'ವಂದೇ ಮಾತರಂ' ಸಂರಕ್ಷಣೆಗೆ ಪಣ ತೊಟ್ಟ ಬಿಜೆಪಿ; 2 ಪ್ಯಾರಾ ಹಾಡುವ ಕಾಂಗ್ರೆಸ್ ನಿರ್ಧಾರಕ್ಕೆ ಖಂಡನೆ: ಕೈ ನಾಯಕರ ವಿರುದ್ಧ ಕಮಲ ಪಡೆ ಧಗ ಧಗ
ಬಂಕಿಮ ಚಂದ್ರ ಚಟರ್ಜಿ ಅವರು ಬರೆದಿರುವ 'ವಂದೇ ಮಾತರಂ' ಗೀತೆಯನ್ನು ಪೂರ್ತಿಯಾಗಿ ಹಾಡಲು ಅವಕಾಶ ನೀಡುವ ನಿರ್ಣಯಕ್ಕೆ ಕೇಂದ್ರ ಸರ್ಕಾರ ಅಂಗೀಕಾರ ನೀಡಿದೆ. ಇದರ ಎರಡು ಚರಣಗಳನ್ನು ಮಾತ್ರ ಹಾಡಬೇಕು ಎನ್ನುವ ಕಾಂಗ್ರೆಸ್ ನಿರ್ಧಾರಕ್ಕೆ ವಿರುದ್ಧವಾಗಿ ಈ ಹೊಸ ನಿರ್ಣಯದಲ್ಲಿ 'ವಂದೇ ಮಾತರಂ' ಗೆ ರಾಷ್ಟ್ರೀಯ ಗೀತೆಯ ಸ್ಥಾನ ನೀಡಲಾಗಿದೆ.
ಸಂಗ್ರಹ ಚಿತ್ರ -
ನವದೆಹಲಿ: ಕಾಂಗ್ರೆಸ್ (Congress) ವಿರೋಧದ ನಡುವೆಯೂ ಎನ್ ಡಿಎ (NDA) ನೇತೃತ್ವದ ಕೇಂದ್ರ ಸರ್ಕಾರ 'ವಂದೇ ಮಾತರಂ' (Vande Mataram) ಗೀತೆಯನ್ನು ಪೂರ್ತಿಯಾಗಿ ಹಾಡಲು ಅವಕಾಶ ನೀಡುವ ನಿರ್ಣಯವನ್ನು ಅಂಗೀಕರಿಸಿದೆ. ಬಂಕಿಮ ಚಂದ್ರ ಚಟರ್ಜಿ ಅವರು ಬರೆದಿರುವ ಈ ಗೀತೆಯ ಎರಡು ಚರಣಗಳನ್ನು ಮಾತ್ರ ಹಾಡಬೇಕು ಎಂದು ಕಾಂಗ್ರೆಸ್ ವಾದದ ನಡುವೆ ಈ ನಿರ್ಣಯವನ್ನು ಅಂಗೀಕರಿಸಲಾಗಿದೆ. ಈ ಗೀತೆಯ ಎಲ್ಲಾ ಆರು ಚರಣಗಳು ಭಾರತದ ರಾಷ್ಟ್ರೀಯ ಪ್ರಜ್ಞೆ ಮತ್ತು ಸ್ವಾತಂತ್ರ್ಯ ಹೋರಾಟದ ಪರಂಪರೆಯನ್ನು ಪ್ರತಿನಿಧಿಸುತ್ತದೆ. ಹೀಗಾಗಿ ಅದಕ್ಕೆ ರಾಷ್ಟ್ರೀಯ ಗೀತೆಯ ಸ್ಥಾನವನ್ನು ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಈ ಕುರಿತು ಹೇಳಿಕೆ ಹೊರಡಿಸಿರುವ ಬಿಜೆಪಿ, ರಾಷ್ಟ್ರೀಯ ಗೀತೆಯ ಐತಿಹಾಸಿಕ ಪರಂಪರೆಯನ್ನು ಎತ್ತಿಹಿಡಿಯಲು 1937 ರ ನಿರ್ಣಯವನ್ನು ಪುನರುಚ್ಚರಿಸುತ್ತಾ ಪಕ್ಷದ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಹಾಡುವಿಕೆಯನ್ನು ಅದರ ಮೊದಲ ಎರಡು ಚರಣಗಳಿಗೆ ಸೀಮಿತಗೊಳಿಸುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ನಿರ್ಧಾರವನ್ನು ವಿರೋಧಿಸುವ ನಿರ್ಣಯವನ್ನು ಶನಿವಾರ ಅಂಗೀಕರಿಸಿರುವುದಾಗಿ ತಿಳಿಸಿದೆ.
"ಮದುಮೇಹ ಹೆಚ್ಚಾಗಬಹುದು ಎಂದು ಜನರು ಸ್ವೀಟ್ ತಿನ್ನುತ್ತಿಲ್ಲ"; ಸಕ್ಕರೆ ಬೆಲೆ ಏರಿಕೆ ಕುರಿತು ಸಚಿವ ಹೇಳಿದ್ದೇನು?
ಈ ನಿರ್ಣಯದ ಪ್ರಕಾರ ವಂದೇ ಮಾತರಂ ಅನ್ನು ಭಾರತದ ರಾಷ್ಟ್ರೀಯ ಗೀತೆ ಎಂದು ಪರಿಗಣಿಸಲಾಗುತ್ತದೆ. ಇದು ಭಾರತ ಮಾತೆಯ ಮೇಲಿನ ಗೌರವದ ಅಭಿವ್ಯಕ್ತಿ, ಸ್ವಾತಂತ್ರ್ಯ ಹೋರಾಟದ ಮಂತ್ರ ಮತ್ತು ಭಾರತದ ರಾಷ್ಟ್ರೀಯ ಪ್ರಜ್ಞೆಯ ಅಮರ ಸಂಕೇತವಾಗಿದೆ ಎಂದು ಹೇಳಿದೆ.
वंदे मातरम् 🇮🇳
— Piyush Goyal (@PiyushGoyal) August 22, 2026
Vande Mataram is not just our national song, but an emotion that evokes patriotism & a deep sense of pride among Indians. Sadly, Congress lacks the sensitivity to understand this sentiment.
The BJP's resolution on Vande Mataram reaffirms our commitment to… https://t.co/By41ecUeix
ಸಂಪೂರ್ಣ ವಂದೇ ಮಾತರಂನ ಗೌರವ, ಘನತೆ, ಪರಂಪರೆ ಮತ್ತು ರಾಷ್ಟ್ರೀಯ ಸ್ಥಾನಮಾನವನ್ನು ಎತ್ತಿಹಿಡಿಯಲು ಕೇಂದ್ರ ಸರ್ಕಾರವು 1950ರ ಘೋಷಣೆಗೆ ತಿದ್ದುಪಡಿ ಮಾಡಿ ಅದಕ್ಕೆ ಸಾಂವಿಧಾನಿಕ ಮತ್ತು ಶಾಸನಬದ್ಧ ಸ್ಥಾನಮಾನವನ್ನು ದೃಢೀಕರಿಸಲು ರಾಷ್ಟ್ರಗೀತೆಗೆ ನೀಡಲಾಗುವ ಸಮಾನವಾದ ಶಾಸನಬದ್ಧ ರಕ್ಷಣೆ ನೀಡಲು ಈ ನಿರ್ಣಯ ಅಂಗೀಕರಿಸಿರುವುದಾಗಿ ಅದು ತಿಳಿಸಿದೆ.
ಇದಕ್ಕೆ ಸಂಬಂಧಿಸಿ ಕಾಂಗ್ರೆಸ್ ನಿಲುವನ್ನು ಟೀಕಿಸಿರುವ ಬಿಜೆಪಿ, ರಾಷ್ಟ್ರೀಯ ಗೀತೆಯನ್ನು ಕೋಮು ವಿಚಾರವಾಗಿ ಮಾಡಿ, ರಾಜಕೀಯ ಓಲೈಕೆಗಾಗಿ ಕಾಂಗ್ರೆಸ್ ಬಳಸುತ್ತಿದೆ. ಇದನ್ನು ವಿರೋಧಿಸುವುದಾಗಿ ಹೇಳಿದೆ.
1937ರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಕ್ಷದ ಎಲ್ಲಾ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ನ ಪೂರ್ಣ ಪ್ರತಿಪಾದನೆಯ ಬದಲು ಎರಡು ಚರಣಗಳನ್ನು ಮಾತ್ರ ಹಾಡಲು ನಿರ್ಣಯ ಅಂಗೀಕರಿಸಿತ್ತು. ಇದು ರಾಷ್ಟ್ರ ವಿರೋಧಿ ನಿರ್ಣಯ ಎಂದಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಇದು ಮತಬ್ಯಾಂಕ್ ರಾಜಕೀಯವನ್ನು ಬೆಳೆಸಲು ಮಾಡಿರುವುದಾಗಿ ಎಂದು ಆರೋಪಿಸಿದರು.
ಪ್ರಧಾನಿ ಮೋದಿಯನ್ನು ಭೇಟಿಯಾದ ಜಪಾನ್ ರಕ್ಷಣಾ ಸಚಿವ: ಭಾರತ-ಜಪಾನ್ ಸಂಬಂಧ ಬಲಪಡಿಸುವ ಬಗ್ಗೆ ಒತ್ತು
ವಂದೇ ಮಾತರಂನ ಇತಿಹಾಸ, ಅರ್ಥ, ರಾಷ್ಟ್ರೀಯ ಮಹತ್ವ ಮತ್ತು ಅದ್ಭುತ ಪರಂಪರೆಯನ್ನು ಭಾರತದ ಮೂಲೆ ಮೂಲೆಗೂ ಕೊಂಡೊಯ್ಯಲು ಪಕ್ಷವು ರಾಷ್ಟ್ರವ್ಯಾಪಿ ಅಭಿಯಾನವನ್ನು ಕೈಗೊಳ್ಳಲಿದೆ ಎಂದು ಹೇಳಿರುವ ಕೇಂದ್ರ ಸರ್ಕಾರ, ವಂದೇ ಮಾತರಂ ಎಂಬುದು ಒಂದು ಕಾಲದಲ್ಲಿ “ಒಂದು ಸಾಮ್ರಾಜ್ಯವನ್ನು ಹೆದರಿಸುವಷ್ಟು ಶಕ್ತಿಶಾಲಿಯಾಗಿದ್ದವು” ಎಂಬುದನ್ನು ಎಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ತಿಳಿಸಿದೆ.