ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಪಶ್ಚಿಮ ಬಂಗಾಳದಲ್ಲಿ ಇಡಿ ದಾಳಿ: ಕೋಲ್ಕತ್ತಾದಲ್ಲಿ ಹೈಡ್ರಾಮಾ, ಟಿಎಂಸಿ ಚುನಾವಣಾ ತಂತ್ರವನ್ನು ಬಿಜೆಪಿ ಕದ್ದಿದೆ ಎಂದ ಮಮತಾ ಬ್ಯಾನರ್ಜಿ

ED raids in West Bengal: ಪಶ್ಚಿಮ ಬಂಗಾಳದಲ್ಲಿ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಯು ರಾಜಕೀಯ ವಲಯದಲ್ಲಿ ಭಾರಿ ಚರ್ಚೆ ಮತ್ತು ಉದ್ವಿಗ್ನತೆಯನ್ನು ಉಂಟುಮಾಡಿದೆ. ತೃಣಮೂಲ ಕಾಂಗ್ರೆಸ್ ಪಕ್ಷದ ಚುನಾವಣಾ ತಂತ್ರ ಮತ್ತು ಆಂತರಿಕ ದಾಖಲೆಗಳನ್ನು ಕದಿಯಲು ಬಿಜೆಪಿ ಈ ದಾಳಿಯನ್ನು ಬಳಸಿಕೊಂಡಿದೆ ಎಂದು ಮಮತಾ ಬ್ಯಾನರ್ಜಿ ಗಂಭೀರ ಆರೋಪ ಮಾಡಿದ್ದಾರೆ.

ಟಿಎಂಸಿಯ ಚುನಾವಣಾ ತಂತ್ರವನ್ನು ಬಿಜೆಪಿ ಕದ್ದಿದೆ ಎಂದ ದೀದಿ

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ -

Priyanka P
Priyanka P Jan 8, 2026 6:10 PM

ಕೋಲ್ಕತ್ತಾ, ಜ. 8: ಅಕ್ರಮ ಹಣಕಾಸು ವರ್ಗಾವಣೆಯ(Money laundering) ತನಿಖೆಯ ಭಾಗವಾಗಿ ರಾಜಕೀಯ ಸಲಹಾ ಸಂಸ್ಥೆ I-PAC ಕಚೇರಿ ಮೇಲೆ ಜಾರಿ ನಿರ್ದೇಶನಾಲಯ (ED) ದಾಳಿ ನಡೆಸಿತು. ಇದಕ್ಕೆ ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ (West Bengal) ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿದೆ. ಅಲ್ಲದೆ ಕೇಂದ್ರ ತನಿಖಾ ಸಂಸ್ಥೆಯು ತೃಣಮೂಲ ಕಾಂಗ್ರೆಸ್ ಪಕ್ಷದ ದಾಖಲೆಗಳನ್ನು ಕದ್ದಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದರು.

ಜಾರಿ ನಿರ್ದೇಶನಾಲಯ ಎರಡು ಸ್ಥಳಗಳಲ್ಲಿ ಶೋಧ ನಡೆಸಿತು. ಒಂದರಲ್ಲಿ ಮಧ್ಯ ಕೋಲ್ಕತ್ತಾದಲ್ಲಿರುವ ಐ-ಪ್ಯಾಕ್‌ನ ಹಿರಿಯ ಕಾರ್ಯಕರ್ತ ಪ್ರತೀಕ್ ಜೈನ್ ಅವರ ನಿವಾಸ, ಮತ್ತೊಂದರಲ್ಲಿ ಸಾಲ್ಟ್ ಲೇಕ್‌ನ ಸೆಕ್ಟರ್ ‘ವಿ’ನಲ್ಲಿರುವ ಗೋದ್ರೆಜ್ ವಾಟರ್‌ಸೈಡ್ ಕಟ್ಟಡದಲ್ಲಿನ ಸಂಸ್ಥೆಯ ಕಚೇರಿ ಸೇರಿದೆ. ಜೈನ್ ಅವರನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಚುನಾವಣಾ ತಂತ್ರಗಾರಿಕಾ ತಂಡದ ಪ್ರಮುಖ ಸದಸ್ಯರಾಗಿ ಪರಿಗಣಿಸಲಾಗಿದೆ.‌

ಇಡಿ ದಾಳಿಯನ್ನು ಟೀಕಿಸಿದ ಮಮತಾ ಬ್ಯಾನರ್ಜಿ:



ದಾಳಿಯ ಸುದ್ದಿ ಹರಡುತ್ತಿದ್ದಂತೆ, ಟಿಎಂಸಿ ನಾಯಕರು ಸಾಲ್ಟ್ ಲೇಕ್ ಕಚೇರಿಯ ಹೊರಗೆ ಜಮಾಯಿಸಲು ಪ್ರಾರಂಭಿಸಿದರು. ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಬಿಧಾನ್‌ನಗರ ಪೊಲೀಸ್ ಆಯುಕ್ತರು ಸ್ಥಳಕ್ಕೆ ತಲುಪಿದರು. ಆರಂಭದಲ್ಲಿ ಶೋಧ ನಡೆದಿದ್ದ ಒಂದು ಸ್ಥಳದಲ್ಲಿದ್ದ ಬ್ಯಾನರ್ಜಿ, ನಂತರ ಸೆಕ್ಟರ್ V ಕಚೇರಿಯ ಕಡೆಗೆ ತೆರಳಿದರು.

"ಮಮತಾ ಆಳ್ವಿಕೆಯಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ"; ದೌರ್ಜನ್ಯದ ವಿಡಿಯೋ ಹಂಚಿಕೊಂಡು ಬಿಜೆಪಿ ಆಕ್ರೋಶ

ʼʼಇಡಿ ದಾಳಿಯು ತಮ್ಮ ಪಕ್ಷದ ಆಂತರಿಕ ರಾಜಕೀಯ ಮಾಹಿತಿಯನ್ನು ಪಡೆಯುವ ಉದ್ದೇಶದಿಂದಲೇ ನಡೆದಿದೆʼʼ ಎಂದು ಬ್ಯಾನರ್ಜಿ ಆರೋಪಿಸಿದರು. ʼʼಅಭ್ಯರ್ಥಿಗಳ ಪಟ್ಟಿ, ಪಕ್ಷದ ಕಾರ್ಯತಂತ್ರ, ಯೋಜನೆಗಳು ಹಾಗೂ ರಹಸ್ಯ ದಾಖಲೆಗಳನ್ನು ಸಂಗ್ರಹಿಸಲು ಇಡಿ ನಮ್ಮ ಕಚೇರಿಗೆ ಬಂದಿರುವುದು ಅತ್ಯಂತ ದುರದೃಷ್ಟಕರ ಸಂಗತಿʼʼ ಎಂದು ಅವರು ಆರೋಪಿಸಿದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ ವಾಗ್ದಾಳಿ ನಡೆಸಿದ ಬ್ಯಾನರ್ಜಿ, ಇದರಲ್ಲಿ ಅವರ ಕೈವಾಡವಿದೆ ಎಂದು ಆರೋಪಿಸಿದರು. ದೇಶವನ್ನು ಸುರಕ್ಷಿತವಾಗಿಡಲು ಸಾಧ್ಯವಾಗದ ಈ ಕೆಟ್ಟ ಹಾಗೂ ಅಸಭ್ಯ ಗೃಹ ಸಚಿವರೇ ಇದರ ಹಿಂದೆ ಇದ್ದಾರೆ. ಅಮಿತ್ ಶಾ ನಮ್ಮ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಸಂಗ್ರಹಿಸಲು ಯತ್ನಿಸುತ್ತಿದ್ದಾರೆ ಎಂದು ದೂರಿದರು. ಜತೆಗೆ ಒಂದು ಪ್ರಕರಣದಲ್ಲಿ ಮತದಾರರ ಹೆಸರನ್ನು ಅಳಿಸಲಾಗುತ್ತಿದ್ದು, ಇನ್ನೊಂದು ಪ್ರಕರಣದಲ್ಲಿ ದಾಖಲೆಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಎಸ್ಐಆರ್ ವೇಳೆ ಹೆಸರು ಅಳಿಸಿದರೆ ಅಡುಗೆ ಸಲಕರಣೆ ಹಿಡಿದು ಸಿದ್ದರಾಗಿ: ಮಮತಾ ಬ್ಯಾನರ್ಜಿ ಕರೆ

ಸರಿಯಾದ ಸುರಕ್ಷತಾ ಕ್ರಮಗಳಿಲ್ಲದೆ ದಾಖಲೆಗಳನ್ನು ಕದ್ದಾಲಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಈ ಕ್ರಮದ ಕಾನೂನು ಮಾನ್ಯತೆಯನ್ನು ಪ್ರಶ್ನಿಸಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ರಾಜಕೀಯ ದಾಖಲೆಗಳನ್ನು ವಶಪಡಿಸಿಕೊಳ್ಳುವುದು ಜಾರಿ ನಿರ್ದೇಶನಾಲಯದ ಕರ್ತವ್ಯವೇ ಎಂದು ಪ್ರಶ್ನಿಸಿದರು. ಅಭ್ಯರ್ಥಿಗಳ ಪಟ್ಟಿ, ಪಕ್ಷದ ತಂತ್ರ ಹಾಗೂ ಪಕ್ಷದ ಯೋಜನೆಗಳನ್ನು ಸಂಗ್ರಹಿಸುವುದು ಇಡಿ ಮತ್ತು ಗೃಹ ಸಚಿವರ ಕರ್ತವ್ಯವೇ? ಎಂದು ಅವರು ಪ್ರಶ್ನಿಸಿದರು. ದಾಳಿ ವೇಳೆ ಪ್ರತೀಕ್ ಜೈನ್ ಅವರ ಮನೆಯಿಂದ ಹಸಿರು ಫೈಲ್ ಅನ್ನು ತೆಗೆದುಕೊಂಡು ಮಮತಾ ಬ್ಯಾನರ್ಜಿ ಹೊರಟಿದ್ದಾರೆ. ಆ ಫೈಲ್​ನಲ್ಲಿ ಏನಿದೆ ಎಂಬುದು ಸದ್ಯದ ಕುತೂಹಲ.

ಇನ್ನು ಮಮತಾ ಬ್ಯಾನರ್ಜಿ ಮಾಡಿರುವ ಆರೋಪಗಳಿಗೆ ಜಾರಿ ನಿರ್ದೇಶನಾಲಯ ಪ್ರತಿಕ್ರಿಯಿಸಿ, ಈ ಶೋಧಗಳು ಚುನಾವಣೆಗಳಿಗೆ ಸಂಬಂಧಿಸಿಲ್ಲ ಮತ್ತು ಹಣ ವರ್ಗಾವಣೆಯ ವಿರುದ್ಧದ ನಿಯಮಿತ ಕ್ರಮದ ಭಾಗ ಎಂದು ಹೇಳಿದೆ.