ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬಿರುಗಾಳಿಗೆ ಸಿಲುಕಿ ಕುಸಿದು ಬಿದ್ದ ಸ್ಟ್ಯಾಚು ಆಫ್ ಲಿಬರ್ಟಿ: ವಿಡಿಯೋ ವೈರಲ್

ಬಿರುಗಾಳಿ ರಭಸಕ್ಕೆ ಸ್ಟ್ಯಾಚು ಆಫ್ ಲಿಬರ್ಟಿ ಕುಸಿದು ಬಿದ್ದ ಘಟನೆ ದಕ್ಷಿಣ ಬ್ರೆಜಿಲ್ ನಲ್ಲಿ ನಡೆದಿದೆ. ದಕ್ಷಿಣ ಬ್ರೆಜಿಲ್ನ ಗುವಾಯ್ಬಾದಲ್ಲಿ ಭಾರಿ ಚಂಡಮಾರುತ ಅಪ್ಪಳಿಸಿದ್ದ ಪರಿಣಾಮ ಗಾಳಿ ಬೀಸಿ 24 ಮೀಟರ್ ಎತ್ತರದ ಲಿಬರ್ಟಿ ಪ್ರತಿಮೆ ನೆಲಕ್ಕುರುಳಿದೆ‌. ಸದ್ಯ ಈ ಕುರಿತಾದ ವಿಡಿಯೋ ಒಂದು ಸಾಮಾ ಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದನ್ನು ಬಹುತೇಕರು ಅಮೇರಿಕಾದ ಪ್ರತಿಮೆ ಎಂದೆ ಅಂದುಕೊಂಡಿದ್ದು ಈ ಬಗ್ಗೆ ಅನೇಕ ಗಾಸಿಪ್ ಕೂಡ ಹರಿದಾಡಿತ್ತು. ಬಳಿಕ ಇದು ಬ್ರೆಜಿಲ್ ನ ಪ್ರತಿಮೆ ಎಂದು ಖಾತರಿಯಾಗಿದೆ.

ಸ್ಟ್ಯಾಚು ಆಫ್ ಲಿಬರ್ಟಿ ಪ್ರತಿಮೆ ಧ್ವಂಸ: ವಿಡಿಯೊ ವೈರಲ್

ಕುಸಿದು ಬಿದ್ದ ಸ್ಟ್ಯಾಚು ಆಫ್ ಲಿಬರ್ಟಿ ಪ್ರತಿಮೆ -

Profile
Pushpa Kumari Dec 16, 2025 3:54 PM

ಬ್ರೆಜಿಲ್, ಡಿ. 16: ಭಾರತದಲ್ಲಿ ಗಾಂಧೀಜಿ, ಬುದ್ಧ ಹಾಗೂ ಅಂಬೇಡ್ಕರ್ ಪ್ರತಿಮೆಗೆ ವಿಶೇಷ ಗೌರವ ದೊರೆಯುತ್ತದೆ. ಬಹುತೇಕ ಸರಕಾರಿ ಕಟ್ಟಡ, ಉದ್ಯಾನವನ, ಮೈದಾನ, ಗ್ರಂಥಾಲಯದಲ್ಲಿ ಇವರ ಪ್ರತಿಮೆಗಳು ಕಾಣಸಿಗುತ್ತವೆ. ಪ್ರತಿ ದೇಶದಲ್ಲಿಯೂ ಮಹಾನ್ ವ್ಯಕ್ತಿಗಳು ಪ್ರತಿಮೆಗಳಿವೆ. ಇದೀಗ ಬ್ರೆಜಿಲ್ ಪ್ರಸಿದ್ಧ ಸ್ಟ್ಯಾಚು ಆಫ್ ಲಿಬರ್ಟಿ (Statue of Liberty) ಬಿರುಗಾಳಿ ಹೊಡೆತಕ್ಕೆ ಸಿಲುಕಿ ಕುಸಿದು ಬಿದ್ದಿದೆ. ಸದ್ಯ ಈ ಘಟನೆಯ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ (Viral Video) ಆಗಿದೆ.

ದಕ್ಷಿಣ ಬ್ರೆಜಿನಲ್ಲಿರುವ ಸ್ಟ್ಯಾಚು ಆಫ್ ಲಿಬರ್ಟಿ ಬಿರುಗಾಳಿ ರಭಸಕ್ಕೆ ಕುಸಿದು ಬಿದ್ದಿದೆ. ದಕ್ಷಿಣ ಬ್ರೆಜಿಲ್​ನ ಗುವಾಯ್ಬಾದಲ್ಲಿ ಭಾರಿ ಚಂಡಮಾರುತ ಅಪ್ಪಳಿಸಿದ್ದ ಪರಿಣಾಮ 24 ಮೀಟರ್ ಎತ್ತರದ ಲಿಬರ್ಟಿ ಪ್ರತಿಮೆ ನೆಲಕ್ಕುರುಳಿದೆ‌. ಅಮೆರಿಕದ ಲಿಬರ್ಟಿ ಪ್ರತಿಮೆ ಕುಸಿದು ಬಿದ್ದಿರುವುದಾಗಿ ಬಹುತೇಕರು ಅಂದುಕೊಂಡಿದ್ದರು. ಬಳಿಕ ಇದು ಬ್ರೆಜಿಲ್‌ನ ಪ್ರತಿಮೆ ಎಂದು ಖಾತರಿಯಾಗಿದೆ.

ಡಿಸೆಂಬರ್ 15ರಂದು ದಕ್ಷಿಣ ಬ್ರೆಜಿಲ್‌ನಲ್ಲಿ 90 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸಿದೆ. ಪರಿಣಾಮ ಬ್ರೆಜಿಲ್‌ನ ರಿಯೊ ಗ್ರಾಂಡೆ ಡೊ ಸುಲ್‌ನ ಗುವಾಯ್ಬಾದಲ್ಲಿರುವ ಹವಾನ್‌ನ ಮೆಗಾಸ್ಟೋರ್‌ನ ಹೊರಗೆ ಸ್ಥಾಪಿಸಲಾದ 24 ಮೀಟರ್ ಎತ್ತರದ ಸ್ಟ್ಯಾಚು ಆಫ್ ಲಿಬರ್ಟಿ ಪ್ರತಿಮೆ ಧರೆಗುರುಳಿದೆ. ಈ ವಿಡಿಯೋ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ.

ವಿಡಿಯೊ ನೋಡಿ:



ಈ ಲಿಬರ್ಟಿ ಪ್ರತಿಮೆಯ ಮೂಲ ಪ್ರತಿಮೆ ಅಮೇರಿಕಾದ ನ್ಯೂಜರ್ಸಿಯಲ್ಲಿದೆ. ಬ್ರೆಜಿಲ್‌ನಲ್ಲಿ ಈ ಪ್ರತಿಮೆಯನ್ನು 2020ರಲ್ಲಿ ಸ್ಥಾಪಿಸಲಾಗಿದೆ. 11 ಮೀಟರ್ ಎತ್ತರದ ಸ್ತಂಭ ಬಲಿಷ್ಠವಾಗಿಯೇ ಇದ್ದರೂ ಕೂಡ ಈ ದುರಂತ ಸಂಭವಿಸಿದ್ದು ಅಲ್ಲಿನ ನಿವಾಸಿಗಳಿಗೆ ಅಚ್ಚರಿ ಎನಿಸಿದೆ. ಬ್ರೆಜಿಲ್‌ನಲ್ಲಿ ಗಂಟೆಗೆ 80ರಿಂದ 90 ಕಿ.ಮೀ. ವೇಗದಲ್ಲಿ ಗಾಳಿ ಬೀಸಿದ್ದು ಅಲ್ಲಿದ್ದವರೆಲ್ಲ ಒಮ್ಮೆಲೆ ಭಯಗೊಂಡಿದ್ದಾರೆ. ಸ್ಥಳೀಯ ಅಂಗಡಿಯವರು, ಪೊಲೀಸ್‌ ಸಿಬ್ಬಂದಿ ಕೂಡಲೇ ಜನರನ್ನು ಅಲ್ಲಿಂದ ಸ್ಥಳಾಂತರಿಸಿದ್ದ ಕಾರಣ ಯಾವುದೆ ಹೆಚ್ಚಿನ ಸಾವು, ನೋವು ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ತಂದೂರಿ ರೋಟಿಗಾಗಿ ರಣರಂಗವಾಯ್ತು ಮದುವೆ: ನೆಟ್ಟಿಗರಿಂದ ಭಾರಿ ಟೀಕೆ

ವೈರಲ್ ಆದ ವಿಡಿಯೊದಲ್ಲಿ 90 ಕಿ.ಮೀ. ವೇಗದಿಂರ ಗಾಳಿ ಬೀಸಿದ ಸಂದರ್ಭದಲ್ಲಿ ಖಾಲಿ ಪಾರ್ಕಿಂಗ್ ಸ್ಥಳಕ್ಕೆ ಸ್ಟ್ಯಾಚು ಆಫ್ ಲಿಬರ್ಟಿ ಪ್ರತಿಮೆ ನಿಧಾನವಾಗಿ ಮುಂದಕ್ಕೆ ಬಾಗಿರುವ ದೃಶ್ಯವನ್ನು ಕಾಣಬಹುದು. ಆಗಲೂ 11 ಮೀಟರ್ ಬೇಸ್ ಸಪೋರ್ಟ್‌ನಿಂದ ಆ ಪ್ರತಿಮೆ ಬೀಳದೆ ಕ್ರಾಸ್ ಮಾತ್ರ ಆಗಿತ್ತು. ಅಲ್ಲಿದ್ದ ಪ್ರಯಾಣಿಕರು ಮತ್ತು ಸ್ಥಳೀಯರು ತಮ್ಮ ವಾಹನಗಳನ್ನು ಸ್ಥಳಾಂತರಿಸಿದರು. ಆದರೆ ನೋಡ ನೋಡುತ್ತಿದ್ದಂತೆ ಪ್ರತಿಮೆ ನೆಲಕ್ಕುರಿಳಿದ್ದ ದೃಶ್ಯಗಳನ್ನು ಕಾಣಬಹುದು.

ಘಟನೆ ನಡೆದ ಕೆಲವು ಗಂಟೆಗಳ ನಂತರ ಅಧಿಕಾರಿಗಳು ಈ ಸ್ಥಳಕ್ಕೆ ಆಗಮಿಸಿದ್ದಾರೆ. ಆ ಅವಶೇಷಗಳನ್ನು ತೆರವುಗೊಳಿಸುವ ಕೆಲಸ ಮಾಡಿದ್ದಾರೆ. ಐದು ವರ್ಷಗಳ ಹಿಂದೆ ಈ ಪ್ರತಿಮೆ ಪ್ರಾರಂಭವಾದಾಗಿನಿಂದ ಗುವಾಯ್ಬಾ ರಚನೆಯು ಬಹಳ ಜನಪ್ರಿಯ ಹೆಗ್ಗುರುತಾಗಿತ್ತು. ಆದರೆ ಬಿರುಗಾಳಿ ಕಾರಣಕ್ಕೆ ಇದು ದ್ವಂಸವಾಗಿರುದಾಗಿ ಅಧಿಕಾರಿಗಳು ದೃಢಪಡಿಸಿದ್ದಾರೆ. ಈ ತರ ಆಗಿದ್ದು ಇದೆ ಮೊದಲಲ್ಲ. 2021ರಲ್ಲಿ ಗಂಟೆಗೆ 70-80 ಕಿ.ಮೀ. ವೇಗದ ಚಂಡಮಾರುತಕ್ಕೆ ಕ್ಯಾಪಾವೊ ಡಾ ಕ್ಯಾನೊವಾದಲ್ಲಿ ಕೂಡ ಪ್ರತಿಮೆಯೊಂದು ಬಿದ್ದಿತ್ತು.