ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಖಾಕಿ ಬಲೆಗೆ ಬಿದ್ದ ಬಿಷ್ಣೋಯ್ ಗ್ಯಾಂಗ್ ಶೂಟರ್, ದರೋಡೆಕೋರ ಬಾಬಿ ಕಬೂತರ್ ಜೊತೆ ಲೇಡಿ ಡಾನ್

Robber Bobby Kabooter Arrested: ಲಾರೆನ್ಸ್ ಬಿಷ್ಣೋಯ್–ಹಾಶಿಂ ಬಾಬಾ ಗ್ಯಾಂಗ್‌ನ ಶೂಟರ್ ಹಾಗೂ ದರೋಡೆಕೋರ ಬಾಬಿ ಕಬೂತರ್ ಹಾಗೂ ಆತನ ಜೊತೆ ಕಾರ್ಯನಿರ್ವಹಿಸುತ್ತಿದ್ದ ಅವನ ಗೆಳತಿ ಲೇಡಿ ಡಾನ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಲೇಡಿ ಡಾನ್ ಎಂದೇ ಹೆಸರು ಪಡೆದಿರುವ ಆಕೆಯ ಹೆಸರು ಖುಷ್ನುಮಾ ಅನ್ಸಾರಿ ಅಲಿಯಾಸ್ ನೇಹಾಳನ್ನು ಬಂಧಿಸಲಾಗಿದೆ.

ಖಾಕಿ ಬಲೆಗೆ ಬಿದ್ದ ಬಿಷ್ಣೋಯ್ ಗ್ಯಾಂಗ್ ಶೂಟರ್

ದರೋಡೆಕೋರ ಬಾಬಿ ಕಬೂತರ್ -

Priyanka P
Priyanka P Feb 20, 2026 12:11 PM

ನವದೆಹಲಿ, ಫೆ.20: ಕಳೆದ ಏಳು ವರ್ಷಗಳಿಂದ ಸೆರೆಯಿಂದ ತಪ್ಪಿಸಿಕೊಳ್ಳುತ್ತಿದ್ದ ಲಾರೆನ್ಸ್ ಬಿಷ್ಣೋಯ್–ಹಾಶಿಂ ಬಾಬಾ ಗ್ಯಾಂಗ್‌ನ (Bishnoi gang) ದರೋಡೆಕೋರ ಮಹ್ಫೂಜ್ ಅಲಿಯಾಸ್ ಬಾಬಿ ಕಬೂತರ್ (Robber Bobby Kabooter Arrested) ಮತ್ತು ಆತನ ಗೆಳತಿ ಖುಷ್ನುಮಾ ಅನ್ಸಾರಿ ಅಲಿಯಾಸ್ ನೇಹಾ ಅವರನ್ನು ದೆಹಲಿ ಪೊಲೀಸ್ ವಿಶೇಷ ದಳ (Delhi Police Special Cell) ಗುರುವಾರ (ಫೆ.19) ಬಂಧಿಸಿದೆ.

ಲೇಡಿ ಡಾನ್ ಎಂದೂ ಕರೆಯಲ್ಪಡುವ ಖುಷ್ಣುಮಾ ಅನ್ಸಾರಿ, ಬಾಬಿ ಕಬೂತರ್‌ಗೆ ಭೂಗತವಾಗಿರಲು ಸಹಾಯ ಮಾಡಿದ್ದಾಳೆಂದು ಆರೋಪಿಸಲಾಗಿದೆ. ತನಿಖಾಧಿಕಾರಿಗಳು ಹೇಳುವಂತೆ ಅವಳು ಅವನಿಗೆ ಅಡಗಿರಲು ಸಹಾಯ ಮಾಡಿದ್ದಾಳೆ. ಬಾಬಿ ಮತ್ತು ಇತರ ಗ್ಯಾಂಗ್ ಸದಸ್ಯರ ನಡುವೆ ಸಂವಹನ ಕೊಂಡಿಯಾಗಿ ಕಾರ್ಯನಿರ್ವಹಿಸಿದ್ದಾಳೆ ಎಂದು ಹೇಳಲಾಗಿದೆ.

2022 ರಲ್ಲಿ ಪಂಜಾಬಿ ರ್ಯಾಪರ್ ಸಿಧು ಮೂಸೆವಾಲಾ ಹತ್ಯೆ ಮತ್ತು ಕಳೆದ ವರ್ಷ ದೆಹಲಿಯಲ್ಲಿ ಇಬ್ಬರು ಸಹೋದರರ ಹತ್ಯೆಯಂತಹ ಪ್ರಕರಣಗಳಲ್ಲಿ ಬೇಕಾಗಿದ್ದ ಕಬೂತರ್‌ಗೆ ದೆಹಲಿ ಪೊಲೀಸರು ಬಲೆ ಬೀಸಿದರು. ದೆಹಲಿಯ ಮಹಿಪಾಲ್ಪುರ ಪ್ರದೇಶದಲ್ಲಿ ಮಧ್ಯರಾತ್ರಿಯ ಸುಮಾರಿಗೆ ಅವರ ವಾಹನವನ್ನು ಅಡ್ಡಗಟ್ಟಿದರು. ಕಾರ್ಯಾಚರಣೆಯ ಸಮಯದಲ್ಲಿ, ಪೊಲೀಸರು ಆರೋಪಿಗಳಿಂದ ಬಂದೂಕುಗಳನ್ನು ವಶಪಡಿಸಿಕೊಂಡರು. ಶಸ್ತ್ರಾಸ್ತ್ರ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

10 ಕೋಟಿ ರುಪಾಯಿ ನೀಡುವಂತೆ ಪಂಜಾಬಿ- ಬಾಲಿವುಡ್ ಖ್ಯಾತ ಗಾಯಕನಿಗೆ ಬಿಷ್ಣೋಯ್ ಗ್ಯಾಂಗ್ ಕೊಲೆ ಬೆದರಿಕೆ

ಈ ಬಂಧನವು ಗ್ಯಾಂಗ್ ವಿರುದ್ಧದ ಕಾರ್ಯಾಚರಣೆಯಲ್ಲಿ ಮಹತ್ವದ ಬೆಳವಣಿಗೆಯನ್ನು ಗುರುತಿಸುತ್ತದೆ ಎಂದು ಪೊಲೀಸರು ಹೇಳಿದ್ದಾರೆ. ಜಾಲದಲ್ಲಿ ಮಹಿಳೆಯರ ಪಾತ್ರವು ಹೆಚ್ಚುತ್ತಿರುವ ಬಗ್ಗೆ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

ದೆಹಲಿ ನಗರದ ಹೃದಯಭಾಗದಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ನೇಹಾ, ಬಾಬಿ ಕಬೂತರ್ ಪರಾರಿಯಾಗಿದ್ದ ಸಮಯದಲ್ಲಿ ಗ್ಯಾಂಗ್‌ನ ಒಳಗಿನ ಸಂಪರ್ಕವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಳು. ಇಬ್ಬರು ಇನ್ನಿತರ ಸಹಚರರೊಂದಿಗೆ ನೆಹಾಳನ್ನು ಕೂಡ ಬಂಧಿಸಲಾಗಿದೆ. ಮಾದಕವಸ್ತು ಕಾರ್ಯಾಚರಣೆಗಳು ಸೇರಿದಂತೆ ಬಾಬಿಯ ಅಪರಾಧ ಚಟುವಟಿಕೆಗಳನ್ನು ಮರೆಮಾಚಲು ಪಾರ್ಲರ್ ಕೇವಲ ಒಂದು ವೇದಿಕೆಯಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಪೊಲೀಸರ ಆರೋಪದ ಪ್ರಕಾರ, ಸಿದ್ದು ಮೂಸೆವಾಲಾ ಪ್ರಕರಣದಲ್ಲಿ ಬಾಬಿ ಪೂರ್ವ ಪರಿಶೀಲನೆ ನಡೆಸಿದ್ದ. ಅಲ್ಲದೆ, ನಟಿ ದಿಶಾ ಪಟಾನಿಯ ನಿವಾಸದ ಹೊರಗೆ ಗುಂಡಿನ ದಾಳಿ ನಡೆಸಿದ ಶೂಟರ್‌ಗಳಿಗೆ ವಿದೇಶಿ ನಿರ್ಮಿತ ಶಸ್ತ್ರಾಸ್ತ್ರಗಳನ್ನು ಪೂರೈಸಿದ್ದನೆಂಬ ಆರೋಪವೂ ಅವನ ಮೇಲೆ ಇದೆ.

ಪೊಲೀಸರ ಪ್ರಕಾರ, ಕಳೆದ ವರ್ಷ ಈಶಾನ್ಯ ದೆಹಲಿಯಲ್ಲಿ ನಡೆದಿದ್ದ ಫಜೀಲ್ ಮತ್ತು ನದೀಮ್ ಎಂಬ ಇಬ್ಬರು ಸಹೋದರರ ಡಬಲ್ ಕೊಲೆಯಲ್ಲೂ ಕಬೂತರ್ ಭಾಗಿಯಾಗಿದ್ದ. ಜಫ್ರಾಬಾದ್ ಪ್ರದೇಶದಲ್ಲಿ ಕೊಲೆಯಾದ ವ್ಯಕ್ತಿಗಳು ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಸುಮಾರು 48 ಸುತ್ತು ಗುಂಡು ಹಾರಿಸಲಾಗಿದ್ದು, ಅದರಲ್ಲಿ 35 ಗುಂಡುಗಳು ಸಹೋದರರಿಗೆ ತಗುಲಿ, ಒಬ್ಬ ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಲಾರೆನ್ಸ್ ಬಿಷ್ಣೋಯ್ ಹಲವು ವರ್ಷಗಳ ಹಿಂದೆ ದೆಹಲಿ ಮೂಲದ ದರೋಡೆಕೋರ ಹಾಶಿಂ ಬಾಬಾ ಜೊತೆ ಕೈಜೋಡಿಸಿ ರಾಷ್ಟ್ರ ರಾಜಧಾನಿಯಲ್ಲಿ ತನ್ನ ಜಾಲವನ್ನು ಬಲಪಡಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಲಾರೆನ್ಸ್ ಗ್ಯಾಂಗ್‌ನಲ್ಲಿ ಮಹಿಳೆಯರ ಪಾತ್ರವೂ ಹೆಚ್ಚುತ್ತಿದೆ. ಈ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.