ಛತ್ತೀಸ್‌ಗಢದಲ್ಲಿ ಭದ್ರತಾ ಪಡೆಗಳ ಬೇಟೆ; ಮೂವರು ಮಾವೋವಾದಿಗಳ ಎನ್‌ಕೌಂಟರ್
Naxal Encounter: ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ನಡೆದ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಮೂವರು ಮಾವೋವಾದಿಗಳನ್ನು ಹೊಡೆದುರುಳಿಸಲಾಗಿದೆ. ಈ ಪ್ರದೇಶದಲ್ಲಿ ಮಾವೋವಾದಿಗಳು ಇರುವಿಕೆಯ ಬಗ್ಗೆ ನಿರ್ದಿಷ್ಟ ಗುಪ್ತಚರ ಮಾಹಿತಿಯ ನಂತರ ಜಿಲ್ಲಾ ಮೀಸಲು ಪಡೆ (ಡಿಆರ್‌ಜಿ) ನೇತೃತ್ವದಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು.
ಸಾಂದರ್ಭಿಕ ಚಿತ್ರ -
ರಾಯ್‌ಪುರ: ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ (Anti-Naxal operation) ಮೂವರು ಮಾವೋವಾದಿಗಳನ್ನು ಹೊಡೆದುರುಳಿಸಲಾಗಿದೆ. ಛತ್ತೀಸ್‌ಗಢದ (Chhattisgarh) ಸುಕ್ಮಾ ಜಿಲ್ಲೆಯ ಗೋಲಪಲ್ಲಿ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಗುರುವಾರ ಬೆಳಗ್ಗೆ ನಡೆದ ಎನ್‌ಕೌಂಟರ್‌ನಲ್ಲಿ ಭದ್ರತಾ ಪಡೆಗಳು ಒಬ್ಬ ಮಹಿಳಾ ಕೇಡರ್ ಸೇರಿದಂತೆ ಮೂವರು ಮಾವೋವಾದಿಗಳನ್ನು ಹತ್ಯೆ (Maoists killed) ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ಮಾವೋವಾದಿಗಳು ಇರುವಿಕೆಯ ಬಗ್ಗೆ ನಿರ್ದಿಷ್ಟ ಗುಪ್ತಚರ ಮಾಹಿತಿಯ ನಂತರ ಜಿಲ್ಲಾ ಮೀಸಲು ಪಡೆ (ಡಿಆರ್‌ಜಿ) ನೇತೃತ್ವದಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು.
ಅರಣ್ಯ ಪ್ರದೇಶವನ್ನು ಡಿಆರ್‌ಜಿ ತಂಡ ಸುತ್ತುವರೆದಾಗ ಗುಂಡಿನ ದಾಳಿ ನಡೆಯಿತು ಎಂದು ಸುಕ್ಮಾ ಪೊಲೀಸ್ ವರಿಷ್ಠಾಧಿಕಾರಿ ಕಿರಣ್ ಜಿ. ಚವಾಣ್ ದೃಢಪಡಿಸಿದರು. ಇದರಿಂದಾಗಿ ಮೂವರು ದಂಗೆಕೋರರು ಹತರಾದರು. ಒಬ್ಬ ಮಹಿಳೆ ಸೇರಿದಂತೆ ಮೃತ ಮಾವೋವಾದಿಗಳ ಶವಗಳನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದ್ದು, ಶೋಧ ಕಾರ್ಯಾಚರಣೆ ಮುಂದುವರೆದಿದೆ ಎಂದು ಅಧಿಕಾರಿ ಹೇಳಿದರು.
Naxal Attack: ಛತ್ತೀಸ್‌ಗಢದಲ್ಲಿ ನಕ್ಸಲರ ಅಟ್ಟಹಾಸ; ಇಬ್ಬರು ಗ್ರಾಮಸ್ಥರು ಬಲಿ
ಈ ಕಾರ್ಯಾಚರಣೆಯು ರಾಜ್ಯದಲ್ಲಿನ ಯಶಸ್ವಿ ನಕ್ಸಲ್ ವಿರೋಧಿ ಕಾರ್ಯಾಚರಣೆಗಳಲ್ಲಿ ಒಂದಾಗಿದೆ. 2025 ರಿಂದ ಇಲ್ಲಿಯವರೆಗೆ ಛತ್ತೀಸ್‌ಗಢದಾದ್ಯಂತ ನಡೆದ ಎನ್‌ಕೌಂಟರ್‌ಗಳಲ್ಲಿ 284 ಮಾವೋವಾದಿಗಳನ್ನು ಹತ್ಯೆ ಮಾಡಲಾಗಿದೆ. ಸುಕ್ಮಾ ಸೇರಿದಂತೆ ಏಳು ಜಿಲ್ಲೆಗಳನ್ನು ಒಳಗೊಂಡ ಬಸ್ತಾರ್ ವಿಭಾಗದಲ್ಲಿ 255 ಮಾವೋವಾದಿಗಳನ್ನು ಹೊಡೆದುರುಳಿಸಲಾಗಿದೆ.
ಕೇವಲ ಒಂದು ದಿನದ ಹಿಂದೆ, ಡಿಸೆಂಬರ್ 17 ರಂದು, ಮಾದ್ ಬಚಾವೋ ಅಭಿಯಾನ (ಮಾದಕ ವಸ್ತುಗಳಿಂದ ದೂರವಿರಿ ಅಭಿಯಾನ) ಮತ್ತು ಪೂನಾ ಮಾರ್ಗೆಮ್ - ಶರಣಾಗತಿಯಿಂದ ಪುನರ್ವಸತಿಗೆ ಮುಂತಾದ ಸರ್ಕಾರಿ ಅಭಿಯಾನಗಳಿಂದ ಪ್ರಭಾವಿತರಾಗಿ, ನೆರೆಯ ನಾರಾಯಣಪುರ ಜಿಲ್ಲೆಯಲ್ಲಿ ಐದು ಮಹಿಳೆಯರು ಸೇರಿದಂತೆ 11 ಮಾವೋವಾದಿಗಳು ಶರಣಾಗಿದ್ದರು.
ಅವರು ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಮೇಲೆ ಶಸ್ತ್ರಾಸ್ತ್ರಗಳನ್ನು ಇರಿಸಿ ಶರಣಾಗತಿಯನ್ನು ಸೂಚಿಸಿದಕು. ಅಧಿಕಾರಿಗಳು ಈ ಬೆಳವಣಿಗೆಗಳಿಗೆ ಭದ್ರತಾ ಪಡೆಗಳ ನಿರಂತರ ಒತ್ತಡ ಮತ್ತು ಪುನರ್ವಸತಿ ಉಪಕ್ರಮಗಳು ಕಾರಣವೆಂದು ಹೇಳಿದ್ದಾರೆ. ಇದು ಬಸ್ತಾರ್ ಪ್ರದೇಶದಲ್ಲಿ ಮಾವೋವಾದಿಗಳ ಭದ್ರಕೋಟೆಗಳನ್ನು ದುರ್ಬಲಗೊಳಿಸಿದೆ.
ಅಬುಜ್‌ಮರ್ ಅರಣ್ಯ ಈಗ ನಕ್ಸಲ್ ಮುಕ್ತ: ಅಮಿತ್ ಶಾ ಘೋಷಣೆ
ಶರಣಾದ ಪ್ರತಿಯೊಬ್ಬ ಮಾವೋವಾದಿಗೂ ತಕ್ಷಣದ ಪ್ರೋತ್ಸಾಹ ಧನವಾಗಿ 50,000 ರೂ.ಗಳನ್ನು ನೀಡಲಾಯಿತು. ಅವರು ಛತ್ತೀಸ್‌ಗಢ ಸರ್ಕಾರದ ಪುನರ್ವಸತಿ ನೀತಿಯಿಂದ ಪ್ರಯೋಜನ ಪಡೆಯುತ್ತಾರೆ. ಇದರೊಂದಿಗೆ, 2025 ರಲ್ಲಿ ನಾರಾಯಣಪುರ ಜಿಲ್ಲೆಯಲ್ಲಿಯೇ 298 ಮಾವೋವಾದಿ ಕಾರ್ಯಕರ್ತರು ಶರಣಾಗಿದ್ದಾರೆ. ಇದು ಮಾವೋವಾದಿ ಪ್ರಭಾವ ಕಡಿಮೆಯಾಗುತ್ತಿರುವುದನ್ನು ಹಾಗೂ ಶಾಂತಿ ಮತ್ತು ಅಭಿವೃದ್ಧಿ ಪ್ರಯತ್ನಗಳಲ್ಲಿ ಹೆಚ್ಚುತ್ತಿರುವ ನಂಬಿಕೆಯನ್ನು ಎತ್ತಿ ತೋರಿಸುತ್ತದೆ.
ದೇಶದಲ್ಲಿ ಮಾವೋವಾದಿಗಳ ಹಾವಳಿಯನ್ನು ಕೊನೆಗೊಳಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾರ್ಚ್ 2026ರ ಗಡುವು ವಿಧಿಸಿದ್ದಾರೆ.