ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬ್ರಿಕ್ಸ್ ಶೃಂಗಸಭೆ ವೇಳೆ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಪ್ರಧಾನಿ ನರೇಂದ್ರ ಮೋದಿ ಮಾತುಕತೆ

BRICS summit: ನವದೆಹಲಿಯಲ್ಲಿ ಸೆಪ್ಟೆಂಬರ್ 12ರಂದು ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಆಗಮಿಸಲಿದ್ದು, ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದಾರೆ. 2020ರ ಗಾಲ್ವಾನ್ ಕಣಿವೆ ಘರ್ಷಣೆಯ ಬಳಿಕ ಇದೀಗ ಈ ಇಬ್ಬರು ನಾಯಕರ ನಡುವೆ ನೇರ ದ್ವಿಪಕ್ಷೀಯ ಮಾತುಕತೆ ನಡೆಯಲಿದೆ.

ನವದೆಹಲಿಗೆ ಆಗಮಿಸಲಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್

ಸಂಗ್ರಹ ಚಿತ್ರ -

ನವದೆಹಲಿ: ಗಾಲ್ವಾನ್ ಘರ್ಷಣೆಯ (2020 Galwan clash) ಅನಂತರ ಇದೇ ಮೊದಲ ಬಾರಿಗೆ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ (Chinese President Xi Jinping) ಅವರು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರನ್ನು ಭೇಟಿ ಮಾಡಿ ಮೊದಲ ದ್ವಿಪಕ್ಷೀಯ ಸಭೆ ನಡೆಸುವ ಸಾಧ್ಯತೆಯಿದೆ. ನವದೆಹಲಿಯಲ್ಲಿ ಸೆಪ್ಟೆಂಬರ್ 12 ಮತ್ತು 13 ರಂದು ನಡೆಯಲಿರುವ 18ನೇ ಬ್ರಿಕ್ಸ್ ನಾಯಕರ ಶೃಂಗಸಭೆಯಲ್ಲಿ (BRICS summit) ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಭಾಗವಹಿಸಲಿದ್ದು, ಇದಕ್ಕಾಗಿ ಅವರು ಶನಿವಾರ ಭಾರತಕ್ಕೆ ಆಗಮಿಸಲಿದ್ದಾರೆ.

ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಏಳು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಭಾರತಕ್ಕೆ ಆಗಮಿಸಲಿದ್ದಾರೆ. 2020ರ ಗಡಿ ಬಿಕ್ಕಟ್ಟಿನ ಅನಂತರ ಮೊದಲ ಬಾರಿಗೆ ಭಾರತಕ್ಕೆ ಆಗಮಿಸಲಿರುವ ಕ್ಸಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಡುವೆ ಪ್ರಸ್ತಾವಿತ ದ್ವಿಪಕ್ಷೀಯ ಮಾತುಕತೆ ಕುರಿತು ಬೀಜಿಂಗ್ ಮತ್ತು ನವದೆಹಲಿ ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ.ಆದರೆ 2020ರ ಗಾಲ್ವಾನ್ ಕಣಿವೆ ಘರ್ಷಣೆಯ ಬಳಿಕ ಪ್ರಧಾನಿ ಮೋದಿಯವರೊಂದಿಗೆ ಕ್ಸಿ ಅವರು ತಮ್ಮ ಮೊದಲ ದ್ವಿಪಕ್ಷೀಯ ಸಭೆಯನ್ನು ನಡೆಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾದ ಉಕ್ರೇನ್ ಅಧ್ಯಕ್ಷ; ಝೆಲೆನ್ಸ್ಕಿ ಪ್ರಯಾಣಿಸುತ್ತಿದ್ದ ವಿಮಾನಕ್ಕೆ ಡ್ರೋನ್ ಡಿಕ್ಕಿ ಜಸ್ಟ್ ಮಿಸ್

ಎರಡು ರಾಷ್ಟ್ರಗಳ ನಡುವಿನ ಹಲವಾರು ವರ್ಷಗಳ ಮಿಲಿಟರಿ, ರಾಜಕೀಯ ಉದ್ವಿಗ್ನತೆ, ಒತ್ತಡದ ವ್ಯಾಪಾರ ವಹಿವಾಟುಗಳ ಬಳಿಕ ಇದೀಗ ಭಾರತ ಮತ್ತು ಚೀನಾ ಸಂಬಂಧಗಳಲ್ಲಿ ಸುಧಾರಣೆಯಾಗುತ್ತಿರುವ ಲಕ್ಷಣ ಕಂಡು ಬರುತ್ತಿದೆ. ಕಿರ್ಗಿಸ್ತಾನ್‌ನ ಬಿಷ್ಕೆಕ್‌ನಲ್ಲಿ ಇತ್ತೀಚೆಗೆ ನಡೆದ ಶಾಂಘೈ ಸಹಕಾರ ಸಂಸ್ಥೆ ಶೃಂಗಸಭೆಯಲ್ಲಿ ಇಬ್ಬರು ನಾಯಕರು ಭೇಟಿಯಾಗಿದ್ದರು. ಆದರೆ ಈ ಇಬ್ಬರ ನಡುವೆ ಯಾವುದೇ ಮಾತುಕತೆಗಳು ನಡೆದಿರಲಿಲ್ಲ.

ಕ್ಸಿ ಅವರ ಭಾರತ ಭೇಟಿಗೂ ಮೊದಲು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಉನ್ನತ ಮಟ್ಟದ ಚರ್ಚೆಗಳಿಗಾಗಿ ಚೀನಾಕ್ಕೆ ಪ್ರಯಾಣಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಭಾರತ-ಚೀನಾ ಗಡಿ ವ್ಯವಹಾರಗಳ ಕುರಿತು ವಿಶೇಷ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ ಎನ್ನಲಾಗಿದೆ.

ಪೂರ್ವ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ 2020ರ ಜೂನ್ ನಿಂದ ಘರ್ಷಣೆ ಪ್ರಾರಂಭವಾದ ಬಳಿಕ ಭಾರತ ಮತ್ತು ಚೀನಾ ಸಂಬಂಧಗಳು ತೀರಾ ಹದಗೆಟ್ಟಿದ್ದವು. ಈ ಘರ್ಷಣೆಯಲ್ಲಿ ಇಚೀನಾದ ನಾಲ್ವರು, ೨೦ ಭಾರತೀಯ ಸೈನಿಕರು ಸಾವನ್ನಪ್ಪಿದ್ದರು. ಇದರಿಂದ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಮಿಲಿಟರಿ ಬಿಕ್ಕಟ್ಟನ್ನು ಉಂಟುಮಾಡಿತು.

ಚರ್ಚೆಗೆ ಬರಲಿದೆಯೇ ಅರುಣಾಚಲ ಪ್ರದೇಶ?

ಕ್ಸಿ ಭಾರತ ಭೇಟಿ ಹಿನ್ನೆಲೆಯಲ್ಲಿ ಅರುಣಾಚಲ ಪ್ರದೇಶದ ಸುಬನ್ಸಿರಿ ಪ್ರದೇಶದಲ್ಲಿ ಹೆಚ್ಚಿದ ಚೀನಾದ ಮಿಲಿಟರಿ ಚಟುವಟಿಕೆ ಮತ್ತು ಆಕ್ರಮಣಕಾರಿ ನಿಲುವುಗಳ ಕುರಿತು ಮಾತುಕತೆ ನಡೆಯುವ ನಿರೀಕ್ಷೆ ಇದೆ. ದ್ವಿಪಕ್ಷೀಯ ಸಂಬಂಧದ ಮಾತುಕತೆಯಲ್ಲಿ ಎರಡು ದೇಶಗಳ ಅಭಿವೃದ್ಧಿಗೆ ಗಡಿಯಲ್ಲಿ ಶಾಂತಿ ಮತ್ತು ನೆಮ್ಮದಿ ಅತ್ಯಾವಶ್ಯಕವಾಗಿರುತ್ತದೆ ಎಂದು ನವದೆಹಲಿಯು ಮತ್ತೆ ಮತ್ತೆ ಹೇಳುತ್ತಲೇ ಇದೆ.

ಅಮೆರಿಕ ಸೈನಿಕ ವ್ಯಾನ್‌ಡೈಕ್ ವಿರುದ್ಧದ ಭಯೋತ್ಪಾದನಾ ತನಿಖೆ ಮುಂದುವರಿದಿದೆ; ಎನ್‌ಐಎ ಸ್ಪಷ್ಟನೆ

ಚೀನಾವು 2017 ರಿಂದ ಅರುಣಾಚಲ ಪ್ರದೇಶದ ಸ್ಥಳಗಳಿಗೆ ತನ್ನದೇ ಆದ ಹೆಸರುಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ನವದೆಹಲಿ, ಭಾರತೀಯ ಭೂಪ್ರದೇಶದಲ್ಲಿರುವ ಸ್ಥಳಗಳಿಗೆ ಪರ್ಯಾಯ ಹೆಸರುಗಳನ್ನು ನೀಡುವುದರಿಂದ ಅವುಗಳ ಕಾನೂನು ಅಥವಾ ಪ್ರಾದೇಶಿಕ ಸ್ಥಾನಮಾನವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿದೆ.