Operation Sindoor: ಮತ್ತೆ ಬಾಲ ಬಿಚ್ಚಿದ ಪಾಕ್; ಇಂದೂ 7 ಕಡೆಗಳಲ್ಲಿ ಡ್ರೋನ್ ದಾಳಿ
ಸತತ 3ನೇ ದಿನವೂ ಪಾಕಿಸ್ತಾನದಿಂದ ಭಾರತದ ಮೇಲೆ ದಾಳಿ ಪ್ರಯತ್ನ ಮುಂದುವರಿದಿದೆ. ಮೇ 9ರಂದು ರಾತ್ರಿ ಒಟ್ಟು 7 ಕಡೆಗಳಲ್ಲಿ ಪಾಕಿಸ್ತಾನದ ಡ್ರೋನ್‌ಗಳು ಕಂಡು ಬಂದಿವೆ. ಜಮ್ಮು, ಸಾಂಬಾ, ಪಠಾಣ್‌ಕೋಟ್, ಫಿರೋಜ್‌ಪುರ ಮುಂತಾದೆಡೆಗಳಲ್ಲಿ ಪಾಕ್‌ನ ಡ್ರೋನ್ ಕಂಡು ಬಂದಿವೆ ಎಂದು ಮೂಲಗಳು ತಿಳಿಸಿವೆ.


ಶ್ರೀನಗರ: ಭಾರತೀಯ ಸೇನೆಯ ಆಪರೇಷನ್ ಸಿಂದೂರ್ (Operation Sindoor) ಕಾರ್ಯಾಚರಣೆ ಬಳಿಕ ಭಾರತ ಮತ್ತು ಪಾಕಿಸ್ತಾನದ ಸಂಬಂಧ ಬಿಗಡಾಯಿಸಿದ್ದು, ಯುದ್ಧದ ಪರಿಸ್ಥಿತಿ ತಲೆದೋರಿದೆ. ಈ ಮಧ್ಯೆ ಸತತ 3ನೇ ದಿನವೂ ಪಾಕಿಸ್ತಾನದಿಂದ ಭಾರತದ ಮೇಲೆ ದಾಳಿ ಪ್ರಯತ್ನ ಮುಂದುವರಿದಿದೆ. ಮೇ 9ರಂದು ರಾತ್ರಿ ಭಾರತದ ವಿವಿಧ ನಗರಗಳ ಮೇಲೆ ಪಾಕಿಸ್ತಾನದ ಡ್ರೋನ್‌ಗಳು ಕಂಡು ಬಂದಿವೆ. ಜಮ್ಮು, ಸಾಂಬಾ, ಪಠಾಣ್‌ಕೋಟ್, ಫಿರೋಜ್‌ಪುರ, ಪೂಂಚ್, ಪೋಕ್ರಾಮ್, ಉರಿ, ಅಮೃತಸರ, ಜೈಸಲ್ಮೇರ್, ರಜೌರಿ, ಪಂಜಾಬ್‌ನ ಗುರುದಾಸಪುರ ಮುಂತಾದೆಡೆಗಳಲ್ಲಿ ಪಾಕ್‌ನ ಡ್ರೋನ್ ಕಂಡು ಬಂದಿವೆ ಎಂದು ಮೂಲಗಳು ತಿಳಿಸಿವೆ. ಸದ್ಯ ಇವೆಲ್ಲವನ್ನೂ ಭಾರತೀಯ ಸೇನೆ ಹೊಡೆದುರುಳಿಸಿದೆ. ಮೇ 8ರಂದು ಪಾಕ್ ಜಮ್ಮು ಕಾಶ್ಮೀರ, ಪಂಜಾಬ್, ಹರಿಯಾಣ, ರಾಜಸ್ಥಾನಗಳ ಮೇಲೆ ಇದೇ ಮಾದರಿಯ ದಾಳಿ ನಡೆಸಿತ್ತು.
ಜಮ್ಮು ಕಾಶ್ಮೀರ, ಪಂಜಾಬ್, ರಾಜಸ್ಥಾನ ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ. ಜಮ್ಮು, ಶ್ರೀನಗರದಲ್ಲಿ ಶುಕ್ರವಾರ ರಾತ್ರಿ ಸ್ಫೋಟದ ಸದ್ದು ಕೇಳಿ ಬಂದ ಹಿನ್ನೆಲೆಯಲ್ಲಿ ಸೈರನ್ ಮೊಳಗಿದ್ದು, ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಸ್ಫೋಟದ ಸದ್ದು ಕೇಳಿರುವುದನ್ನು ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಖಚಿತಪಡಿಸಿದ್ದಾರೆ. ಸದ್ಯ ಜಮ್ಮುವಿನಲ್ಲಿ ಬ್ಲ್ಯಾಕ್‌ಔಟ್ ಘೋಷಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ನಗರದಾದ್ಯಂತ ಸೈರನ್ ಮೊಳಗುತ್ತಿರುವುದಾಗಿಯೂ ವಿವರಿಸಿದ್ದಾರೆ. ಜಮ್ಮು, ಶ್ರೀನಗರದ ಜತೆಗೆ ರಾಜಸ್ಥಾನದ ಜೈಸಲ್ಮೇರ್ ಅನ್ನೂ ಬ್ಲ್ಯಾಕ್‌ಔಟ್ ಮಾಡಲಾಗಿದೆ.
ಒಮರ್ ಅಬ್ದುಲ್ಲಾ ಅವರ ಎಕ್ಸ್ ಪೋಸ್ಟ್:
Blackout in Jammu now. Sirens can be heard across the city. pic.twitter.com/TE0X2LYzQ8
— Omar Abdullah (@OmarAbdullah) May 9, 2025
"ದಯವಿಟ್ಟು ಯಾರೂ ಬೀದಿಗಳಲ್ಲಿ ಓಡಾಡಬೇಡಿ. ಮುಂದಿನ ಕೆಲ ಗಂಟೆಗಳ ಕಾಲ ಮನೆಯೊಳಗೆ ಇರಿ. ವದಂತಿಯನ್ನು ದಯವಿಟ್ಟು ಹರಡಬೇಡಿʼʼ ಎಂದು ಅವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.