ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮಹಿಳಾ ಆಯ್ಕೆ ಸಮಿತಿಗೆ ಮುಖ್ಯಸ್ಥೆಯಾಗಿ ಭಾರತದ ಮಾಜಿ ಆಲ್‌ರೌಂಡರ್‌ ಅಮಿತಾ ಶರ್ಮಾ ನೇಮಕ!

ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ಮಹಿಳಾ ಆಯ್ಕೆ ಸಮಿತಿಯ ಮುಖ್ಯಸ್ಥೆ ಸ್ಥಾನಕ್ಕೆ ಭಾರತ ಮಹಿಳಾ ತಂಡದ ಮಾಜಿ ಆಲ್‌ರೌಂಡರ್‌ ಅಮಿತಾ ಶರ್ಮಾ ನೇಮಕಗೊಂಡಿದ್ದಾರೆ. ಆ ಮೂಲಕ ನೀತು ಡೇವಿಡ್‌ ಅವರ ಸ್ಥಾನವನ್ನು ತುಂಬಿದ್ದಾರೆ. ಭಾನುವಾರ ಮುಂಬೈನಲ್ಲಿ ನಡೆದಿದ್ದ ವಾರ್ಷಿಕ ಮಹಾ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಬಿಸಿಸಿಐ ಮಹಿಳಾ ಆಯ್ಕೆ ಸಮಿತಿಗೆ ಮುಖ್ಯಸ್ಥೆಯಾಗಿ ಅಮಿತಾ ಶರ್ಮಾ ನೇಮಕ!

ಬಿಸಿಸಿಐ ಮಹಿಳಾ ಆಯ್ಕೆ ಸಮಿತಿಯ ಮುಖ್ಯಸ್ಥೆ ಸ್ಥಾನಕ್ಕೆ ಅಮಿತಾ ಶರ್ಮಾ ನೇಮಕ. -

Profile Ramesh Kote Sep 28, 2025 5:52 PM

ನವದೆಹಲಿ: ಭಾರತ ಮಹಿಳಾ ತಂಡದ ಮಾಜಿ ಆಲ್‌ರೌಂಡರ್‌ ಅಮಿತಾ ಶರ್ಮಾ (Amita Sharma) ಅವರು ಬಿಸಿಸಿಐನ ಮಹಿಳಾ ಆಯ್ಕೆ ಸಮಿತಿಗೆ ಮುಖ್ಯಸ್ಥೆಯಾಗಿ ( women's selection panel) ನೇಮಕಗೊಂಡಿದ್ದಾರೆ. ಆ ಮೂಲಕ ನೀತು ಡೇವಿಡ್‌ (Neetu David) ಅವರ ಸ್ಥಾನವನ್ನು ತುಂಬಿದ್ದಾರೆ. ಭಾನುವಾರ ಮುಂಬೈನಲ್ಲಿ ನಡೆದಿದ್ದ ವಾರ್ಷಿಕ ಮಹಾಸಭೆಯಲ್ಲಿ ಈ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. 2020 ರಿಂದಲೂ ನೀತು ಡೇವಿಡ್‌ ಅವರು ಮಹಿಳಾ ಆಯ್ಕೆ ಸಮಿತಿಯ ಮುಖ್ಯಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಶ್ಯಾಮಾ ದೇ, ಜಯ ಶರ್ಮಾ ಹಾಗೂ ಶ್ರಾವಂತಿ ಅವರನ್ನು ಒಳಗೊಂಡ ಆಯ್ಕೆ ಸಮಿತಿಗೆ ಇದೀಗ ಅಮಿತಾ ಶರ್ಮಾ ಸೇರ್ಪಡೆಯಾಗಿದ್ದಾರೆ.

ಮುಂಬರುವ ಮಹಿಳಾ ವಿಶ್ವಕಪ್‌ ಟೂರ್ನಿಯಿಂದ ಅಮಿತಾ ಶರ್ಮಾ ಅವರು ತಮ್ಮ ಕಾರ್ಯವನ್ನು ನಿರ್ವಹಿಸಲಿದ್ದಾರೆ. ಸೆಪ್ಟಂಬರ್‌ 30 ರಿಂದ ನವೆಂಬರ್‌ 2ರ ವರೆಗೂ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ ಟೂರ್ನಿ ನಡೆಯಲಿದೆ. ಮಹಿಳಾ ಪ್ರೀಮಿಯರ್‌ ಲೀಗ್‌ ಸಮಿತಿಗೆ ಜಯೇಶ ಜಾರ್ಜ್‌ ಮುಖ್ಯಸ್ಥೆಯಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಈ ಸಮಿತಿಯಲ್ಲಿ ಸದಸ್ಯರಾಗಿ ಮಿಥುನ್‌ ಮನ್ಹಾಸ್‌, ರಾಜೀ ಶುಕ್ಲಾ, ದೇವಜಿತ್‌ ಸೈಕಿಯಾ. ಪ್ರಭಜಿತ್‌ ಭಾಟಿಯಾ, ರಘುರಾಮ್‌ ಭಟ್‌, ಮಧುಮತಿ ಲೇಲೆ, ಸಂಜಯ್‌ ಟಂಡನ್‌, ಪಳನಿ ಹಾಗೂ ಅರುನ್‌ ಸಿಂಗ್‌ ಧುಮಲ್‌ ಸೇರ್ಪಡೆಯಾಗಿದ್ದಾರೆ.

Mithun Manhas: ಬಿಸಿಸಿಐ ನೂತನ ಅಧ್ಯಕ್ಷರಾಗಿ ಮಿಥುನ್ ಮನ್ಹಾಸ್ ಆಯ್ಕೆ

ಡೆಲ್ಲಿ ತಂಡದ ಮಾಜಿ ಆಟಗಾರ ಮಿಥುನ್‌ ಮನ್ಹಾಸ್‌ ಅವರು ಅವಿರೋಧವಾಗಿ ಬಿಸಿಸಿಐ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಆ ಮೂಲಕ ಅವರು ಕನ್ನಡಿಗ ರೋಜರ್‌ ಬಿನ್ನಿ ಅವರ ಸ್ಥಾನವನ್ನು ತುಂಬಿದ್ದಾರೆ. ರೋಜರ್‌ ಬಿನ್ನಿಗೆ ವಯಸ್ಸು 70 ಆಗಿದ್ದರಿಂದ ಅವರು ತಮ್ಮ ಸೇವೆಯಿಂದ ತೆರವಾಗಿದ್ದಾರೆ.

ಅಮಿತಾ ಶರ್ಮಾ ಯಾರು?

1982ರ ಸೆಪ್ಟಂಬರ್‌ 12 ರಂದು ಜನಿಸಿದ ಅಮಿತಾ ಮಿಶ್ರಾ ಅವರು ಬಲಗೈ ಮಧ್ಯಮ ಕ್ರಮಾಂಕದ ಬೌಲರ್‌ ಹಾಗೂ ಕೆಳ ಮಧ್ಯಮ ಕ್ರಮವಾಗಿ ಬ್ಯಾಟಿಂಗ್‌ ನಿರ್ವಹಿಸಲಿದ್ದಾರೆ. ಅವರು 2002 ರಿಂದ 2014ರ ಅವಧಿಯಲ್ಲಿ ಅವರು ಭಾರತ ಮಹಿಳಾ ತಂಡವನ್ನು ಪ್ರತಿನಿಧಿಸಿದ್ದಾರೆ. ಈ ಅವಧಿಯಲ್ಲಿ ಅವರು ಐದು ಟೆಸ್ಟ್‌ ಪಂದ್ಯಗಳು, 116 ಒಡಿಐ ಪಂದ್ಯಗಳು ಹಾಗೂ 41 ಟಿ20ಐ ಪಂದ್ಯಗಳನ್ನು ಆಡಿದ್ದಾರೆ.

Asia Cup 2025 Prize Money: ಏಷ್ಯಾಕಪ್‌ ಚಾಂಪಿಯನ್‌ ತಂಡಕ್ಕೆ ಸಿಗುವ ಬಹುಮಾನ ಮೊತ್ತವೆಷ್ಟು?

ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಅವರು 16.8ರ ಸರಾಸರಿಯಲ್ಲಿ 926 ರನ್‌ಗಳನ್ನು ಕಲೆ ಹಾಕಿದ್ದಾರೆ ಹಾಗೂ ಇದರಲ್ಲಿ ಅವರ ವೈಯಕ್ತಿಕ ಗರಿಷ್ಠ ಮೊತ್ತ 51 ರನ್‌ಗಳು. ಇನ್ನು ಬೌಲಿಂಗ್‌ನಲ್ಲಿ ಅವರು 32.5ರ ಸರಾಸರಿಯಲ್ಲಿ 87 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 16ಕ್ಕೆ 4 ಇವರ ವೈಯಕ್ತಿಕ ಶ್ರೇಷ್ಠ ಸ್ಪೆಲ್‌ ಆಗಿದೆ. ಇನ್ನು ಟಿ20ಐ ಕ್ರಿಕೆಟ್‌ನಲ್ಲಿ 14.7ರ ಸರಾಸರಿಯಲ್ಲಿ 383 ರನ್‌ಗಳನ್ನು ಗಳಿಸಿದ್ದಾರೆ ಹಾಗೂ 16 ವಿಕೆಟ್‌ಗಳನ್ನು ಪಡೆದಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಅವರು 50 ರನ್‌ಗಳ ಗರಿಷ್ಠ ಸ್ಕೋರ್‌ನೊಂದಿಗೆ ಅರ್ಧಶತಕವನ್ನು ದಾಖಲಿಸಿದ್ದಾರೆ ಮತ್ತು ಅವರ 5 ಪಂದ್ಯಗಳಲ್ಲಿ 5 ವಿಕೆಟ್‌ಗಳನ್ನು ಪಡೆದಿದ್ದಾರೆ. ದೇಶಿ ಕ್ರಿಕೆಟ್‌ನಲ್ಲಿ ಅಮಿತಾ ಶರ್ಮಾ ರೈಲ್ವೇಸ್, ಅಸ್ಸಾಂ ಮತ್ತು ದೆಹಲಿ ಪರ ಆಡಿದ್ದಾರೆ.