ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MP Violence: ಹನುಮಾನ್ ಜಯಂತಿ ಮೆರವಣಿಗೆ ವೇಳೆ ಘರ್ಷಣೆ ; ಎರಡು ಗುಂಪುಗಳ ನಡುವೆ ಕಲ್ಲು ತೂರಾಟ

ಮಧ್ಯಪ್ರದೇಶದ ಗುನಾದಲ್ಲಿ ಶನಿವಾರ ಹನುಮಾನ್ ಜಯಂತಿ ಮೆರವಣಿಗೆಯ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದ ನಂತರ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆ ಸಂಜೆ 7.30 ರ ಸುಮಾರಿಗೆ ಸಂಭವಿಸಿದ್ದು, ನಂತರ ಅಧಿಕಾರಿಗಳು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ತ್ವರಿತವಾಗಿ ಕಾರ್ಯಪ್ರವೃತ್ತರಾದರು

ಹನುಮಾನ್ ಜಯಂತಿ ಮೆರವಣಿಗೆ ವೇಳೆ ಘರ್ಷಣೆ

Profile Vishakha Bhat Apr 13, 2025 9:34 AM

ಭೋಪಾಲ್‌: ಮಧ್ಯಪ್ರದೇಶದ ಗುನಾದಲ್ಲಿ (MP Violence) ಶನಿವಾರ ಹನುಮಾನ್ ಜಯಂತಿ ಮೆರವಣಿಗೆಯ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದ ನಂತರ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆ ಸಂಜೆ 7.30 ರ ಸುಮಾರಿಗೆ ಸಂಭವಿಸಿದ್ದು, ನಂತರ ಅಧಿಕಾರಿಗಳು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ತ್ವರಿತವಾಗಿ ಕಾರ್ಯಪ್ರವೃತ್ತರಾದರು ಎಂದು ಅವರು ತಿಳಿಸಿದ್ದಾರೆ. ಈ ಮೆರವಣಿಗೆ ಬಿಜೆಪಿ ಕೌನ್ಸಿಲರ್ ಓಂಪ್ರಕಾಶ್ ಕುಶ್ವಾಹ್ ನೇತೃತ್ವದಲ್ಲಿ ನಡೆದಿತ್ತು. ಮೆರವಣಿಗೆಯ ಮಾರ್ಗದ ಬಗ್ಗೆ ವಿವಾದ ಉಂಟಾದ ನಂತರ ಎರಡು ಗುಂಪುಗಳ ನಡುವೆ ಘರ್ಷಣೆಗಳು ನಡೆದವು.

ವಿವಾದದ ನಂತರ ಕಲ್ಲು ತೂರಾಟ ನಡೆದಿದೆ. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಅನೇಕ ಜನರು ರಾತ್ರಿ 8 ಗಂಟೆ ಸುಮಾರಿಗೆ ಮಸೀದಿಯನ್ನು ದಾಟುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಡಿಜೆ ಸಂಗೀತವನ್ನು ಜೋರಾಗಿ ನುಡಿಸಲಾಯಿತು ಮತ್ತು ಮಸೀದಿಯ ಹೊರಗೆ ನಿಲ್ಲಿಸಲಾಯಿತು ಎಂದು ವರದಿಯಾಗಿದೆ, ಇದು ಮಸೀದಿಯಲ್ಲಿದ್ದವರು ಮತ್ತು ಮೆರವಣಿಗೆಯ ಸದಸ್ಯರ ನಡುವೆ ವಿವಾದಕ್ಕೆ ಕಾರಣವಾಯಿತು. ವಾಗ್ದವಾದ ನಂತರ ಸೀದಿಯಿಂದ ಕಲ್ಲು ತೂರಾಟ ಪ್ರಾರಂಭವಾಯಿತು, ಪರಿಸ್ಥಿತಿ ಉಲ್ಬಣಗೊಂಡಿತು. ಎರಡೂ ಕಡೆಯವರು ಪರಸ್ಪರ ಕಲ್ಲು ತೂರಾಟ ನಡೆಸಿದ್ದಾರೆ.



ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಕುಮಾರ್ ಸಿನ್ಹಾ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಘಟನೆಯಿಂದ ಕೋಪಗೊಂಡ ಹಿಂದೂ ಸಂಘಟನೆಗಳ ಸದಸ್ಯರು ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನೆ ನಡೆಸಿದೆ. ಸಿಟಿ ಕೊಟ್ವಾಲಿ ಪೊಲೀಸ್ ಠಾಣೆಯನ್ನು ಸುತ್ತುವರೆದರು. ಪೊಲೀಸ್ ಠಾಣೆಯ ಎದುರು ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು. ಘಟನೆಯ ವಿಡಿಯೋದಲ್ಲಿ, ಪೊಲೀಸ್ ಅಧಿಕಾರಿಗಳು ಕೋಲುಗಳನ್ನು ಹಿಡಿದು ಘರ್ಷಣೆಯ ನಂತರ ಗುಂಪನ್ನು ಚದುರಿಸಲು ಪ್ರಯತ್ನಿಸುತ್ತಿರುವುದು ಕಂಡುಬರುತ್ತದೆ. ಮತ್ತೊಂದು ದೃಶ್ಯದಲ್ಲಿ ಎರಡು ಗುಂಪುಗಳು ದೈಹಿಕ ವಾಗ್ವಾದದಲ್ಲಿ ತೊಡಗಿದ್ದು, ಸ್ಥಳದಲ್ಲಿದ್ದ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.

ಈ ಸುದ್ದಿಯನ್ನೂ ಓದಿ: Kerala Waqf protest: ಎಲ್ಲಿಯ ವಕ್ಫ್‌ ಮಸೂದೆ.... ಎಲ್ಲಿಯ ಹಮಾಸ್‌ ಉಗ್ರರು? ಕೇರಳ ಪ್ರತಿಭಟನೆಯಲ್ಲಿ ಇವರ ಫೊಟೋ ಏಕೆ?

ಘರ್ಷಣೆಯ ಸಮಯದಲ್ಲಿ, ಬಿಜೆಪಿ ಕೌನ್ಸಿಲರ್ ಓಂಪ್ರಕಾಶ್ ಕುಶ್ವಾಹ ಅವರ 11 ವರ್ಷದ ಮಗ ಅಕುಲ್ ಕುಶ್ವಾಹ ಮೆರವಣಿಗೆಯಲ್ಲಿ ಗಾಯಗೊಂಡಿದ್ದಾನೆ. ಘಟನೆಯ ನಂತರ ಓಂಪ್ರಕಾಶ್ ಕುಶ್ವಾಹ ದೂರು ದಾಖಲಿಸಿದ್ದಾರೆ. ಹನುಮಾನ್ ಜಯಂತಿ ಮೆರವಣಿಗೆಯ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದ ಬಗ್ಗೆ ನಮಗೆ ಮಾಹಿತಿ ಸಿಕ್ಕಿತು. ಸ್ವಲ್ಪ ಸಮಯದವರೆಗೆ ಶಾಂತಿ ಮತ್ತು ಸುವ್ಯವಸ್ಥೆಗೆ ಸ್ವಲ್ಪ ತೊಂದರೆಯಾಗಿತ್ತು" ಎಂದು ಸ್ಥಳೀಯ ಆಡಳಿತವು ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಸ್ತುತ, ಈ ಪ್ರದೇಶದಲ್ಲಿ ಸಂಪೂರ್ಣ ಶಾಂತಿ ಮತ್ತು ಸುವ್ಯವಸ್ಥೆ ಇದೆ. ಯಾವುದೇ ರೀತಿಯ ವದಂತಿಗಳಿಗೆ ಜನರು ಗಮನ ಕೊಡಬಾರದು" ಎಂದು ಪ್ರಕಟಣೆ ತಿಳಿಸಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಮತ್ತು ಪ್ರದೇಶದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಕುಮಾರ್ ಸಿನ್ಹಾ ತಿಳಿಸಿದ್ದಾರೆ.