ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಮುಸಲ್ಮಾನರ ಮೇಲೆ ಹೂಮಳೆಗೈದ ಹಿಂದೂ ಯುವಕರು..! ವಿಡಿಯೊ ಫುಲ್‌ ವೈರಲ್‌

ದೇಶಾದ್ಯಂತ ಈದ್ ಹಬ್ಬದ ಸಂಭ್ರಮ ಜೋರಾಗಿದ್ದು ‌ಜೈಪುರದಲ್ಲಿ ಭಾವೈಕ್ಯತೆ ಮೆರೆದಿರುವ ಈ ವಿಡಿಯೊ ಇದೀಗ ಎಲ್ಲರ ಗಮನ ಸೆಳೆದಿದೆ.,ಈದ್ಗಾ ಆಚರಣೆ ನಿಮಿತ್ತ ಜೈಪುರದಲ್ಲಿ ಸಾಕಷ್ಟು ಮುಸ್ಲಿಮರ ಗುಂಪು ಮೆರವಣಿಗೆ ಮೂಲಕ ಸಾಗು ತ್ತಿದ್ದಾಗ ಮುಸ್ಲಿಮರ ಮೇಲೆ ಹಿಂದೂ ಪುರುಷರು ಹೂವುಗಳ ಸುರಿಮಳೆ ಗೈದಿದ್ದಾರೆ.

ಈದ್ ಮೆರವಣಿಗೆ ಮಾಡುತ್ತಿದ್ದ ಮುಸ್ಲಿಮರ ಮೇಲೆ ಹಿಂದೂಗಳಿಂದ ಹೂಮಳೆ!

Profile Pushpa Kumari Mar 31, 2025 4:47 PM

ಜೈಪುರ: ಇಂದು ದೇಶದೆಲ್ಲೆಡೆ ಮುಸ್ಲಿಂ ಬಾಂಧವರು ಈದ್ ಹಬ್ಬದ ಆಚರಣೆಯ ಸಂಭ್ರಮದಲ್ಲಿದ್ದಾರೆ. ಈ ನಡುವೆ ರಾಜಸ್ಥಾನದ ಜೈಪುರ ದಲ್ಲಿ ಮುಸ್ಲಿಂ ಮೆರವಣಿಗೆ ಸಂದರ್ಭ ಹಿಂದೂಗಳು ಹೂಗಳ‌‌ ಸುರಿಮಳೆಗೈದಿರುವ ವಿಡಿಯೊ‌ವೊಂದು ಮೆಚ್ಚುಗೆಗೆ ಪಾತ್ರವಾಗಿದೆ. ಹಿಂದೂ ಮುಸ್ಲಿಮ್ ಸಾಮರಸ್ಯ ಮೆರೆದಿರುವ ಈ ವಿಡಿಯೊ(Viral Video) ನೋಡಿ ನೆಟ್ಟಿಗರು ಖುಷಿ ವ್ಯಕ್ತಪಡಿಸಿದ್ದಾರೆ. ಈದ್ಗಾ ಆಚರಣೆ ಪ್ರಯುಕ್ತ ಜೈಪುರದಲ್ಲಿ‌ ಮುಸ್ಲಿಮರ ಗುಂಪೊಂದು ಮೆರವಣಿಗೆಯಲ್ಲಿ ಸಾಗುತ್ತಿತ್ತು. ಈ ಸಂದರ್ಭ ಹಿಂದುಗಳು ಹೂ ಹಾಕಿ ಸ್ವಾಗತ ಕೋರಿದ್ದಾರೆ. ಈ ಮೂಲಕ ಹಿಂದೂ-ಮುಸ್ಲಿಂ ಜನತೆಯು ಸೌಹಾರ್ದ‌ ಸಂಗಮಕ್ಕೆ ಸಾಕ್ಷಿಯಾದ ವಿಡಿಯೊ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ.

ದೇಶಾದ್ಯಂತ ಈದ್ ಹಬ್ಬದ ಸಂಭ್ರಮ ಜೋರಾಗಿದ್ದು ‌ಜೈಪುರದಲ್ಲಿ ಭಾವೈಕ್ಯತೆ ಮೆರೆದಿರುವ ಈ ವಿಡಿಯೊ ಇದೀಗ ಎಲ್ಲರ ಗಮನ ಸೆಳೆದಿದೆ., ಈದ್ಗಾ ಆಚರಣೆ ನಿಮಿತ್ತ ಜೈಪುರದಲ್ಲಿ ಸಾಕಷ್ಟು ಮುಸ್ಲಿಮರ ಗುಂಪು ಮೆರ ವಣಿಗೆ ಮೂಲಕ ಸಾಗುತ್ತಿದ್ದಾಗ ಮುಸ್ಲಿಮರ ಮೇಲೆ ಹಿಂದೂ ಪುರುಷರು ಹೂವುಗಳ ಸುರಿಮಳೆಗೈದಿದ್ದಾರೆ. ಹಿಂದೂ ಮುಸ್ಲಿಂ ಏಕತಾ ಸಮಿತಿಯ ಅಡಿಯಲ್ಲಿ ಹಿಂದು ಯುವಕರು ಈ ಕಾರ್ಯ ಕ್ರಮ ಆಯೋಜನೆ ಮಾಡಿ ದ್ದಾರೆ. ಜೈಪುರ ದೆಹಲಿ ರಸ್ತೆಯಲ್ಲಿ ಈದ್ ಆಚರಿಸಲು ಬಂದಿದ್ದ ಮುಸ್ಲಿಮರ ಮೇಲೆ ಹಿಂದೂ ಪುರುಷರು ಕೇಸರಿ ಸ್ಕಾರ್ಫ್‌ಗಳನ್ನು ಧರಿಸಿ ‌ಮುಸ್ಲಿಮರ ಮೇಲೆ ಹೂವು‌ ಸುರಿಸುವುದರ ಮೂಲಕ ಹಬ್ಬದ ಆಚರಣೆಯಲ್ಲಿ ಸೇರಿಕೊಂಡರು.



ಸಾಮಾನ್ಯವಾಗಿ ಹಬ್ಬದ ಸಂದರ್ಭ ಕೋಮು ಗಲಾಭೆಗಳೇ ಹೆಚ್ಚಾಗುತ್ತವೆ. ಆದರೆ ಇಲ್ಲಿ ಹಿಂದೂಗಳು ಕೋಮು ಸೌಹಾರ್ದತೆ ಮೆರೆದಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಮೆಚ್ಚುಗೆ ಗಳಿಸಿದೆ.ಈ ಮೂಲಕ ಹಿಂದು ಭಾಂದವರೂ ಈದ್ ಹಬ್ಬದಲ್ಲಿ ಭಾಗವಹಿಸುವ ಮೂಲಕ ಭಾವೈಕ್ಯ ವಾತಾವರಣ ಸೃಷ್ಠಿಯಾಗಿತ್ತು. ಹಿಂದೂ- ಮುಸ್ಲಿ ಸಮುದಾಯ ವರು ಮತಬೇಧವನ್ನು ಮರೆತು ಸಾಮರಸ್ಯಕ್ಕೆ ಸಾಕ್ಷಿಯಾದರು. ಈ ಮೂಲಕ ಈ ವಿಡಿಯೊ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿದ್ದು ನೆಟ್ಟಿಗರು ನಾನಾ ಬಗೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ನೆಟ್ಟಿಗರೊಬ್ಬರು ಜಾತಿ ಧರ್ಮಕ್ಕಿಂತ ಸ್ನೇಹ ಮಿಗಿಲಾಗಿದ್ದು ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಈ ಸಹೋದರತ್ವವು ಎಂದಿಗೂ ಹೀಗೆ ಇರಲಿ ಎಂದು ಹಾರೈಸಿದ್ದಾರೆ.

ಇದನ್ನು ಓದಿ: Viral Video: ಮಸೀದಿಯಲ್ಲಿ ಸೆಕ್ಯೂರಿಟಿ ಗಾರ್ಡ್‌ಗೆ ಮಹಿಳೆಯಿಂದ ಕಪಾಳಮೋಕ್ಷ; ಮುಂದೇನಾಯ್ತು? ವಿಡಿಯೊ ನೋಡಿ

ಭಾರತದ ವಿವಿಧ ಭಾಗಗಳಲ್ಲಿ ಈದ್ ಉತ್ಸವ ಜೋರಾಗಿದ್ದು ದೆಹಲಿಯ ಜಾಮಾ ಮಸೀದಿಯಲ್ಲಿ ಭಕ್ತರು ಸಮೂಹವಾಗಿ ಪ್ರಾರ್ಥನೆ ಸಲ್ಲಿಸಿ ದ್ದಾರೆ.ಅಗ್ರಾದ ತಾಜ್ ಮಹಲ್ ಮತ್ತು ತಮಿಳುನಾಡಿನ ತಿರುನೆಲ್ವೇಲಿ, ವೆಲ್ಲೋರ್ ಸೇರಿದಂತೆ ದೇಶದ ಹಲವೆಡೆ ಸಾವಿರಾರು ಮಂದಿ ಹಬ್ಬದಲ್ಲಿ ತೊಡಗಿ ಕೊಂಡಿದ್ದಾರೆ. ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆಗಾಗಿ ಭದ್ರತಾ ಕ್ರಮಗಳನ್ನು ಆಯೋಜಿಸಿದ್ದು‌ ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಈದ್ ಹಬ್ಬದ ಪ್ರಯುಕ್ತ ಶುಭಾಶಯಗಳನ್ನು ತಿಳಿಸಿದ್ದಾರೆ.