ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಎಸ್ಐಆರ್ ವೇಳೆ ಹೆಸರು ಅಳಿಸಿದರೆ ಅಡುಗೆ ಸಲಕರಣೆ ಹಿಡಿದು ಸಿದ್ದರಾಗಿ: ಮಹಿಳೆಯರಿಗೆ ಮಮತಾ ಬ್ಯಾನರ್ಜಿ ಕರೆ

ಒಂದೆಡೆ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆಗೆ ವಿರೋಧಗಳು ಕೇಳಿ ಬರುತ್ತಿದ್ದರೆ ಮತ್ತೊಂದೆಡೆ ರಾಜಕೀಯ ನಾಯಕರು ತಮ್ಮ ಹೇಳಿಕೆಗಳ ಮೂಲಕ ಉದ್ವಿಗ್ನತೆಯನ್ನು ಉಂಟು ಮಾಡಲು ಪ್ರಯತ್ನಿಸುತ್ತಿದ್ದಾರೆ. ಇದೀಗ ತೃಣಮೂಲ ಕಾಂಗ್ರೆಸ್ ನಾಯಕಿ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇಂತಹ ಒಂದು ಹೇಳಿಕೆ ನೀಡಿ ಗಲಭೆ ಎಬ್ಬಿಸಲು ಪ್ರಯತ್ನಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ಬಿಜೆಪಿಯಿಂದ ಜನರ ವಿಭಜನೆ: ಮಮತಾ ಬ್ಯಾನರ್ಜಿ ಆರೋಪ

-

ಕೋಲ್ಕತ್ತಾ: ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ (Special Intensive Revision) ವೇಳೆ ಮಹಿಳೆಯರ ಹೆಸರು ಕೈಬಿಟ್ಟಿದ್ದರೆ ಎಲ್ಲ ತಾಯಂದಿರು, ಸೋದರಿಯರು ಅಡುಗೆ ಉಪಕರಣಗಳನ್ನು ಹಿಡಿದುಕೊಂಡು ಸಿದ್ಧರಾಗಿರುವಂತೆ ತೃಣಮೂಲ ಕಾಂಗ್ರೆಸ್ ನಾಯಕಿ (Trinamool Congress leader) ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು (Chief Minister Mamata Banerjee) ಕರೆ ನೀಡಿದ್ದಾರೆ. ಮುಂದಿನ ವರ್ಷ ಚುನಾವಣೆಗೆ ಸಿದ್ಧವಾಗುತ್ತಿರುವ ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ ನಡೆಯುತ್ತಿದ್ದು, ಇದರ ವಿರುದ್ಧ ರಾಜಕೀಯ ನಾಯಕರು ಆರೋಪ, ಪ್ರತ್ಯಾರೋಪಗಳು ಕೇಳಿ ಬರುತ್ತಿವೆ.

ಬಂಗಾಳದ ಕೃಷ್ಣನಗರದಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಎಸ್‌ಐಆರ್ ಮೂಲಕ ತಾಯಂದಿರು ಮತ್ತು ಸಹೋದರಿಯರ ಹಕ್ಕುಗಳನ್ನು ಕಸಿದುಕೊಳ್ಳುತ್ತೀರಾ ಎಂದು ಪ್ರಶ್ನಿಸಿರುವ ಅವರು, ಚುನಾವಣೆಯ ಸಮಯದಲ್ಲಿ ದೆಹಲಿಯಿಂದ ಪೊಲೀಸರನ್ನು ಕರೆತಂದು ಮಹಿಳೆಯರನ್ನು ಬೆದರಿಸಲಾಗುತ್ತಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಕೈಬಿಟ್ಟರೆ ಯಾವ ಉಪಕರಣ ನಿಮ್ಮ ಬಳಿ ಇದೆಯೋ ಅದನ್ನು ಹಿಡಿದು ಸಿದ್ದರಾಗಿ. ಮಹಿಳೆಯರು ಎದುರು ನಿಂತು ಹೋರಾಡಿದರೆ ಪುರುಷರು ಅವರ ಹಿಂದೆ ಇರುತ್ತಾರೆ ಎಂದು ಅವರು ಹೇಳಿದರು.

Salman Khan: ವ್ಯಕ್ತಿತ್ವ ಹಕ್ಕುಗಳ ರಕ್ಷಣೆಗೆ ದೆಹಲಿ ಹೈಕೋರ್ಟ್ ಮೊರೆ ಹೋದ ಸಲ್ಮಾನ್ ಖಾನ್

ಬಿಜೆಪಿಯು ಮಹಿಳೆಯರು ಎಷ್ಟು ಶಕ್ತಿಶಾಲಿಯಾಗಿದ್ದರೆ ಎಂದು ನೋಡಲು ಬಯಸುತ್ತಿದ್ದಾರೆ. ಕೋಮುವಾದದಲ್ಲಿ ನನಗೆ ನಂಬಿಕೆ ಇಲ್ಲ. ಜಾತ್ಯತೀತತೆಯನ್ನು ನಂಬುತ್ತೇನೆ. ಚುನಾವಣೆ ಬಂದಾಗ ಬಿಜೆಪಿಯು ಹಣ, ಇತರ ರಾಜ್ಯಗಳಿಂದ ಜನರನ್ನು ಕರೆತಂದು ಇಲ್ಲಿನ ಜನರನ್ನು ವಿಭಜಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

ಕೋಲ್ಕತ್ತಾದಲ್ಲಿ ಇತ್ತೀಚೆಗೆ ಆಯೋಜಿಸಲಾದ ಸಾಮೂಹಿಕ ಭಗವದ್ಗೀತೆ ಪಠಣದ ಕುರಿತು ಮಾತನಾಡಿದ ಅವರು, ನಾವೆಲ್ಲರೂ ನಮಗೆ ಬೇಕಾದಾಗ ಮನೆಯಲ್ಲಿ ಗೀತೆಯನ್ನು ಪಠಿಸುತ್ತೇವೆ. ಇದಕ್ಕಾಗಿ ಸಾರ್ವಜನಿಕ ಸಭೆಯನ್ನು ಯಾಕೆ ಆಯೋಜಿಸಬೇಕು ಎಂದ ಅವರು ಗೀತೆಯ ಬಗ್ಗೆ ಕೂಗುತ್ತಿರುವವರು ಶ್ರೀಕೃಷ್ಣ ಏನು ಹೇಳಿದ್ದಾನೆ ಎಂದು ಹೇಳಲಿ. ಧರ್ಮ ಎಂದರೆ ಶಾಂತಿ, ಶುದ್ಧತೆ, ಮಾನವೀಯತೆಯಾಗಿದೆ. ಹಿಂಸೆ, ತಾರತಮ್ಯ ಮತ್ತು ವಿಭಜನೆಯಲ್ಲ ಎಂದರು.

Karnataka Winter Session: 24,300 ಹುದ್ದೆ ಭರ್ತಿಗೆ ಆರ್ಥಿಕ ಇಲಾಖೆ ಅನುಮತಿ; ಕ್ರೀಡಾಪಟುಗಳಿಗೆ ಶೇ.2 ಮೀಸಲಾತಿ ಘೋಷಿಸಿದ ಸಿಎಂ

ಸ್ವಾತಂತ್ರ್ಯಕ್ಕಾಗಿ ಹೋರಾಡಿ ದೇಶಕ್ಕಾಗಿ ಪ್ರಾಣವನ್ನು ತ್ಯಾಗ ಮಾಡಿದ ಬಂಗಾಳದ ಜನರು ತಾವು ಭಾರತದ ನಾಗರಿಕರು ಎಂದು ಸಾಬೀತುಪಡಿಸಬೇಕು.ಇವರು ಮೀನು ಮತ್ತು ಮಾಂಸ ತಿನ್ನಬೇಕೇ ಬೇಡವೇ ಎಂದು ನಿರ್ಧರಿಸಲು ನೀವು ಯಾರು ಎಂದು ಪ್ರಶ್ನಿಸಿದ ಅವರು ಇದು ಜನರ ವೈಯಕ್ತಿಕ ಆಯ್ಕೆ ಎಂದು ಹೇಳಿದರು.

ನಮ್ಮ ಮೇಲೆ ದಾಳಿ ಮಾಡಿದರೆ ನಮಗೆ ಹೇಗೆ ಪ್ರತೀಕಾರ ತೀರಿಸಿಕೊಳ್ಳಬೇಕೆಂದು ಗೊತ್ತಿದೆ. ಬಂಗಾಳದಿಂದ ಜನರನ್ನು ಹೊರಹಾಕಲು ತಮ್ಮ ಸರಕಾರ ಯಾರಿಗೂ ಬಿಡುವುದಿಲ್ಲ. ಯಾರೂ ಕೂಡ ಗಡಿ ಪ್ರದೇಶಗಳಲ್ಲಿ ಇರುವ ಬಿಎಸ್‌ಎಫ್ ಪೋಸ್ಟ್‌ಗಳ ಬಳಿ ಹೋಗಬೇಡಿ ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.