ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Crime News: BMW ಕಾರು ಅಪಘಾತದಿಂದ ಆರ್ಥಿಕ ಇಲಾಖೆ ಅಧಿಕಾರಿ ಸಾವು ಪ್ರಕರಣ: ಆರೋಪಿ ಗಗನ್‌ಪ್ರೀತ್‌ಗೆ ಜಾಮೀನು

ಆರ್ಥಿಕ ಇಲಾಖೆಯ ಉಪ ಕಾರ್ಯದರ್ಶಿ ನವ್‌ಜೋತ್ ಸಿಂಗ್ ಸಾವಿಗೆ ಕಾರಣವಾದ ಆರೋಪಿ ಗಗನ್‌ಪ್ರೀತ್ ಕೌರ್‌ಗೆ ಪಟಿಯಾಲಾ ಹೌಸ್ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ನವ್‌ಜೋತ್ ಸಿಂಗ್ ಮತ್ತು ಅವರ ಪತ್ನಿ ಸಂದೀಪ್ ಕೌರ್‌ ಅವರ ಬೈಕ್‌ಗೆ ಡಿಕ್ಕಿ ಹೊಡೆದಿತ್ತು. ಅಪಘಾತವಾದ ರಭಸಕ್ಕೆ ಬಂಗ್ಲಾ ಸಾಹಿಬ್ ಗುರುದ್ವಾರದಿಂದ ಮರಳುತ್ತಿದ್ದ ನವ್‌ಜೋತ್ ಸಾವನ್ನಪ್ಪಿದ್ದರು.

ಅಧಿಕಾರಿಯ ಸಾವಿಗೆ ಕಾರಣವಾಗಿದ್ದ ಆರೋಪಿಗೆ ಜಾಮೀನು

ಕೊಲೆ ಆರೋಪಿ -

Profile Sushmitha Jain Sep 28, 2025 3:27 PM

ನವದೆಹಲಿ: ದೆಹಲಿಯ (Delhi) ಧೌಲಾ ಕುವಾನ್‌ನಲ್ಲಿ ಬಿಎಂಡಬ್ಲ್ಯು ಕಾರು (BMW Car) ಬೈಕ್‌ಗೆ ಡಿಕ್ಕಿ ಹೊಡೆದು ಆರ್ಥಿಕ ಇಲಾಖೆಯ ಉಪ ಕಾರ್ಯದರ್ಶಿ (Finance Ministry official) ನವ್‌ಜೋತ್ ಸಿಂಗ್ ಸಾವಿಗೆ ಕಾರಣವಾದ ಆರೋಪಿ ಗಗನ್‌ಪ್ರೀತ್ ಕೌರ್‌ಗೆ ಪಟಿಯಾಲಾ ಹೌಸ್ ಕೋರ್ಟ್ (Patiala House Court) ಜಾಮೀನು ಮಂಜೂರು ಮಾಡಿದೆ. ಅವರು ₹1 ಲಕ್ಷದ ವೈಯಕ್ತಿಕ ಬಾಂಡ್ ಮತ್ತು ಇಬ್ಬರು ಗ್ಯಾರಂಟಿ ಒದಗಿಸಬೇಕು.

ಘಟನೆಯ ವಿವರ

ಸೆಪ್ಟೆಂಬರ್ 14ರಂದು 38 ವರ್ಷದ ಮಹಿಳೆ ಗಗನ್‌ಪ್ರೀತ್ ಚಲಾಯಿಸುತ್ತಿದ್ದ ಬಿಎಂಡಬ್ಲ್ಯು ಕಾರು, 52 ವರ್ಷದ ನವ್‌ಜೋತ್ ಸಿಂಗ್ ಮತ್ತು ಅವರ ಪತ್ನಿ ಸಂದೀಪ್ ಕೌರ್‌ ಅವರ ಬೈಕ್‌ಗೆ ಡಿಕ್ಕಿ ಹೊಡೆದಿತ್ತು. ಅಪಘಾತವಾದ ರಭಸಕ್ಕೆ ಬಂಗ್ಲಾ ಸಾಹಿಬ್ ಗುರುದ್ವಾರದಿಂದ ಮರಳುತ್ತಿದ್ದ ನವ್‌ಜೋತ್ ಸಾವನ್ನಪ್ಪಿದರು, ಪತ್ನಿ ಸಂದೀಪ್‌ಗೆ ಗಂಭೀರ ಗಾಯಗಳಾದವು. ಗಗನ್‌ಪ್ರೀತ್, “ಕಾರಿನಿಂದ ಬೈಕ್‌ಗೆ ಡಿಕ್ಕಿಯಾಗಿಲ್ಲ, ಬಸ್‌ನಿಂದ ಆಗಿದೆ” ಎಂದು ವಾದಿಸಿದ್ದಾರೆ.

ಕೋರ್ಟ್‌ ಟೀಕೆ

ಕೋರ್ಟ್, ಆಂಬುಲೆನ್ಸ್ ಸಿಬ್ಬಂದಿಯನ್ನು ಟೀಕಿಸಿದೆ. “ಅಪಘಾತದ ಸ್ಥಳಕ್ಕೆ ಆಂಬುಲೆನ್ಸ್ ಬಂದಿತ್ತು, ಆದರೆ 30 ಸೆಕೆಂಡ್‌ಗಿಂತ ಹೆಚ್ಚು ಕಾಲ ನಿಂತು ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ಯಲಿಲ್ಲ. ಇದು ವೈದ್ಯಕೀಯ ನಿರ್ಲಕ್ಷ್ಯವೇ?” ಎಂದು ಪೊಲೀಸರನ್ನು ಪ್ರಶ್ನಿಸಿತು. ಆಂಬುಲೆನ್ಸ್ ಸಿಬ್ಬಂದಿಯೂ ಆರೋಪಿಗಳಾಗಬಹುದೇ ಎಂದು ಕೇಳಿತು.

ಈ ಸುದ್ದಿಯನ್ನು ಓದಿ: Post Office: ಅಂಚೆ ಕಚೇರಿಯಲ್ಲಿ ಮಹತ್ವದ ಬದಲಾವಣೆ; ಅಕ್ಟೋಬರ್ 1ಕ್ಕೆ ರಿಜಿಸ್ಟರ್ಡ್ ಪೋಸ್ಟ್ಗೆ ಅಂತಿಮ ವಿದಾಯ

ಆರೋಪ-ಪ್ರತಿಆರೋಪ

ಗಗನ್‌ಪ್ರೀತ್‌ರ ವಕೀಲ, “ಸಿಸಿಟಿವಿ ದೃಶ್ಯಗಳು ಬೈಕ್‌ಗೆ ಬಸ್ ಡಿಕ್ಕಿ ಹೊಡೆದಿದೆ ಎಂದು ತೋರಿಸುತ್ತವೆ. 24 ನಿಮಿಷದಲ್ಲಿ ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ದೆವು” ಎಂದರು. ಆದರೆ ಸರ್ಕಾರಿ ವಕೀಲ, ಪತ್ನಿ ಸಂದೀಪ್ ಹತ್ತಿರದ ಆಸ್ಪತ್ರೆಗೆ ಹೋಗೋಣ ಎಂದು ಕೇಳಿದರೂ, ಗಗನ್‌ಪ್ರೀತ್ 19 ಕಿ.ಮೀ. ದೂರದ ನುಲೈಫ್ ಆಸ್ಪತ್ರೆಗೆ ಕರೆದೊಯ್ದರು. ಈ ಆಸ್ಪತ್ರೆ ಆರೋಪಿಯ ಸಂಬಂಧಿಕರದ್ದು” ಎಂದು ಆರೋಪಿಸಿದರು.

ತನಿಖೆ ಮುಂದುವರಿಕೆ

ಪೊಲೀಸರು ಗಗನ್‌ಪ್ರೀತ್‌ರನ್ನು ಕೊಲೆಗೆ ಸಮಾನವಲ್ಲದ ಆರೋಪದಡಿ ಬಂಧಿಸಿದ್ದರು. ಸಿಸಿಟಿವಿ, ಫಾರೆನ್ಸಿಕ್ ವರದಿಗಳನ್ನು ಪರಿಶೀಲಿಸಲಾಗುತ್ತಿದೆ. ಗಗನ್‌ಪ್ರೀತ್‌ ಅರ ರಕ್ತದಲ್ಲಿ ಆಲ್ಕೊಹಾಲ್ ಇಲ್ಲ ಎಂದು ದೃಢವಾಗಿದೆ. ಈ ಘಟನೆ ರಸ್ತೆ ಸುರಕ್ಷತೆ ಮತ್ತು ತುರ್ತು ವೈದ್ಯಕೀಯ ಸೇವೆಯ ಕೊರತೆಯ ಬಗ್ಗೆ ಚರ್ಚೆಗೆ ಕಾರಣವಾಗಿದೆ.