ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಜೆನ್ ಝೀ ಮನ ಗೆಲ್ಲಲು ಬಿಜೆಪಿಯಿಂದ ಸರ್ಕಸ್‌; ನಿತಿನ್ ನಬಿನ್, ಸ್ಮೃತಿ ಇರಾನಿ ಒಳಗೊಂಡ ವಿಶೇಷ ತಂಡ ರಚನೆ

BJP forms special team: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ಕಾಕ್ರೋಚ್ ಜನತಾ ಪಕ್ಷದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯ ಬಳಿಕ ಭಾರತೀಯ ಜನತಾ ಪಕ್ಷವು ಜೆನ್ ಝೀಗಳನ್ನು ಹತ್ತಿರ ಮಾಡಿಕೊಳ್ಳುವ ಪ್ರಯತ್ನವನ್ನು ತೀವ್ರಗೊಳಿಸಿದೆ. ಈ ಹಿನ್ನೆಲೆಯಲ್ಲಿ ಇದೀಗ ನಿತಿನ್ ನಬಿನ್, ಸ್ಮೃತಿ ಇರಾನಿ ಅವರನ್ನೊಳಗೊಂಡ ಹಲವು ನಾಯಕರನ್ನು ಸೇರಿಸಿ ವಿಶೇಷ ತಂಡ ರಚನೆ ಮಾಡಿದೆ ಎನ್ನಲಾಗಿದೆ.

ಸಂಗ್ರಹ ಚಿತ್ರ

ನವದೆಹಲಿ: ಜೆನ್ ಝೀಗಳನ್ನು (Gen Z) ತಿಳಿದುಕೊಳ್ಳುವ ಸಲುವಾಗಿ ಭಾರತೀಯ ಜನತಾ ಪಕ್ಷವು (Bharatiya Janata Party) ಇದೀಗ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ (BJP's national president Nitin Nabin), ಹೊಸದಾಗಿ ನೇಮಕಗೊಂಡ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಮೃತಿ ಇರಾನಿ (national general secretary Smriti Irani) ಸೇರಿದಂತೆ ಹಲವಾರು ಹಿರಿಯ ಬಿಜೆಪಿ ನಾಯಕರನ್ನು ಒಳಗೊಂಡ ವಿಶೇಷ ತಂಡವನ್ನು (BJP forms special team) ರಚಿಸಿದೆ. ಇದರ ಮುಖ್ಯ ಉದ್ದೇಶ ಜನರಲ್ ಝಡ್ ಜೊತೆ ಸಂಪರ್ಕ ಸಾಧಿಸುವುದಾಗಿದೆ. ಈ ನಿಟ್ಟಿನಲ್ಲಿ ಶನಿವಾರ ನಿತಿನ್ ನಬಿನ್ ಅವರ ಅಧ್ಯಕ್ಷತೆಯಲ್ಲಿ ನವದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಶನಿವಾರ ಉನ್ನತ ಮಟ್ಟದ ಸಭೆ ನಡೆದಿದೆ.

ಯುವಜನರು ಮತ್ತು ಜನರಲ್ ಝಡ್ ಅನ್ನು ತಲುಪಲು ವಿಶೇಷ ತಂಡವನ್ನು ರಚಿಸಲು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರ ಅಧ್ಯಕ್ಷತೆಯಲ್ಲಿ ಹೊಸದಾಗಿ ನೇಮಕಗೊಂಡ ಪಕ್ಷದ ರಾಷ್ಟ್ರೀಯ ಪದಾಧಿಕಾರಿಗಳ ಸಭೆಯಲ್ಲಿ ಭಾರತೀಯ ಜನತಾ ಪಕ್ಷವು ತೀರ್ಮಾನಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಕೊಲೆ ಆರೋಪ ಹೊತ್ತ 105 ವರ್ಷದ ವೃದ್ಧನನ್ನು ಶಾಶ್ವತವಾಗಿ ಬಿಡುಗಡೆಗೊಳಿಸಿದ ಸುಪ್ರೀಂ ಕೋರ್ಟ್‌; ಏನಿದು ಪ್ರಕರಣ?

ಹೊಸ ತಂಡದಲ್ಲಿ ನಿತಿನ್ ನಬಿನ್, ಸ್ಮೃತಿ ಇರಾನಿ, ವಿನೋದ್ ತಾವ್ಡೆ, ಹರ್ಷ್ ಸಂಘವಿ, ಒಪಿ ಚೌಧರಿ ಮತ್ತು ಇತರ ಹಲವಾರು ಬಿಜೆಪಿ ನಾಯಕರು ಸೇರಿದ್ದಾರೆ. ಇವರು ವಿಶೇಷವಾಗಿ ಜೆನ್ ಝೀಗಳನ್ನು ತಲುಪುವ ಗುರಿಯನ್ನು ಹೊಂದಿರುವ ವಿಶೇಷ ಸಂಪರ್ಕ ಕಾರ್ಯಕ್ರಮಗಳನ್ನು ಮುನ್ನಡೆಸಲಿದ್ದಾರೆ. ಇದರಿಂದ ಅವರ ನಿರೀಕ್ಷೆಗಳು ಮತ್ತು ಕಾಳಜಿಗಳನ್ನು ಅರ್ಥಮಾಡಿಕೊಳ್ಳಲು ಪಕ್ಷಕ್ಕೆ ಸಾಧ್ಯವಾಗಲಿದೆ ಎನ್ನಲಾಗಿದೆ.

ಇದರೊಂದಿಗೆ ಸಭೆಯಲ್ಲಿ 'ವಂದೇ ಮಾತರಂ' ಅನ್ನು ಗೌರವಿಸುವ ನಿರ್ಣಯವನ್ನು ಬಿಜೆಪಿ ಅಂಗೀಕರಿಸಿತ್ತು. ಇದರ ಪ್ರಕಾರ ಮುಂದೆ ಪಕ್ಷದ ಎಲ್ಲಾ ಕಾರ್ಯಕ್ರಮಗಳಲ್ಲಿ ರಾಷ್ಟ್ರೀಯ ಗೀತೆಯ ಎಲ್ಲಾ ಚರಣಗಳನ್ನು ಹಾಡುವುದಾಗಿ ಘೋಷಣೆ ಮಾಡಿದೆ. ಈ ಮೂಲಕ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಬೇಕು ಎನ್ನುವ ಕಾಂಗ್ರೆಸ್ ನಿರ್ಣಯವನ್ನು ಖಂಡಿಸಿತ್ತು.

'ವಂದೇ ಮಾತರಂ' ಸಂರಕ್ಷಣೆಗೆ ಪಣ ತೊಟ್ಟ ಬಿಜೆಪಿ; 2 ಪ್ಯಾರಾ ಹಾಡುವ ಕಾಂಗ್ರೆಸ್‌ ನಿರ್ಧಾರಕ್ಕೆ ಖಂಡನೆ: ಕೈ ನಾಯಕರ ವಿರುದ್ಧ ಕಮಲ ಪಡೆ ಧಗ ಧಗ

ಈ ಸಂದರ್ಭದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ, 'ವಂದೇ ಮಾತರಂ' ಪರಂಪರೆಯನ್ನು ಮತ ಬ್ಯಾಂಕ್ ರಾಜಕೀಯಕ್ಕಾಗಿ ಕಡಿಮೆ ಮಾಡಲು ಸಾಧ್ಯವಿಲ್ಲ. ಅದರ ಪರಂಪರೆಯನ್ನು ಗೌರವಿಸಲು ಯಾವುದೇ ರಾಜಿ ಮಾಡಿಕೊಳ್ಳಲಾಗುವುದಿಲ್ಲ. 'ವಂದೇ ಮಾತರಂ' ಪರಂಪರೆಯ ಬಗ್ಗೆ ಯುವಜನರಿಗೆ ಅರಿವು ಮೂಡಿಸಲು ವಿಶೇಷ ಜಾಗೃತಿ ಅಭಿಯಾನಗಳನ್ನು ನಡೆಸಲಾಗುವುದು ಎಂದು ತಿಳಿಸಿದೆ.

ವಿದ್ಯಾ ಇರ್ವತ್ತೂರು

View all posts by this author