Earthquake: ಹಿಮಾಚಲ ಪ್ರದೇಶದಲ್ಲಿ ಕಂಪಿಸಿದ ಭೂಮಿ; ಭಯಭೀತರಾಗಿ ಮನೆಗಳಿಂದ ಹೊರಬಂದ ಜನ
ಭಾನುವಾರ ಬೆಳಿಗ್ಗೆ 9:18 ರ ಸುಮಾರಿಗೆ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ 3.4 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪದ ಆಳ 5 ಕಿ.ಮೀ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ಭೂಕಂಪದ ನಿಖರವಾದ ಸ್ಥಳ ಅಕ್ಷಾಂಶ 31.49 N, ರೇಖಾಂಶ 76.94 E ಆಗಿತ್ತು.


ಶಿಮ್ಲಾ: ಭಾನುವಾರ ಬೆಳಿಗ್ಗೆ 9:18 ರ ಸುಮಾರಿಗೆ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ 3.4 ತೀವ್ರತೆಯ ಭೂಕಂಪ (Earthquake) ಸಂಭವಿಸಿದೆ. ಭೂಕಂಪದ ಆಳ 5 ಕಿ.ಮೀ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ಭೂಕಂಪದ ನಿಖರವಾದ ಸ್ಥಳ ಅಕ್ಷಾಂಶ 31.49 N, ರೇಖಾಂಶ 76.94 E ಆಗಿತ್ತು. ಇಲ್ಲಿಯವರೆಗೆ ಯಾವುದೇ ಸಾವುನೋವು ಅಥವಾ ಆಸ್ತಿಪಾಸ್ತಿಗೆ ಹಾನಿಯಾದ ಘಟನೆಗಳು ವರದಿಯಾಗಿಲ್ಲ. ಭೂಕಂಪದ ನಂತರ, ಇಡೀ ಪ್ರದೇಶದಲ್ಲಿ ಭೀತಿಯ ವಾತಾವರಣ ಕಂಡು ಬಂದಿದೆ. ಭೂಕಂಪ ಸಂಭವಿಸಿದ ತಕ್ಷಣ ಜನರು ಮನೆಗಳಿಂದ ಹೊರಗೆ ಬಂದಿದ್ದಾರೆ.
ಭಾನುವಾರ ಬೆಳಿಗ್ಗೆ ಹಿಮಾಚಲ ಪ್ರದೇಶದಲ್ಲಿ ಸಂಭವಿಸಿದ ಭೂಕಂಪದ ಕೇಂದ್ರಬಿಂದು ಜೈದೇವಿ ಬಳಿ ಇದೆ ಎಂದು ಅಂದಾಜಿಸಲಾಗಿದೆ. ಭಾನುವಾರ ಭೂಕಂಪ ಸಂಭವಿಸಿದ ತಕ್ಷಣ ಜನರು ತಮ್ಮ ಮನೆಗಳಿಂದ ಆತುರದಿಂದ ಹೊರಬರಲು ಪ್ರಾರಂಭಿಸಿದರು. ಈ ಸಮಯದಲ್ಲಿ ಅನೇಕ ಜನರು ಕೂಗುತ್ತಿರುವುದು ಕೂಡ ಕಂಡುಬಂದಿತು. ಈ ನಗರ ಈಗಾಗಲೇ ವಲಯ 5 ರಲ್ಲಿ ಅತ್ಯಂತ ಸೂಕ್ಷ್ಮ ಸ್ಥಳವೆಂದು ಘೋಷಿಸಲಾಗಿದೆ. ತೀವ್ರತೆ 5 ಕ್ಕಿಂತ ಹೆಚ್ಚಿದ್ದರೆ ಜೀವ ಮತ್ತು ಆಸ್ತಿಪಾಸ್ತಿ ನಷ್ಟವಾಗುವ ಸಾಧ್ಯತೆಯಿದೆ. ಜಿಲ್ಲಾಡಳಿತವು ಬುಲೆಟಿನ್ ಹೊರಡಿಸುವ ಮೂಲಕ ಇದನ್ನು ದೃಢಪಡಿಸಿದೆ. ಎಲ್ಲಿಂದಲೂ ಯಾವುದೇ ಹಾನಿಯಾದ ಬಗ್ಗೆ ಮಾಹಿತಿ ತಿಳಿದು ಬಂದಿದೆ.
ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ (Islamabad) ಬಳಿ ಶನಿವಾರ 5.3 ತೀವ್ರತೆಯ ಭೂಕಂಪ (Earthquake) ಸಂಭವಿಸಿದೆ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ವರದಿಮಾಡಿದೆ. ಅಲ್ಲಿನ ಕಂಪನದಿಂದಾಗಿ ಜಮ್ಮು ಮತ್ತು ಕಾಶ್ಮೀರದಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ. ಎನ್‌ಸಿಎಸ್ ಪ್ರಕಾರ, ಭೂಕಂಪನದ ಕೇಂದ್ರಬಿಂದು ಭೂಮಿಯಿಂದ 10 ಕಿಮೀ ಆಳದಲ್ಲಿ ಪತ್ತೆಯಾಗಿದೆ. ಭೂಕಂಪ ಸಂಭವಿಸಿದ ಬಳಿಕ ಇಸ್ಲಾಮಾಬಾದ್‌ನಲ್ಲಿ ಯಾವುದೇ ಹಾನಿಯಾಗಲಿ, ಸಾವು-ನೋವುಗಳಾಗಲಿ ಸಂಭವಿಸಿಲ್ಲ.
ಪಾಕಿಸ್ತಾನದ ಕೆಲವು ಭಾಗಗಳಲ್ಲಿ ಸಂಭವಿಸಿದ ಭೂಕಂಪದ ಭಯಾನಕ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿವೆ. ಒಂದು ವೀಡಿಯೊದಲ್ಲಿ ದಿನಸಿ ಅಂಗಡಿಯೊಳಗೆ ಒಬ್ಬ ವ್ಯಕ್ತಿ ಮಗುವಿನೊಂದಿಗೆ ಇರುವುದನ್ನು ತೋರಿಸಲಾಗಿದೆ, ಆಗ ಇದ್ದಕ್ಕಿದ್ದಂತೆ ಕ್ಯಾಮೆರಾ ಮತ್ತು ಅಂಗಡಿ ಅಲುಗಾಡಲು ಪ್ರಾರಂಭಿಸಿದವು. ಆ ವ್ಯಕ್ತಿ ಮಗುವಿನೊಂದಿಗೆ ಅಂಗಡಿಯಿಂದ ಹೊರಗೆ ಧಾವಿಸಿದ್ದಾನೆ.
ಈ ಸುದ್ದಿಯನ್ನೂ ಓದಿ : Earthquake: ಪಾಕಿಸ್ತಾನದಲ್ಲಿ 5.3 ತೀವ್ರತೆಯ ಭೂಕಂಪ; ಕಾಶ್ಮೀರ ಸೇರಿದಂತೆ ಹಲವು ಕಡೆ ಕಂಪನದ ಅನುಭವ
ಮಾರ್ಚ್ 28ರ ಶುಕ್ರವಾರ ಭೀಕರ ಭೂಕಂಪನ ಸಂಭವಿಸಿ, ಈಗಾಗಲೇ 3,600ಕ್ಕೂ ಹೆಚ್ಚು ಜನರು ಮ್ಯಾನ್ಮಾರ್ ದೇಶದಲ್ಲಿ ಬಲಿಯಾಗಿದ್ದಾರೆ. ಪ್ರಬಲವಾದ ಭೂಕಂಪಕ್ಕೆ ಮ್ಯಾನ್ಮಾರ್ ನಡುಗಿ ಹೋಗಿದೆ. ಭೂಕಂಪ ಪೀಡಿತ ರಾಷ್ಟ್ರಕ್ಕೆ ಹಲವು ದೇಶಗಳು ಸಹಾಯ ಮಾಡುತ್ತಿವೆ. ಭಾರತ ಈಗಾಗಲೇ ಎನ್‌ಡಿಆರ್‌ಎಫ್ ತಂಡವನ್ನು ಕಳುಹಿಸಿದೆ. ಅಷ್ಟೇ ಅಲ್ಲದೆ ವೈದ್ಯಕೀಯ ಸಾಮಗ್ರಿ ಹಾಗೂ ಆಹಾರ ಸಾಮಗ್ರಿಗಳನ್ನು ಪೂರೈಕೆ ಮಾಡಿದೆ.