಡ್‌ಗಳು (Chinese hand grenades) ಸೇರಿದಂತೆ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳು(weapons) ಹಾಗೂ ಸಿಡಿಮದ್ದುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಉಗ್ರರ ಒಳನುಸುಳುವಿಕೆ ಹಾಗೂ ಶಸ್ತ್ರಾಸ್ತ್ರ ಸಾಗಾಣಿಕೆ ಬಗ್ಗೆ ಜಮ್ಮು -ಕಾಶ್ಮೀರ ಪೊಲೀಸರು ನೀಡಿದ ಗುಪ್ತಚರ ಮಾಹಿತಿಯ ಆಧಾರದ ಮೇಲೆ, ಭಾರತೀಯ ಸೇನೆ ಮತ್ತು ಜಮ್ಮು- ಕಾಶ್ಮೀರ ಪೊಲೀಸರು ಪೂಂಚ್ ಸೆಕ್ಟರ್‌ನಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದ್ದು, 20 ಚೀನಾದ ಹ್ಯಾಂಡ್ ಗ್ರೆನೇಡ್‌ಗಳು ಸೇರಿದಂತೆ ಮದ್ದು ಗುಂಡುಗಳು ಮತ್ತಿತರ ಶಸ್ತ್ರಾಸ್ತ್ರಗಳನ್ನು ಭದ್ರತಾ ಪಡೆಗಳು ವಶಕ್ಕೆ ಪಡೆದಿದ್ದಾರೆ.
#WhiteKnightCorps | #JointOperation | Recovery of War Like Stores
— White Knight Corps (@Whiteknight_IA) September 19, 2025
Alert #WhiteKnightCorps troops while carrying out an intelligence based joint search operation with #JKP, recovered one weapon (AK Series), four AK magazines, 20 Hand Grenades and other war like stores in Poonch… pic.twitter.com/KcKdXaEdWu
ಈ ಶಸ್ತ್ರಾಸ್ತ್ರಗಳನ್ನು ಹಿಂದುಳಿದ ಪ್ರದೇಶಗಳಿಗೆ ಕಳುಹಿಸಿ ಉಗ್ರ ಚಟುವಟಿಕೆಗಳಿಗೆ ಪ್ರೇರೆಪಿಸುವ ಉದ್ದೇಶವನ್ನು ಹೊಂದಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಆದರೆ ಸರಿಯಾದ ಸಮಯಕ್ಕೆ ಗುಪ್ತಚರ ಇಲಾಖೆ ನೀಡಿದ ಮಾಹಿತಿಯನ್ನಧಾರಿಸಿ ಕಾರ್ಯಾಚರಣೆ ಭದ್ರತಾ ಪಡೆಗಳು ಆಗಬಹುದಾದ ಅನಾಹುತವನ್ನು ತಪ್ಪಿಸಿದ್ದು, ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಪೊಲೀಸರು ದಕ್ಷತೆಯನ್ನು ಮೆರೆದಿದ್ದಾರೆ.
ಈ ಸುದ್ದಿಯನ್ನು ಓದಿ: Viral Video: ಕುಡಿದ ಮತ್ತಿನಲ್ಲಿ ತನಗೆ ಕಚ್ಚಿದ ಹಾವಿನ ತಲೆ ಕಚ್ಚಿ ಪಕ್ಕದಲ್ಲೇ ಮಲಗಿದ ವ್ಯಕ್ತಿ!
ಈ ಹಿಂದೆ ಬಂಡಿಪೋರಾ ಜಿಲ್ಲೆಯ ಗುರೇಝ್ ಸೆಕ್ಟರ್‌ನಲ್ಲಿ ಭಾರತೀಯ ಸೇನೆ ಮತ್ತು ಜಮ್ಮುಮತ್ತು ಕಾಶ್ಮೀರ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಿತ್ತು. ಖಚಿತ ಮಾಹಿತಿಯ ಮೇರೆಗೆ ಉಗ್ರರ ಮೇಲೆ ಅಟ್ಯಾಕ್ ಮಾಡಿ ಕಣಿವೆಯಲ್ಲಿ ಶಾಂತಿ ಕದಡಲು ಯತ್ನಿಸುತ್ತಿರುವ ಉಗ್ರಗಾಮಿ ಸಂಘಟನೆಗಳಿಗೆ ತಕ್ಕ ಪಾಠ ಕಲಿಸಿತ್ತು. ಈ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು 2 ಚೀನಾದ ಗ್ರೆನೇಡ್‌ಗಳು, ಆಕ್ಷೇಪಣಾ ಗ್ರೆನೇಡ್‌ಗಳು ಹಾಗೂ 10 AK ಸರಣಿಯ ರೈಫಲ್ ಗಳನ್ನು ಸಹ ವಶ ಮಾಡಿಕೊಂಡಿತ್ತು.
ಇನ್ನು ಕಾರ್ಯಾಚಾರಣೆ ವೇಳೆ ಪತ್ತೆಯಾದ ಶಸ್ತ್ರಾಸ್ತ್ರಗಳು ಈ ಪ್ರದೇಶದಲ್ಲಿ ನಡೆಯುತ್ತಿರುವ ಉಗ್ರ ಚಟುವಟಿಕೆಗಳಿಗೆ ಸಂಬಂಧಿಸಿದ್ದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ನಡುವೆ, ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ನ ಕೌಂಟರ್ ಇಂಟೆಲಿಜೆನ್ಸ್ ಘಟಕವು ಕಾಶ್ಮೀರದ ಶ್ರೀನಗರ, ಬಾರಾಮುಲ್ಲಾ, ಅನಂತನಾಗ್, ಕುಪ್ವಾರಾ, ಹಂಡ್ವಾರಾ, ಪುಲ್ವಾಮಾ ಮತ್ತು ಶೋಪಿಯಾನ್ ಈ ಏಳು ಜಿಲ್ಲೆಗಳಲ್ಲಿ ಗಂಭೀರ ಶೋಧ ಕಾರ್ಯಾಚರಣೆ ನಡೆಸಿದೆ.