Boxer Mary Kom: ಟಿವಿ, ಬೆಲೆಬಾಳುವ ವಸ್ತುಗಳು ಸೇರಿ ಬಾಕ್ಸರ್ ಮೇರಿ ಕೋಮ್ ಮನೆಯಿಂದ ದರೋಡೆ
ಮ್ಯಾರಥಾನ್ ಸ್ಪರ್ಧೆಯಲ್ಲಿ ಭಾಗವಹಿಸಲು ಮೇಘಾಲಯಕ್ಕೆ ಹೋಗಿರುವ ಬಾಕ್ಸರ್ ಮೇರಿ ಕೋಮ್ ಅವರ ಫರಿದಾಬಾದ್ ಮನೆಯಿಂದ ಟಿವಿ, ಬೆಲೆಬಾಳುವ ವಸ್ತುಗಳನ್ನು ಕಳ್ಳರು ದರೋಡೆ ಮಾಡಿರುವ ಘಟನೆ ನಡೆದಿದೆ. ಇದರ ದೃಶ್ಯವಾಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಕುರಿತು ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ.

-

ಫರಿದಾಬಾದ್: ಬಾಕ್ಸರ್ ಮೇರಿ ಕೋಮ್ (Boxer Mary Kom) ಮ್ಯಾರಥಾನ್ ಸ್ಪರ್ಧೆಯಲ್ಲಿ (Marathon) ಭಾಗವಹಿಸಲು ಮೇಘಾಲಯಕ್ಕೆ (Meghalaya) ಹೋಗಿದ್ದಾಗ ಅವರ ಫರಿದಾಬಾದ್ ಸೆಕ್ಟರ್ 46ರಲ್ಲಿರುವ ಮನೆಯಿಂದ (Faridabad home) ಟಿವಿ, ಬೆಲೆಬಾಳುವ ವಸ್ತುಗಳು ಕಳ್ಳರು ದರೋಡೆ ಮಾಡಿದ್ದಾರೆ. ಇದರ ದೃಶ್ಯವಾಳಿಗಳು ಸಿಸಿಟಿವಿಯಲ್ಲಿ (CCTV Footage) ಸೆರೆಯಾಗಿದೆ. ಇದರಲ್ಲಿ ಕೆಲವು ಅನುಮಾನಾಸ್ಪದ ವ್ಯಕ್ತಿಗಳು ಮನೆಯಿಂದ ದೂರದರ್ಶನ ಸೆಟ್ ಸೇರಿದಂತೆ ವಿವಿಧ ವಸ್ತುಗಳನ್ನು ಸಾಗಿಸುತ್ತಿರುವುದನ್ನು ತೋರಿಸಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿರುವ ಫರಿದಾಬಾದ್ ಪೊಲೀಸರು (Faridabad Police) ತನಿಖೆ ನಡೆಸುತ್ತಿದ್ದಾರೆ.
ಫರಿದಾಬಾದ್‌ನ ಸೆಕ್ಟರ್ 46ರಲ್ಲಿರುವ ಇಬೆನೆಸರ್ ಇನ್ ಎಂಬ ಎರಡು ಅಂತಸ್ತಿನ ಬಾಕ್ಸರ್ ಮೇರಿ ಕೋಮ್ ಬಂಗಲೆಯು ಕಳೆದ ಕೆಲವು ದಿನಗಳಿಂದ ಲಾಕ್ ಮಾಡಲಾಗಿತ್ತು. ಈ ನಡುವೆ ಮನೆಗೆ ನುಗ್ಗಿದ ಅಪರಿಚಿತರು ಬಂಗಲೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಬೆಲೆಬಾಳುವ ವಸ್ತುಗಳನ್ನು ಕದ್ದೊಯ್ದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದರ ದೃಶ್ಯವಾಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕೆಲವು ಅನುಮಾನಾಸ್ಪದ ವ್ಯಕ್ತಿಗಳು ಮನೆಯಿಂದ ಟಿವಿ ಸೇರಿದಂತೆ ಹಲವು ಬೆಲೆಬಾಳುವ ವಸ್ತುಗಳನ್ನು ಸಾಗಿಸುತ್ತಿರುವುದನ್ನು ಕಾಣಬಹುದು. ಇದರ ದೃಶ್ಯಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಮೇರಿ ಕೋಮ್ ಮೇಘಾಲಯದ ಸೊಹ್ರಾದಲ್ಲಿ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದಾರೆ. ಘಟನೆಯ ಕುರಿತು ಅವರಿಗೆ ನೆರೆಹೊರೆಯವರು ಮಾಹಿತಿ ನೀಡಿದ್ದು, ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದರಿಂದ ಪ್ರಕರಣ ಬೆಳಕಿಗೆ ಬಂದಿದೆ.
ಕೋಮ್ ಭಾನುವಾರ ದೆಹಲಿಗೆ ಹಿಂತಿರುಗಬೇಕಿತ್ತು. ನನಗೆ ಭಯ, ಆತಂಕ ಮತ್ತು ಚಿಂತೆಯಾಗಿದೆ. ಈ ವಾರದ ಆರಂಭದಲ್ಲಿ ಕಳ್ಳತನ ನಡೆದಿದೆ ಎಂದು ಅವರು ಕಾರ್ಯಕ್ರಮದ ಆಯೋಜಕರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
#WATCH | Visuals from outside of Indian boxer and Olympic bronze medalist Mary Kom's residence in Faridabad, Haryana. An incident of theft occurred at her residence on September 24. pic.twitter.com/z7YWv362wb
— ANI (@ANI) September 27, 2025
ಆರು ಬಾರಿ ವಿಶ್ವ ಚಾಂಪಿಯನ್ ಆಗಿರುವ ಮೇರಿ ಕೋಮ್ ಭಾರತದ ಅತ್ಯಂತ ಪ್ರತಿಷ್ಠಿತ ಕ್ರೀಡಾಪಟುಗಳಲ್ಲಿ ಒಬ್ಬರು. ಇವರು ಮನೆಗೆ ಹಿಂದುರಿಗಿದ ಬಳಿಕವೇ ನಷ್ಟದ ಪ್ರಮಾಣ ತಿಳಿಯಲಿದೆ.
ಇದನ್ನೂ ಓದಿ: ಕೈಕೋಳ, ಕಾಲುಗಳನ್ನು ಕಟ್ಟಿ ಅಮೆರಿಕದಿಂದ ಗಡಿಪಾರು: ಭಯಾನಕ ಅನುಭವ ಬಿಚ್ಚಿಟ್ಟ ಪಂಜಾಬ್ ಮಹಿಳೆ
ನಾನು ಮನೆಯಲ್ಲಿಲ್ಲ. ಮನೆಗೆ ತಲುಪಿದಾಗ ಏನಾಗಿದೆ ಎಂದು ನಿಖರವಾಗಿ ತಿಳಿಯುತ್ತದೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಳ್ಳರು ಟಿವಿ ಮತ್ತು ಇತರ ವಸ್ತುಗಳನ್ನು ತೆಗೆದುಕೊಂಡು ಹೋಗುವುದನ್ನು ತೋರಿಸಲಾಗಿದೆ. ಈ ಘಟನೆ ಸೆ. 24ರಂದು ಸಂಭವಿಸಿದೆ ಎಂದು ನೆರೆಹೊರೆಯವರು ತಿಳಿಸಿದ್ದಾರೆ. ನಾನು ಪೊಲೀಸರಿಗೆ ಮಾಹಿತಿ ನೀಡಿದ್ದೇನೆ ಎಂದು ಮೇರಿ ಕೋಮ್ ತಿಳಿಸಿದ್ದಾರೆ.
ಈ ಕುರಿತು ಪ್ರಕರಣ ದಾಖಲಿಸಲಾಗಿದೆ. ತನಿಖೆ ನಡೆಸಲಾಗುತ್ತಿದೆ. ಆರೋಪಿಗಳನ್ನು ಬಂಧಿಸಲು ಫರಿದಾಬಾದ್ ಪೊಲೀಸರು ಆರು ಪ್ರತ್ಯೇಕ ತಂಡಗಳನ್ನು ರಚಿಸಿದ್ದಾರೆ.