ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವಿದ್ಯಾರ್ಥಿ ನಾಯಕನಿಂದ ವಿವಾದಿತ ಸಚಿವನವರೆಗೆ; ಧರ್ಮೇಂದ್ರ ಪ್ರಧಾನ್‌ ರಾಜಕೀಯ ಜರ್ನಿ ಇಲ್ಲಿದೆ

Dharmendra Pradhan Resigns: ಕೇಂದ್ರ ಸರ್ಕಾರಕ್ಕೆ ಭಾರಿ ಮುಖಭಂಗವಾಗಿದ್ದು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ ನೀಡಿದ್ದಾರೆ. ಆ ಮೂಲಕ ಹಲವು ದಿನಗಳಿಂದ ನಡೆದಯುತ್ತಿರುವ ವಿದ್ಯಾರ್ಥಿಗಳ ಹೋರಾಟಕ್ಕೆ ಜಯ ಸಂದಿದೆ. ವಿದ್ಯಾರ್ಥಿ ದೆಸೆಯಲ್ಲೇ ರಾಜಕೀಯಕ್ಕೆ ಬಂದ ಅವರ ವಿವರ ಇಲ್ಲಿದೆ.

ಧರ್ಮೇಂದ್ರ ಪ್ರಧಾನ್‌ ರಾಜಕೀಯ ಜರ್ನಿ ಇಲ್ಲಿದೆ

ಧರ್ಮೇಂದ್ರ ಪ್ರಧಾನ್‌ (ಸಂಗ್ರಹ ಚಿತ್ರ) -

Ramesh Ballamoole
Ramesh Ballamoole Jul 25, 2026 4:12 PM

ದೆಹಲಿ, ಜು. 25: ಕೇಂದ್ರ ಸರ್ಕಾರಕ್ಕೆ ಭಾರಿ ಮುಖಭಂಗವಾಗಿದೆ. ಕೆಲವು ದಿನಗಳಿಂದ ನಡೆಯುತ್ತಿರುವ ಜನತಾ ಕ್ರಾಕೋಚ್‌ ಜನತಾ ಪಾರ್ಟಿ, ವಿದ್ಯಾರ್ಥಿಗಳ ಹೋರಾಟಕ್ಕೆ ಕೊನೆಗೂ ಜಯ ಸಂದಿದ್ದು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ ನೀಡಿದ್ದಾರೆ (Dharmendra Pradhan Resigns). ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ನಂತರ ನಡೆದ ವಿದ್ಯಾರ್ಥಿಗಳ ಆತ್ಮಹತ್ಯೆಯ ಬಳಿಕ ಪ್ರಧಾನ್‌ ರಾಜೀನಾಮೆ ನೀಡಬೇಕೆಂಬ ಕೂಗು ಜೋರಾಗಿ ಕೇಳಿ ಬಂದಿತ್ತು. ಅಲ್ಲದೆ ಇದೇ ಕಾರಣ ಮುಂದಿಟ್ಟುಕೊಂಡು ಯುವಸಮೂಹ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದೆ. ಇದೀಗ ಈ ಹೋರಾಟಕ್ಕೆ ಫಲ ಸಿಕ್ಕಿದ್ದು, ಶಿಕ್ಷಣ ಸಚಿವ ಸ್ಥಾನದಿಂದ ಪ್ರಧಾನ್‌ ಕೆಳಗಿಳಿದಿದ್ದಾರೆ.

ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಪರೀಕ್ಷಾ ಅಕ್ರಮಕ್ಕೆ ಕಡಿವಾಣ ಹಾಕಲು ಕಠಿಣ ಶಿಕ್ಷೆಯ ಎಚ್ಚರಿಕೆ ನೀಡಿದ್ದಾರೆ. ಅದಾಗ್ಯೂ ಹೋರಾಟಗಾರರು ಪ್ರಧಾನ್‌ ರಾಜೀನಾಮೆಗೆ ಪಟ್ಟು ಹಿಡಿದಿದ್ದರು. 2021ರಲ್ಲಿ ಕೇಂದ್ರ ಸರ್ಕಾರ ಜನಾಕ್ರೋಶಕ್ಕೆ ತುತ್ತಾಗಿ 3 ಕೃಷಿ ಮಸೂದೆಯನ್ನು ಹಿಂಪಡೆದ ಬಳಿಕ ಎದುರಾದ ಅತೀ ದೊಡ್ಡ ಹಿನ್ನಡೆ ಇದು ಎಂದು ಕೆಲವರು ಪ್ರಧಾನ್‌ ರಾಜೀನಾಮೆಯನ್ನು ಬಣ್ಣಿಸಿದ್ದಾರೆ.

ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಧರ್ಮೇಂದ್ರ ಪ್ರಧಾನ್‌:



ಧರ್ಮೇಂದ್ರ ಪ್ರಧಾನ್‌ ಹಿನ್ನೆಲೆ

ಧರ್ಮೇಂದ್ರ ಪ್ರಧಾನ್‌ ಒಡಿಶಾದ ಪ್ರಮುಖ ಬಿಜೆಪಿ ನಾಯಕ. ವಿದ್ಯಾರ್ಥಿಯಾಗಿದ್ದಾಗಲೇ ರಾಜಕೀಯಕ್ಕೆ ಧುಮ್ಮಿಕಿದ ಅವರು ಒಡಿಶಾದಲ್ಲಿ ಬಿಜೆಪಿ ಆಡಳಿತಕ್ಕೆ ಮುಖ್ಯ ಕಾರಣಕರ್ತರಾಗಿದ್ದರು. 1969ರ ಜೂನ್‌ 26ರಂದು ಒಡಿಶಾದ ಅಂಗುಲ್‌ ಜಿಲ್ಲೆಯ ತಾಲಚೆರ್‌ನಲ್ಲಿ ದೇವೇಂದ್ರ ಪ್ರಧಾನ್‌-ಬಸಂತ್‌ ಮಂಜರಿ ಪ್ರಧಾನ್‌ ದಂಪತಿಗೆ ಜನಿಸಿದ ಧರ್ಮೇಂದ್ರ ಪ್ರಧಾನ್‌ ಒಡಿಶಾದ ವಾಣಿ ವಿಹಾರದ ಉತ್ಕಲ್‌ ವಿಶ್ವವಿದ್ಯಾನಿಲಯದಿಂದ ಆಂಥ್ರೋಪಾಲಜಿಯಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ.

ರಾಜೀನಾಮೆ ಪತ್ರದಲ್ಲಿ ಧರ್ಮೇಂದ್ರ ಪ್ರಧಾನ್‌ ಹೇಳಿದ್ದೇನು? ಇಲ್ಲಿದೆ ಕಂಪ್ಲೀಟ್‌ ಡೀಟೈಲ್‌

ಪ್ರಧಾನ್‌ ಅವರ ರಾಜಕೀಯ ಜೀವನ ಆರಂಭವಾಗಿದ್ದು ಎಬಿವಿಪಿ ಮೂಲಕ. 1983ರಲ್ಲಿ ತಾಲಚೆರ್‌ನಲ್ಲಿ ಪದವಿ ಓಡುತ್ತಿದ್ದಾಗ ಅವರು ಕಾಲೇಜ್‌ ಎಬಿವಿಪಿ ಘಟಕದ ಅಧ್ಯಕ್ಷರಾಗಿದ್ದರು. ಬಳಿಕ ರಾಜಕೀಯದ ಒಂದೊಂದೆ ಮೆಟ್ಟಿಲೇರುತ್ತ ಸಾಗಿ ಕೇಂದ್ರ ಸಚಿವ ಸ್ಥಾನ ಅಲಂಕರಿಸಿದರು. 1993ರಲ್ಲಿ ಎಬಿವಿಪಿಯ ರಾಜ್ಯ ಕಾರ್ಯದರ್ಶಿಯಾಗಿದ್ದ ಅವರು 1995ರಲ್ಲಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದರು. 1998ರಲ್ಲಿ ಅವರು ಬಿಜೆಪಿಗೆ ಸೇದರ್ಪಡೆಗೊಂಡರು.

2000ರಲ್ಲಿ ಒಡಿಶಾದ ಪಲ್ಲಹಾರ ಜಿಲ್ಲೆಯ ಬಿಜೆಪಿ ಶಾಸಕಾಗಿ ಆಯ್ಕೆಯಾದ ಅವರು 2004ರಲ್ಲಿ ಸಂಸದರಾದರು. 2002ರಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ದರ್ಶಿಯಾಗಿ ಕಾರ್ಯ ನಿರ್ವಹಿಸಿದರು. 2004ರಲ್ಲಿ ಸಂಸದರಾಗಿ ಆಯ್ಕೆಯಾದ ಅವರು ಅದೇ ವರ್ಷ ಭಾರತೀಯ ಜನತಾ ಯುವ ಮೋರ್ಛಾದ (BJYM) ಅಧ್ಯಕ್ಷರಾದರು.

ಸಂಸದರಾಗಿ ಪ್ರಧಾನ್ ಹಲವು ಸಮಿತಿಗಳು ಮತ್ತು ಸಂಸದೀಯ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿದರು. 2007ರ ಆಗಸ್ಟ್‌ನಿಂದ ಅವರು ಇಂಧನ ಸ್ಥಾಯಿ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದರು. 2012 ಮತ್ತು 2014ರ ನಡುವೆ ಅವರು ಸರ್ಕಾರಿ ಭರವಸೆಗಳ ಸಮಿತಿಯ ಸದಸ್ಯರಾಗಿದ್ದರು. 2012ರ ಮೇಯಿಂದ 2013ರ ಅಕ್ಟೋಬರ್‌ವರೆಗೆ ದೂರಸಂಪರ್ಕ ಪರವಾನಗಿಗಳು, ಸ್ಪೆಕ್ಟ್ರಮ್‌ಗಳ ಹಂಚಿಕೆ ಮತ್ತು ಬೆಲೆ ನಿಗದಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಶೀಲಿಸುವ ಜಂಟಿ ಸಂಸದೀಯ ಸಮಿತಿಯಲ್ಲೂ ಕಾರ್ಯನಿರ್ವಹಿಸಿದರು.

2024ರ 18ನೇ ಲೋಕಸಭೆಗೆ ಆಯ್ಕೆಯಾಗಿ ಶಿಕ್ಷಣ ಸಚಿವರಾದರು. ಪ್ರಧಾನ್ ಅವರಿಗೆ ಒಡಿಶಾ ವಿಧಾನಸಭೆಯ ಅತ್ಯುತ್ತಮ ಶಾಸಕಾಂಗ ಪ್ರಶಸ್ತಿ ಉತ್ಕಲಮಣಿ ಗೋಪಬಂಧು ಪ್ರತಿಭಾ ಸನ್ಮಾನ್ ಲಭಿಸಿದೆ.

ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಬೆನ್ನಲ್ಲೇ ಸಿಜೆಪಿ ಸಂಭ್ರಮಾಚರಣೆ

2026ರ ಮೇ 3ರಂದು ನಡೆದ 2026ನೇ ಸಾಲಿನ ನೀಟ್‌ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಸಾಬೀತಾದ ಬಳಿಕ ಪರೀಕ್ಷೆಯನ್ನು ರದ್ದುಗೊಳಿಸಲಾಯಿತು. ಅಂದಿನಿಂದ ಶಿಕ್ಷಣ ಸಚಿವ ಪ್ರಧಾನ್‌ ರಾಜೀನಾಮೆ ನೀಡಬೇಕೆಂಬ ಕೂಗು ಜೋರಾಗಿಯೇ ಕೇಳಿಬಂದಿತ್ತು. ಇತ್ತೀಚೆಗೆ ಈ ದೂರು ತಾರಕಕ್ಕೇರಿ ದೆಹಲಿಯಲ್ಲಿ ಬೃಹತ್‌ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.