ಕಾಕ್ರೋಚ್ ಜನತಾ ಪಕ್ಷದ ಎಕ್ಸ್ ಖಾತೆ ಬ್ಲಾಕ್; 2 ಟ್ರೇಡ್‌ಮಾರ್ಕ್ ಹಕ್ಕುಗಳು ಮುಂಚೂಣಿಗೆ
Cockroach Janta Party: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಹೇಳಿಕೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಕಾಕ್ರೋಚ್ ಜನತಾ ಪಕ್ಷ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಪಕ್ಷದ ಹೆಸರಿನಲ್ಲಿ ಎರಡು ಟ್ರೇಡ್‌ಮಾರ್ಕ್ ಅರ್ಜಿಗಳು ಸಲ್ಲಿಕೆಯಾಗಿರುವುದು ಗಮನ ಸೆಳೆದಿದ್ದು, ಇದೇ ವೇಳೆ ಭಾರತ ಸರ್ಕಾರದ ಕಾನೂನು ಬೇಡಿಕೆಯ ಮೇರೆಗೆ ಅದರ ಎಕ್ಸ್ ಖಾತೆಯನ್ನು ಅಮಾನತುಗೊಳಿಸಲಾಗಿದೆ.
ಕಾಕ್ರೋಚ್ ಜನತಾ ಪಕ್ಷದ ಲೋಗೋ -
ನವದೆಹಲಿ, ಮೇ 21: ಸುಪ್ರೀಂ ಕೋರ್ಟ್ (Supreme Court) ವಿಚಾರಣೆಯೊಂದರಲ್ಲಿ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ (Chief Justice of India Surya Kant) ಅವರ ಇತ್ತೀಚಿನ ಹೇಳಿಕೆಗಳ ನಂತರ ಉಗಮಿಸಿದ ರಾಜಕೀಯ ಸಂಘಟನೆ ಕಾಕ್ರೋಚ್ ಜನತಾ ಪಕ್ಷ (Cockroach Janta Party) ಹೆಸರಿನಲ್ಲಿ ಎರಡು ಟ್ರೇಡ್‌ಮಾರ್ಕ್ ಅರ್ಜಿಗಳನ್ನು ಸಲ್ಲಿಸಲಾಗಿದೆ. ಭಾರತದಲ್ಲಿ ಈ ಪಕ್ಷದ ಅಧಿಕೃತ ಎಕ್ಸ್ ಖಾತೆಯನ್ನು ತಡೆಹಿಡಿದ ಕೆಲವೇ ಗಂಟೆಗಳಲ್ಲಿ ಈ ಬೆಳವಣಿಗೆ ನಡೆದಿದೆ.
ಟ್ರೇಡ್‌ಮಾರ್ಕ್ ರಿಜಿಸ್ಟ್ರಿಯ ಸಾರ್ವಜನಿಕ ಹುಡುಕಾಟ ಪೋರ್ಟಲ್‌ನಲ್ಲಿ ಲಭ್ಯವಿರುವ ದಾಖಲೆಗಳ ಪ್ರಕಾರ, ಕಾನೂನು ಮತ್ತು ಕೆಲವು ವೈಯಕ್ತಿಕ ಸೇವೆಗಳನ್ನು ಒಳಗೊಂಡಿರುವ 'ಕ್ಲಾಸ್ 45' ಅಡಿಯಲ್ಲಿ ಈ ಅರ್ಜಿಗಳನ್ನು ಸಲ್ಲಿಸಲಾಗಿದೆ. ಮೊದಲ ಅರ್ಜಿಯನ್ನು (ಸಂಖ್ಯೆ 7737937) ಅಜೀಮ್ ಆಡಂಬಾಯ್ ಜಾಮ್ ಎಂಬುವವರು ಮತ್ತು ಎರಡನೇ ಅರ್ಜಿಯನ್ನು (ಸಂಖ್ಯೆ 7741481) ಅಖಂಡ ಸ್ವರೂಪ್ ಎಂಬುವವರು ಸಲ್ಲಿಸಿದ್ದಾರೆ. ಪ್ರಸ್ತುತ ಎರಡೂ ಅರ್ಜಿಗಳ ಸ್ಥಿತಿಯು ʼಫಾರ್ಮಾಲಿಟೀಸ್ ಚೆಕ್ ಪಾಸ್ʼ ಎಂದು ತೋರಿಸುತ್ತಿದೆ.
ಸಿಜೆಪಿಯ ಎಕ್ಸ್ ಖಾತೆ ಸ್ಥಗಿತ:
Cockroach Janta Party
— Atulkrishan (@iAtulKrishan1) May 21, 2026
X Account Withheld in India Amid Online Free Speech Debate
X account of “Cockroach Janta Party” has been withheld in India, sparking debate over platform transparency and digital free speech concerns.
The action has triggered criticism from some users… https://t.co/R0adM3r6z4 pic.twitter.com/BaacjSGezU
ಕಳೆದ ವಾರ ವಿಚಾರಣೆಯೊಂದರ ಸಂದರ್ಭದಲ್ಲಿ, ನಿರುದ್ಯೋಗಿ ಯುವಕರು ಮಾಧ್ಯಮ, ಸಾಮಾಜಿಕ ಮಾಧ್ಯಮ ಮತ್ತು ಆರ್‌ಟಿಐ ಮೂಲಕ ಕ್ರಿಯಾಶೀಲತೆಗೆ ತಿರುಗುವುದನ್ನು ಮುಖ್ಯ ನ್ಯಾಯಮೂರ್ತಿಗಳು ಕಾಕ್ರೋಚ್‌ಗಳಿಗೆ (ಜಿರಳೆ) ಹೋಲಿಸಿದ್ದರು. ಈ ಹೇಳಿಕೆಯ ನಂತರ ಈ ಸಂಘಟನೆಯು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಜನಪ್ರಿಯತೆ ಗಳಿಸಿತು. ನಂತರ ಸಿಜೆಐ ಅವರು, ನಕಲಿ ಪದವಿಗಳೊಂದಿಗೆ ವೃತ್ತಿ ರಂಗಕ್ಕೆ ಪ್ರವೇಶಿಸುವವರನ್ನು ಉಲ್ಲೇಶಿಸಿ ತಾವು ಈ ಮಾತು ಹೇಳಿದ್ದಾಗಿ ಸ್ಪಷ್ಟನೆ ನೀಡಿದ್ದರು.
ಕಾಕ್ರೋಚ್ ಜನತಾ ಪಾರ್ಟಿಗೆ 3 ದಿನಗಳಲ್ಲಿ 20 ಲಕ್ಷ ಸದಸ್ಯರ ಸೇರ್ಪಡೆ: ರಾಜಕೀಯ ಸಂಚಲನ ಮೂಡಿಸಿದ ಸಂಘಟನೆ
ಕೇವಲ ಐದೇ ದಿನಗಳಲ್ಲಿ ಈ ಖಾತೆಯು 15 ಮಿಲಿಯನ್ ಅನುಯಾಯಿಗಳನ್ನು ದಾಟಿ, ಎಕ್ಸ್ ವೇದಿಕೆಯಲ್ಲಿ ಬಿಜೆಪಿಯನ್ನು ಸಹ ಹಿಂದಿಕ್ಕಿತು. ಇದರ ಬೆನ್ನಲ್ಲೇ, ಯುವ ಬಳಕೆದಾರರು ವ್ಯವಸ್ಥೆಯನ್ನು ಪ್ರಶ್ನಿಸಲು ಹೆದರದ ʼಕಾಕ್ರೋಚ್‌ಗಳುʼ ಎಂದು ತಮ್ಮನ್ನು ತಾವು ಗುರುತಿಸಿಕೊಳ್ಳಲು ಆರಂಭಿಸಿದರು ಮತ್ತು #CockroachJanataParty ಹ್ಯಾಷ್ ಟ್ಯಾಗ್ ಟ್ರೆಂಡ್ ಆಯಿತು.
ಆಮ್ ಆದ್ಮಿ ಪಕ್ಷದೊಂದಿಗೆ ಕೆಲಸ ಮಾಡಿದ್ದ ರಾಜಕೀಯ ಸಂವಹನ ತಂತ್ರಜ್ಞ ಅಭಿಜೀತ್ ದಿಪ್ಕೆ ಈ ʼಕಾಕ್ರೋಚ್ ಜನತಾ ಪಕ್ಷʼದ ಖಾತೆ ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳನ್ನು ಪ್ರಾರಂಭಿಸಿದ್ದರು. ಕೇವಲ ಕೆಲವೇ ದಿನಗಳಲ್ಲಿ ಮಿಲಿಯನ್ ಗಟ್ಟಲೆ ಅನುಯಾಯಿಗಳನ್ನು ಪಡೆದಿದ್ದ ಈ ಪಕ್ಷದ ಎಕ್ಸ್ ಹ್ಯಾಂಡಲ್ ಅನ್ನು ಭಾರತ ಸರ್ಕಾರದ ಕಾನೂನು ಬೇಡಿಕೆಯ ಮೇರೆಗೆ ಬುಧವಾರ ಅಮಾನತುಗೊಳಿಸಲಾಗಿದೆ.