Physical Assault: ಫೇಕ್ ಪಿಎಚ್‌ಡಿ, ಫೇಕ್ ಬುಕ್; ಬಗೆದಷ್ಟು ಬಯಲಾಗ್ತಿದೆ ಕಾಮಿ ಸ್ವಾಮಿಯ ಕಳ್ಳಾಟ
ಶ್ರೀ ಶಾರದಾ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್‌ಮೆಂಟ್ ನಿರ್ದೇಶಕ ಚೈತನ್ಯಾನಂದ ಸರಸ್ವತಿ(Chaitanyananda Saraswati) ಸ್ವಾಮೀಜಿ ವಿದ್ಯಾರ್ಥಿನಿಯರಿಗೆ ನೀಡಿರುವ ಕಿರುಕುಳ ಪ್ರಕರಣ ಬೆಳಕಿಗೆ ಬಂದಿದೆ. ಆತನ ವಿರುದ್ಧ ತನಿಖೆ ನಡೆಸುತ್ತಿರುವ ಅಧಿಕಾರಿಗಳಿಗೆ ಮಹತ್ವದ ಸಾಕ್ಷಿ ದೊರೆತಿದೆ.

-

ದೆಹಲಿ: ಶ್ರೀ ಶಾರದಾ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್‌ಮೆಂಟ್ ನಿರ್ದೇಶಕ ಚೈತನ್ಯಾನಂದ ಸರಸ್ವತಿ (Chaitanyananda Saraswati) ಸ್ವಾಮೀಜಿ ವಿದ್ಯಾರ್ಥಿನಿಯರಿಗೆ ನೀಡಿರುವ ಕಿರುಕುಳ ಪ್ರಕರಣ ಬೆಳಕಿಗೆ ಬಂದಿದೆ. ಆತನ ವಿರುದ್ಧ ತನಿಖೆ ನಡೆಸುತ್ತಿರುವ ಅಧಿಕಾರಿಗಳಿಗೆ ಮಹತ್ವದ ಸಾಕ್ಷಿ ದೊರೆತಿದೆ. ಆರೋಪಿ ಸ್ವಾಮಿ ಈ ಹಿಂದೆ ಪಾರ್ಥಸಾರಥಿ ಎಂದು ಕರೆಯಲ್ಪಡುತ್ತಿದ್ದರು , ಶ್ರೀ ಶಾರದಾ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್‌ಮೆಂಟ್-ರಿಸರ್ಚ್‌ನ ನಿರ್ದೇಶಕರಾಗಿದ್ದ. ತನ್ನನ್ನು ತಾನು ಸ್ವಯಂ ಘೋಷಿತ ದೇವಮಾನವ ಎಂದು ಆತ ಹೇಳಿಕೊಂಡಿದ್ದ.
ಶೈಕ್ಷಣಿಕ ಸಂಶೋಧನಾ ಹಂಚಿಕೆ ವೇದಿಕೆಗಳಲ್ಲಿ ಚೈತನ್ಯಾನಂದ ತನ್ನನ್ನು ತಾನು ಚಿಕಾಗೋ ವಿಶ್ವವಿದ್ಯಾಲಯದ ಬೂತ್ ಸ್ಕೂಲ್ ಆಫ್ ಬಿಸಿನೆಸ್‌ನಿಂದ ಎಂಬಿಎ ಮತ್ತು ಪಿಎಚ್‌ಡಿ ಪದವಿ ಪಡೆದಿದ್ದೆ ಎಂದು ಹೇಳಿಕೊಂಡಿದ್ದಾನೆ. ಪೋಸ್ಟ್-ಡಾಕ್ಟರೇಟ್ ಪದವಿಗಳು ಮತ್ತು ಡಿ-ಲಿಟ್ ಅನ್ನು ಪೂರ್ಣಗೊಳಿಸಿದ್ದೆ ಹಾಗೂ ಭಾರತ ಮತ್ತು ವಿದೇಶಗಳಲ್ಲಿನ ವಿಶ್ವವಿದ್ಯಾಲಯಗಳಿಂದ ಏಳು ಗೌರವ ಡಿ-ಲಿಟ್ ಪದವಿಗಳನ್ನು ಹೊಂದಿದ್ದೆ ಎಂದು ಆತ ಬರೆದುಕೊಂಡಿದ್ದಾನೆ. ಆತ ಒಂದು ಪುಸ್ತಕ ಬರೆದಿದ್ದು ಅದು ಆನ್‌ಲೈನ್‌ನಲ್ಲಿ ಲಭ್ಯವಿದೆ. ಈ ಪುಸ್ತಕಗಳ ಮುಖಪುಟದಲ್ಲಿ, ಚೈತನ್ಯಾನಂದ ತನ್ನನ್ನು "ಅಂತರರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಪಡೆದ ಬರಹಗಾರ" ಎಂದು ಪರಿಚಯಿಸಿಕೊಂಡಿದ್ದಾನೆ. 28 ಶೀರ್ಷಿಕೆಗಳು ಮತ್ತು 143 ಸಂಶೋಧನಾ ಪ್ರಬಂಧಗಳನ್ನು ಬರೆದಿದ್ದೇನೆ ಎಂದು ಉಲ್ಲೇಖಿಸಿದ್ದಾನೆ.
ಸ್ತಕಗಳಲ್ಲಿ ಒಂದಾದ "ಫರ್ಗೆಟ್ ಕ್ಲಾಸ್‌ರೂಮ್ ಲರ್ನಿಂಗ್" ಗೆ ಆಪಲ್ ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರ ಮುನ್ನುಡಿ ಇದೆ. ಪುಸ್ತಕದ ಮುಖಪುಟದಲ್ಲಿ, ಜಾಬ್ಸ್ ಚೈತನ್ಯಾನಂದನ ಪುಸ್ತಕವು "ಅನ್ವಯಿಕ ನಿರ್ವಹಣಾ ಜಗತ್ತಿಗೆ ಅಭೂತಪೂರ್ವ ಪೂರ್ವಸಿದ್ಧತಾ ಮತ್ತು ಮಾರ್ಗದರ್ಶಿ ಕೈಪಿಡಿ" ಎಂದು ಹೇಳಿದ್ದನ್ನು ಉಲ್ಲೇಖಿಸಲಾಗಿದೆ. ಪುಸ್ತಕವೊಂದರಲ್ಲಿನ ಲೇಖಕರ ಪ್ರೊಫೈಲ್‌ನಲ್ಲಿ, ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರು ತಮ್ಮ ಚುನಾವಣಾ ಪ್ರಚಾರದ ಸಮಯದಲ್ಲಿ ತಮ್ಮ 'ಟ್ರಾನ್ಸ್‌ಫಾರ್ಮಿಂಗ್ ಪರ್ಸನಾಲಿಟಿ' ಪುಸ್ತಕವನ್ನು ಪದೇ ಪದೇ ಉಲ್ಲೇಖಿಸಿದ್ದಾರೆ ಎಂದು ಹೇಳಲಾಗಿದೆ. 2007 ರಲ್ಲಿ ಯುರೋಪಿಯನ್ ಮತ್ತು ಉತ್ತರ ಅಮೆರಿಕಾದ ಮಾರುಕಟ್ಟೆಗಳಲ್ಲಿ ಈ ಪುಸ್ತಕವು ಹೆಚ್ಚು ಮಾರಾಟವಾದ ಪುಸ್ತಕಗಳಲ್ಲಿ ಒಂದಾಗಿದೆ ಎಂದು ಅದು ಹೇಳುತ್ತದೆ.
ಈ ಸುದ್ದಿಯನ್ನೂ ಓದಿ: Elon Musk: ಸ್ವಂತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ರಾ ಎಲಾನ್ ಮಸ್ಕ್ ತಂದೆ? ಏನಿದು ಆರೋಪ?
ಚೈತನ್ಯಾನಂದ ವಾಟ್ಸಾಪ್‌ನಲ್ಲಿ ಸಂದೇಶಗಳನ್ನು ಕಳುಹಿಸುವ ಮೂಲಕ ಕಿರುಕುಳ ನೀಡುತ್ತಿದ್ದ ಎಂದು 30 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ಆತ ತಮ್ಮನ್ನು ಬೇಬಿ ಎಂದು ಕರೆಯುತ್ತಿದ್ದ ಎಂದು ವಿದ್ಯಾರ್ಥಿನಿಯೊಬ್ಬಳು ಆರೋಪಿಗಳು ಆರೋಪಿಸಿದ್ದಾಳೆ.