ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Killer Games: ಮೂವರು ಬಾಲಕಿಯರ ಪ್ರಾಣ ತೆಗೆದ ಕೊರಿಯನ್ ಗೇಮ್‌; ಏನಿದು ಕೊಲ್ಲುವ ಆಟ? ಭಾರತದಲ್ಲಿ ಬ್ಯಾನ್‌ ಆದ ಬ್ಲ್ಯೂ ವೇಲ್‌ಗೂ ಇದಕ್ಕೂ ಇರುವ ಸಾಮ್ಯತೆ ಏನು?

Ghaziabad Tragedy: ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಆನ್‌ಲೈನ್ ಗೇಮ್‌ನಿಂದಾಗಿ ಮೂವರು ಅಪ್ರಾಪ್ತ ಸಹೋದರಿಯರು 9ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಸಂಭವಿಸಿದೆ. ಮಧ್ಯರಾತ್ರಿ ನಡೆದ ಈ ಘಟನೆ ಆನ್‌ಲೈನ್ ಗೇಮಿಂಗ್ ವ್ಯಸನದ ಗಂಭೀರ ಪರಿಣಾಮಗಳನ್ನು ಮತ್ತೆ ಹೊರ ಹಾಕಿದೆ. ಗೇಮ್‌ನ ಟಾಸ್ಕ್‌ ಒಂದರ ಭಾಗವಾಗಿ ಇವರು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

‘ಕೊರಿಯನ್ ಲವ್ ಗೇಮ್’ಗೆ ಬಲಿಯಾದ ಮೂವರು ಸಹೋದರಿಯರು

ಆತ್ಮಹತ್ಯೆ ನಡೆದ ಅಪಾರ್ಟ್‌ಮೆಂಟ್‌ ಮತ್ತು ಡೆತ್‌ ನೋಟ್‌ -

Profile
Sushmitha Jain Feb 4, 2026 6:10 PM

ಲಖನೌ, ಫೆ. 4: ಉತ್ತರ ಪ್ರದೇಶದ ಗಾಜಿಯಾಬಾದ್ (Ghaziabad) ನಗರದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಆನ್‌ಲೈನ್ ಗೇಮ್ (Online Game) ವ್ಯಸನಕ್ಕೆ ಬಲಿಯಾದ ಮೂವರು ಅಪ್ರಾಪ್ತ ಸಹೋದರಿಯರು ತಮ್ಮ ಅಪಾರ್ಟ್‌ಮೆಂಟ್‌ನ 9ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ದುರ್ಘಟನೆ ಫೆಬ್ರವರಿ 4ರ ತಡರಾತ್ರಿ ಸುಮಾರು 2 ಗಂಟೆಗೆ ನಡೆದಿದ್ದು, ದೇಶವನ್ನೇ ಬೆಚ್ಚಿ ಬೀಳಿಸಿದೆ. ಆನ್‌ಲೈನ್ ಗೇಮಿಂಗ್ ಚಟವು ಇಂದಿನ ಯುವಜನತೆ ಮೇಲೆ ಎಷ್ಟು ಗಂಭೀರ ಪರಿಣಾಮ ಬೀರುತ್ತದೆ ಎಂಬುದಕ್ಕೆ ಇದು ತಾಜಾ ಉದಾಹರಣೆ. ಘಟನೆ ನಡೆಯುತ್ತಿದಂತೆ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಾಲಕಿಯರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.

ಮೃತ ಬಾಲಕಿಯರನ್ನು ಪಾಖಿ (12), ಪ್ರಾಚಿ (14) ಮತ್ತು ವಿಶಿಕಾ (16) ಎಂದು ಗುರುತಿಸಲಾಗಿದ್ದು, ಇವರು ಸಹೋದರಿಯರು. ಕಳೆದ ಹಲವು ವರ್ಷಗಳಿಂದ ಇವರು ಆನ್‌ಲೈನ್ ಗೇಮಿಂಗ್‌ ಚಟಕ್ಕೆ ಒಳಗಾಗಿದ್ದರು ಎನ್ನಲಾಗಿದೆ. ಇತ್ತೀಚಿಗೆ ಅವರು ಶಾಲೆಗೆ ಹೋಗುವುದನ್ನೇ ನಿರ್ಲಕ್ಷಿಸಿ ಬಹುತೇಕ ಸಮಯವನ್ನು ಮೊಬೈಲ್ ಫೋನ್‌ಗಳಲ್ಲಿ ಗೇಮ್ ಆಡುತ್ತ ಕಳೆಯುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ಗೇಮ್‌ ಒಂದರ ಟಾಸ್ಕ್‌ನ ಭಾಗವಾಗಿ ಆತ್ಮಹತ್ಯೆ ಮಾಡಿಕೊಂಡಿರಬೇಕು ಎನ್ನುವ ಶಂಕೆ ವ್ಯಕ್ತವಾಗಿದೆ.

ಪಿಯುಸಿ ಯುವಕನಿಗೆ ಲೈಂಗಿಕ ಕಿರುಕುಳ ನೀಡಿದ ಪೊಲೀಸ್‌ ಕಾನ್ಸ್​​ಟೇಬಲ್ ಅರೆಸ್ಟ್‌

ಘಟನೆಯ ನಂತರ ಪೊಲೀಸರು ಮೃತ ಸಹೋದರಿಯದ ಡೈರಿಯನ್ನು ವಶಪಡಿಸಿಕೊಂಡಿದ್ದು, ಅದರಲ್ಲಿ ಅಚ್ಚರಿಯ ವಿವರಗಳು ಪತ್ತೆಯಾಗಿವೆ. ಸಹೋದರಿಯರು ಜನಪ್ರಿಯ ಕೊರಿಯನ್ ಆನ್‌ಲೈನ್ ಗೇಮ್‌ಗಳ ಪ್ರಭಾವಕ್ಕೆ ಒಳಗಾಗಿ, ತಮ್ಮನ್ನುಕೊರಿಯನ್ನರು ಎಂದು ಭಾವಿಸುವ ಮನೋಭಾವ ಬೆಳೆಸಿಕೊಂಡಿದ್ದರು. ಅವರು ತಮ್ಮನ್ನು ‘ಕೊರಿಯಾದ ರಾಜಕುಮಾರಿಯರು’ ಎಂದು ಕಲ್ಪಿಸಿಕೊಂಡಿದ್ದರು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.

ಡೈರಿಯಲ್ಲಿ ಅವರು ಬರೆದಿದ್ದ ಸಾಲುಗಳು ಮನಕಲಕುವಂತಿವೆ: “ನಾವು ಕೊರಿಯಾ ಬಿಡಲು ಸಾಧ್ಯವಿಲ್ಲ. ಕೊರಿಯಾ ನಮ್ಮ ಜೀವನ. ನೀವು ನಮ್ಮನ್ನು ಮುಕ್ತಗೊಳಿಸಲಾಗುವುದಿಲ್ಲ. ನಾವು ನಮ್ಮ ಜೀವನವನ್ನು ಕೊನೆಗೊಳಿಸುತ್ತಿದ್ದೇವೆ” ಎಂದು ಬರೆದಿದ್ದಾರೆ.

ಗಾಜಿಯಾಬಾದ್ ಸಹಾಯಕ ಪೊಲೀಸ್ ಆಯುಕ್ತ ಅತುಲ್ ಕುಮಾರ್ ಮಾಹಿತಿ ನೀಡಿರುವ ಪ್ರಕಾರ, ರಾತ್ರಿ ಸುಮಾರು 2:15ಕ್ಕೆ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ತಕ್ಷಣವೇ ಕ. ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ. ಈ ಘಟನೆ ಪೋಷಕರು, ಶಿಕ್ಷಕರು ಹಾಗೂ ಸಮಾಜಕ್ಕೆ ಎಚ್ಚರಿಕೆಯ ಗಂಟೆಯಾಗಿದೆ. ಮಕ್ಕಳಲ್ಲಿ ಆನ್‌ಲೈನ್ ಗೇಮಿಂಗ್ ಚಟವು ಹೇಗೆ ನಿಧಾನವಾಗಿ ಮನೋವೈಕಲ್ಯಕ್ಕೆ ದಾರಿ ಮಾಡಿಕೊಡುತ್ತದೆ ಎಂದು ತೋರಿಸಿದೆ. ಈ ಹಿಂದೆ ಬ್ಲ್ಯೂ ವೇಲ್ ಗೇಮ್ ಬಂದಾಗಲೂ ಇಂತಹ ಘಟನೆಗಳು ನಡೆದಿದ್ದು, ನೂರಾರು ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದರು.

‘ಕೊರಿಯನ್ ಲವರ್ ಗೇಮ್’ ಎಂದರೇನು?

ಹಾಗಾದರೆ ಬಾಲಕಿಯರ ಪ್ರಾಣ ತೆಗೆದ ಕೊರಿಯನ್ ಲವರ್ ಗೇಮ್’ ಎಂದರೇನು? ಎಂದು ನೋಡುವುದಾದರೆ, ಇದು ಸಾಮಾನ್ಯ ಸಮಯ ಕಳೆಯುವ ಆಟವಲ್ಲ. ಕೊರಿಯನ್ ಶೈಲಿಯ ಆನ್‌ಲೈನ್ ಲವ್ ಅಥವಾ ರೊಮ್ಯಾಂಟಿಕ್ ಟಾಸ್ಕ್‌-ಆಧಾರಿತ ಗೇಮ್‌ಗಳ ರೂಪದಲ್ಲಿ ಇದು ಕಾಣಿಸಿಕೊಳ್ಳುತ್ತದೆ. ಇಂತಹ ಗೇಮ್‌ ಹೆಚ್ಚಾಗಿ ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ನಡೆಯುತ್ತಿದ್ದು, ಬಳಕೆದಾರರನ್ನು ಕೊರಿಯನ್ ಸಂಸ್ಕೃತಿ, ಕೆ-ಪಾಪ್ ಮತ್ತು ಕೆ-ಡ್ರಾಮಾ ಪ್ರಪಂಚದೊಂದಿಗೆ ಸಂಪರ್ಕಿಸುತ್ತವೆ.

ಈ ಗೇಮ್‌ನಲ್ಲಿ ಆಟಗಾರರು ಕೊರಿಯನ್ ಶೈಲಿಯಲ್ಲಿ ಮಾತನಾಡುವ, ಪ್ರಣಯ ಸಂದೇಶಗಳನ್ನು ಕಳುಹಿಸುವ ವರ್ಚುವಲ್ ಪ್ರೇಮಿ ಅಥವಾ ಪಾಲುದಾರರನ್ನು ಆಯ್ಕೆ ಮಾಡುತ್ತಾರೆ. ಬಳಿಕ ಆ ವರ್ಚುವಲ್ ಪಾತ್ರದಿಂದ ದೈನಂದಿನ ಸಣ್ಣ ಸಣ್ಣ ಕಾರ್ಯಗಳು (ಟಾಸ್ಕ್‌ಗಳು) ನೀಡಲಾಗುತ್ತವೆ. ಈ ರೀತಿ ಆಟವು ನಿಧಾನವಾಗಿ ಭಾವನಾತ್ಮಕ ನಂಟು ಮತ್ತು ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸುವ ರೀತಿಯಲ್ಲಿ ರೂಪುಗೊಂಡಿರುತ್ತದೆ. ಈ ವೇಳೆ ಆತ್ಮಹತ್ಯೆಯ ಟಾಸ್ಕ್‌ ಸಿಕ್ಕಿರುವ ಸಾಧ್ಯತೆ ಇದೆ.