Children’s Day Speech in Kannada: ಮಕ್ಕಳ ದಿನಾಚರಣೆಗೆ ಈ ರೀತಿ ಭಾಷಣ ಮಾಡಿ! ಟಿಪ್ಸ್ ಇಲ್ಲಿದೆ ಓದಿ
ಸೆಪ್ಟೆಂಬರ್ 5ನೇ ತಾರೀಖು, ನಮಗೆಲ್ಲಾ ಗೊತ್ತಿರುವ ಹಾಗೆ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ದಿನ ಶಾಲಾ-ಕಾಲೇಜುಗಳಲ್ಲಿ ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಮಾಡಲಾಗುತ್ತದೆ. ಇನ್ನು ಈ ಕಾರ್ಯಕ್ರಮದಲ್ಲಿ ಭಾಷಣ ಮಾಡೋದು ಕೂಡ ಒಂದು ಸವಾಲಿನ ಕೆಲಸ. ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಇದೇ ದೊಡ್ಡ ಕೆಲಸವಾಗಿರುತ್ತದೆ. ಮಕ್ಕಳಿಗೆ ಈ ದಿನದಂದು ಭಾಷಣ ಮಾಡಲು ನೆರವಾಗುವ ಕೆಲ ಟಿಪ್ಸ್ ಇಲ್ಲಿದೆ.
ಮಕ್ಕಳ ದಿನಾಚರಣೆ(ಸಾಂದರ್ಭಿಕ ಚಿತ್ರ) -
ಬೆಂಗಳೂರು: ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎನ್ನುವ ಮಾತಿದೆ. ರಾಷ್ಟ್ರದ ಭವಿಷ್ಯವೇ ಮಕ್ಕಳಾಗಿದ್ದಾರೆ, ಸಮಾಜ ಸದೃಢವಾಗಬೇಕಾದ್ದರೆ ಮೊದಲು ಮಕ್ಕಳನ್ನು ಸಶಕ್ತಗೊಳಿಸ ಬೇಕಾಗುತ್ತದೆ. ಹಾಗಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ, ನೈತಿಕತೆ ಹಾಗೂ ಸಂಸ್ಕಾರವನ್ನು ಕೊಟ್ಟು ಬೆಳಸಬೇಕಾಗುತ್ತದೆ. ಇದರೊಂದಿಗೆ ಶಿಕ್ಷಣ ಹಾಗೂ ಅವರ ಹಕ್ಕುಗಳ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದ್ದು, ಇದಕ್ಕಾಗಿಯೇ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ತಮ್ಮ ಜನ್ಮದಿನವಾದ ಇದಕ್ಕಾಗಿಯೇ ಪ್ರತಿವರ್ಷ ನವೆಂಬರ್ 14 ರಂದು ಮಕ್ಕಳ ದಿನಾಚರಣೆಯನ್ನು(Children's Day) ಆಚರಿಸಲಾಗುತ್ತದೆ. ಮುದ್ದು ಮಕ್ಕಳ ಹಕ್ಕುಗಳು ಮತ್ತು ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಜವಾಹರಲಾಲ್ ನೆಹರು ಅವರ ಜನ್ಮದಿನವನ್ನು ಮೀಸಲಾರಿಸಿದ್ದು, ಭಾರತದ ಮೊದಲ ಪ್ರಧಾನಿ ಪಂಡಿತ್ ನೆಹರು(Pandit Jawaharlal Nehru) ಅವರನ್ನು ಮಕ್ಕಳು ಪ್ರೀತಿಯಿಂದ 'ಚಾಚಾ' ಎಂದು ಕರೆಯುತ್ತಾರೆ.
ಅಲ್ಲದೇ ಈ ಸಂದರ್ಭದಲ್ಲಿ ಮಕ್ಕಳ ಪ್ರತಿಭಾ ಪ್ರದರ್ಶನಕ್ಕೂ ಅವಕಾಶ ನೀಡಲಿದ್ದು, ಛದ್ಮವೇಷ, ಏಕಪಾತ್ರ ಅಭಿನಯ, ಡ್ಯಾನ್ಸ್ ಸೇರಿದಂತೆ ಇತ್ಯಾದಿ ನಾನಾ ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗುತ್ತದೆ. ಅಂತಹ ಸ್ಪರ್ಧೆಗಳಲ್ಲಿ ಭಾಷಣ ಸ್ಪರ್ಧೆಯೂ ಒಂದಾಗಿದ್ದು, ನೀವು ಈ ಬಾರಿ ಮಕ್ಕಳ ದಿನಾಚರಣೆಯ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದರೆ ನಿಮಗೆ ಉಪಯೋಗವಾಗುವಂತಹ ಕೆಲ ಮಾಹಿತಿಯನ್ನು ಇಲ್ಲಿ ನೀಡುತ್ತಿದ್ದೇವೆ.
ನವೆಂಬರ್ 14 ರಂದು ಆಚರಿಸಲಾಗುವ ಮಕ್ಕಳ ದಿನಾಚರಣೆ ಕುರಿತು ಭಾಷಣ ಮಾಡಲು ಇಚ್ಚಿಸುವ ವಿದ್ಯಾರ್ಥಿಗಳೇ ಆಗಿದ್ದಲ್ಲಿ, ಅದಕ್ಕೆ ಉತ್ತಮ ಸಲಹೆಗಳು ಇಲ್ಲಿದ್ದು, ಭಾಷಣ ಹೇಗಿರಬೇಕು ಎಂಬುದನ್ನು ಆಚರಣೆಯ ಕಾರ್ಯಕ್ರಮದಲ್ಲಿ ಆರಂಭದಿಂದ ಕೊನೆವರೆಗೂ ಸಹ ಕೆಳಗಿನಂತೆ ತಿಳಿಸಲಾಗಿದೆ.
ಈ ಸುದ್ದಿಯನ್ನು ಓದಿ: Viral News: ಬೆಂಗಳೂರಿನ ಫ್ಲೈಓವರ್ ಕಂಬದಲ್ಲಿ ವ್ಯಕ್ತಿಯ ವಾಸ್ತವ್ಯ, ಸಿಟಿ ಜನ ಶಾಕ್!
ವೇದಿಕೆ ಮೇಲೆ ನೆರೆದಿರುವ ನನ್ನೆಲ್ಲಾ ನೆಚ್ಚಿನ ಶಿಕ್ಷಕರಿಗೆ ನಮಸ್ತೆ..
ತಮಗೆಲ್ಲಾ ತಿಳಿದಂತೆ ಇಂದು ನಾವು 'ಮಕ್ಕಳ ದಿನಾಚರಣೆ'ಗೆಂದು ಇಲ್ಲಿ ಸೇರಿದ್ದೇವೆ. ಈ ವಿಶೇಷ ದಿನದಂದು ನನಗೆ ಮಾತನಾಡಲು ಅವಕಾಶ ಸಿಕ್ಕಿರುವುದಕ್ಕೆ ಮೊದಲು ಎಲ್ಲರಿಗೂ ಧನ್ಯವಾದಗಳನ್ನು ಸಹ ತಿಳಿಸುತ್ತೇನೆ. ಇಂದಿನ ಈ ವಿಶೇಷ ಕಾರ್ಯಕ್ರಮದಲ್ಲಿ ಆಸೀನರಿರುವ ನನ್ನ ನೆಚ್ಚಿನ ಗೌರವಾನ್ವಿತ ಗುರು ವೃಂದದವರಿಗೆ, ಸಹಪಾಠಿಗಳೆಲ್ಲರಿಗೂ ನನ್ನ ನಮನಗಳನ್ನು ಸಲ್ಲಿಸುತ್ತಾ, ನಾವೆಲ್ಲರೂ ಇಲ್ಲಿ ಮಕ್ಕಳ ದಿನಾಚರಣೆ ಹಾಗೂ ಜವಹರಲಾಲ್ ರವರ ಜನ್ಮ ದಿನದ ಆಚರಣೆಗಾಗಿ ಸೇರಿದ್ದೇವೆ. ಈ ಶುಭಸಂದರ್ಭದಲ್ಲಿ ಈ ದಿನದ ಬಗ್ಗೆ ಒಂದೆರಡು ಮಾತನಾಡಲು ಇಷ್ಟಪಡುತ್ತೇನೆ.
ನಮ್ಮ ದೇಶದಲ್ಲಿ ಪ್ರತಿವರ್ಷ ನವೆಂಬರ್ 14 ರಂದು ಮಕ್ಕಳ ದಿನಾಚರಣೆಯನ್ನು ಆಚರಿಸುತ್ತಾ ಬಂದಿದ್ದು, 1956ರಂದು ಮೊಟ್ಟ ಮೊದಲ ಬಾರಿಗೆ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಈ ದಿನದಂದು ನಮ್ಮ ಅಂದರೆ ಮಕ್ಕಳ ಹಕ್ಕುಗಳು, ಆರೈಕೆ ಮತ್ತು ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವುದೇ ಈ ದಿನದ ಪ್ರಮುಖ ಉದ್ದೇಶವಾಗಿದ್ದು, ನೆಹರು ಅವರ ಮರಣದ ನಂತರ, ಅವರ ಜನ್ಮದಿನದ ಸವಿನೆನಪಿಗಾಗಿ ನವೆಂಬರ್ 14ರಂದು ಭಾರತದಲ್ಲಿ ಮಕ್ಕಳ ದಿನಾಚರಣೆ ಆಚರಿಸಲಾಗುತ್ತದೆ.
ಈ ಮೊದಲು ದೇಶ ಸೇರಿದಂತೆ ಜಗತ್ತಿನಾದ್ಯಂತ ಮೊದಲಿಗೆ ನವೆಂಬರ್ 20 ರಂದು ಮಕ್ಕಳ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತಿತ್ತು. ವಿಶ್ವಸಂಸ್ಥೆಯು ಸಾರ್ವತ್ರಿಕ ಮಕ್ಕಳ ದಿನ ಎಂದು ಈ ದಿನವನ್ನು ಘೋಷಣೆ ಮಾಡಿತ್ತು. ಆದರೆ 1964 ರ ನಂತರ ಭಾರತದಲ್ಲಿ ಮಕ್ಕಳ ದಿನಾಚರಣೆ ನವೆಂಬರ್ 14 ರಂದು ಆಚರಣೆ ಆಗುತ್ತಿದೆ. ದೇಶದ ಮಕ್ಕಳಿಗೆ ಅಗತ್ಯ ಶಿಕ್ಷಣವನ್ನು ಪೂರೈಸಬೇಕೆಂಬುದು ನೆಹರೂ ಅವರ ಧ್ಯೇಯವಾಗಿತ್ತು. ಆದ್ದರಿಂದ ಅವರ ಸವಿನೆನಪಿಗಾಗಿ ಅವರ ಜನ್ಮ ದಿನಾಂಕದಂದೇ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ದಿನದಂದು ಭಾರತದಾದ್ಯಂತ ಮಕ್ಕಳಿಗಾಗಿ ಮತ್ತು ಅನೇಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.
ಈ ಸುದ್ದಿಯನ್ನು ಓದಿ: Viral Video: ಚೀನಾದಲ್ಲಿ ಹೊಸದಾಗಿ ನಿರ್ಮಿಸಿದ ಹಾಂಗ್ಕಿ ಸೇತುವೆ ಕುಸಿತ; ಇಲ್ಲಿದೆ ಎದೆ ನಡುಗಿಸುವ ವಿಡಿಯೊ
ಇನ್ನು ನೆಹರು ಬಗ್ಗೆ ಹೇಳುವುದದ್ದಾರೆ ಮೋತಿಲಾಲ್ ನೆಹರು ಮತ್ತು ಸ್ವರೂಪ್ ರಾಣಿ ಅವರ ಪುತ್ರರಾಗಿ ಜವಾಹರಲಾಲ್ ನೆಹರು ಅವರು ನವೆಂಬರ್ 14, 1889 ರಲ್ಲಿ ಅಲಹಬಾದ್‌ನಲ್ಲಿ ಜನಿಸಿದರು. ನೆಹರು ಅವರು ಎರಡು ಬಾರಿ ಭಾರತದ ಪ್ರಧಾನಿಯಾಗಿ ಕಾರ್ಯ ನಿರ್ವಹಿಸದ್ದಾರೆ. ನೆಹರು ಅವರು ಕೇಂಬ್ರಿಡ್ಜ್‌ನ ಟ್ರಿನಿಟಿ ಕಾಲೇಜ್ ನಿಂದ ಪದವಿ ಪಡೆದುಕೊಂಡಿದ್ದರು. ಇಂಗ್ಲೆಂಡ್‌ನಲ್ಲಿದ್ದಾಗ ನೆಹರು ಅವರು, ಫೇನಿಯನ್ ಸಾಮಜಿಕ ಸಿದ್ಧಾಂತಗಳನ್ನು ಬಹುವಾಗಿ ಮೆಚ್ಚಿಕೊಂಡಿದ್ದರು. ಇಂಗ್ಲೆಂಡ್‌ನಲ್ಲಿ ನ್ಯಾಯವಾದಿಯಾಗಿ / ಬ್ಯಾರಿಸ್ಟರ್ ಆಗಿ ಭಾರತಕ್ಕೆ ಹಿಂದುರುಗಿದರು. ನಂತರ ವಕೀಲ ವೃತ್ತಿಯನ್ನು ತೊರೆದು, ರಾಜಕಾರಣದತ್ತ ಒಲವು ತೊರಿದರು. 1916 ರಲ್ಲಿ ಕಮಾಲ ಕೌಲ್ ಅವರನ್ನು ವಿವಾಹವಾದರು.
ಇದರೊಂದಿಗೆ ಸ್ವಾತಂತ್ರ್ಯ ಚಳುವಳಿಯ ಮುಂಚೂಣಿ ನಾಯಕನಾಗಿ ಗುರುತಿಸಿಕೊಂಡು ಇವರಿಗೆ ರಾಜಕೀಯದಲ್ಲಿಯೂ ಆಸಕ್ತಿ ಇದ್ದು, ಭಾರತದ ಪ್ರಥಮ ಪ್ರಧಾನ ಮಂತ್ರಿ ಎಂಬ ಹೆಗ್ಗಳಿಕೆಯೂ ಇವರಿಗಿದೆ. 1947 ರಿಂದ 1964 ರವರೆಗೆ ಅಂದರೆ ಅವರ ಮರಣದವರೆಗೂ ಭಾರತದ ಪ್ರಧಾನಿಯಾಗಿ ಎರಡು ಅವಧಿಯಲ್ಲಿ ಸೇವೆ ಸಲ್ಲಿಸಿದ್ದರು. ಮಕ್ಕಳು ಪ್ರೀತಿಯಿಂದ ನೆಹರು ರವರನ್ನು ಚಾಚಾ ನೆಹರು ಎಂದು ಕರೆಯುತ್ತಿದ್ದರು.
ಮಹಾತ್ಮ ಗಾಂಧೀಜಿ ಅವರೊಂದಿಗೆ ಉತ್ತಮ ಸಂಬಂಧ ಕಾಯ್ದುಕೊಂಡಿದ್ದ ನೆಹರು, ಗಾಂಧಿ ಅವರ ಅಹಿಂಸಾ ಹೋರಾಟವನ್ನು ಬೆಂಬಲಿಸಿದ್ದರು. ಇವರನ್ನು ಸಮಾಜವಾದ ತತ್ವದ, ಪ್ರಜಾಪ್ರಭುತ್ವ ಗಣರಾಜ್ಯದ ಮತ್ತು ಜ್ಯಾತ್ಯಾತಿತ ತತ್ವದ ಸಾರ್ವಭೌಮ ಎಂದು ಕರೆಯಲಾಗುತ್ತದೆ. 1955 ರಲ್ಲಿ, ಭಾರತದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನವನ್ನು ನೆಹರು ಅವರಿಗೆ ನೀಡಲಾಯಿತು. ಪ್ರಧಾನ ಮಂತ್ರಿಯಿಂದ ಸಲಹೆ ಪಡೆಯದೆ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರು ನೆಹರು ಅವರಿಗೆ ಭಾರತ ರತ್ನವನ್ನು ನೀಡಿದರು.
ಈ ಸುದ್ದಿಯನ್ನು ಓದಿ: Viral Video: ಅರೇ... ಇದೆಂಥಾ ವೆಡ್ಡಿಂಗ್ ಫೋಟೋಶೂಟ್! ನೋಡಿದ್ರೆ ನೀವೂ ಅಚ್ಚರಿ ಪಡ್ತೀರಾ
ಸ್ವತಂತ್ರ ಭಾರತದ ಮೊದಲ ಪ್ರಧಾನಿ ಮಂತ್ರಯಾದ ಜವಾಹರಲಾಲ್ ನೆಹರು ರವರು 1947 ರಿಂದ 1964 ರವರೆಗೆ ಅಂದರೆ ಅವರ ಮರಣದವರೆಗೂ ಭಾರತದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ಮಕ್ಕಳು ಪ್ರೀತಿಯಿಂದ ಚಾಚಾ ನೆಹರು ಎಂದು ಕರೆಯುತ್ತಿದ್ದರು.
ಇವರನ್ನು ಸಮಾಜವಾದ ತತ್ವದ, ಪ್ರಜಾಪ್ರಭುತ್ವ ಗಣರಾಜ್ಯದ ಮತ್ತು ಜ್ಯಾತ್ಯಾತಿತ ತತ್ವದ ಸಾರ್ವಭೌಮ ಎಂದು ಕರೆಯಲಾಗುತ್ತದೆ. 1955 ರಲ್ಲಿ, ಭಾರತದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನವನ್ನು ನೆಹರು ಅವರಿಗೆ ನೀಡಲಾಯಿತು. ಪ್ರಧಾನ ಮಂತ್ರಿಯಿಂದ ಸಲಹೆ ಪಡೆಯದೆ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರು ನೆಹರು ಅವರಿಗೆ ಭಾರತ ರತ್ನವನ್ನು ನೀಡಿದರು.