ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಇಲಾಖೆ ಸಚಿವರಾಗಿ ಧರ್ಮೇಂದ್ರ ಪ್ರಧಾನ್ ಅಧಿಕಾರ ಸ್ವೀಕಾರ
ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಇಲಾಖೆ ಸಚಿವರಾಗಿ ಧರ್ಮೇಂದ್ರ ಪ್ರಧಾನ್ ಅಧಿಕಾರ ಸ್ವೀಕಾರ
-
Vishwavani News
Jul 8, 2021 5:10 PM
ನವದೆಹಲಿ: ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಇಲಾಖೆಯ ಸಚಿವರಾಗಿ ರಾಜ್ಯಸಭೆ ಸದಸ್ಯ ಧರ್ಮೇಂದ್ರ ಪ್ರಧಾನ್ ಗುರುವಾರ ಅಧಿಕಾರ ವಹಿಸಿಕೊಂಡರು. ಜತೆಗೆ ಶಿಕ್ಷಣ ಇಲಾಖೆಯ ಜವಾಬ್ದಾರಿಯನ್ನೂ ನಿಭಾಯಿಸಲಿದ್ದಾರೆ.
ಶಿಕ್ಷಣ ಖಾತೆಯನ್ನು ಈ ಮೊದಲು ರಮೇಶ್ ಪೋಖ್ರಿಯಾಲ್ ವಹಿಸಿಕೊಂಡಿದ್ದರು. ಪ್ರಧಾನ್ ಅವರು ಈ ಮೊದಲು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಹಾಗೂ ಉಕ್ಕು ಖಾತೆಯ ಸಚಿವರಾಗಿದ್ದರು. ಪೆಟ್ರೋಲಿಯಂ ಖಾತೆಯನ್ನು ಸದ್ಯ ಹರ್‌ದೀಪ್ ಸಿಂಗ್ ಪುರಿ ಅವರಿಗೆ ವಹಿಸಲಾಗಿದೆ.
52 ವರ್ಷದ ಪ್ರಧಾನ್ 2018ರ ಏಪ್ರಿಲ್‌ನಲ್ಲಿ ಗೆಲ್ಲುವ ಮೂಲಕ ರಾಜ್ಯಸಭೆಗೆ ಎರಡನೇ ಬಾರಿಗೆ ಆಯ್ಕೆಯಾದರು. ಮೋದಿ ಸರ್ಕಾರವು ಎರಡನೇ ಅವಧಿಗೆ 2019ರ ಮೇನಲ್ಲಿ ರೂಪುಗೊಂಡ ಬಳಿಕ ಇದೇ ಮೊದಲ ಸಲ ಸಚಿವ ಸಂಪುಟ ವಿಸ್ತರಣೆಯಾಗಿದೆ.