Driving License: ಫೈನ್ ಬಾಕಿ ಇದ್ಯಾ? ಹಾಗಿದ್ರೆ ಡ್ರೈವಿಂಗ್ ಲೈಸೆನ್ಸ್ ರದ್ದಾಗುವುದು ಗ್ಯಾರಂಟಿ!
DL Suspended: ಇತ್ತೀಚಿನ ದಿನಗಳಲ್ಲಿ ಸಂಚಾರ ನಿಯಮಗಳಲ್ಲಿ ಭಾರಿ ಬದಲಾವಣೆ ಆಗಿದೆ. ಅಪಘಾತಗಳನ್ನು ತಪ್ಪಿಸಲು ಮತ್ತು ಅದರಿಂದ ಉಂಟಾಗುವ ಸಾವು-ನೋವುಗಳ ಸಂಖ್ಯೆಯನ್ನು ತಗ್ಗಿಸಲು ಸಾರಿಗೆ ಇಲಾಖೆಯು ಹಲವು ಕ್ರಮಗಳನ್ನು ಕೈಗೊಂಡಿದೆ. ಇತ್ತೀಚಿಗೆ ಟ್ರಾಫಿಕ್ ನಿಯಮ ಉಲ್ಲಂಘನೆಗಳ ದಂಡದ ಮೊತ್ತವನ್ನೂ ಹಲವು ಪಟ್ಟು ಏರಿಸಲಾಗಿದೆ.


ನವದೆಹಲಿ: ಇತ್ತೀಚಿನ ದಿನಗಳಲ್ಲಿ ಸಂಚಾರ ನಿಯಮಗಳಲ್ಲಿ ಭಾರಿ ಬದಲಾವಣೆ ಆಗಿದೆ. ಅಪಘಾತಗಳನ್ನು ತಪ್ಪಿಸಲು ಮತ್ತು ಅದರಿಂದ ಉಂಟಾಗುವ ಸಾವು-ನೋವುಗಳ ಸಂಖ್ಯೆಯನ್ನು ತಗ್ಗಿಸಲು ಸಾರಿಗೆ ಇಲಾಖೆಯು ಹಲವು ಕ್ರಮಗಳನ್ನು ಕೈಗೊಂಡಿದೆ. ಇತ್ತೀಚಿಗೆ ಟ್ರಾಫಿಕ್ ನಿಯಮ ಉಲ್ಲಂಘನೆಗಳ ದಂಡದ ಮೊತ್ತ(Traffic fines)ವನ್ನೂ ಹಲವು ಪಟ್ಟು ಏರಿಸಲಾಗಿದೆ. ಈಗ ಮತ್ತೊಂದು ನಿಯಮ ಜಾರಿಗೆ ಬಂದಿದ್ದು, ವಾಹನ ಸವಾರರು ಇದನ್ನು ತಿಳಿದುಕೊಳ್ಳಲೇ ಬೇಕಾಗಿದೆ. ಮೂರು ತಿಂಗಳ ಒಳಗೆ ಇ-ಚಲನ್ (ದಂಡದ) ಮೊತ್ತವ(Traffic e-challan)ನ್ನು ಪಾವತಿಸದವರ ಡ್ರೈವಿಂಗ್ ಲೈಸೆನ್ಸ್(Driving license) ಅನ್ನು ರದ್ದುಗೊಳಿಸಲು ಶೀಘ್ರದಲ್ಲಿಯೇ ಕಾನೂನಾತ್ಮಕ ಸಂಸ್ಥೆಗಳಿಗೆ ಅಧಿಕಾರ ಸಿಗಲಿದೆ. ಸಿಗ್ನಲ್ ಜಂಪ್ ಮಾಡಿದ್ದಕ್ಕೆ ಅಥವಾ ಅಪಾಯಕಾರಿಯಾಗಿ ಚಾಲನೆ ಮಾಡಿದ್ದಕ್ಕೆ ಯಾರಾದರೂ ಮೂರು ಚಲನ್‌ಗಳನ್ನು ಪಡೆದಿದ್ದರೆ ಅವರ ಲೈಸೆನ್ಸ್(DL Suspended) ಅನ್ನು ಮೂರು ತಿಂಗಳವರೆಗೆ ಮುಟ್ಟುಗೋಲು ಹಾಕಿಕೊಳ್ಳಬಹುದು.
ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕೆ ವಿಧಿಸಿದ ದಂಡದ ಕೇವಲ 40%ದಷ್ಟು ಮಾತ್ರ ಪಾವತಿಯಾಗಿರುವುದು ಕಂಡುಬಂದ ನಂತರ ಈ ನಿಯಮಗಳನ್ನು ರೂಪಿಸಲಾಗಿದೆ. ಇದರಿಂದಾಗಿ, ದಂಡ ಪಾವತಿಯ ಪ್ರಮಾಣ ಹೆಚ್ಚಾಗಲಿದ್ದು, ಕಾನೂನು ನಿಯಗಳನ್ನು ಉಲ್ಲಂಘಿಸುವ ಪ್ರಕರಣಗಳೂ ಇಳಿಕೆಯಾಗಲಿವೆ ಎಂದು ಸರ್ಕಾರ ಯೋಜಿಸಿದೆ.
ಯಾವ ರಾಜ್ಯಗಳಲ್ಲಿ ಕಡಿಮೆ ದಂಡ ಪಾವತಿ?
ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೈಕಿ, ದೆಹಲಿಯಲ್ಲಿ ದಂಡದ ಮೊತ್ತ ಸಂಗ್ರಹಣೆ ಅತ್ಯಂತ ಕಡಿಮೆಯಾಗಿದೆ. ಇಲ್ಲಿ ಕೇವಲ ಶೇ. 14ರಷ್ಟು ಮಾತ್ರ ದಂಡದ ಮೊತ್ತ ಸಂಗ್ರಹವಾಗಿದೆ. ಇದರ ನಂತರದ ಸ್ಥಾನದಲ್ಲಿ, ಕರ್ನಾಟಕ (21%), ತಮಿಳುನಾಡು ಮತ್ತು ಉತ್ತರ ಪ್ರದೇಶ (ತಲಾ 27%) ಮತ್ತು ಒಡಿಶಾ (29%) ರಾಜ್ಯಗಳಿವೆ.
ಅತಿ ಹೆಚ್ಚು ದಂಡವನ್ನು ಸಂಗ್ರಹಿಸಿದ ರಾಜ್ಯಗಳ ಪೈಕಿ ರಾಜಸ್ಥಾನ, ಬಿಹಾರ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಹರಿಯಾಣ ಮುಂಚೂಣಿಯಲ್ಲಿದೆ. ಇಲ್ಲಿ ದಂಡದ ಮೊತ್ತದ 62%-76% ವಸೂಲಾತಿಯಾಗಿದೆ ಎಂದು ವರದಿಯಾಗಿದೆ. ದಂಡ ವಿಧಿಸಿದ ಬಳಿಕ ಕೋರ್ಟ್ ಮೆಟ್ಟಿಲೇರಿದವರ ದಂಡದ ಮೊತ್ತವು 80%ದಷ್ಟು ಇಳಿಕೆಯಾಗಿದೆ ಎಂದು ಅಂಕಿ-ಅಂಶಗಳು ತೋರಿಸಿವೆ.
ಈ ಸುದ್ದಿಯನ್ನು ಓದಿ: Viral Video: ಮುಸಲ್ಮಾನರ ಮೇಲೆ ಹೂಮಳೆಗೈದ ಹಿಂದೂ ಯುವಕರು..! ವಿಡಿಯೊ ಫುಲ್ ವೈರಲ್
ತಪ್ಪಾಗಿ ದಂಡ ವಿಧಿಸಿದ್ದರೆ ಏನು ಮಾಡಬೇಕು?
ನೀವು ತಪ್ಪೇ ಮಾಡಿಲ್ಲದಿದ್ದರೂ ನಿಮಗೆ ದಂಡ ವಿಧಿಸಲಾಗಿದ್ದರೆ, ನೀವು ಅದನ್ನು ಪ್ರಶ್ನಿಸಲೂ ಅವಕಾಶವಿದೆ. ಯಾವ ವಾಹನದ ಮೇಲೆ ದಂಡ ವಿಧಿಸಲಾಗಿದೆಯೋ, ಅದರ ನೋಂದಣಿ ಪ್ರಮಾಣ ಪತ್ರ ಹೊಂದಿರುವವರು ಅಥವಾ ಲೈಸೆನ್ಸ್ ಇರುವವರು ಚಲನ್‌ನಲ್ಲಿನ ದೋಷಗಳನ್ನು ವರದಿ ಮಾಡಬಹುದು. ಇದಕ್ಕೆ ಸೂಕ್ತವಾದ ದಾಖಲೆಗಳನ್ನೂ ಸಲ್ಲಿಸಬಹುದು. ಈ ರೀತಿ ಸಲ್ಲಿಕೆಯಾದ ದೂರುಗಳನ್ನು ಸಂಬಂಧಪಟ್ಟ ಪ್ರಾಧಿಕಾರವು 30 ದಿನಗಳಲ್ಲಿ ಪರಿಹರಿಸಬೇಕಾಗುತ್ತದೆ.
ಉದಾಹರಣೆಗೆ, ನಿಯಮ ಉಲ್ಲಂಘಿಸಿದ ಮೂರು ದಿನಗಳಲ್ಲಿ ಚಾಲಕ ಅಥವಾ ವಾಹನ ಮಾಲೀಕರಿಗೆ ಇ-ಚಲನ್ ನೋಟಿಸ್ ಕಳುಹಿಸಲಾಗುತ್ತದೆ. ಈ ನೋಟಿಸ್ ಸ್ವೀಕರಿಸುವವರು 30 ದಿನಗಳಲ್ಲಿ ದಂಡವನ್ನು ಪಾವತಿಸಬೇಕು ಅಥವಾ ಸಂಬಂಧಪಟ್ಟ ದೂರು ಪ್ರಾಧಿಕಾರದ ಮುಂದೆ ಅದನ್ನು ಪ್ರಶ್ನಿಸಬೇಕು. 30 ದಿನಗಳಲ್ಲಿ ಪ್ರಾಧಿಕಾರವು ಯಾವುದೇ ಕ್ರಮ ಕೈಗೊಳ್ಳದಿದ್ದರೆ ಅದು ತಪ್ಪನ್ನು ಒಪ್ಪಿಕೊಂಡಂತೆ ಅರ್ಥವಲ್ಲ. ಅದರೆ, 90 ದಿನಗಳಲ್ಲಿ ದಂಡ ಪಾವತಿ ಮಾಡದಿದ್ದರೆ, ಅದನ್ನು ಪಾವತಿಸುವವರೆಗೆ ಚಾಲನಾ ಪರವಾನಗಿ (DL) ಅಥವಾ ನೋಂದಣಿ ಪ್ರಮಾಣಪತ್ರ (RC) ರದ್ದುಗೊಳ್ಳುವುದಿಲ್ಲ.