ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

BRICS Gala Dinner: ಪ್ರಧಾನಿ ನರೇಂದ್ರ ಮೋದಿ ಔತಣಕೂಟಕ್ಕೆ ಚೀನಾ ಅಧ್ಯಕ್ಷ ಕ್ಷಿ ಜಿನ್‌ಪಿಂಗ್‌ ಗೈರು; ಕಾರಣವೇನು?

ಬ್ರಿಕ್ಸ್ ಶೃಂಗಸಭೆಯ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಆಯೋಜಿಸಿದ್ದ ವಿಶೇಷ ಔತಣಕೂಟಕ್ಕೆ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಗೈರು ಹಾಜರಾದರು. ಬ್ರಿಕ್ಸ್ ನಾಯಕರು ಮತ್ತು ಭಾರತದ ಹಿರಿಯ ಗಣ್ಯರು ಪಾಲ್ಗೊಂಡಿದ್ದ ಈ ಔತಣ ಕೂಟದಲ್ಲಿ ಅವರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಅಬುಧಾಬಿಯ ಕ್ರೌನ್ ಪ್ರಿನ್ಸ್ ಶೇಖ್ ಖಾಲಿದ್ ಬಿನ್ ಮೊಹಮ್ಮದ್ ಅವರು ಕೂಡ ಈ ಔತಣಕೂಟದಲ್ಲಿ ಭಾಗವಹಿಸಲಿಲ್ಲ.

ಸಂಗ್ರಹ ಚಿತ್ರ

ನವದೆಹಲಿ: ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ (Chinese President Xi Jinping) ಅವರು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ಆಯೋಜಿಸಿದ್ದ ವಿಶೇಷ ಔತಣಕೂಟಕ್ಕೆ ಗೈರು ಹಾಜರಾದರು. ಬ್ರಿಕ್ಸ್ ಶೃಂಗಸಭೆಯಲ್ಲಿ (BRICS Summit) ಭಾಗವಹಿಸಿ ದ್ವಿಪಕ್ಷೀಯ ಮಾತುಕತೆ ನಡೆಸಿದ ಅವರು ಬಳಿಕ ನಡೆದ ಗಾಲಾ ಡಿನ್ನರ್ (BRICS gala dinner)ಗೆ ಗೈರು ಹಾಜರಾಗಿದ್ದು ಎಲ್ಲರ ಗಮನ ಸೆಳೆದಿದೆ. ಇತರ ಬ್ರಿಕ್ಸ್ ನಾಯಕರು ಮತ್ತು ಭಾರತದ ಹಿರಿಯ ಗಣ್ಯರು ಈ ಔತಣಕೂಟದಲ್ಲಿ ಭಾಗವಹಿಸಿದ್ದರು. ಶೃಂಗ ಸಭೆಯಲ್ಲಿ ಭಾಗವಹಿಸಿದ ಬಳಿಕ ತವರಿಗೆ ಮರಳಿದ ಅಬುಧಾಬಿಯ ಕ್ರೌನ್ ಪ್ರಿನ್ಸ್ ಶೇಖ್ ಖಾಲಿದ್ ಬಿನ್ ಮೊಹಮ್ಮದ್ ಅವರು ಕೂಡ ಔತಣಕೂಟಕ್ಕೆ ಗೈರು ಹಾಜರಾಗಿದ್ದರು.

ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಿದ ನಾಯಕರು, ಪಾಲ್ಗೊಳ್ಳುವ ಇತರ ದೇಶಗಳು, ಅಂತಾರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳಿಗಾಗಿ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ಔತಣ ಕೂಟವನ್ನು ಆಯೋಜಿಸಿದ್ದರು. ಇದರಲ್ಲಿ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಅಬುಧಾಬಿಯ ಕ್ರೌನ್ ಪ್ರಿನ್ಸ್ ಶೇಖ್ ಖಾಲಿದ್ ಬಿನ್ ಮೊಹಮ್ಮದ್ ಅವರು ಭಾಗವಹಿಸಿರಲಿಲ್ಲ.

Viral Video: ಹಠಾತ್ ಮಳೆ: ಪಂಡಾಲ್‌ಗೆ ತರುತ್ತಿದ್ದಾಗ ಕೆಳಗೆ ಬಿದ್ದ ಗಣೇಶನ ಮೂರ್ತಿ; ಅಡಿಯಲ್ಲಿ ಸಿಲುಕಿದ ಹಲವರು

ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ವಿಶ್ರಾಂತಿ ಪಡೆಯಲು ಹೋಟೆಲ್ ಗೆ ತೆರಳಿದ್ದರು. ಅವರ ಗೈರು ಹಾಜರಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಶನಿವಾರ ಮಧ್ಯಾಹ್ನ ದೆಹಲಿಗೆ ಆಗಮಿಸಿದ್ದ ಅವರು ಬಳಿಕ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದ್ದರು.



ಔತಣಕೂಟದಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೇರಿದಂತೆ ಇತರ ಬ್ರಿಕ್ಸ್ ನಾಯಕರು ಪಾಲ್ಗೊಂಡಿದ್ದರು. ಕೇಂದ್ರ ಸಚಿವರಾದ ಅಮಿತ್ ಶಾ, ನಿರ್ಮಲಾ ಸೀತಾರಾಮನ್, ಪಿಯೂಷ್ ಗೋಯಲ್, ಅಶ್ವಿನಿ ವೈಷ್ಣವ್, ಶಿವರಾಜ್ ಸಿಂಗ್ ಚೌಹಾಣ್, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಮತ್ತು ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದರು.

ಡಾಲರ್‌ಗೆ ಪರ್ಯಾಯವಾಗಿ ರೂಪುಗೊಳ್ಳುತ್ತಾ ಬ್ರಿಕ್ಸ್‌ ಕರೆನ್ಸಿ? ಈ ಬಗ್ಗೆ ಸ್ಪಷ್ಟನೆ ನೀಡಿದ ಭಾರತ ಹೇಳಿದ್ದೇನು?

ಔತಣಕೂಟಕ್ಕಾಗಿ ಸಂಸತ್ ಭವನದಿಂದ ಕೇಂದ್ರ ಸಚಿವರು, ಮುಖ್ಯಮಂತ್ರಿಗಳು ಎರಡು ಬಸ್‌ಗಳಲ್ಲಿ 'ಭಾರತ ಮಂಟಪ'ಕ್ಕೆ ಆಗಮಿಸಿದರು. ಔತಣಕೂಟದಲ್ಲಿ ಖಂಡ್ವಿ ಮಿಲ್-ಫ್ಯೂ ಲ್, ಕುಂಬ್ ಗಲೌಟಿ, ಪನೀರ್ ಲಬಾಬ್‌ದಾರ್, ಗುಚ್ಚಿ ಮಾರ್ಮಿಕ್, ಕ್ಯಾರೆಟ್- ಬೀನ್ಸ್ ಪೊರಿಯಾಲ್ ಮತ್ತು ಸಿರಿಧಾನ್ಯದ ಪುಲಾವ್, ಜಲೇಬಿ, ಓಲ್ಡ್ ಡೆಲ್ಲಿ ಫ್ರೂಟ್ ಕ್ರೀಮ್ ಮತ್ತು ಶಹತೂತ್ ಫಿರ್ನಿಗಳಿದ್ದವು.

ವಿದ್ಯಾ ಇರ್ವತ್ತೂರು

View all posts by this author